ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಓದುವಮುನ್ನ:

ಭಾರತದ ಅತ್ಯುನ್ನತ ಮತ್ತು ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿಗಳಲ್ಲಿ ಜ್ಞಾನಪೀಠ ಪ್ರಶಸ್ತಿಯು ಒಂದಾಗಿದೆ.
ಭಾರತೀಯ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಸಾಹಿತಿಗಳಿಗೆ ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತದೆ. ಸಂವಿಧಾನದ ಎಂಟನೇ ಪರಿಛ್ಛೇದದಲ್ಲಿ ಉಲ್ಲೇಖವಾಗಿರುವ ಭಾಷೆಗಳಲ್ಲಿ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ರಚಿಸಿದ ಭಾರತೀಯ ನಾಗರಿಕನಿಗೆ ಈ ಜ್ಞಾನಪೀಠ ಪ್ರಶಸ್ತಿಯನ್ನು ಕೊಡಲಾಗುತ್ತಿದೆ. ಈ ಪ್ರಶಸ್ತಿಯನ್ನು ಮೇ ೨೨ ೧೯೬೧ರಲ್ಲಿ ಸ್ಥಾಪಿಸಲಾಯಿತು.
ಇದು ಪ್ರಶಸ್ತಿ ಫಲಕ ೧೧ಲಕ್ಷ ರೂಪಾಯಿ ನಗದು ಹಾಗೂ ವಾಗ್ದೇವಿಯ ಕಂಚಿನ ವಿಗ್ರಹವನ್ನು ಒಳಗೊಂಡಿರುತ್ತದೆ.
ಈ ಪ್ರಶಸ್ತಿಯನ್ನು ಪ್ರಪ್ರಥಮವಾಗಿ ೧೯೬೫ರಲ್ಲಿ ಮಲೆಯಾಳಂ ಲೇಖಕ ಜಿ. ಶಂಕರ ಕುರುಪ್ ರವರ “ಒಡಕ್ಕೂಳಲ್”ಕೃತಿಗೆ ಪ್ರಧಾನ ಮಾಡಲಾಯಿತು.

ಪರಿಚಯ

ಜಿ. ಶಂಕರ ಕುರುಪ್ ರವರ ಪೂರ್ಣ ಹೆಸರು ಗೋವಿಂದ ಶಂಕರ ಕುರುಪ್. ಇವರು ಜೂನ ೩  ೧೯೦೧ರಂದು ಕೇರಳದ ಎನಾರ್ಕುಲಂ ಜಿಲ್ಲೆಯ ಕಾಲಡಿ ಸಮೀಪದ ನಾಯತ್ತೋಡು ಎಂಬಲ್ಲಿ ಜನಿಸಿದರು.ತಂದೆ ಶಂಕರ ವಾರಿಯರ್ ತಾಯಿ ಲಕ್ಷ್ಮೀ ಕುಟ್ಟಿ ಅಮ್ಮ..ತಂದೆಯ ಅಕಾಲಿಕ ಮರಣದ ನಂತರ ತಾಯಿ ಹಾಗೂ ಸೋದರ ಮಾವನ  ಪ್ರೋತ್ಸಾಹ ದಿಂದ ವಿದ್ಯಾಭ್ಯಾಸ ಮುಗಿಸಿ ಚಿಕ್ಕ ವಯಸ್ಸಿನಲ್ಲಿಯೇ ಅಧ್ಯಾಪಕ ವೃತ್ತಿಯನ್ನು ಕೈಗೊಂಡರು.  ೧೯೩೧ರಲ್ಲಿ ಇವರು ತಿರುವಂಚಿಕುಲಂನಲ್ಲಿರುವ  ಪುರುತು ವೀಡು ಎಂಬ ಪುರಾತನ ನಾಯರ್ ಕುಟುಂಬದಿಂದ ಸುಭಾದ್ರ ಅಮ್ಮನನ್ನು ಮದುವೆಯಾದರು.ಸಾಹಿತ್ಯ ರಚನೆಯ ಪ್ರವೃತ್ತಿಯನ್ನು ಕರಗತಮಾಡಿಕೊಂಡು ನಂತರ ಎನಾರ್ಕುಲಂನ ಮಹಾರಾಜ ಕಾಲೇಜಿನಲ್ಲಿ ಮಲಯಾಳಂ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.

ಪ್ರಮುಖ ಕೖತಿಗಳು:

ಜಿ. ಶಂಕರ ಕುರುಪ್ ರವರು ಸುಮಾರು ೪0ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅವರ ಕೃತಿಗಳಲ್ಲಿ ಕವನ ಸಂಕಲನಗಳು, ನಾಟಕಗಳು, ಪ್ರಬಂಧಗಳು ಮತ್ತು ಅನುವಾದಿತ ಕೖತಿಗಳು ಪ್ರಮುಖವಾಗಿವೆ.

ಪ್ರಮುಖ ಕೖತಿಗಳು:


೧. ಓಡಕ್ಕೂಳಲ್ (ಕೊಳಲು)
    ೨. ಸೂರ್ಯ ಕಾಂತಿ
    ೩.ನಿಮಿಷಂ
    ೪. ವಿಶ್ವದರ್ಶನಂ
    ೫. ಪಾಥಿಕನ್ಟೆ ಪಾಟ್ಟು
     ೬. ಪೂಜಾಪುಷ್ಪಂ
      ೭. ಮುತ್ತುಗಳು
       ೮. ಚಂಕತಿರುಕಲ್
       ೯. ಇತಳಗಳು
       ೧0.ಓರ್ಮಾಯುಡ
 ಓಳಂಗಳಿಲ್ -ಆತ್ಮಕಥೆ
        ೧೧. ಸಾಹಿತ್ಯ ಕೌತುಕಂ
          ೧೨. ಜೀವನಾ ಸಂಗೀತ

ಇವರು ರವೀಂದ್ರನಾಥ ಟ್ಯಾಗೋರರ ಗೀತಾಂಜಲಿ, ಕಾಳಿದಾಸನ  ಮೇಘದೂತ ಮತ್ತು ಓಮರ್ ಖಯ್ಯಾಮ್ ಅವರ ರುಬಾಯತ್ ಕೖತಿಗಳನ್ನು ಮಲಯಾಳಂಗೆ ಅನುವಾದಿಸಿದ್ದಾರೆ.

ಸಾಹಿತ್ಯ ಸೇವೆ:

ಜಿ. ಶಂಕರ ಕುರುಪ್ ಅವರು ಮಲಯಾಳಂ ಸಾಹಿತ್ಯದ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ.

*  ಪ್ರಕೃತಿಯ ಸೌಂದರ್ಯವನ್ನು ತಮ್ಮ ಕವನಗಳಲ್ಲಿ ಅದ್ಭುತವಾಗಿ ಬಿಂಬಿಸಿದ್ದಾರೆ.
* ಕವನ, ನಾಟಕ, ಪ್ರಬಂಧ ಮತ್ತು ಅನುವಾದ ಸಾಹಿತ್ಯ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ.
* ಆಕಾಶವಾಣಿಯಲ್ಲಿಯೂ ನಿರ್ಮಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
* ೧೯೬೮ ರಿಂದ  ೧೯೭೨ರವರೆಗೆ ರಾಜ್ಯ ಸಭೆಯ ಸದಸ್ಯರಾಗಿದ್ದರು.

ಪ್ರಶಸ್ತಿಗಳು:

ಜ್ಞಾನ ಪೀಠ ಪ್ರಶಸ್ತಿ :
ಇವರ ಪ್ರಸಿದ್ಧ ಕವನ ಸಂಕಲನವಾದ’ಓಡಕ್ಕುಳಲ್’ ಕೃತಿಗೆ ೧೯೬೫ರಲ್ಲಿ ಭಾರತದ ಮೊದಲ ಜ್ಞಾನ ಪೀಠ ಪ್ರಶಸ್ತಿ ಲಭಿಸಿತು.

* ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ –೧೯೬೩
* ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ –೧೯೬೧
* ಪದ್ಮ ಭೂಷಣ ಪ್ರಶಸ್ತಿ –೧೯೬೮
* ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ–೧೯೬೭

ಇವರ ಕೃತಿಗಳಲ್ಲಿ ಮಾನವೀಯತೆ, ದೇಶಪ್ರೇಮ, ಆಧ್ಯಾತ್ಮಿಕತೆ ಮತ್ತು ರಾಷ್ಟ್ರಭಕ್ತಿಯ ಆಶಯದ ಹೊಳಹು ಕಂಡುಬರುತ್ತದೆ.

ನಿಧನ:

ಜಿ. ಶಂಕರ ಕುರುಪ್ ಅವರು ೧೯೭೮ರ ಫೆಬ್ರವರಿ ೨ರಂದು ತಿರುವನಂತಪುರದಲ್ಲಿ ನಿಧನರಾದರು. ಆದರೆ ಅವರ ಅಮೂಲ್ಯ ಸಾಹಿತ್ಯ ಕೃತಿಗಳು ಓದುಗರ ಮನದಲಿ ಜೀವಂತವಾಗಿವೆ.

ಜಿ. ಶಂಕರ ಕುರುಪ್ ಅವರು ಭಾರತೀಯ ಸಾಹಿತ್ಯ ಲೋಕದ ಹೆಮ್ಮೆಯ ಸಾಹಿತಿಯಾಗಿದ್ದಾರೆ. ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಮೊದಲ ವ್ಯಕ್ತಿಯಾಗಿ  ಅವರು ಇತಿಹಾಸದಲ್ಲಿ ಚಿರಸ್ಥಾಯಿಯಾಗಿದ್ದಾರೆ. ತಮ್ಮ ಕವನಗಳು, ಅನುವಾದಗಳು ಮತ್ತು ಸಾಹಿತ್ಯ ಸೇವೆಯ ಮೂಲಕ ಮಲಯಾಳಂ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಆದ್ದರಿಂದಲೇ ಅವರಿಗೆ ‘ ಮಹಾಕವಿ’ ಎಂಬ ಬಿರುದು ಕಿರೀಟಪ್ರಾಯವಾಗಿದೆ. ಮಾನವ ಜೀವನದ ಮಘಲೆ ವಿಜ್ಞಾನ ಬೀರಿದ ಪ್ರಭಾವವನ್ನು ಕಾವ್ಯವಾಗಿಸಿದ್ದರಿಂದ ಇವರನ್ನು ‘ವೈಜ್ಞಾನಿಕ ಕವಿ’ ಎಂದು ಕರೆಯುತ್ತಾರೆ.


About The Author

Leave a Reply

You cannot copy content of this page

Scroll to Top