ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಕಲ್ಮಶವಿಲ್ಲದ ಪ್ರೀತಿಗಾಗಿ ಕಪಾಲಿ ಹಿಡಿದ ಫಕೀರಳು ನಾನು
ವಂಚನೆ ಇಲ್ಲದ ಒಲುಮೆಗಾಗಿ ಕಪಾಲಿ ಹಿಡಿದ ಫಕೀರಳು ನಾನು

ಕ್ಷಣಕೊಮ್ಮೆ ಮೃಗಜಲದತಾಗಿದೆ ಮಾನವ ಪ್ರೇಮ
ಅಳಿವಿಲ್ಲದ ಅಕ್ಕರೆಗಾಗಿ ಕಪಾಲಿ ಹಿಡಿದ ಫಕೀರಳು ನಾನು

ಬೊಗಸೆಯೊಡ್ಡಿ ಅಂಗಲಾಚಿವೆ ಜೀವಗಳು ಕರುಣಾ ಕಂಗಳಿಗೆ
ನಾಶವಿಲ್ಲದ ಅರ್ತಿಗಾಗಿ ಕಪಾಲಿ ಹಿಡಿದ ಫಕೀರಳು ನಾನು

ಗುಣಕ್ಕಿಂತ ಕಾಯದ ರೂಪು ಬಯಸುವವರೇ ಅಧಿಕ
ಸ್ವಾರ್ಥವಿಲ್ಲದ ನಲುಮೆಗಾಗಿ ಕಪಾಲಿ ಹಿಡಿದ ಫಕೀರಳು ನಾನು

ಅನುದಿನವು ಅನುನಯಕ್ಕಾಗಿಯೇ ಜೀವ ತೇಯ್ದವಳು ಭಾಗ್ಯ
ಮರಣವಿಲ್ಲದ ಮಮತೆಗಾಗಿ ಕಪಾಲಿ ಹಿಡಿದ ಫಕೀರಳು ನಾನು

̲̲̲̲̲̲̲̲̲̲̲̲̲̲——————

About The Author

Leave a Reply

You cannot copy content of this page

Scroll to Top