ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಬೆಳಕಿನ ಕವಿಗೊಂದು    ನಮನ….

    ಕನ್ನಡ ಕಾವ್ಯಲೋಕದ ಮೇರು ನಕ್ಷತ್ರ,ಶ್ರೇಷ್ಠ ಚಿಂತಕರು ಹಾಗೂ ಶಿಕ್ಷಣ ತಜ್ಞರು , ನವೋದಯ ಕಾಲಘಟ್ಟದ ಉದಾತ್ತ ಆದರ್ಶ ಸುಪ್ರಸಿದ್ಧ ಏಕೈಕ ಬೆಳಕಿನ ಕವಿಯೆಂದರೆ ಅವರೇ, ನಮ್ಮ ನಿಮ್ಮೆಲ್ಲರ ನೆಚ್ಚಿನ ಹಚ್ಚೇವು ಕನ್ನಡದ ದೀಪವನ್ನು ಮೊಳಗಿಸಿದ ಡಾ,ಡಿ.ಎಸ್.
ಕರ್ಕಿಯವರಾಗಿದ್ದಾರೆ.
ಡಾ,ಡಿ.ಎಸ್. ಕರ್ಕಿಯವರು ಬೆಳಗಾವಿ ಜಿಲ್ಲೆಯವರೇ ಆಗಿರುತ್ತಾರೆ. ತಮ್ಮ ಚಿಕ್ಕವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡು ತಾಯಿಯ ತವರು ಊರಿನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ಜಿ. ಎ. ಹೈಸ್ಕೂಲ್
ಬೆಳಗಾವಿಯಲ್ಲಿ ಪ್ರೌಢ ಶಿಕ್ಷಣವನ್ನು ಮುಗಿಸಿದರು.
ಕರ್ನಾಟಕ ಕಾಲೇಜ್ ಧಾರವಾಡದಲ್ಲಿ ಪದವಿ ಶಿಕ್ಷಣವನ್ನು ಮುಗಿಸಿ ಸ್ನಾತಕೋತ್ತರ ಉನ್ನತ ಪದವಿಗಾಗಿ ಕೊಲ್ಲಾಪುರ, ಪುಣೆ ಕಡೆಗೆ ತೆರಳಿದರು.
ಕನ್ನಡ ಛಂದಸ್ಸಿನ ವಿಕಾಸ ಮಹಾಪ್ರಬಂಧಕ್ಕಾಗಿ
ಪಿ.ಎಚ್.ಡಿ.ಯನ್ನು ಪಡೆದುಕೊಂಡರು. ಮುಂದೆ ಜಿ. ಎ.ಹೈಸ್ಕೂಲ್ ಬೆಳಗಾವಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆಗೆ ಸೇರಿದರು.  ಹುಬ್ಬಳ್ಳಿ ಕೆ.ಎಲ್. ಇ.ಆರ್ಟ್ ಕಾಲೇಜ್ ನಲ್ಲಿ ಉಪಪ್ರಚಾರ್ಯರು ಹಾಗೂ ಪ್ರಾಚಾರ್ಯರು ಆಗಿ ಕಾರ್ಯನಿರ್ವಹಿಸಿದ್ದರು.

    ನಿವೃತ್ತಿ ನಂತರ ಕರ್ನಾಟಕ ವಿಶ್ವವಿದ್ಯಾಲಯ ಅಧ್ಯಯನ ಪೀಠದಲ್ಲಿ ವಿಶ್ರಾಂತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.ಹಲವಾರು ವರ್ಷಗಳಕಾಲ ವಿದ್ಯಾರ್ಥಿಗಳ ಸಂಶೋಧನೆಗೆ ನೆರವನ್ನು ನೀಡಿದರು. ಗಡಿನಾಡು ಬೆಳಗಾವಿಯಲ್ಲಿ ಕನ್ನಡ ಭಾಷೆಯನ್ನು ಜೀವಂತ ವಾಗಿರಿಸಲು  ಎಸ್.ಡಿ.ಇಂಚಲ,ಮತ್ತು ಬ.ಗಂ. ತುರಮರಿ ಇವರೊಂದಿಗೆ ಸಾಕಷ್ಟು ಶ್ರಮಿಸಿದರು ಎಂಬ ಮಾತು ಬಲವಾಗಿ ಕೇಳಿ ಬರುತ್ತಿರುವುದು, ಅಷ್ಟೇ ಸತ್ಯವೂ ಆಗಿದೆ. ಈ ತ್ರಿವಳಿ ಜೋಡಿಗಳಿಗೆ ಕನ್ನಡದ
ಕಿಟ್ ಗಳೆಂದು ಕರೆಯುತ್ತಿದ್ದರು ಎಂಬ ಮಾತು ಸದ್ದು ಮಾಡುತ್ತಿದ್ದವು. ಕಾವ್ಯ, ಪ್ರಬಂಧ ,ಮಕ್ಕಳ ಸಾಹಿತ್ಯ ,
ಸೌಂದರ್ಯ ಪ್ರಜ್ಞೆ ,ಜೀವನ ಸಂಸ್ಕೃತಿ ಕೃತಿಗಳನ್ನು ರಚಿಸಿದ್ದಾರೆ. ಭಾವಗೀತೆ ಕವಿ ಎಂದೇ ಹೆಸರು ಪಡೆದು ಕೊಂಡಿದ್ದಾರೆ. ಇವರ ಮೊದಲ ಕವನ ಸಂಕಲನದಲ್ಲಿ ಮೂಡಿ ಬಂದ ಗೀತೆಯೇ” ಹಚ್ಚೇವು ಕನ್ನಡದ ದೀಪ” ಈ ಕನ್ನಡದ ದೀಪ ಹಚ್ಚಿದ ಕವಿಯು ಮರೆಯಲಾರದ ಮಹಾನ್ ಚೇತನ ಇವರಿಗೆ ಸಾಷ್ಟಾಂಗ ನಮನ ಸಲ್ಲಿಸಿ ಗೌರವ ಸಲ್ಲಿಸುವುದು ಕನ್ನಡಿಗರೆಲ್ಲರ ಕರ್ತವ್ಯ ಎಂದು ಭಾವಿಸ ಬಹುದಾಗಿದೆ.

     ಹಚ್ಚೇವು ಕನ್ನಡದ ದೀಪ
ಭಾವ ಗೀತೆಯು ನಾಡಿನಾದ್ಯಂತ ಕನ್ನಡಿಗರ ಮೈಮನಗಳನ್ನು ರೋಮಾಂಚನ ಗೊಳಿಸುವ  ನಾಡಗೀತೆಯಂತಹ ಗೀತೆಯನ್ನು ಕನ್ನಡಿಗರಿಗೆ ನೀಡಿದ್ದಾರೆ. ಈ ಗೀತೆಯು ಇನ್ನಷ್ಟು ಮತ್ತಷ್ಟು ಕೇಳಬೇಕೆನಿಸುವ ಮನಕ್ಕೆ ಮುದನೀಡುವ ಗೀತೆಯಾಗಿದೆ. ಇವರ ಗೀತ ಗೌರವ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿರುತ್ತದೆ. ಇನ್ನು ಹತ್ತು ಹಲವಾರು ಪ್ರಶಸ್ತಿಗಳು ಇವರಿಗೆ ಸಂದಿಸಿರುತ್ತದೆ. ಡಾ,ಕರ್ಕಿಯವರು ಒಟ್ಟು11 ಕೃತಿಗಳನ್ನು ರಚಿಸಿದ್ದಾರೆ ಅವುಗಳಲ್ಲಿ 7 ಅತ್ಯುತ್ತಮ ಕವನ ಸಂಕಲನ ವಿರುತ್ತದೆ. ನಕ್ಷತ್ರಗಾನ .ಭಾವತೀರ್ಥ, ಗೀತಗೌರವ , ಕರ್ಕಿಕಣಗಲ ಮಕ್ಕಳ ಕವನ, ಬಣ್ಣದ ಚೆಂಡು, ತನನ ತೋo , ಇನ್ನೂ ಹಲವಾರು ಕೃತಿಗಳ ಕರ್ತೃ ಇವರು ಆಗಿದ್ದಾರೆ.
ಕರ್ನಾಟಕ
ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರು ,ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರು ಆಗಿದ್ದರು.  ಸಾಂಸ್ಕೃತಿಕ ಕಾರ್ಯಗಳ ಮೇರೆಗೆ ಪಿ.ಇ ಎನ್. ಸಂಸ್ಥೆ ಪ್ರಾನ್ಸ್  ಹಾಗೂ ರಷ್ಯಾ ಭೇಟಿಯನ್ನು  ನೀಡಿದ್ದರು.
    ಮಹಾತ್ಮ ಗಾಂಧಿಯವರ ನಿಕಟ ಪರಿಪಾಲಕರು ಇವರಾಗಿದ್ದರು ಗಾಂಧೀಜಿಯವರು  ನಿಧನರಾದ ಆ ಅಲೆಯ ಸಂದರ್ಭದಲ್ಲಿ ಇವರು
“ತಿಳಿನೀಲದಲ್ಲಿ ತಾ ದೂರವಾಗಿ ಅವ ಹೋದ ದೂರ ದೂರ ಬೆಳಗಿಹುದು ಇಲ್ಲಿ ಅವ ಬಿಟ್ಟ ಬೆಳಕು ಇನ್ನೊಮ್ಮೆ ಏಕೆ ಬಾರ ” ಎಂಬoತಹ ಅಧ್ಬುತ ಅರ್ಥಪೂರ್ಣ ಹಾಡನ್ನು ಕನ್ನಡಿಗರಿಗೆ ಕೊಟ್ಟರು ಇಂತಹ ಮಹಾನ್ ಚೇತನ ಬೆಳಕಿನ ಕವಿಯು ಸದಾ
ಜನಮಾನಸರಲ್ಲಿ ಅಚ್ಚಳಿಯದೆ ಮನೆ ಮಾಡಿದಂತೆ ಭಾಸವಾಗುತ್ತಿದೆ.
ಇವರು ಹಚ್ಚಿಟ್ಟಿರುವ ಕನ್ನಡದ ದೀಪವು ನಗುತ ನಲಿಯುತ ಕನ್ನಡಿಗರ ಮನವನ್ನು ಬೆಳಗುತ್ತಲೇ ಇರುವುದು ಆ ದೀಪದಲ್ಲಿ ಬೆಳಕಿನ ಕವಿಯು ಇಣುಕಿ ನೋಡುತ್ತಿರುವುದು ಕನ್ನಡಿಗರ ಸೌಭಾಗ್ಯವಲ್ಲವೇ?


About The Author

Leave a Reply

You cannot copy content of this page

Scroll to Top