ಕಾವ್ಯಯಾನ

White and Brown Dreamcatcher

ಕವಿತೆ

ಯಶು ಬೆಳ್ತಂಗಡಿ

ಮೊದಲು ಶಿಶುವಾಗಿ ಭುವಿ ಸ್ಪರ್ಶಿಸಿ,,
ಮೊದಲ ಉಸಿರಾಟ ನಡೆಸಿ,,
ಮೊದಲ ಕಣ್ಣೀರ ಸುರಿಸಿ,,
ಮೊದಮೊದಲು ಕಂಡ ತೊದಲು ಮಾತಿನ ಕನಸು…

ಮೊದಲ ತರಗತಿಗೆ,,
ಮೊದಲ ಹೆಜ್ಜೆಯಿಟ್ಟಾಗ,,
ಭಯದಲ್ಲೇ ಕಂಡ ನೂರೊಂದು ಕನಸು..

ಮೊದಲ ಬಾರಿ ರಾಷ್ಟ್ರನಾಯಕರ ಕಥೆ ಕೇಳಿದಾಗ,,
ಮೊದಲು ಸ್ವಾತಂತ್ರ್ಯದ ಘಟನೆ ಓದಿದಾಗ,,
ಅರಳಿದ ದೇಶಪ್ರೇಮದ ಕನಸು…

ಮೊದಲು ಚಲನಚಿತ್ರದಿ ಮಧ್ಯಪಾನ ನೋಡಿದಾಗ,,
ಮೊದಮೊದಲು ಗಲಾಟೆ ದೊಂಬಿಗಳ ನೋಡಿದಾಗ,,
ಅವರಂತೆ ನಾಯಕನಾಗಬೇಕೆಂದು ಕಂಡ ಹುಚ್ಚು ಕನಸು..

ಅವನ ಸುಂದರ ಕಣ್ಣು ಕಂಡಾಗ,,
ಅವನು ಮೌನದಿ ಮಾತಾಡಿದಾಗ,,
ಅವನ ಸ್ಪರ್ಶದಿ ಜಗವನ್ನೇ ಮರೆತ ಸುಂದರ ಕನಸು..

ಅವನ ಹಸ್ತದಿ ತಾಳಿ ಕಟ್ಟಿಸಿಕೊಂಡಾಗ,,
ಕಂಡ ಹತ್ತಾರು ಕನಸು..
ತಾಳಿ ಬೆಲೆಕಳೆದುಕೊಂಡಾಗ,,
ನುಚ್ಚುನೂರಾದ ಬದುಕಿನ ಕನಸು..

ಊಟ ತಿಂಡಿ ಬಿಟ್ಟು ಆರೋಗ್ಯ ಹದೆಗೆಟ್ಟಾಗ,,
ಜೀವದ ಆಸೆ ಮರೆತಾಗ,,
ಸಕಲವ ತೊರೆದು ಸಾವಿನ ಮನೆಗೆ ಹೊರಟಾಗ,,
ಕನಸಾಗೇ ಉಳಿದ ಸಾವಿರ ಕನಸು..
ಕನಸಾಗೇ ಉಳಿದ ಬದುಕಿನ ಕನಸು..
ಕಣ್ಣೀರಲ್ಲೇ ಕೊಚ್ಚಿಹೋದ ನೂರೊಂದು ಕನಸು..

========

Leave a Reply

Back To Top