ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಗದಗ :2 ಸ್ಥಳೀಯ ನಿರಂತರ ಪ್ರಕಾಶನ ಹಾಗೂ ಗಜೇಂದ್ರಗಡ ದ ಮಕಾನದಾರ ಸಾಹಿತ್ಯ ಪ್ರತಿಷ್ಠಾನದ 2026 ನೇ ಸಾಲಿನ ರಾಜ್ಯಮಟ್ಟದ ನಿರಂತರ ಪುರಸ್ಕಾರ ಕ್ಕೆ ಹಾವೇರಿ ಜಿಲ್ಲೆಯ ಗೊಟಗೋಡಿ ಉತ್ಸವ ರಾಕ್ ಗಾರ್ಡನ್ ನ ಕ್ಯೂರೇಟರ್ ಹಿರಿಯ ಕವಯಿತ್ರಿ ಡಾ. ವೇದಾರಾಣಿ ದಾಸನೂರ ಅವರಿಗೆ ಇಂದು ಸರ್ವಾ ನುಮತ ದಿಂದ ಆಯ್ಕೆ ಮಾಡಲಾಯಿತೆಂದು ಪ್ರತಿಷ್ಠಾನ ದ ಸಂಚಾಲಕ ಹಿರಿಯ ಕವಿ ಎ ಎಸ್. ಮಕಾನದಾರ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಗ್ರಾಮೀಣ ಜನತೆಯ ಬದುಕನ್ನು ನೆನಪಿನ ಪುಟಗಳಲ್ಲಿ ಮಾತ್ರ ಉಳಿಯದೆ ಮುಂದಿನ ಪೀಳಿಗೆಗೆ ತಲುಪಿಸುವ ದೆಸೆಯಲ್ಲಿ ಕಳೆದ ಎರಡು ದಶಕಗಳಿಂದ ಶ್ರಮಿಸುತ್ತಿರುವ ಡಾ ವೇದಾರಾಣಿ ದಾಸನೂರ್. ಪ್ರಕಾಶ ದಾಸನೂರ್ ದಂಪತಿಗಳ ಸಹಯೋಗದೊಂದಿಗೆ ಖ್ಯಾತ ಶಿಲ್ಪ ಕಲಾವಿದ, ದೊಡ್ಡಾಟ ಕಲೆಗೆ ಹೊಸ ಸ್ಪರ್ಶ ನೀಡಿದ ಡಾ ಟಿ. ಬಿ.ಸೋಲಬಕ್ಕ ನವರ ಅವರ ಕನಸು ನನಸು ಮಾಡುವಲ್ಲಿ ಸರಳ, ಸ್ನೇಹಜೀವಿ ಕವಯಿತ್ರಿ ಡಾ ವೇದಾರಾಣಿಯವರ ಪರಿ ಶ್ರಮ ಅಗಾಧವಾದುದು.
ಚಂದಿಗಡದ ಪದ್ಮಶ್ರೀ ನೆಕ್ ಚಂದ ಸೈನಿ ಅವರ ರಾಕ್ ಗಾರ್ಡನ್ 40ಎಕರೆ ವಿಸ್ತೀರ್ಣ ದಲ್ಲಿ ನಿರ್ಮಿಸಿದರೆ. ಹಾವೇರಿ ಜಿಲ್ಲೆಯ ಗೊಟಗೋಡಿ ಉತ್ಸವ ರಾಕ್ ಗಾರ್ಡನ್ 50ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ಕರ್ನಾಟಕ ಗ್ರಾಮೀಣ ಸಂಸ್ಕೃತಿ, ಪರಂಪರೆ, ಕೃಷಿ, ಜಾನಪದ ಬದುಕು ಚಿತ್ರ ಕಲೆ, ಶಿಲ್ಪಕಲೆ ಮೈದಾಳಿ ನಿಂತಿದೆ. ರಾಕ್ ಗಾರ್ಡನ್ ಕೇವಲ ಪ್ರವಾಸಿ ತಾಣ ವಲ್ಲ ಕಲಾವಿದರ ಕಲ್ಪನಾ ಶಕ್ತಿ ಪರಿಶ್ರಮ ಮತ್ತು ಪರಿಸರ ಪ್ರಜ್ಞೆ ಯ ಪ್ರತೀಕವಾಗಿದೆ ಕವಯತ್ರಿ ವೇದಾ ರಾಣಿ ಸ್ವತಃ ಕವಯಿತ್ರಿ ಜೊತೆಗೆ ಕವಿ ಕಲಾವಿದರಿಗೆ ಪೋಷಕರಾಗಿಯೂ ಪ್ರತಿಭಾವಂತ ಬರಹಗಾರರಿಗೆ ಬೆನ್ನು ತಟ್ಟಿ ಪ್ರೋತ್ಸಾಹ ನೀಡುತ್ತಿರುವ ಕಾರ್ಯ ವನ್ನು ಮಕಾನದಾರ ಸಾಹಿತ್ಯ ಪ್ರತಿಷ್ಠಾನ ಗಮನಿಸಿದ್ದನ್ನು ಸಭೆಯಲ್ಲಿ ಚರ್ಚಿಸಲಾಯಿತು.
ಆಯ್ಕೆ ಸಮಿತಿಯಲ್ಲಿ ಎಂ ಆರ್. ಸೋಂಪುರ.ಸಾಹಿತಿಗಳಾದ ರಾಮಪ್ಪ ಎಫ್ ಲೊಟಗೇರಿ, ರಂಜಾನ್ ಹೆಬಸೂರ್, ದೀಪಾ ಗೋನಾಳ್, ಸದಸ್ಯರಾದ ಬಸವ ರಾಜ್ ಎಚ್ ಬಡಿಗೇರ್. ಎಸ್ ಐ. ತೆಗ್ಗಿನಮನಿ. ಕೆ.ಆರ್. ಸುಣಗಾರ. ಅಮೀರ್ ನಾಯಕ,  ಎಂ.ಎಸ್. ಮಕಾನದಾರ ಮುಂತಾದವರು ಪಾಲ್ಗೊಂಡಿದ್ದರು.

About The Author

Leave a Reply

You cannot copy content of this page

Scroll to Top