ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಏಕಾಂತದಲ್ಲಿ ಜೊತೆಯಾದವನು ನೀನು
ಭವಸಾಗರವ ದಾಟಿಸಿದವ ನೀನು.
ದಣಿದಾಗ ಮೈದಡವಿ ಮಲಗಿಸಿದವ ನೀನು,
ನನ್ನೆಲ್ಲಾ ಕನಸಿಗೆ ಕಾವಲಾದವನು ನೀನು.

ಮನನೊಂದಾಗ ಸಾಂತ್ವಾನಿಸಿದವ ನೀನು
ಬೇಸರಕೆ ನನ್ನ ಹಾಡಾದವ ನೀನು
ಲೋಕದ ನಜರಿಗೆ ಎದೆಗೊಟ್ಟು ನಿಂತವ ನೀನು,
ಸೋತೆನಾ ಎಂದಾಗ ಗೆಲುವು ತಂದವ ನೀನು

ಕನ್ನಡಿಯಲ್ಲಿ ಪ್ರತಿಬಿಂಬವಾಗಿ ನಕ್ಕವನು ನೀನು
ಉಸಿರಿನ ಜಪದಲ್ಲಿ ಓಂಕಾರವಾಗಿ ಮಿಡಿದವ ನೀನು
ನನ್ನೊಳಗೆ ನಾ ಹುಡುಕಿ ಕಂಡುಕೊಂಡ ಸತ್ಯ
ನನ್ನೊಳಗಿನ……..ನನ್ನಾತ್ಮಸಖ ನೀನು !


About The Author

Leave a Reply

You cannot copy content of this page

Scroll to Top