ಕಾಮಿ೯ಕರ ದಿನ
ಎನ್. ಆರ್ .ರೂಪಶ್ರೀ
ಕಾಮಿ೯ಕರ ದಿನ
ತುತ್ತು ಅನ್ನಕ್ಕಾಗಿ
ಬಾಳನ್ನು ತೆತ್ತು ತೆತ್ತು
ಹಗಲಿರುಳು ದುಡಿತದ ನೆರಳಿನಲಿ
ಸಾಗುತಿದೆ ಕಾಮಿ೯ಕನ ಹೊತ್ತು.
ದಿನ ದಿನವೂ ಅನುದಿನವೂ
ನೋವು ನರಳಾಟ
ಅರಳುವುದು ಕಣ್ಣಿನಲ್ಲಿ
ಕುಡಿಮಿಂಚು ನಗೆಯಾಟ
ಬಲ್ಲಿದರ ಬಂಧನದಿ
ಸದಾ ಶೋಷಣೆಯ ಸೆರಗು
ಇದೇ ಏನೋ ಕಾಮಿ೯ಕನ
ಜೀವನಕೆ ಸಂತಸದ ಮೆರಗು.
ತಾನು ತನ್ನದೆನ್ನುವ ಹಕ್ಕಿನ ಹಂದರ
ಹಸಿದು ಬಸವಳಿದಿದೆ
ಆಸೆ ಆಮಿಷಗಳ ದೂರದ ಬಯಕೆಗಳ ಗೋಪುರದ ಗುಮ್ಮಟ
ತಲೆಯೆತ್ತಿ ನಿಂತಿದೆ.
ದು:ಕ ದುಗುಡ ದುಮ್ಮಾನಗಳಿಗೆ
ತಂಪೆರೆಯುವ ಸಿಂಚನದ
ಮಿಂಚಾಗಿ ಬಂದಿರುವುದು
ಕಾಮಿ೯ಕರ ದಿನವೆಂಬ
ಶುಭ ಶಕುನದ ಒಸಗೆ
*******