ಕಾವ್ಯ ಸಂಗಾತಿ
ಜಯಶ್ರೀ ಭ.ಭಂಡಾರಿ
“ಮನವೆಲ್ಲ ನಿನ್ನದೆ ಸಂತೆ”


ಕಣ್ಣ ತುಂಬೆಲ್ಲ ನೀನೆ ತುಂಬಿ ಕಾಣದಾಗಿದೆ ದಾರಿ
ಮನದ ಮಾತೆಲ್ಲ ನಿನ್ನಲೆ ಅಡಗಿ ಮೌನವಾಗಿದೆ ಬದುಕು.
ಹೃದಯದ ಬಡಿತ ನಿಂತಂತಾಗಿ
ಉಸಿರು ಭಾರವಾಗಿದೆ
ನಾನೇ ನೀನಾಗಿರುವಾಗ ಪ್ರತಿ ಹಗಲು ಇರುಳಾಗಿದೆ.
ಬದುಕಲಾರೆ ನೀನಿಲ್ಲದೆ ಗೆಳೆಯಾ…
ಸಾಕು ಈ ನಾಟಕಕೆ ತೆರೆ ಬೀಳಿಸು…
ಸದಾ ನಿನ್ನ ನೆನಪಲಿ ಜಾರುವ ಅಶ್ರುಧಾರೆ
ಕೆನ್ನೆಯ ಮೇಲೆ ಸುಳಿಯುವ ಮುಂಗುರುಳು
ಮುನಿದಿದೆ ನೀನಿಲ್ಲದೆ….
ಈ ಸಂತೆಯಲಿ ಸದಾ ನಿನ್ನದೆ ಚಿಂತೆ.
ಬಂದುಬಿಡು ಒಲವ ಕೊಳ್ಳಲು…
ಜಯಶ್ರೀ ಭ.ಭಂಡಾರಿ.



