ಓ ಸಖಿ!
ನಿರ್ಮಲಾ ಆರ್.
ಹೊಲದಾಗಿನ ಹಸಿರು ಎಷ್ಟು ಚೆಂದ ಓ ಸಖಿ
ಪುರ್ರೆಂದು ಹಾರುವ ಹಕ್ಕಿ
ತಿನ್ನುತ್ತಿತ್ತು ಮೆಕ್ಕೆ ತೆನೆಯ ಕುಕ್ಕಿ ಕುಕ್ಕಿ
ಒಂದು ಬದಿ ಕರಿ ಎಳ್ಳಿನ ರಾಶಿ
ಬಣ್ಣದ ಹೂಗಳು
ನಲಿಯುತ್ತಿದ್ದವು ಕಂಪ ಸೂಸಿ
ಬದುವಿನ ಹೂ ಬಳ್ಳಿ
ಸ್ವಾಗತ ಮಾಡುತಿತ್ತು ತನ್ನ ತಾ ಹಾಸಿ
ಪ್ರಕೃತಿಯ ಬಣ್ಣಿಸಲು ಪದಗಳಿಲ್ಲ ಸಖಿ
ತಂಗಾಳಿಯು ಹಾದು ಹೋಗುತ್ತಿತ್ತು ನಮ್ಮ ಸೋಕಿ
ರಾಶೀಯಲ್ಲಿನ ಎಳ್ಳು ತಿನ್ನುತ್ತಿದ್ದೆವು ಮುಕ್ಕಿ ಮುಕ್ಕಿ
ಸಂಜೆಗೆ ವಿದಾಯ ಹೇಳಲು
ಮೂಡುತ್ತಿತ್ತು ಆಗಸದಲಿ ಚುಕ್ಕಿ
ಎಲ್ಲಿ ಹೋದವು ಸುಗ್ಗಿಯ ಆ ದಿನಗಳು ಸಖಿ
ಹಾದಿ ತಪ್ಪಿದನಾ ಮನುಜ
ಸ್ವಾರ್ಥಕೆ ತನ್ನ ತಾ ನೂಕಿ
ಇನ್ನೂ ತೀರುತ್ತಿಲ್ಲ ಬರಗಾಲದ ಬಾಕಿ.
*****
ಧನ್ಯವಾದಗಳು