ಕಾವ್ಯ ಸಂಗಾತಿ
ಪ್ರೊ. ಡಾ. ಸರಸ್ವತಿ ಕಳಸದ
“ಅಂದ-ಚಂದ”


ಚಂದದ ಚಲುವೆ
ನಿನ್ನಂದಕ್ಕೊಂದು
ಬಾಹುಬಂದ
“ಮುದ್ದು ಕೂಸೆ” ಎನ್ನುವ
ಅಪ್ಪ – ಅಮ್ಮರ ಅಮರ ಪ್ರೇಮ
ಇಂದಿರೆಯಂಗಳದಲಿ
ಅಜ್ಜ – ಅಜ್ಜಿಯರ ಅಂಬಾರಿ
ನಿನಗದೋ ಜಂಬೂ ಸವಾರಿ
ಕುಟುಂಬದ ಕಣ್ಮಣಿ
ಮಮತೆಯ ಕಲ್ಯಾಣಿ ನೀ
ಚಲುವಿನ ಚಿತ್ತಾರ //
ಎಡವಿ ಬಿದ್ದಾಗ
ದುತ್ತೆಂದು ಎತ್ತಿ ಬಟ್ಟೆ ಮಣ್ಣು ಕೊಡವಿ
ಭುಜದ ಮೇಲೆ ಹೊತ್ತು
ಊರ ಸುತ್ತಿಸಿ – ಮಿಠಾಯಿ ತಿನ್ನಿಸಿ
ಮುದ್ದು ಮಾಡಿದ ಮನು ಕಾಕಾನ
ಪ್ರೀತಿಯ ಬುಜ್ಜಿ ನೀನು ಚಲುವೆ //
ಮೌಲ್ಯಗಳ ಊರ ಜಾತ್ರೆ
ಒಲವ ದೇಗುಲದ ಯಾತ್ರೆ
ಜೆರತಾರಿ ಅಂಗಿ ತೊಟ್ಟು
ನವಿಲ ಗರಿ ಇಟ್ಟು
ಓಡುವ ಓಟ
ಗಂಧರ್ವ ಲೋಕದ ಸೌಂದರ್ಯ
ಮಾಂಕಾಗಿಸುವ ಹೊಂಬೆಳಕಿನ ಚಲುವೆ //
ಕಷ್ಟದ ಕಡಲಲ್ಲಿ ಇಷ್ಟದ ಒಡಲಲ್ಲಿ
ಬೆಟ್ಟಗಳ ಕುಟ್ಟಿ
ಶಿಲ್ಪಗಳನ್ನಾಗಿಸಿದ
ಒಡಲ ಸೌಂದರ್ಯವೇ
ಮತ್ತೇ ಬಾ ನೀ
ಈ ಅಂದ – ಚಂದ ನೋಡಲು
ಸೋಲದ ಆತ್ಮ ಶಕ್ತಿಯೇ
ಸೌಂದರ್ಯದ ಇನ್ನೊಂದು ಮುಖವೇ ನೀನಲ್ಲವೇ?
ಪ್ರೊ. ಡಾ. ಸರಸ್ವತಿ ಕಳಸದ



