ಕಾವ್ಯ ಸಂಗಾತಿ
ಚಂದ್ರಕಲಾ. ಎಂ.ಆಲೂರು
“ಶಿಕ್ಷಕರ ಪಾಡು “


ಪಾಠ ಮಾಡುವುದು ಶಿಕ್ಷಕರ ಕಾರ್ಯ,
ಶಿಕ್ಷಕರಿಗೆ ಸವಾಲುಗಳು ಅನಿವಾರ್ಯ.
ಕೋಲ್ಹಡಿಯುವಾಗಿಲ್ಲ ಈಗಿನ ಶಿಕ್ಷಕ,
ಹೊಡೆಯುವುದು ಬೈಯುವುದು ನಿಶಿದ್ಧ.
ಪ್ರೀತಿಯಿಂದ ಮುದ್ದಿಸಿ ಹೇಳಿಕೊಡಬೇಕು ಪಾಠ,
ಮೈದಾನದ ಮಣ್ಣು ಮುಟ್ಟಿ ಆಡುವ್ಹಂಗಿಲ್ಲ ಆಟ.
ಶಿಕ್ಷಕರ ಮಾತಿಗೆ ಬಿಡಿಗಾಸಿನ ಗೌರವವಿಲ್ಲ,
ಮಕ್ಕಳು ತಪ್ಪು ಮಾಡಿದರು ದಂಡಿಸುವ ಹಕ್ಕಿಲ್ಲ.
ಪರೀಕ್ಷೆಯಲ್ಲಿ ಉತ್ತರ ಬರೆಯದಿದ್ದರೂ, ಮಾಡಬೇಕು ಪಾಸು,
ಒಂದರಿಂದ ಒಂಬತ್ತರವರೆಗೆ ಮಾಡಬಾರದಂತೆ ನಪಾಸು.
ಚಂದ್ರಕಲಾ. ಎಂ.ಆಲೂರು



