ಶರಣರ ಸಂಗಾತಿ
ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

ಸಾವಿಲ್ಲದ ಶರಣರು
ಸ್ವಾಂತಂತ್ರ್ಯ ಸಂಗ್ರಾಮದ ಸಂತ
ಶ್ರೀ ರಮಾನಂದ ತೀರ್ಥರು

ಸ್ವಾಮಿ ರಮಾನಂದ ತೀರ್ಥರು (೧೯೦೩ – ೧೯೭೨) ಭಾರತದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು, ಶಿಕ್ಷಣ ತಜ್ಞರು ಮತ್ತು ಸಮಾಜ ಸುಧಾರಕರಾಗಿದ್ದು, ನಿಜಾಮರ ಆಳ್ವಿಕೆಯಲ್ಲಿದ್ದ ಹೈದರಾಬಾದ್ ಸಂಸ್ಥಾನದ ವಿಮೋಚನಾ ಹೋರಾಟದ ನೇತೃತ್ವ ವಹಿಸಿದ್ದರು.
ಆರಂಭಿಕ ಜೀವನ ಮತ್ತು ಶಿಕ್ಷಣ
• ಜನನ: ಇವರು ೧೯೦೩ ಅಕ್ಟೋಬರ್ ೩ ರಂದು ಕರ್ನಾಟಕದ ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಜನಿಸಿದರು. ಇವರ ತಂದೆ ಭವಾನಿರಾವ್ ಖೇಡಗಿಕರ್.
• ಪೂರ್ವಾಶ್ರಮದ ಹೆಸರು:
ಸನ್ಯಾಸ ಸ್ವೀಕರಿಸುವ ಮೊದಲು ಇವರ ಹೆಸರು ವೆಂಕಟೇಶ ಭವಾನಿರಾವ್ ಖೇಡಗಿಕರ್ ಎಂದಿತ್ತು.
• ವಿದ್ಯಾಭ್ಯಾಸ:
ಪ್ರಾಥಮಿಕ ಶಿಕ್ಷಣವನ್ನು ದೇವಳ ಗಾಣಗಾಪುರದಲ್ಲಿ ಪೂರ್ಣಗೊಳಿಸಿದ ಇವರು, ಸೊಲ್ಲಾಪುರದ ನಾರ್ಥ್ಕೋಟ್ ಮಾಧ್ಯಮಿಕ ಶಾಲೆ ಹಾಗೂ ಪುಣೆಯ ತಿಲಕ್ ವಿದ್ಯಾಪೀಠದಿಂದ ಸ್ನಾತಕೋತ್ತರ (ಎಂ.ಎ.) ಪದವಿ ಪಡೆದರು.
ಸನ್ಯಾಸ ದೀಕ್ಷೆ ಮತ್ತು ಶಿಕ್ಷಣ ಸೇವೆ
• ಶಿಕ್ಷಕರಾಗಿ ಸೇವೆ:
ಕಾರ್ಮಿಕ ನಾಯಕ ಎನ್.ಎಂ. ಜೋಶಿ ಅವರೊಂದಿಗೆ ಕೆಲಕಾಲ ಕಾರ್ಮಿಕ ಚಳವಳಿಯಲ್ಲಿ ಭಾಗವಹಿಸಿದ ನಂತರ, ಅನಾರೋಗ್ಯದ ಕಾರಣದಿಂದ ಶಿಕ್ಷಣ ಕ್ಷೇತ್ರಕ್ಕೆ ಮರಳಿದರು. ಮಹಾರಾಷ್ಟ್ರದ ಹಿಪ್ಪರಗಾ ರಾಷ್ಟ್ರೀಯ ಶಾಲೆಯ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಾ ಯುವಕರಲ್ಲಿ ರಾಷ್ಟ್ರಪ್ರೇಮ ಬೆಳೆಸಿದರು.
ಸನ್ಯಾಸ ಸ್ವೀಕಾರ:
೧೯೩೦ರ ದಶಕದ ಆರಂಭದಲ್ಲಿ ಸನ್ಯಾಸ ದೀಕ್ಷೆ ಪಡೆದು ಸ್ವಾಮಿ ರಮಾನಂದ ತೀರ್ಥ ಎಂಬ ನಾಮಧೇಯವನ್ನು ಪಡೆದರು. ಸನ್ಯಾಸಿಯಾದ ನಂತರವೂ ಸಮಾಜ ಸೇವೆ ಮತ್ತು ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟರು.
ಹೈದರಾಬಾದ್ ವಿಮೋಚನಾ ಹೋರಾಟ ಮತ್ತು ರಾಜಕೀಯ
*• ಹೋರಾಟದ ನಾಯಕತ್ವ:
ಹೈದರಾಬಾದ್ ನಿಜಾಮ ಉಸ್ಮಾನ್ ಅಲಿ ಖಾನ್ ಅವರ ದಬ್ಬಾಳಿಕೆಯ ಆಡಳಿತದ ವಿರುದ್ಧ ಜನಜಾಗೃತಿ ಮೂಡಿಸಿದರು. ೧೯೪೭ರಲ್ಲಿ ಹೈದರಾಬಾದ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿ, ಹೈದರಾಬಾದ್ ಸಂಸ್ಥಾನವನ್ನು ಭಾರತ ಒಕ್ಕೂಟದಲ್ಲಿ ವಿಲೀನಗೊಳಿಸಲು ನಡೆದ ಹೋರಾಟವನ್ನು ಮುನ್ನಡೆಸಿದರು.
ಸೆರೆವಾಸ:
ಸತ್ಯಾಗ್ರಹಗಳಲ್ಲಿ ಪಾಲ್ಗೊಂಡ ಕಾರಣಕ್ಕೆ ನಿಜಾಮನ ಸರ್ಕಾರದಿಂದ ಬಂಧಿಸಲ್ಪಟ್ಟು ಸೆರೆವಾಸ ಅನುಭವಿಸಿದರು.
ನಿಜಾಮಶಾಹಿ ತನ್ನ ಪ್ರಾಂತದಲ್ಲಿ ಕಾಂಗ್ರೆಸ್ ಸಂಘಟನೆ ನಿಷೇಧಿಸಿದ್ದ ಕಾಲದಲ್ಲಿ ಹೈದ್ರಾಬಾದ್ ವಿಮೋಚನೆಗಾಗಿ ಪ್ರತ್ಯೇಕವಾಗಿ ರಚನೆಯಾಗಿದ್ದ ಕರ್ನಾಟಕ ಪರಿಷತ್, ಆಂಧ್ರಪರಿಷತ್ ಮರಾಠ ಪರಿಷತ್ ಗಳನ್ನು ಒಂದುಗೂಡಿಸಿ ಕಾಂಗ್ರೆಸ್ ಸ್ಥಾಪನೆ ಮಾಡಿದ ಅವರು ಹೈದ್ರಾಬಾದ್ ನಿಜಾಮ್ ಶಾಹಿ ಹಾಗೂ ರಜಕಾರರ ದಬ್ಬಾಳಿಕೆಯ ವಿರುದ್ಧ ತೀವ್ರ ಹೋರಾಟ ನಡೆಸಿ ಜನರನ್ನು ಒಗ್ಗೂಡಿಸಿದರು. ಈ ಹೋರಾಟಕ್ಕಾಗಿ ಹಲವು ಬಾರಿ ಸೆರೆಮನೆವಾಸ ಅನುಭವಿಸಿದರು. ೧೯೪೮ ಸೆಪ್ಟೆಂಬರ್ ೧೭ ರಂದು ಹೈದ್ರಾಬಾದ್ ಪ್ರಾಂತ ವಿಮೋಚನೆಗೊಂಡಿರುವುದರಲ್ಲಿ ಸ್ವಾಮಿ ರಾಮಾಂನಂದ ತೀರ್ಥರ ಪಾತ್ರ ದೊಡ್ಡದಾಗಿದೆ.ಸ್ವಾತಂತ್ರ್ಯದ ನಂತರ ೧೯೫೨ರಲ್ಲಿ ಗುಲ್ಬರ್ಗಾ ಕ್ಷೇತ್ರದಿಂದ ೧೯೫೭ರಿಂದ ೧೯೬೨ ರ ವರೆಗೆ ಔರಂಗಬಾದ ಕ್ಷೇತ್ರದಿಂದ ಲೋಕಸಭಾ ಸದಸ್ಯರಾಗಿ ರಾಷ್ಟ್ರಕ್ಕೆ ತಮ್ಮ ಸೇವೆ ಸಲ್ಲಿಸಿರುವ ಸ್ವಾಮೀಜಿ ಅವರು ಭಾಷವಾರು ಪ್ರಾಂತ ರಚನೆ ವಿಷಯವನ್ನು ಮೊದಲಿಗೆ ಪ್ರಸ್ತಾಪಿಸಿ ಆಂಧ್ರ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳು ಸೇರಿ ದೇಶದಲ್ಲಿ ಭಾಷಾವಾರು ರಾಜ್ಯಗಳ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.ದೇಶದ ಸಮಗ್ರತೆ ಮತ್ತು ಏಕತೆ ಮತ್ತು ಅಭಿವೃದ್ಧಿಯ ಕನಸು ಕಂಡಿದ್ದ ಸ್ವಾಮಿ ರಾಮಾನಂದರು ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಪಕ್ಷದ ಸುಧಾರಣೆ ಬಯಸಿದ್ದರು.
ರಾಷ್ಟ್ರ ರಾಜಕಾರಣದ ಬೆಳವಣಿಗೆಗಳಿಂದ ವಿಮುಖರಾಗಿ ನಂತರ ರಾಜಕೀಯ ಚಟುವಟಿಕೆಯಿಂದ ದೂರ ಉಳಿದಿದ್ದರು.ಸಾಮಾಜಿಕ ಮತ್ತು ಗ್ರಾಮೀಣ ಅಭಿವೃದ್ಧಿಗಾಗಿ ತಮ್ಮ ಇಡಿ ಜೀವನವನ್ನು ಮುಡಿಪಾಗಿಟ್ಟು ರಾಷ್ಟ್ರ ಸೇವೆಗೆ ತಮ್ಮನ್ನು ತಾವು ಸಮರ್ಪಣೆ ಮಾಡಿಕೊಂಡಿದ್ದರು.ಹೈದ್ರಾಬಾದದಲ್ಲಿ ನೆಲೆಸಿದ್ದ ಸ್ವಾಮೀಜಿ ಅವರು ೨೨ ಜನವರಿ ೧೯೭೨ ರಂದು ನಿಧನ ಹೊಂದಿದರು. ಹೈದರಾಬಾದನ ಬೇಗಂ ಪೇಟದಲ್ಲಿ ಅವರ ಅಂತ್ಯಕ್ರಿಯೆ ನಡೆಸಿದ ಸ್ಥಳವನ್ನು ಸ್ಮಾರಕವಾಗಿ ನಿರ್ಮಾಣ ಮಾಡಿ ಅವರಿಗೆ ಗೌರವ ಸಲ್ಲಿಸಲಾಗಿದೆ.ಸ್ವಾಮಿ ರಾಮಾನಂದರ ಹೆಸರಲ್ಲಿ ಮಹಾರಾಷ್ಟ್ರದ ನಾಂದೇಡದಲ್ಲಿ ಸ್ವಾಮಿ ರಾಮಾನಂದ ತೀರ್ಥ ಮರಾಠವಾಡ ವಿಶ್ವ ವಿದ್ಯಾಲಯ ಸ್ಥಾಪಿಸಲಾಗಿದೆ ಹೈದ್ರಾಬಾದ್ ಪ್ರಾಂತದ ಹಲವೆಡೆ ಅವರ ಹೆಸರಲ್ಲಿ ಹಲವು ಸಂಘ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ.ಸಿಂದಗಿಯಲ್ಲಿ ಅವರು ಹುಟ್ಟಿದ ಮನೆಯನ್ನು ಖರೀದಿ ಮಾಡಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 2006 ರಲ್ಲಿ ಸ್ಮಾರಕ ಭವನವಾಗಿ ನಿರ್ಮಾಣ ಮಾಡಿದ್ದಾರೆ. ರೂವಾರಿ ದೇಶದ ಅಗ್ರಗಣ್ಯ ನಾಯಕರಾದ ಸ್ವಾಮಿ ರಾಮಾನಂದ ತೀರ್ಥರ ಸಲ್ಲಿಸಿದ ಸೇವೆ ನಿಜಕ್ಕೂ ಅನುಕರಣೀಯ ಮತ್ತು ಅನುಪಮಶೀಲವಾಗಿದೆ.
ನಿಧನ ಮತ್ತು ಸ್ಮರಣೆ
• ನಿಧನ: ಇವರು ೧೯೭೨ ಜನವರಿ ೨೨ ರಂದು ಹೈದರಾಬಾದ್ನಲ್ಲಿ ನಿಧನರಾದರು.
ಗೌರವ
: ಇವರ ಸ್ಮರಣಾರ್ಥ ಮಹಾರಾಷ್ಟ್ರದ ನಾಂದೇಡ್ನಲ್ಲಿ ಸ್ವಾಮಿ ರಮಾನಂದ ತೀರ್ಥ ಮರಾಠವಾಡ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿದೆ ಹಾಗೂ ಭಾರತ ಸರ್ಕಾರ ೧೯೯೯ರಲ್ಲಿ ಇವರ ಗೌರವಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದೆ.
ಬದುಕಿನ್ನೂದ್ದಕ್ಕು ಅಪ್ಪಟ ರಾಷ್ಟ್ರ ಪ್ರೇಮ ದೇಶಾಭಿಮಾನ ಮೂಡಿಸಿದ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ಶ್ರೀ ರಮಾನಂದ ತೀರ್ಥರು.
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ




