ಕಾವ್ಯ ಸಂಗಾತಿ
ಶಂಕರಾನಂದ ಹೆಬ್ಬಾಳ
ಗಜಲ್


ಅನುಭಾವದ ಸೀರೆಯನು ನೇಯಬೇಕು ನಾವು
ಅನುಭವದ ಕುಲುಮೆಯಲಿ ಬೇಯಬೇಕು ನಾವು
ವಿನಯದಿಂದ ಜಗದಿ ಜೀವಿಸಬೇಕಲ್ಲವೆ ಹೇಳು
ಕನಸುಗಳ ಕಡಲಿನೊಳಗೆ ಮೀಯಬೇಕು ನಾವು
ಅನುಗಾಲವೂ ವ್ಯಥೆಯಲ್ಲಿ ಕಳೆಯಿತಲ್ಲ ಕಾಲ
ಅನುಕ್ಷಣ ಜೀವನವನು ತೇಯಬೇಕು ನಾವು
ವಾಂಛಲ್ಯವ ಮನದಲಿ ಬಿತ್ತುತ್ತಲೆ ಸಾಗಬೇಕು
ಅಂಚಿರದ ಬಾಳಿಗಾಗಿ ಸಾಯಬೇಕು ನಾವು
ಅನೂಹ್ಯ ಭಾವಗಳನು ಅರುಹಿದನು ಅಭಿನವ
ಅನುಪಮದ ಸಿರಿಗಾಗಿ ಕಾಯಬೇಕು ನಾವು
ಶಂಕರಾನಂದ ಹೆಬ್ಬಾಳ



