ಕಾವ್ಯ ಸಂಗಾತಿ
ರಮೇಶ್ ಅಂಬಳಿ
“ಮುಂಜಾನೆಯ ಮೆರಗು


ಕತ್ತಲೆ ಸರಿದು
ಚುಮು ಚುಮು
ಕತ್ತಲೆಯ ಸೀಳಿ
ಹೊರಸೂಸುವ
ಸೂರ್ಯನ ಕಿರಣಗಳ
ಕಂಡ ಹಕ್ಕಿಗಳ ಚಿಲಿಪಿಲಿ
ಗಾನವು
ಕಿವಿಗಳಿಗೆ ಇಂಪನ್ನು ಚೆಲ್ಲಿ
ರಾತ್ರಿ ಪೂರ್ತಿ ನಿದ್ರೆ ಇಲ್ಲದೆ
ಸಿಹಿಕನಸುಗಳ ಮತ್ತಲ್ಲಿ
ತೇಲಾಡಿದ ನನಗೆ
ಆಗತಾನೆ ನಿದ್ರೆಗೆ
ಜಾರಿಹೋಗಿದ್ದೆ
ಹಕ್ಕಿಗಳ ಕಲರವಾ
ನನ್ನ ಬಡಿದೆಬ್ಬಿಸಿದವು
ಹೊರಬಂದು ನೋಡಿದೆ
ಭುವಿಯನ್ನು ಕವಿದ ಮಂಜು
ಹಸಿರು ಹುಲ್ಲು ಗಿಡಗಳಲಿ
ಮಂಜಿನ ತುಂತುರು ಹನಿಗಳು
ಮುತ್ತಿನ ಸಾಲು ಹೆಣಿದಂತಿತ್ತು
ನೋಡುವ ಕಣ್ಣಿಗೂ ಮನಸ್ಸಿಗೂ
ಮುದ ನೀಡಿದಂತಿತ್ತು.
ರಮೇಶ್ ಅಂಬಳಿ



