ಕಾವ್ಯ ಸಂಗಾತಿ
ಅರುಣಾ ನರೇಂದ್ರ
ಗಜಲ್


ಕತ್ತಲಾಗಿದೆ ಇಲ್ಲಿ ಸಾಲು ದೀಪ ಹಚ್ಚಿ ಹಬ್ಬ ಮಾಡೋಣ
ತಿಮಿರ ಮುಸುಕಿದೆ ಇಲ್ಲಿ ತಮ ಕಳಚಿ ಹಬ್ಬ ಮಾಡೋಣ
ಕೇಕೆ ಹಾಕುತಿದೆ ಕತ್ತಲೆ ಮುತ್ತಿಗೆಯ ಹಾಕಲು
ಮೌನದಿ ಬೆಳಕ ಕರೆದು ದೃಗ ಮುಚ್ಚಿ ಹಬ್ಬ ಮಾಡೋಣ
ಅಜ್ಞಾನ ಅಸಮಾನತೆಯನು ಆಹ್ವಾನಿಸುತ್ತದೆ
ಎಲ್ಲರೊಂದೇ ಎಂದು ಸ್ನೇಹದ ಕೈ ಚಾಚಿ ಹಬ್ಬ ಮಾಡೋಣ
ಸುಖದ ಬೆಂಬತ್ತಿ ಮನೆ ಮನ ಕತ್ತಲಾಗಿವೆ ಇಲ್ಲಿ
ಶಾಂತಿ ಸಮಾಧಾನ ಕೈತುಂಬ ಬಾಚಿ ಹಬ್ಬ ಮಾಡೋಣ
ಬೆಳಕ ಬೀಜ ಬಿತ್ತುವ ಅರುಣಾಗೆ ಎದೆ ತುಂಬಾ ಹಿಗ್ಗು
ಬೆಳ್ಳಿ ಬಟ್ಟೆ ತೊಟ್ಟು ಮದ ಮತ್ಸರ ಬಿಚ್ಚಿ ಹಬ್ಬ ಮಾಡೋಣ
ಅರುಣಾ ನರೇಂದ್ರ




ಸುಂದರ ಗಜಲ್