ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಮೊಲೆಹಾಲೊಡನೆ ಬಂದ ಸೊಲ್ಲು ಕನ್ನಡವು,
ಕಣ್ತೆರೆದು ಜಗ ನೋಡಿದ ದೃಶ್ಯ ಕನ್ನಡವೇ
 ಉಚ್ವಾಸದ ಈ ಗಾಳಿ,ಈಮಣ್ಣ ಪರಿಮಳವು ಕನ್ನಡವು,
ನನ್ನೊಡಲ ನುಡಿಯಾಗಿ ಮಿಡಿದ ಭಾವ ಕನ್ನಡವು
ತಾಯಂತೆ ಸಲಹಿರುವೆ  ಅಮ್ಮಾ ನೀ ನನ್ನೊಲವು

 ಹಾಲಿನೊಳು ಬೆರೆತ ಸಕ್ಕರೆಯು ನೀನು ,
ಈ ಪಯಣದ ಜೊತೆಗಿದ್ದ ನೆರಳು ನೀನು
ನಾವ್ ನುಡಿವ ಪದ ಶಕ್ತಿಯ ಸೊಗಡು ನಿನದು
ನೀನಲದೆ ಅನ್ಯವೆನಲು ಒಪ್ಪದಿದು ಮನವು  

 ಭಾವದೊಲುಮೆಯಲಿ ಜೀವ ತುಂಬಿತಂದವಳು
ಎದೆಯ ಹಂದರದೊಳಗೆ  ಕಾವ್ಯ ಹರಿಸಿದಳು
 ನಡೆ ನುಡಿಯಲಿ ನಿಂತು ,ಬಾಳ ಬೆಳಗಿದಳು
 ಇಹಪರದ  ಬೇಡಿಕೆಯು ಈ ಧನಿಯ ಬಲಿಸು
ಕನ್ನಡವು ನಮ್ಮಮ್ಮ ಎಂದೆಂದೂ ಸಿರಿಯು

 ಬದುಕ  ಹಾದಿಗೆ ಬೆಳಕಾಗಿ ನಿಂತವಳೇ,
ಬೋಧನೆಗೆ ಜೊತೆಯಾಗಿ ಕೈಹಿಡಿದು ಬಂದವಳೆ
ಭಾವ ಕಡಲಿನ ಅಲೆಯಲೆಯಲಿ ಹೊನ್ನುಸಿರ ಕೊಟ್ಟಳು
  ಕಸುವಿತ್ತು ಕೈಯೊಳಗೆ ಎದೆಯ ಶೃಂಗರಿಸಿದಳು

ನನ್ನ ಬೇಡಿಕೆಯೊಂದ  ನಡೆಸು ಕನ್ನಡಾಂಬೆ
ಸವಿ ಜೇನಸುರಿಸುತ್ತಿರು ನಿತ್ಯ ನಾಲಿಗೆಯೊಳಗೆ
ತುಟಿಯಂಚಲಿ  ಪದಗಳ ಬಿತ್ತರಿಸಿ ನಡೆಸು
ಉಸಿರು ನಿಲ್ಲುವ ತನಕ  ಜೊತೆಗಿದ್ದು ಬೆಳೆಸು.


ವನಜಾಕ್ಷಿ ಬೆಟ್ಟದಾಲೂರು

About The Author

Leave a Reply

You cannot copy content of this page

Scroll to Top