ಗಜಲ್ ದುನಿಯಾ
ಗಜಲ್

ನಾಕದ ಬೀಗದ ಕೈ ನಿನ್ನ ಹೃದಯದಲ್ಲಿದೆ ಹೆಂಡತಿ
ಅಕ್ಷಯದ ಬಟ್ಟಲು ನಿನ್ನ ಬಾಹುಗಳಲ್ಲಿದೆ ಹೆಂಡತಿ
ನನ್ನಲ್ಲಿಯ ನೀಗದ ಹಸಿವು ಮಿಲನ ಬಯಸುತ್ತಿದೆ
ಅಮಲು ನಿನ್ನ ತುಂಬಿದ ಬಿಂದಿಗೆಯಲ್ಲಿದೆ ಹೆಂಡತಿ
ಕಂಗಳಲಿ ಪ್ರೇಮದ ಮಹಲು ಕಟ್ಟಿರುವೆ ನಿನಗಾಗಿ
ಮದಿರೆಯ ನಶೆಯು ನಿನ್ನ ಅಧರಗಳಲ್ಲಿದೆ ಹೆಂಡತಿ
ಮಿಥುನದ ಸವಿ ಘಳಿಗೆಗೆ ಮುನ್ನುಡಿ ಬರೆಯೋಣ
ನಾಳೆಯ ಭವ್ಯ ಕನಸು ನಿನ್ನ ಹೊಕ್ಕುಳಲ್ಲಿದೆ ಹೆಂಡತಿ
ಏಳು ಜನುಮ ಸಾಲದು ಪ್ರೀತಿಯ ಮಳೆ ಸುರಿಸಲು
‘ಮಲ್ಲಿ’ಯ ಉಸಿರು ನಿನ್ನ ನಡಿಗೆಯಲ್ಲಿದೆ ಹೆಂಡತಿ
ರತ್ನರಾಯಮಲ್ಲ
