ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕೂಲಿಯವನ ಮಗ ನಾನು

ವಾಯ್.ಜೆ.ಮಹಿಬೂಬ

ಕೂಲಿಯವನ ಮಗ ನಾನು

Buy Warli in a Sunny Day Handmade Painting by Ravi Viswanathan ...

ಬಡವನಾದರೇನಂತ
ಇಲ್ಲೆನಗ ಬ್ಯಾಸರ
ಕಣ್ಣತುಂಬ ನಿದ್ದೀಗಿ
ಗುಡಿಸಲೆಮಗೆ ಆಸರ !!ಪ!!

ಕೂಲಿಯವನ ಮಗನಾನು
ಬಿಸಿಲೆಮಗೆ ಸಹೋದರ
ನಮ್ಮಪ್ಪ ಅಂತಾನ
ಮುಗಿಲೆ ನಮಗೆ ಹಂದರ !!೧!!

ಅವ್ವನ ಸೀರಿ ಶೆರಗೇ
ಒರಿಸೇತಿ ಬೆವರ
ಹಾಸಿಗೆ ಆಗತೈತಿ
ಅಪ್ಪನ ಹರಕ ಧೋತರ!!೨!!

ಹಬ್ಬಕವರು ಕಾಣಲಿಲ್ಲ
ಹೊಸ ಸೀರಿ-ದೋತರ
ಸತ್ತಾಗ ಕಟ್ಟತೀರಿ
ಅರವಿ ಐದು ಮೀಟರ್ !!೩!

******

About The Author

Leave a Reply

You cannot copy content of this page

Scroll to Top