ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


ಅಮ್ಮನ ಪ್ರೀತಿ ಮಮತೆಯ ನೆರಳು
ಅಪ್ಪನು ಕೊಟ್ಟ ಧೈರ್ಯದ ಬೆಳಕು
ಶಾಲೆಯಿಂದಲೇ ಸಾವಿರಾರು ನೆನಪು
ಗೆಳೆಯರೇ ನೀವು ನಮ್ಮ ಸಂಪತ್ತು
ಶುಭಾಶಯ ಸ್ನೇಹ ದಿನದ ಶುಭಾಶಯ
ಗೆಳೆಯರೇ ನಮ್ಮ ದಿನದ ಶುಭಾಶಯ

ಬೆಂಚು ಹಂಚಿ ಕೂತ ದಿನಗಳು
ಪೆನ್ಸಿಲ್ ಕೊಟ್ಟು ಬರೆದ ಕ್ಷಣಗಳು
ಅಳುವಿನಲ್ಲೂ ನಗುವಿನಲ್ಲೂ
ಜೊತೆಯಾಗಿ ನಿಂತ ಗೆಳೆಯರೇ
ಶುಭಾಶಯ ಸ್ನೇಹ ದಿನದ ಶುಭಾಶಯ
ಗೆಳೆಯರೇ ನಮ್ಮ ದಿನದ ಶುಭಾಶಯ

ಆಟದ ಮೈದಾನದಿ ಓಡಿದವರು
ಸೋತಾಗಲೆಲ್ಲ ಕೈಹಿಡಿದವರು
ಗೆದ್ದಾಗಲೆಲ್ಲ ಚಪ್ಪಾಳೆ ತಟ್ಟಿದವರು
ಅಂತರಂಗದ ಮಿತ್ರರೆ ನೀವೆಲ್ಲರು
ಶುಭಾಶಯ ಸ್ನೇಹ ದಿನದ ಶುಭಾಶಯ
ಗೆಳೆಯರೇ ನಮ್ಮ ದಿನದ ಶುಭಾಶಯ

ಪುಸ್ತಕಗಳ ಪಾಠಗಳನ್ನೆಲ್ಲ ಕಲಿತು
ಜೀವನದಿ ಸರಿದಾರಿಯಲ್ಲಿ ನಡೆದು
ಒಳ್ಳೆಯ ಮಾತುಗಳನ್ನು ಕಲಿತು
ಒಡನಾಡಿಯಾಗಿ ನಾವು ಬೆಳೆದವರು
ಶುಭಾಶಯ ಸ್ನೇಹ ದಿನದ ಶುಭಾಶಯ
ಗೆಳೆಯರೇ ನಮ್ಮ ದಿನದ ಶುಭಾಶಯ

ಮಳೆ ಬಂದಾಗಲೆಲ್ಲ ಛತ್ರಿಯಾದೆ
ಸುಡುಬಿಸಿಲ ಧಗೆಗೆಲ್ಲ ನೆರಳಾದೆ
ಕತ್ತಲಿಗೆ ಬೆಳಗೊ ದೀಪವಾದ
ನೀವೆಂದು ಬದುಕಿನ ಗೆಳೆಯರೇ
ಶುಭಾಶಯ ಸ್ನೇಹ ದಿನದ ಶುಭಾಶಯ
ಗೆಳೆಯರೇ ನಮ್ಮ ದಿನದ ಶುಭಾಶಯ

ಕಷ್ಟ ಬಂದಾಗ ಧೈರ್ಯ ತುಂಬಿ
ನೋವು ಬಂದರೆ ಭುಜವ ನೀಡಿ
ಬೀಳುವ ಕ್ಷಣಗಳಲ್ಲಿ ಕೈಹಿಡಿದು
ಭುಜಕ್ಕೆ ಭುಜವಾದ ಮಿತ್ರರೇ
ಶುಭಾಶಯ ಸ್ನೇಹ ದಿನದ ಶುಭಾಶಯ
ಗೆಳೆಯರೇ ನಮ್ಮ ದಿನದ ಶುಭಾಶಯ

ಜಾತಿ ಮತಗಳ ಗೋಡೆ ಮೀರಿ
ಬೇಧ ಭಾವನೆಗಳ ದೂರ ಮಾಡಿ
ಸ್ನೇಹ ಪ್ರೀತಿಯ ಸೇತುವೆ ಕಟ್ಟಿದ
ಸೌಹಾರ್ದತೆ ಮೆರೆದ ಸ್ನೇಹಿತರೇ
ಶುಭಾಶಯ ಸ್ನೇಹ ದಿನದ ಶುಭಾಶಯ
ಗೆಳೆಯರೇ ನಮ್ಮ ದಿನದ ಶುಭಾಶಯ

ಗಿಡಮರಗಳ ಬೆಳೆಸುವ ಕೈಗಳಾಗಿ
ನೀರು ಉಳಿಸುವ ಮನಗಳಾಗಿ
ನಮ್ಮ ಭೂಮಿ ಕಾವಲುಗಾರರಾಗಿ
ಜೊತೆಗೂಡಿ ಕಲಿತಂತ ಗೆಳೆಯರೇ
ಶುಭಾಶಯ ಸ್ನೇಹ ದಿನದ ಶುಭಾಶಯ
ಗೆಳೆಯರೇ ನಮ್ಮ ದಿನದ ಶುಭಾಶಯ

ಸುಳ್ಳು ಹೇಳದಂತ ಸತ್ಯದ ಹಾದಿ
ದುಷ್ಟತನ ದೂರ ಮಾಡುವ ನೀತಿ
ಒಳ್ಳೆಯ ಬದುಕು ಕಟ್ಟುವ ದಾರಿ
ತೋರಿದಂತ ಆತ್ಮಬಂಧು ಮಿತ್ರರೇ
ಶುಭಾಶಯ ಸ್ನೇಹ ದಿನದ ಶುಭಾಶಯ
ಗೆಳೆಯರೇ ನಮ್ಮ ದಿನದ ಶುಭಾಶಯ

ನಿಮ್ಮ ನಗುವೆ ನಮ್ಮ ಸಂತೋಷ
ನಿಮ್ಮ ಗೆಲುವಿನಲ್ಲಿ ನಮ್ಮ ಹರ್ಷ
ಜೀವನವೆಂಬ ನಿಲ್ಲದ ಪಯಣದಲ್ಲಿ
ದಾರಿ ಮರೆಯದೆ ಜೊತೆಯಿರೋಣ
ಶುಭಾಶಯ ಸ್ನೇಹ ದಿನದ ಶುಭಾಶಯ
ಗೆಳೆಯರೇ ನಮ್ಮ ದಿನದ ಶುಭಾಶಯ

ಕೈ ಕೈ ಹಿಡಿದುಕೊಂಡು ಸಾಗೋಣ
ಹೊಸ ಕನಸುಗಳನ್ನು ಸಾಧಿಸೋಣ
ಸ್ನೇಹವೆಂಬ ಅಮೃತಧಾರೆಯಲ್ಲಿ
ಸುಂದರ ಸಮೃದ್ಧ ಲೋಕ ಕಟ್ಟೋಣ
ಶುಭಾಶಯ ಸ್ನೇಹ ದಿನದ ಶುಭಾಶಯ
ಗೆಳೆಯರೇ ನಮ್ಮ ದಿನದ ಶುಭಾಶಯ


About The Author

Leave a Reply

You cannot copy content of this page

Scroll to Top