ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

.
ಮಕ್ಕಳ ಭವಿಷ್ಯ ರೂಪಿಸುವ ಸರ್ಕಾರಿ ಶಾಲೆಗಳಿಗೆ ಯಾಕೆ ಮಾನ್ಯತೆ ಇಲ್ಲ!! ಸರಕಾರಿ ಶಾಲೆಗಳಿಗೆ ಯಾಕೆ ಹಿನ್ನಡೆ!!
ಸರಕಾರಿ ಶಾಲೆಗಳು ಬಡವರ ಶಾಲೆ ಎಂದೆನಿಸುವ ಹೀನತೆ ನಮ್ಮ ತಲೆಯಿಂದ ಮೊದಲು ತೊಲಗಬೇಕು. ಸರಕಾರಿ ಶಾಲೆಗಳಿಗಿರುವ  ನಿರ್ಲಕ್ಷ್ಯತೆಯನ್ನು  ಸರಕಾರ ಬಿಡಬೇಕು.
ಅದಕ್ಕೆ ಸಾಕಷ್ಟು ಯೋಜನೆಗಳಿವೆ.ಅದನ್ನೆಕೆ ಜಾರಿ ಮಾಡುವುದಿಲ್ಲ!
ಶಾಲೆಗಳಿಗೆ ಸುಸಜ್ಜಿತ ತರಗತಿ ಕೋಣೆಗಳು, ಪ್ರತ್ಯೇಕ ಶೌಚಾಲಯಗಳು ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಕರ್ನಾಟಕ ಪಬ್ಲಿಕ್ ಶಾಲೆಗಳು (KPS): ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಡಿ ಆಯ್ದ ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ (KPS) ಪರಿವರ್ತಿಸಿ, ಎಲ್‌ಕೆಜಿಯಿಂದ ದ್ವಿತೀಯ ಪಿಯುಸಿವರೆಗೆ ಒಂದೇ ಸೂರಿನಡಿ ಉಚಿತ ಶಿಕ್ಷಣ ನೀಡುವುದು.
ಡಿಜಿಟಲ್ ಕ್ಲಾಸ್‌ರೂಮ್: ಸ್ಮಾರ್ಟ್ ಬೋರ್ಡ್‌ಗಳು, ಕಂಪ್ಯೂಟರ್ ಲ್ಯಾಬ್‌ಗಳು ಮತ್ತು ಇಂಟರ್ನೆಟ್ ಸೌಲಭ್ಯ ಒದಗಿಸುವ ಮೂಲಕ ಗ್ರಾಮೀಣ ಭಾಗದ ಮಕ್ಕಳಿಗೂ ಡಿಜಿಟಲ್ ಶಿಕ್ಷಣ ಸಿಗಬೇಕು.
ಜೊತೆಗೆ ಮಕ್ಕಳಿಗೆ ಇಂಗ್ಲಿಷ್ ಭಾಷೆಯಲ್ಲೂ ಸಂವಹನ ನಡೆಸಲು ಮತ್ತು ಬರೆಯಲು ವಿಶೇಷ ತರಬೇತಿ ನೀಡಬೇಕು
ನವೀನ ಬೋಧನಾ ಪದ್ಧತಿ: ಕೇವಲ ಪಠ್ಯಪುಸ್ತಕಕ್ಕೆ ಸೀಮಿತವಾಗದೆ, ಚಟುವಟಿಕೆ ಆಧಾರಿತ ಕಲಿಕೆ ಮೂಲಕ ಕಲಿಸುವಂತೆ ಆಗಬೇಕು.
   ಸರಕಾರಿ ಉದ್ಯೋಗದಲ್ಲಿರುವ ಪಾಲಕರು ಸರ್ಕಾರಿ ಶಾಲೆಗಳಿಗೆ ಮಹತ್ವ ಕೊಡಲಾರದ ಕಾರಣ  ಆಂಗ್ಲ ಮಾಧ್ಯಮದ ಮೇಲಿರುವ ವ್ಯಾಮೋಹ. ಮೂಲ ಸೌಕರ್ಯಗಳ ಕೊರತೆ, ಸಾಮಾಜಿಕ ಪ್ರತಿಷ್ಠೆ. ಮತ್ತು ಬೋಧಕೇತರುಗಳ ಕೆಲಸದ ಒತ್ತಡದಲ್ಲಿ ವಿದ್ಯಾರ್ಥಿಗಳಿಗೆ ಸರಿಯಾಗಿ ಸಿಗದ ಶಿಕ್ಷಣ.
   ಸರಕಾರಿ ಶಾಲೆಗಳನ್ನು ಸರಕಾರವೇ ನಿರ್ಲಕ್ಷ್ಯ ಧೋರಣೆ ತೋರುತ್ತಿರುವಾಗ ಅಭಿವೃದ್ಧಿಯೆಲ್ಲಿ!! ಒಟ್ಟಿನಲ್ಲಿ ಹೇಳುವುದಾದರೆ ಖಾಸಗಿ ಶಿಕ್ಷಣದಲ್ಲಿ ಸಿಗುವ ಶಿಕ್ಷಣದ ಗುಣಮಟ್ಟವನ್ನು ಸರ್ಕಾರಿ ಶಾಲೆಗೂ ತಂದರೆ ಸರಕಾರಿ ಶಾಲೆಗಳೂ ಅಭಿವೃದ್ಧಿ ಹೊಂದಹುದು. ಮತ್ತು ಸರಕಾರಿ ಶಾಲೆಗಳಲ್ಲಿ ಓದಿದ ಪದವಿಧರರಿಗೆ ಸರ್ಕಾರಿ ಕೆಲಸ ಎಂದು ಸರಕಾರದ ಘೋಷಣೆ ಆಗಲಿ.
           ಇನ್ನು ಈ ವಿಚಾರಕ್ಕೆ ಪೂರಕವಾಗಿ ಕನ್ನಡ ಸಾಹಿತ್ಯ ಪರಿಷತ್ ಕೂಡ ಕನ್ನಡ ಶಾಲೆಯ ಉನ್ನತಿಗಾಗಿ ತುಸು ಸಮಯ ವ್ಯವಹಿಸಬೇಕು. ಪೋಷಕರಲ್ಲಿ ಕನ್ನಡ ಮಾಧ್ಯಮ ಶಿಕ್ಷಣದ ಮಹತ್ವವನ್ನು ತಿಳಿಸಲು ಮತ್ತು ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ದಾಖಲಿಸುವಂತೆ ಪ್ರೇರೇಪಿಸಲು ರಾಜ್ಯಾದ್ಯಂತ ಜಾಗೃತಿ ಜಾಥಾಗಳನ್ನು ನಡೆಸಬೇಕು.
ಆರ್ಥಿಕವಾಗಿ ಹಿಂದುಳಿದಿರುವ ಅಥವಾ ಮೂಲಸೌಕರ್ಯದ ಕೊರತೆಯಿರುವ ಕನ್ನಡ ಶಾಲೆಗಳನ್ನು ದತ್ತು ಪಡೆದು, ಅವುಗಳ ಸೌರಭವನ್ನು ಹೆಚ್ಚಿಸಲು ದಾನಿಗಳನ್ನು ಪ್ರೇರೇಪಿಸುವ ಕೆಲಸ ಆಗಬೇಕು.

——————–

About The Author

Leave a Reply

You cannot copy content of this page

Scroll to Top