ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


ಭೂಮಂಡಲ ಕಾರ್ಗತ್ತಲು
ಅವತರಿಸಲು ಬೆಳದಿಂಗಳು
ಮನುಕುಲದೊಳು ಜೀವಿಗಳು
ನಗು ಬೀರಿತು ಮನತಣಿಸಿತು
ದಿಗ್ಬಂಧನ ತೆರವಾಗಿ.

ಸೂರ್ಯನು ಉದಯಿಸಲು
ಆಸೆಗಳು ಪುಟಿದೇಳಿತು
ನಲಿದಾಡಿತು ಖುಷಿಯಾಯಿತು
ಮನವೆಲ್ಲಾ ನವಿರಾಗಿ.

ಹಗಲಾಯಿತು ಇರುಳಾಯಿತು
ಮೋಡಗಳು ಕಾಣಿಸಲು
ಚಂದಿರನು ಕುಣಿಕುಣಿದು ಬರುತ್ತಿರಲು
ನಕ್ಷತ್ರ ನಗು ಬೀರಿತು
ಸೂರ್ಯನು ಮುಸುಕಾಗಿ.

ಅತ್ತಿಂದೆತ್ತರಕ್ಕೆ ಬದುಕೇಲ್ಲ ಹಾಯಾಗಿ
ವಿಸ್ಮಯಗಳು ಪ್ರಕೃತಿಯಲ್ಲಿ
ಬೀಸುತ್ತಿಹ ಗಾಳಿಯಲ್ಲಿ
ತನ್ತನವ ತಣಿಸುತಿಹ
ಪ್ರೇಮಿಗಳ ಮಾತಿನಲ್ಲಿ.


About The Author

Leave a Reply

You cannot copy content of this page

Scroll to Top