ಕಥಾಗುಚ್ಛ

ಕಥಾಗುಚ್ಛ

ಒಂದೇ ಮನಸ್ಸಿನಿಂದ ಹರೀಶ್ ಬೇದ್ರೆ ಕೈಮುಗಿದು ಕೇಳ್ತಿನಿ, ದಯವಿಟ್ಟು ಇದೊಂದು ವಿಚಾರದಲ್ಲಿ ನನ್ನ ಇಷ್ಟದಂತೆ ನಡೆಯಲು ಬಿಡು. ಚಿಕ್ಕ ಹುಡುಗಿ ಇರುವಾಗಿನಿಂದ ಈಗಿನವರೆಗೂ ನೀನು ಹೇಳಿದ್ದನ್ನೇ ಕೇಳಿರುವೆ. ಇದು ನನ್ನ ಭವಿಷ್ಯದ ಪ್ರಶ್ನೆ.  ನೀನು ಏನೇನೋ ಹೇಳಿ ನನ್ನ ಇಷ್ಟದ ವಿರುದ್ಧ ನಡೆದುಕೊಳ್ಳುವಂತೆ ಮಾಡಬೇಡ… ಆಯ್ತು, ನಾನು ಇಲ್ಲಿಯವರೆಗೆ ಏನೇ ಹೇಳಿದ್ದರೂ ಅದು ನಿನ್ನ ಒಳ್ಳೆಯದಕ್ಕಾಗಿ ತಾನೇ…?ಹೌದು, ಅದಕ್ಕೆ ನಾನು ನಿನ್ನ ಮಾತು ಕೇಳಿದೆ. ಆದರೆ ಇದೊಂದು ವಿಚಾರಕ್ಕೆ ನನ್ನ ಇಷ್ಟದಂತೆ ಬಿಡು. ಅದು ಹೇಗೆ ಸಾಧ್ಯ , ಹೊರಗೆ […]

ಕಾವ್ಯಯಾನ

ಓ ಸಖಿ! ನಿರ್ಮಲಾ ಆರ್. ಹೊಲದಾಗಿನ ಹಸಿರು ಎಷ್ಟು ಚೆಂದ ಓ ಸಖಿ ಪುರ್ರೆಂದು ಹಾರುವ ಹಕ್ಕಿ ತಿನ್ನುತ್ತಿತ್ತು ಮೆಕ್ಕೆ ತೆನೆಯ ಕುಕ್ಕಿ ಕುಕ್ಕಿ ಒಂದು ಬದಿ ಕರಿ ಎಳ್ಳಿನ ರಾಶಿ ಬಣ್ಣದ ಹೂಗಳು ನಲಿಯುತ್ತಿದ್ದವು ಕಂಪ ಸೂಸಿ ಬದುವಿನ ಹೂ ಬಳ್ಳಿ ಸ್ವಾಗತ ಮಾಡುತಿತ್ತು ತನ್ನ ತಾ ಹಾಸಿ ಪ್ರಕೃತಿಯ ಬಣ್ಣಿಸಲು ಪದಗಳಿಲ್ಲ ಸಖಿ ತಂಗಾಳಿಯು ಹಾದು ಹೋಗುತ್ತಿತ್ತು ನಮ್ಮ ಸೋಕಿ ರಾಶೀಯಲ್ಲಿನ ಎಳ್ಳು ತಿನ್ನುತ್ತಿದ್ದೆವು ಮುಕ್ಕಿ ಮುಕ್ಕಿ ಸಂಜೆಗೆ ವಿದಾಯ ಹೇಳಲು ಮೂಡುತ್ತಿತ್ತು ಆಗಸದಲಿ […]

ಕಾವ್ಯಯಾನ

ಅಪ್ಪ ಅಂದರೆ ಆಕಾಶ ದೇವಿ ಬಳಗಾನೂರ ಅಪ್ಪ ಅಂದರೆ ಆಕಾಶ ಅಪ್ಪ ಅಂದ್ರೆ ಅಗೋಚರ ಪ್ರೀತಿಯ ಕಡಲು ನನ್ನಮ್ಮನಂತ ಕರುಣೆಯ ಮಡಿಲು ಮಗಳ ಸಾಧನೆಯು ಪ್ರಜ್ವಲಿಸಲು ಕಾರಣವಾದ ತಿಳಿಮುಗಿಲು ಮಗಳಿಗಾಗಿ ದಣಿದನದೆಷ್ಟೋ ಹಗಲು ಅವಳಿಗಾಗಿಯೇ ಕಾಯ್ದಿರಿಸಿದನು ತನ್ನ ಇರುಳು ಅಪ್ಪ ಅಂದ್ರೆ ಮಗಳ ಪಾಲಿನ ನಾಯಕ ಅವಳ ಬದುಕ ದೋಣಿಯ ನಿಜ ನಾವಿಕ ಮಗಳ ಮುಗ್ದ ನಗುವಿಗಾಗಿ ಕಾದ ಅಮಾಯಕ ಅವಳ ಬದುಕ ರೂಪಣೆಯ ನಿಜ ಮಾಲಿಕ ಅಪ್ಪ ಅಂದ್ರೆ ಮಗಳಿಗಾಗಿಯೇ ಬದುಕೋ ಜೀವ ಅವಳ ಖುಷಿಯಲ್ಲೆ […]

ಅನುವಾದ ಸಂಗಾತಿ

ಮಂಗ್ಲೇಶ್ ಡಬರಾಲ್ ಹಿಂದಿ ಕವಿ ಕನ್ನಡಕ್ಕೆ:ಕಮಲಾಕರ ಕಡವೆ “ನಮ್ಮ ಹೆದರಿಸುವಾತ” ನಮ್ಮನ್ನು ಹೆದರಿಸುವವಹೇಳುತ್ತಾನೆ ಹೆದರುವಂತದ್ದು ಏನೂ ಇಲ್ಲನಾನು ಯಾರನ್ನೂ ಹೆದರಿಸುತ್ತಿಲ್ಲನಮ್ಮನ್ನು ಹೆದರಿಸುವವಗಾಳಿಯಲ್ಲಿ ಸೆಟೆದ ತನ್ನ ಬೆರಳು ತಿವಿದು ಹೇಳುತ್ತಾನೆಯಾರಿಗೂ ಹೆದರುವ ಅಗತ್ಯವಿಲ್ಲಅವನು ತನ್ನ ಮುಷ್ಟಿ ಬಿಗಿದು ಗಾಳಿಯಲ್ಲಿ ಬೀಸುತ್ತಾನೆಮತ್ತು ಹೇಳುತ್ತಾನೆ ನೀವು ಹೆದರುತ್ತಿಲ್ಲ ತಾನೇ.ನಮ್ಮನ್ನು ಹೆದರಿಸುವವಕನ್ನಡಕದ ಹಿಂದಿನಿಂದತನ್ನ ತಣ್ಣಗಿನ ಕ್ರೂರ ಕಣ್ಣಿಂದ ನಮ್ಮೆಡೆ ದುರುಗುಟ್ಟುತ್ತಾನೆನೋಡುತ್ತಾನೆ ಯಾರು ಯಾರು ಹೆದರಿದ್ದಾರೆಯಾವಾಗ ಜನರು ಹೆದರ ತೊಡಗುತ್ತಾರೋ ಅವನು ಹಿಗ್ಗಲು ತೊಡಗುತ್ತಾನೆಮುಗುಳ್ನಗುತ್ತ ಹೇಳುತ್ತಾನೆ ಹೆದರುವ ಪ್ರಸಂಗವೇನೂ ಇಲ್ಲನಮ್ಮನ್ನು ಹೆದರಿಸುವವತಾನೇ ಹೆದರಿಕೊಳ್ಳುತ್ತಾನೆಯಾರೂ ಹೆದರುತ್ತಿಲ್ಲವೆಂದು […]

ಸ್ವಾತ್ಮಗತ

ಪೂರ್ಣವಾಗದ ಸ್ವಾತಂತ್ರ ಹೋರಾಟಗಾರರ ಸ್ಮಾರಕ ಕೆ.ಶಿವು ಲಕ್ಕಣ್ಣವರ ಇನ್ನೂ ಪೂರ್ಣವಾಗಿಲ್ಲ ಹಾವೇರಿಯ ‘ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ವಸ್ತುಸಂಗ್ರಹಾಲಯ’..! 1934ನೇ ಇಸವಿಯಲ್ಲಿ ಗಾಂಧೀಜಿ ಶಿರಸಿ, ಹಾನಗಲ್ ಮೂಲಕ ಹಾವೇರಿ ಪ್ರವಾಸ ಹೊರಟಿದ್ದರು. ಆಗ ನೊಂದ ದಲಿತ ಹೆಣ್ಣು ಮಗಳೊಬ್ಬಳು ಹೋಗುತ್ತಿರುವುದನ್ನು ಗಮನಿಸುತ್ತಾರೆ ಗಾಂಧೀಜಿ. ಆಕೆಯನ್ನು ವೀರನಗೌಡ ಅವರ ಮೂಲಕ ಆಶ್ರಮಕ್ಕೆ ಸೇರಿಸುತ್ತಾರೆ. ಮುಂದೆ ಗಾಂಧೀಜಿ ಸಲಹೆಯಂತೆ ಸಂಗೂರು ಕರಿಯಪ್ಪ ಅವರು ಆ ಹೆಣ್ಣು ಮಗಳನ್ನು ಮದುವೆಯಾಗುತ್ತಾರೆ. ಹೀಗೆ ಸ್ವಾತಂತ್ರ್ಯ ಸಂಗ್ರಾಮದ ಕಾಲಗಟ್ಟ, ಸಮಾನತೆ, ಸಾಮರಸ್ಯವನ್ನೂ ಸಾರುತ್ತಾರೆ… ‘ನಮ್ಮ ನೆಲದಲ್ಲೇ […]

ಕಾವ್ಯಯಾನ

ಕವಿತೆ ಯಶು ಬೆಳ್ತಂಗಡಿ ಮೊದಲು ಶಿಶುವಾಗಿ ಭುವಿ ಸ್ಪರ್ಶಿಸಿ,, ಮೊದಲ ಉಸಿರಾಟ ನಡೆಸಿ,, ಮೊದಲ ಕಣ್ಣೀರ ಸುರಿಸಿ,, ಮೊದಮೊದಲು ಕಂಡ ತೊದಲು ಮಾತಿನ ಕನಸು… ಮೊದಲ ತರಗತಿಗೆ,, ಮೊದಲ ಹೆಜ್ಜೆಯಿಟ್ಟಾಗ,, ಭಯದಲ್ಲೇ ಕಂಡ ನೂರೊಂದು ಕನಸು.. ಮೊದಲ ಬಾರಿ ರಾಷ್ಟ್ರನಾಯಕರ ಕಥೆ ಕೇಳಿದಾಗ,, ಮೊದಲು ಸ್ವಾತಂತ್ರ್ಯದ ಘಟನೆ ಓದಿದಾಗ,, ಅರಳಿದ ದೇಶಪ್ರೇಮದ ಕನಸು… ಮೊದಲು ಚಲನಚಿತ್ರದಿ ಮಧ್ಯಪಾನ ನೋಡಿದಾಗ,, ಮೊದಮೊದಲು ಗಲಾಟೆ ದೊಂಬಿಗಳ ನೋಡಿದಾಗ,, ಅವರಂತೆ ನಾಯಕನಾಗಬೇಕೆಂದು ಕಂಡ ಹುಚ್ಚು ಕನಸು.. ಅವನ ಸುಂದರ ಕಣ್ಣು ಕಂಡಾಗ,, […]

ಕಥಾಯಾನ

ತ್ರಿಶಂಕು ಟಿ.ಎಸ್.ಶ್ರವಣಕುಮಾರಿ ತ್ರಿಶಂಕು ಹಪ್ಪಳ ಒತ್ತುತ್ತಿದ್ದ ಸೀತಮ್ಮ, ಬಟ್ಟಲಿಗೆ ಮುಚ್ಚಿದ್ದ ಒದ್ದೆ ಬಟ್ಟೆಯನ್ನು ಸರಿಸಿ ಉಳಿದ ಉರುಳಿಗಳ ಲೆಕ್ಕ ಹಾಕಿದರು. ಇನ್ನು ಹದಿನೈದು ಉಂಡೆಗಳಿವೆ. ಬೆಳಗ್ಗೆಯೇ ಮಹಡಿಯ ಮೇಲೆ ಹಪ್ಪಳ ಒಣಗಿ ಹಾಕಲು ಸವರಿಸುತ್ತಿದ್ದುದನ್ನು ನೋಡಿದ್ದ ಧೀರಜನ ಫ್ರೆಂಡ್ಸ್ “ಅಜ್ಜಿ ನಾವೆಲ್ಲಾ ಶಾಲೆಯಿಂದ ಬಂದಮೇಲೆ ತಿನ್ನಕ್ಕೆ ಹಪ್ಪಳದ ಹಿಟ್ಟು ಕೊಡಬೇಕು” ಅಂತ ತಾಕೀತು ಮಾಡಿ ಹೋಗಿದ್ದರು. ಧೀರಜ್ ಅಮೆರಿಕಕ್ಕೆ ಹೋದಮೇಲೆ ಈ ಮಕ್ಕಳು ಮನೆಗೆ ಬರುವುದೂ ಅಪರೂಪವೇ. ಯಾವಾಗಾದರೂ ಒಮ್ಮೊಮ್ಮೆ ಇಂಥದೇನಾದರು ಇದ್ದಾಗಷ್ಟೆ ಬರುತ್ತಾರೆ. ಪಾಪ ಅವರಾದರೂ […]

ಕಾವ್ಯಯಾನ

ಸಂಕ್ರಾಂತಿ ಅನಿಲ್ ಕರೋಲಿ ಸಂಕ್ರಾಂತಿ ಸಡಗರ ಪ್ರೀತಿಯ ಉಡುಗೊರೆ ಹಳ್ಳಿ ಹಳ್ಳಿಯು ಹಬ್ಬವೂ ..ಹಬ್ಬವೊ.. ರೈತರ ಪ್ರತಿ ಮನೆಯಲ್ಲೂ ಸಂಭ್ರಮ ಸಾಗರ ದನ-ಕರುಗಳು ಹೊಸ ಬಗೆಯ ಶೃಂಗಾರ ರೈತರು ಸಂಕ್ರಾತಿಯಲ್ಲಿ ಬೆಳೆದ ಬೆಳಯ ನಿರೀಕ್ಷೆಯಲ್ಲಿ ಎಲ್ಲರೂ ಏಳ್ಳು-ಬೆಲ್ಲ ಹಂಚಿ ಖುಷಿಯ ಹಂಚುವರು ಹಳ್ಳಿಗಳಲ್ಲಿ ಇದೊಂದು ವಿಶೇಷ ಹಬ್ಬವು ಜಗಳ ಮನಸ್ಥಾಪ ಮಾಡಿಕೊಂಡವರನ್ನು ಒಬ್ಬರನ್ನೊಬ್ಬರು ರಾಜಿಮಾಡಿಸುವುದು ನಮ್ಮಿ ಹಳ್ಳಿ ಹಬ್ಬ ಪ್ರೀತಿಯು ಇಲ್ಲಿ ಲಭ್ಯ ಖುಷಿಯಲೇ ನಾವು ತೇಲುವೆವು ಇಂದು ========

ವಿಶ್ಲೇಷಣೆ

ಶಬ್ದ-ಅರ್ಥಗಳ ಅನುಸಂಧಾನದಲ್ಲಿ “ಶಬ್ದವೇಧಿ” ಡಾ.ಗೋವಿಂದ ಹೆಗಡೆ ಶಬ್ದ-ಅರ್ಥಗಳ ಅನುಸಂಧಾನದಲ್ಲಿ “ಶಬ್ದವೇಧಿ” ವಸ್ತುವೈವಿಧ್ಯ,ಲಯ-ಛಂದೋ ವೈವಿಧ್ಯಗಳನ್ನು ವಿಪುಲವಾಗಿ ತಮ್ಮ ಕಾವ್ಯ ಕ್ರಿಯೆಯಲ್ಲಿ ತಂದ ನಮ್ಮ ಕವಿಗಳಲ್ಲಿ ಡಾ. ಎಚ್ಎಸ್ ವೆಂಕಟೇಶಮೂರ್ತಿ ಅವರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ಪರಂಪರೆಯೊಡನೆ ಅನುಸಂಧಾನದ ರೀತಿ ಅವರದು ಎನ್ನುವ ಕೆ ವಿ ತಿರುಮಲೇಶ್ “ಅವರು ಕನ್ನಡದ ಕಾವ್ಯ ಧಾತುವಿಗೆ ಅಂಟಿಕೊಂಡಿರುವ ಕವಿ” ಎಂದು ಗುರುತಿಸುತ್ತಾರೆ. ‘ಈ ಅನುಸಂಧಾನದ ಒಂದು ಎಳೆ ಎಂದರೆ ಛಂದಸ್ಸಿನ ಬಗ್ಗೆ ಅವರಿಗಿರುವ ಮೋಹ.. ಅವರು ಛಂದೋಬದ್ಧವಾಗಿ ಬರೆಯದಿದ್ದರೂ ಛಂದಸ್ಸನ್ನು ಧಿಕ್ಕರಿಸಿಯೂ ಬರೆದಿಲ್ಲ’ ಎಂಬುದು […]

ಕಾವ್ಯಯಾನ

ಸಾಕು ಬಿಡು ಸಖಿ ಬಸವರಾಜ ಜಿ ಸಂಕನಗೌಡರ ಸೂರ್ಯ ಚಂದ್ರರಿಬ್ಬರನೂ ಮಧುಶಾಲೆಯಲೇ ಕಾಣುತ್ತಿರುವೆ ಸಾಕು ಬಿಡು ಸಖಿ . ನನ್ನೆದೆಯ ನೋವ ನೀ ಸುರಿಸೋ ಕಣ್ಣೀರು ತಣ್ಣಗಾಗಿಸಲಾರದು ಸಾಕು ಬಿಡು ಸಖಿ ಊರ ಮುಂದಿನ ಅಗಸಿ ಕಲ್ಲು ನೀ ಹೋದದ್ದಕ್ಕೆ ಸಾಕ್ಷಿ ಕೊಟ್ಟಿದೆ. ಮತ್ತೇಕೆ ಕನಸಲಿ ಕಾಡುವೆ ಸಾಕು ಬಿಡು ಸಖಿ. ನೀ ಬರುವ ಹಾದಿಗೆ ಬೇಲಿ ಬೆಳೆದಿದೆ. ನಾನೀಗ ಮಧುಶಾಲೆಯ ಖಾಯಂ ಗಿರಾಕಿ ಕಾಡಬೇಡ ಸಾಕು ಬಿಡು ಸಖಿ ಡೋಲಿಯಲಿ ಮಲಗಿದ ಹೆಣದ ಮೇಲೆ ನೀ […]

Back To Top