ಕಾವ್ಯ ಸಂಗಾತಿ
ಹನಿಬಿಂದು
ಗಜಲ್


ದಣಿದ ದೇಹಕ್ಕೆ ಅಪ್ಪುಗೆಯ ರುಚಿಯು ಬೇಕಿದೆ
ಕುಣಿವ ಹೃದಯಕ್ಕೆ ಸಾಂತ್ವನದ ಸವಿಯು ಬೇಕಿದೆ
ಮೌನದ ಮೆರವಣಿಗೆಯಲಿ ಸಾವಿನ ಸಾಗಾಟ ಸಾಗಿದೆ
ದೇಶದುದ್ದಕ್ಕೂ ಹರಿವ ಹಸಿರು ರಕ್ತದ ನದಿಯು ಬೇಕಿದೆ
ಡಂಗುರ ಬಾರಿಸುತ್ತಿವೆ ಮೆದುಳು ಕೈ ಕಾಲುಗಳು ಸೇರಿ
ಸರ್ವೆಡೆ ಸಿಂಗಾರಗೊಳಿಸುವ ಪಾತರಗಿತ್ತಿಯು ಬೇಕಿದೆ
ಮನದನಿಯೇ ನೋಡಿ ಹಾಡಲು ಪರಿಸರದ ಗೀತೆಯ
ಸಣ್ಣತನವ ಬಿಟ್ಟ ಪ್ರೀತಿ ಮೆರೆವ ಮಾನವತೆಯು ಬೇಕಿದೆ
ಬೆಳೆಯುತ್ತಿರುವ ಮರಕ್ಕೆ ನೀರುಣಿಸುವ ನಿತ್ಯ ಪ್ರೇಮದಿ
ಕಳೆ ಹೆಚ್ಚಿಸುವ ಹನಿ ಬಿಂದುವಿನ ಮುತ್ತಿನೊರತೆಯು ಬೇಕಿದೆ
ಹನಿಬಿಂದು



