Category: ಕಾವ್ಯಯಾನ

ಕಾವ್ಯಯಾನ

ಕಾವ್ಯಯಾನ

ಕೋಗಿಲೆ ಸುಜಾತಾ ಗುಪ್ತಾ ಮಾಮರದ ಕೊಗಿಲೆಯೇ ಒಲವಿನ ಯಾವ ಭಾವವಿಲ್ಲಿ ಇಹುದೆಂದು.. ಕೊರಳೆತ್ತಿ ರಾಗಾಲಾಪಿಸುವೆ ಏತಕೀ ವ್ಯರ್ಥಾಲಾಪನೆ.. ಇನಿಯನಾ ಬಾಹುಬಂಧನದಲ್ಲಿ ಜಗಮರೆತು ನಾನಿರಲು ಅಂದು ನಿನ್ನ ಕುಹೂ ಕುಹೂ ರಾಗಕೆ ನನ್ನ ಮನ ಪಲ್ಲವಿ ಹಾಡಿತ್ತು.. ಇನಿಯ ಸನಿಹದಲಿರಲಂದು ಜೀವನದೆ ನಾದಮಯ ಉಸಿರಿರಲು.. ನಿನ್ನ ಕಂಠದಾ ಸಿರಿ ಆಗಿತ್ತು ನನ್ನೆದೆಗೆ ಒಲವಿನ ರಾಗಸುಧೆ.. ಇಂದು ನೀನೂ ನಾನೂ ಒಂಟಿ ಪ್ರೇಮ ಯಾನದೆ.. ಪುರ್ರೆಂದು ಹಾರಿಹೋಯಿತೇನು ನಿನ್ನೊಲವಿನ ಜೋಡಿ,ಭರಿಸದೆ ಆಲಾಪಿಸುತಿರುವೆಯಾ ಈ ವಿರಹ ಗೀತೆ.. ನಿನ್ನೀ ಕಂಠದಿಂದ ವಿರಹಗೀತೆ […]

ಕಾವ್ಯಯಾನ

ಬಂಧಿ ನಾನಲ್ಲ ವೀಣಾ ರಮೇಶ್ ನಿನ್ನ ನೆನಪುಗಳೇ ನನ್ನ ಬಂಧಿಸಿರುವಾಗ ಈ ಗ್ರಹಬಂಧನ ನನ್ನನೇನೂ ಕಾಡಲಿಲ್ಲ ಹುಡುಕುವ ಪದಗಳು ಬಾವನೆಗಳಲೇ ಬಂಧಿಸಿರುವಾಗ ನಾ ಬಂಧಿ ಅನ್ನಿಸಲಿಲ್ಲ ಎದೆಯ ಬಡಿತದ ಪ್ರತಿ ಸದ್ದಲ್ಲೂ ಕಾವಲಿರಿಸಿದ,ನಿನ್ನುಸಿರು ಈ ಗ್ರಹಬಂಧನ ನನಗೆ ಹಿಂಸೆ ಅನ್ನಿಸಲಿಲ್ಲ ನಿನ್ನ ನೆನಪುಗಳೇ ನನ್ನ ಜೊತೆಯಿರುವಾಗ ಪ್ರತಿ ಮೂಲೆಗೂ ನನ್ನ ಕರೆದೊಯ್ಯುವಾಗ ನಾ ಬಂಧಿ ಅಂತ ಅನ್ನಿಸಲಿಲ್ಲ ******

ಕಾವ್ಯಯಾನ

ಅಸ್ವಸ್ಥ ಅಭಿಪ್ರಾಯ –ನೂರುಲ್ಲಾ ತ್ಯಾಮಗೊಂಡ್ಲು ವಟಗುಡುವ ಕಪ್ಪೆಗಳಂತಿರುವ ಕೆಲ ಮೂರ್ಖ ಆಂಕರರು; ನೋಟಿನಲಿ ಮೈಕ್ರೊ ಚಿಪ್ಪುಕಂಡುಕೊಂಡ ವಿಜ್ಞಾನ ದೇವಿ ಪುರುಷರು ! -ಎಂದಿನಂತೆ ವಟಗುಡುವುದೇ ಅವರ ಕೆಲಸವೆಂದು ನಾನೂ ಸುಮ್ಮನಿರಲಾರದೆ ಕಪ್ಪಗೆ ಜಿನುಗುವ ಬಿಸಿಲು ಮಳೆಯ ಹಾಗೆ ಒಂದೆರಡು ಕವಿತೆಯ ತುಣುಕುಗಳನ್ನು ಹಾಳೆಯ ಮೇಲೆ ಹರಿಸುತ್ತೇನೆ ನನಗೆ ಗೊತ್ತಿದೆ ಮತ್ತೆ ಎಲ್ಲರಿಗೂ ಗೊತ್ತಿರುವ ವಿಷಯವೇ ; ಈ ಶತಮಾನದ ಪೆಂಡಮಿಕ್ ರೋಗ ! ‘ಕೊರೊನಾ’ ಚೈನಾದಿಂದ ವಕ್ಕರಿಸಿದ್ದೆಂದು ಆದರೆ , ಅದು ನಮ್ಮ ದೇಶದ ಸರಹದ್ದುಗಳನ್ನು ದಾಟಿದ್ದು […]

ಕಾವ್ಯಯಾನ

ವಿಧಾಯ ಹೇಳುತ್ತಿದ್ದೇವೆ ದೇವವರ್ಮ ಮಾಕೊಂಡ(ದೇವು) ಮಧುರ ಸ್ಪರ್ಷವಿತ್ತ ನೆನಪುಗಳು ಮುಳುಗುತ್ತಿವೆ ಕಣ್ಣುಗಳ ಮುಂದೆ ಹಾದು ಹೋಗುತ್ತಿವೆ ದಿನ ದಿನ ಕಳೆದ ಘಟನೆಗಳು ಭಯವಿದೆ ನನಗೀಗ ನೂರಾರು ವರುಷಗಳಿಂದ ಪಕ್ಕೆಲುಬುಗಳಲಿ ಬಚ್ಚಿಟ್ಟಿದ್ದ ನೆನಪುಗಳು ಅಭದ್ರಗೊಳ್ಳುತ್ತಿವೆ ಎಂದು ಹೇರಳವಾಗಿರುವ ಸಿಡಿಲು ಮಳೆ ಹನಿಗಳಿಂದ ನಾನು ಏಕಾಂಗಿಯಾಗಿದ್ದೇನೆ ಸ್ವರ್ಗದ ಹಾದೀಲಿ ದುಃಖಗಳ ಗುರುತ್ವಾಕರ್ಷಣೆಯ ತುದಿಗೆ ಒರಗಿಕೊಂಡು ನಾನೀಗ ಕಳೆದು ಹೋದ ಜೋತಿರ್ವರ್ಷಗಳ ಮೆಲಕು ಹಾಕುತ್ತ ನಿಂತಿರುವೆ ಲಿಖಿತ ಡೈರಿಗಳು ಶೀರ್ಷಿಕೆ ರಹಿತ ಪದ್ಯಗಳು ರಾತ್ರಿ ಮಂಡಿಸಿದ ಕನಸುಗಳು ಕಳೆದುಕೊಂಡು ಬರಿ ಅರೆಬರೆ […]

ಕಾವ್ಯಯಾನ

ಆಸ್ಪತ್ರೆಗಳು ಸಿ ವಾಣಿ ರಾಘವೇಂದ್ರ ರೋಗಗಳ ಭೀತಿ ಮನ-ಮನೆಗಳಲ್ಲಿ ಆಸ್ಪತ್ರೆಗಳಲ್ಲಿ ಮೂರು ನಾಲ್ಕು ರೋಗಗಳು ನೂರಾರು ರೋಗಿಗಳಲ್ಲಿ ಬಿಡದು ರೋಗಗಳು ಮೊಲೆ ಹಾಲುಗಳನ್ನು ನವಜಾತ ಶಿಶುಗಳನ್ನು ಎಲ್ಲ ಕಲೆತ ಜಗದ ವೈದ್ಯರು ಒಟ್ಟಾಗಿ ಚಿಕಿತ್ಸೆ ನೀಡಿದರೂ ಮತ್ತಷ್ಟು ಅಸಾಧ್ಯ ರೋಗಗಳು ರೋಗ ನಾಶವಾಗುವ ತನಕ ಆಸ್ಪತ್ರೆಗಳು ರೋಗಿ ನಾಶವಾಗುವ ತನಕ ರೋಗಗಳು *****

ಕಾವ್ಯಯಾನ

ನನಸಿನೊಳಗೊಂದು ಕನಸು ಹುಳಿಯಾರ್ ಷಬ್ಬೀರ್ ನನ್ನ ಕವಿತೆಯೊಳಗೆ ಬದುಕು ಮಾತಾಡುತ್ತಿದೆ ನಿಜವಾಗಿಯೂ ನಾವು ಬಡವರು ಎಂದು ನೀವು ಕರೆದವರು ದಲಿತರು ಶ್ರಮಿಕರು ಅಲ್ಪ ಸಂಖ್ಯಾತರು ನೀವು ಹಾಕಿದ ಚೌಕಗಳೊಳಗೆ ನಡೆಸಲ್ಪಡುವ ಚದುರಂಗದ ದಾಳಗಳು.. ನನ್ನ ಕವಿತೆಯೊಳಗೆ ಬದುಕು ಮಾತಾಡುತ್ತಿದೆ ನಾನು ಮಾತಾಡುವಾಗ ನಿಮ್ಮ ಕಿವಿ ಗಬ್ಬುನಾತದ ಸಂಡಾಸಿನೊಳಗೆ ಕೂತು ತುಕ್ಕು ಹಿಡಿದ ತಗಡಿನ ಮೇಲಿನ ಅತೃಪ್ತ ಸಾಲುಗಳಲ್ಲಿ ಕಣ್ಣು ಹೂತು ಸೋತು ಹೋದ ನಿಮ್ಮ ಪಂಚೇಂದ್ರಿಯಗಳ ಪ್ರಜ್ಞಾವಂತಿಕೆಗೆ ಅಕಾಲಿಕ ಆಮಶಂಕೆ….! ಈ ಅಯೋಮಯದೊಳಗೆ ನಿಮಗೆ ಬಿತ್ತಂತೆ ಒಂದು […]

ಕಾವ್ಯಯಾನ

ನೆನಪಿಗೆ ಅಂಜನಾ ಹೆಗಡೆ ಎಲ್ಲ ಮರೆತೆನೆಂದು ಮೈಮರೆತರೂ ಆಗೊಮ್ಮೆ ಈಗೊಮ್ಮೆ ನೆನಪಾಗುವ ಮುಖಗಳಿಗೆ ಮುಖಕೊಟ್ಟು ಮುಂದಕ್ಕೋಡುವಾಗ ಮೈಯೆಲ್ಲ ಮುಳ್ಳು! ನನ್ನದೇ ನೆರಳು ಅಪರಿಚಿತ ಬೆನ್ನಿಗಂಟಿದ ಹಸ್ತಗಳು ಹತ್ತಾರು ದೃಷ್ಟಿಗಳು ಎಲ್ಲ ಅಸ್ಪಷ್ಟ! ಹಳೆಯದನ್ನೆಲ್ಲ ಹರಿದು ಹರಿದು ಹಂಚಿದಂತೆ ಕಾಲಿಗಡರಿದ ಕಲ್ಲು ಕತೆ ಹೇಳುತ್ತಲೇ ಮಣ್ಣಾಗಿ ಹೋದದ್ದು ಅದೇ ವರುಷ ಮಳೆ ಧಾರಾಕಾರ ಸುರಿದದ್ದು ಎಲ್ಲ ಇತಿಹಾಸವೇ ಇರಬೇಕು ಮುಖಗಳೆಲ್ಲ ಕತೆಗಳು ಈಗ! ದೃಷ್ಟಿಗಳೆಲ್ಲ ಬರಿದೇ ನೋಟಗಳು! ಮಣ್ಣಿದ್ದಲ್ಲಿ ಮರ ಮರದ ತುಂಬೆಲ್ಲ ಹೂವು ಹಣ್ಣು ಮಳೆ ಮಾತ್ರ […]

ಕಾವ್ಯಯಾನ

ಮಣ್ಣಲಿ ಅವಿತ ಜೀವ ಟಿ.ಪಿ. ಉಮೇಶ್ ಬದುಕ ಸಂಪಾದನೆಗೆ ಹೋದ ಜೀವ ಬರಲಿಲ್ಲ ಮರಳಿ ಬೀದಿಯಲಿ ಅಲೆದು ತಿರುವಿನಲಿ ಕಳೆದು ಕಛೇರಿ ಕರ್ಮಗಳ ಫೈಲುಗಳಲಿ ಹೊರಳಿ ದಿನಸಿ ತರಕಾರಿ ಹಣ್ಣಿನಂಗಡಿಯಲಿ ಉರುಳಿ ಲೈಬ್ರರಿ ಸಿನೆಮಾ ಪಾರ್ಕು ಪಾರ್ಟಿಗಳ ಸಂಧಿಸಿ ನೋವಿನ ಮನೆಗೆ ಪ್ರೀತಿಯ ತರಲೋದ ಜೀವ ಮತ್ತೆ ಮರಳಿ ಬರಲಿಲ್ಲ ಜೀವ ಬರುವಾಗ ವಿಷದ ಮಳೆ ಬಂತಂತೆ ದಾರಿ ಅಲ್ಲಲ್ಲೆ ಹುಗಿದು ಹೋಯ್ತಂತೆ ಗಿಡ ಮರ ಪಶು ಪಕ್ಷಿ ಎಲ್ಲ ಉದುರಿ ಕರಗಿದುವಂತೆ ಜೀವವೂ ನೀರು ಆಹಾರವಿರದೆ […]

ಕಾವ್ಯಯಾನ

ಗಝಲ್ ತೇಜಾವತಿ ಹೆಚ್. ಡಿ ಭಾರತಾಂಬೆಯ ಮಡಿಲಲ್ಲಿ ತ್ರಿವರ್ಣಗುಡಿಯು ರಾರಾಜಿಸುತ್ತಿದೆ ವೀರ ತ್ರಿರಂಗವೂ ತನ್ನದೇ ವಿಶೇಷತೆಯ ತಿಳಿಸಿ ಹೇಳುತ್ತಿದೆ ವೀರ ಮಹಾಸಾಗರ ಅರಬ್ಬೀ ಕೊಲ್ಲಿ ಹಿಮಾಲಯದವರೆಗೆ ಗಡಿ ಚಾಚಿ ಹರಡಿದೆ ಅಡಿಯಿಂದ ಮುಡಿಯವರೆಗು ವಿವಿಧತೆಯಲಿ ಏಕತೆಯ ತೋರುತ್ತಿದೆ ವೀರ ದೀಪಾವಳಿ ಕ್ರಿಸ್ಮಸ್ ಮೊಹರಂ ರಂಜಾನ್ ಹಬ್ಬಗಳೆಲ್ಲವ ಆಚರಿಸುತ್ತಿದೆ ಜಾತಿ – ಮತ ಬೇಧವಿರದೆ ಸರ್ವಧರ್ಮ ಸಹಿಷ್ಣುತೆ ಭ್ರಾತೃತ್ವ ಸಾರುತ್ತಿದೆ ವೀರ ಶಿಲಾಶಾಸನ ವೀರಗಲ್ಲು ಮಾಸ್ತಿಗಲ್ಲುಗಳು ಎಲ್ಲೆಂದರಲ್ಲಿ ಕಾಣಿಸುತ್ತವೆ ಪ್ರತಿಯೊಂದರಲ್ಲೂ ಹರಿದ ಪ್ರೇಮ, ತ್ಯಾಗ ನೆತ್ತರಿನ ಕತೆಯನ್ನು ನೆನಪಿಸುತ್ತಿದೆ […]

ಕಾವ್ಯಯಾನ

ಕಾಲದ ಕರೆ ಡಾ.ಪ್ರಸನ್ನ ಹೆಗಡೆ ಮನೆಯ ಒಳಗೇ ಉಳಿಯಬೇಕಾಗಿದೆ ನಮ್ಮನ್ನ ನಾವೇ ಉಳಿಸಿಕೊಳಬೇಕಾಗಿದೆ ನಮ್ಮ ನಂಬಿದವರ ನಾವೇ ರಕ್ಷಿಸಿಕೊಳಬೇಕಾಗಿದೆ ಒಳಗಿದ್ದುಕೊಂಡೇ ಸಮರ ಸಾರ ಬೇಕಾಗಿದೆ ಮುಖಗವಚ ಧರಿಸಬೇಕಾಗಿದೆ ವೈರಾಣುವ ದೂರವೇ ಇಡಬೇಕಾಗಿದೆ ನಡುನಡುವೆ ಅಂತರ ಕಾಪಾಡಿಕೊಂಡು ನಮ್ಮ ನಮ್ಮ ಅಂತಸ್ಥ ಮೆರೆಯಬೇಕಾಗಿದೆ ಕಾಲ್ಗಳ ಕಂಬವಾಗಿಸಿಕೊಂಡು ಇದ್ದಲ್ಲೇ ಇರಬೇಕಾಗಿದೆ ಮನಸ್ಸನ್ನು ಕಲ್ಲಾಗಿಸಿಕೊಂಡು ಯೋಚಿಸಬೇಕಾಗಿದೆ ಶಿರವನ್ನೇ ಹೊನ್ನಗಲಶವಾಗಿಸಿಕೊಂಡು ಆತ್ಮಜ್ಯೋತಿಯ ಬೆಳಗಬೇಕಾಗಿದೆ ಮನದಿ ಕುಣಿವ ಮಂಗಗಳ ಹಿಡಿದು ಉದ್ಯಾನವನ ಉಳಿಸಿಕೊಳಬೇಕಾಗಿದೆ ಉಳಿದಿದ್ದೆಲ್ಲವ ನಾಳೆಗೆ ಮುಂದೂಡಿ ಈ ದಿನವ ಹೇಗೋ ದೂಡಬೇಕಾಗಿದೆ ಹೊರಗೆ […]

Back To Top