ಗಜಲ್-ರೇಷ್ಮಾ ಕಂದಕೂರ

ಕಾವ್ಯಸಂಗಾತಿ

ಗಜಲ್

ರೇಷ್ಮಾ ಕಂದಕೂರ

ಗಜಲ್ಕಣ್ಣಾಲಿಗಳ ಕಿರು ಹನಿಗೆ ಗೊತ್ತು
ಒಳ ವೇದನೆಯ ಉಸಿರಿಗೆ ಗೊತ್ತು

ತಳಮಳದ ಭಾವ ಹಪಹಪಿಗೆ ಸೋತು
ಕಳವಳದ ಸಾರ ಬಸಿರಿಗೆ ಗೊತ್ತು

ತರುಲತೆ ಮಂಪಿನ ಬೇಗೆಗೆ ಸೇರಿತು
ಒಲವ ಮಂದಾರ ಸೊಬಗಿಗೆ ಕಳೆ ಗುಂದಿತ್ತು.

ಆಲಿಂಗನದ ಮಧುರ ತನುವಿಗೆ ತಿಳಿದಿತ್ತು
ಒಡನಾಟದ ಸವಿ ನಲಿವಿಗೆ ಕಂಟಕವಾಗಿತ್ತು

ಕೂಟದ ಆಟ ಅಹಮಿಕೆಯ ಬಲೆಗೆ ಬಿದ್ದಿತು
ನೋಟದ ಕೀಟ ರೇಷಿಮೆಗೆ ವಿಷಾದದ ನಗೆ ಬೀರಿತ್ತು.


Leave a Reply

Back To Top