ಕಾವ್ಯ ಸಂಗಾತಿ
ಇವನೇ ನೋಡವ್ವ ನನ್ನವನು,…
ಜಯಶ್ರೀ.ಭ.ಭಂಡಾರಿ.

ಮಲಗಿದರ ಕುಂಭಕರ್ಣ ನನ್ನವನು
ಏಳಂದರ ಏಳಂಗಿಲ್ಲ ಎದ್ದಿಂದ ನಿಲ್ಲಲ್ಲ ನನ್ನವನು ನೀನೇ ನನ್ನ ಪ್ರೀತಿ
ಶ್ರಮವೇ ನನ್ನದೇವ್ರು ಅಂತಾನಾ
ಕೆಲಸಕ ನಿಂತರ ತನ್ನತಾನ ಮರತಾನ ಎಂತು ಬಣ್ಣಿಸಲೇ ಗೆಳತಿ ಪುರುಷತ್ತಿಲ್ಲದ ನನ್ನ ರಾಯನ….
ಮಾತಾಡಂದರ ಮಾತಾಡಂಗಿಲ್ಲ ನನ್ನವನು,ನಿಲ್ಲೆ ಬಾಯಬಡಕಿ ಯಾಕ ನನ್ನ ಕಾಡತಿ ನಾನಿಲ್ಲ ನಿನ್ನಂಗ ಖಾಲಿ,ನನಗ ಜೋಡಸ್ಯಾರ ನೂರೆಂಟು ಕೆಲಸ ಅಂತಾನಾ ನನ್ನವನು ಏನಹೇಳಲೇ ಗೆಳತಿ ನನ್ನ ಫಜೀತಿ,ಹಬ್ಬೈತೆ ರಾಯನ ಕೀರುತಿ
ಸರಸಕ ಕರದರ ಮರಸಾಕ ನೋಡತಾನ, ಮಲ್ಲೆಹೂ ತರ್ತಿನಿ ತಾಳ ನನಗೆಳತಿ ಪುರಷೊತ್ತಿಲ್ಲ ನನಗ ನಿನಜೊತಿ ಸರಸಕ ಅಂದಾನ
ರಾತರಿಗೆ ಬರತಿನಿ ಬಾಗಿಲಮುಂದ ಕಾಯ ಅಂತಾನಾ ಹೇ ಗೆಳತಿ ನಾ ಹೇಗೆ ತಾಳಲೆ ರಾಯನ ವಿರಹವಾ
ನೀ ಬರುವ ದಾರೀಲಿ ಕಲ್ಲಿಲ್ಲ ಮುಳ್ಳಿಲ್ಲ ನನ್ನರಾಯಾ ಮುತ್ತಂಥ ನಿನ್ನ ಮನಸಿನಂಗ ಹೂವಸುರಿದಾವ ದಾರಿಗುಂಟ ಘಮ್ಮೆಂದು ಘಮಿಸುತ ಹರಡಿ ನಿಂತಾವ ನನ್ನಂಗ ಅವುಕು ಚಿಂತೆ ನಿನ್ನದೇ ನನ್ನ ರಾಯಾ..
ಸರದಾರ ಬರತಾನಂತ ಕೈಮಾಡಿ ಕರಿತಾವ….
ಹೇ ಗೆಳತಿ ಹೆಂಗಬಣ್ಣಿಸಲೇ ನನ್ನವನ…
ನಿನ್ನ ಮಾರಿಚಂದ ನಿನ್ನ ನೋಟ ಚಂದ ನಿನ್ನ ಮೈಮಾಟ ಇನ್ನೂ ಚಂದ ನೀ ಚಂದ ನನಬಾಳಿಗೆ ಗೆಳತಿ
ಹಳ್ಳದ ದಂಡೀಲಿ ಕೊಡಹೊತ್ತು ಬರುವ ಬಂಗಾರದ ಹೊಂಬಣ್ಣದವಳೇ ಹೇಗೇ ಬಣ್ಣಿಸಲೇ ನಿನ್ನ,ನೀನಿರದ ನನಬಾಳು ಯಾತರದ ಬಾಳು ನಾ ಬರುತನಕ ತಾಳು ಅಂದಾನ ಸರದಾರ ನನ್ನ ಕಾಯಾಕ ಹಚ್ಯಾನವ್ವ ಗೆಳತಿ…
ಏನ ಬಣ್ಣೀಸಲೇ ನನ್ನವನ ನನ್ನ ಮನದ ಮಲ್ಲಿಗೆ ಅವನೇ ಅವನೇ…..
ಜಯಶ್ರೀ.ಭ.ಭಂಡಾರಿ.





Superb