ಕಾವ್ಯ ಸಂಗಾತಿ
ಡಾ. ಭಾಗ್ಯವತಿ ಅಮರೇಶ್ವರ
“ಜುಲ್ ಕಾಫಿಯ ಗಜಲ್”


ಕಲ್ಮಶವಿಲ್ಲದ ಪ್ರೀತಿಗಾಗಿ ಕಪಾಲಿ ಹಿಡಿದ ಫಕೀರಳು ನಾನು
ವಂಚನೆ ಇಲ್ಲದ ಒಲುಮೆಗಾಗಿ ಕಪಾಲಿ ಹಿಡಿದ ಫಕೀರಳು ನಾನು
ಕ್ಷಣಕೊಮ್ಮೆ ಮೃಗಜಲದತಾಗಿದೆ ಮಾನವ ಪ್ರೇಮ
ಅಳಿವಿಲ್ಲದ ಅಕ್ಕರೆಗಾಗಿ ಕಪಾಲಿ ಹಿಡಿದ ಫಕೀರಳು ನಾನು
ಬೊಗಸೆಯೊಡ್ಡಿ ಅಂಗಲಾಚಿವೆ ಜೀವಗಳು ಕರುಣಾ ಕಂಗಳಿಗೆ
ನಾಶವಿಲ್ಲದ ಅರ್ತಿಗಾಗಿ ಕಪಾಲಿ ಹಿಡಿದ ಫಕೀರಳು ನಾನು
ಗುಣಕ್ಕಿಂತ ಕಾಯದ ರೂಪು ಬಯಸುವವರೇ ಅಧಿಕ
ಸ್ವಾರ್ಥವಿಲ್ಲದ ನಲುಮೆಗಾಗಿ ಕಪಾಲಿ ಹಿಡಿದ ಫಕೀರಳು ನಾನು
ಅನುದಿನವು ಅನುನಯಕ್ಕಾಗಿಯೇ ಜೀವ ತೇಯ್ದವಳು ಭಾಗ್ಯ
ಮರಣವಿಲ್ಲದ ಮಮತೆಗಾಗಿ ಕಪಾಲಿ ಹಿಡಿದ ಫಕೀರಳು ನಾನು
̲̲̲̲̲̲̲̲̲̲̲̲̲̲——————
ಡಾ. ಭಾಗ್ಯವತಿ ಅಮರೇಶ್ವರ ಯಾದಗಿರಿ.




ಗಜಲ್ ಸಂವೇದನಾತ್ಮಕವಾಗಿದೆ ಅಭಿನಂದನೆಗಳು.
ಸೂಕ್ಷ್ಮ ಸಂವೇದನೆ ಇರುವ ಘಜಲ್.
ಅನುದಿನ ಮರಣವಿಲ್ಲದ ಮಮತೆಗಾಗಿ ಕಪಾಲಿ ಹಿಡಿದ ಫಕೀರಳು ನಾನು ಎಂಬ ಗಜಲ್ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಮೇಡಂ.