ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಬದುಕಿನ ಸುಡು ಬಿಸಿಲ
 ಹಾದಿಯಲಿ,
ನೀನೇ ತಂಪಾದ ನೆರಳಿನ
 ಆಸರೆ.
ನೊಂದ ಜೀವಕ್ಕೆ ಸಾಂತ್ವನ
 ನೀಡುವ,
ಪ್ರೀತಿಯೇ ಎಂದಿಗೂ
 ಹಿರಿದಾದ ಆಸರೆ.

ಸಾಗರದ ಅಲೆಯಂತೆ
 ಏಳುವ ನೋವಿಗೆ,
ನಿನ್ನ ಮೌನವೇ ಒಂದು
 ತಂಗಾಳಿ.
ನಿರಾಶೆಯ ಕತ್ತಲು
 ಆವರಿಸಿದಾಗ,
ನಿನ್ನ ಪ್ರೀತಿಯೇ
 ದಾರಿದೀಪದ ಸೂರೆ.

ಜಗದ ಕೋಲಾಹಲ
ದೂರ ತಳ್ಳಿ,
ನಿನ್ನ ಮಡಿಲಲಿ
 ಸಿಗುವುದು ನೆಮ್ಮದಿ.
ಏನೂ ಬೇಡದ ಈ
 ಜಗತ್ತಿನಲ್ಲಿ,
ಕೊನೆ ತನಕ ಇರಲಿ
 ನಿನ್ನ ಆಸರೆ.

ಮಾತುಗಳೇ ಇಲ್ಲದ
 ಭಾವಯಾನ ,
ಹೃದಯಗಳ ಬೆಸೆಯುವ
 ಮಧುರ ಗಾನ.
ಸೋತು ನಿಂತಾಗ
ಬೆನ್ನು ತಟ್ಟುವ,
ಪ್ರೀತಿಯ ಆಸರೆಯೇ
 ಬದುಕಿನ ಹೃನ್ಮನ.


About The Author

Leave a Reply

You cannot copy content of this page

Scroll to Top