ಅಪ್ಪ ಅಂದರೆ ಆಕಾಶ
ದೇವಿ ಬಳಗಾನೂರ
ಅಪ್ಪ ಅಂದರೆ ಆಕಾಶ
ಅಪ್ಪ ಅಂದ್ರೆ
ಅಗೋಚರ ಪ್ರೀತಿಯ ಕಡಲು
ನನ್ನಮ್ಮನಂತ ಕರುಣೆಯ ಮಡಿಲು
ಮಗಳ ಸಾಧನೆಯು ಪ್ರಜ್ವಲಿಸಲು
ಕಾರಣವಾದ ತಿಳಿಮುಗಿಲು
ಮಗಳಿಗಾಗಿ ದಣಿದನದೆಷ್ಟೋ ಹಗಲು
ಅವಳಿಗಾಗಿಯೇ ಕಾಯ್ದಿರಿಸಿದನು ತನ್ನ ಇರುಳು
ಅಪ್ಪ ಅಂದ್ರೆ
ಮಗಳ ಪಾಲಿನ ನಾಯಕ
ಅವಳ ಬದುಕ ದೋಣಿಯ ನಿಜ ನಾವಿಕ
ಮಗಳ ಮುಗ್ದ ನಗುವಿಗಾಗಿ ಕಾದ ಅಮಾಯಕ
ಅವಳ ಬದುಕ ರೂಪಣೆಯ ನಿಜ ಮಾಲಿಕ
ಅಪ್ಪ ಅಂದ್ರೆ
ಮಗಳಿಗಾಗಿಯೇ ಬದುಕೋ ಜೀವ
ಅವಳ ಖುಷಿಯಲ್ಲೆ ಮರೆವನು ತನ್ನೆಲ್ಲ ನೋವ
ಮಗಳೇ ತನ್ನ ಅತಿದೊಡ್ಡ ಸಂಪಾದನೆಯೆಂಬ ಭಾವ
ಮತ್ತೊಮ್ಮೆ ಮಗದೊಮ್ಮೆ ಹೇಳುವೆನು ಕೇಳಿ
ಅಪ್ಪ ಅಂದ್ರೆ ಆಕಾಶ
ಅಪ್ಪ ಅಂದ್ರೆ ತಾಯಿಯೆಂಬ ಭೂಮಿಗೇ ಒಡಲು
ಮಗಳಿಗವನೇ ಪ್ರೀತಿಯ ಕಡಲು
ಧನ್ಯವಾದಗಳು ಸರ್ ಪ್ರಕಟಿಸಿದ್ದಕ್ಕೆ.
Nice
ನಿಜ ಅಪ್ಪ ಅಂದ್ರೆ ಆಕಾಶ ಅಪ್ಪ ಎಂದರೆ ಅದ್ಭುತಗಳ ಅಗರ ಅಪ್ಪನ ಬಗ್ಗೆ ಎಷ್ಟು ಬರೆದರೂ ತೃಪ್ತಿ ಸಿಗದು. ನಿಮ್ಮ ಕವನ ಸುಂದರವಾಗಿದೆ