ಹೋದಿರೆಲ್ಲಿ..?

ಹೋದಿರೆಲ್ಲಿ..?

ಮಕ್ಕಳ ಕವಿತೆ ಹೋದಿರೆಲ್ಲಿ..? ಮಲಿಕಜಾನ ಶೇಖ ಗುಬ್ಬಿ ಗುಬ್ಬಿ ಪುಟ್ಟನೆ ಗುಬ್ಬಿಚಿಂವ್ ಚಿಂವ್ ಹಾಡುತ್ತಾಮನೆಯಲಿ ಬಂದುಕನ್ನಡಿ ನೋಡುತಾಮುಖವನು ತೋರುತಾಆಡುತಾ ಹಾರುತಾಹೋಗುತಲಿದ್ದೆ ನೀ ಅಂದುಕಾಣುತ್ತಿಲ್ಲ ನೀನು,,ಹೋದೆ ಎಲ್ಲಿ ಇಂದು..? ಜಿಂಕೆ ಜಿಂಕೆ ಮುದ್ದಿನ ಜಿಂಕೆಜಿಗಿಯುತ ನಲಿಯುತತೋಟಕೆ ಬಂದುಚಿಗುರಿದ ಹುಲ್ಲುತಂಪನೆ ನೀರುಕುಡಿಯುತ ಆಡುತಾಓಡತಲಿದ್ದೆ ನೀ ಅಂದುಕಾಣುತ್ತಿಲ್ಲ ನೀನು,,ಹೋದೆ ಎಲ್ಲಿ ಇಂದು..? ಗಿಳಿಯೆ ಗಿಳಿಯೆ ಮುದ್ದಿನ ಗಿಳಿಯೆಮಿಟು ಮಿಟು ಗುನಗುತಾಹಿತ್ತಲ ಬಂದುಸವಿ ಸವಿ ಪೇರಲತರ ತರ ಕಾಯಿತಿನ್ನುತಾ ಕುಣಿಯುತಾಹಾರುತಲಿದ್ದೆ ನೀ ಅಂದುಕಾಣುತ್ತಿಲ್ಲ ನೀನು,,ಹೋದೆ ಎಲ್ಲಿ ಇಂದು..? ಗರುಡನೆ ಗರುಡನೆ ಶೌರ್ಯದ ಗರುಡನೆಭರ್ರನೆ […]

ಈಗವಳು ಮಲಗಿದ್ದಾಳೆ

ಕಿವಿ, ಕರುಳುಗಳನ್ನು ಕೊಯ್ದರೂ
ಮತ್ತೆ ಜೋಡಿಸಿ, ಜೀವ ಬಿಗಿ ಹಿಡಿದವಳು
ಒಂದು ಯುಗದ ಅಂತ್ಯದಂತೆ
ಈಗ ತಣ್ಣಗೆ ಮಣ್ಣಲ್ಲಿ ಮಲಗಿದ್ದಾಳೆ

ಹೊಸ್ತಿಲಿನ ಹೊರಗೆ ಮತ್ತು ಒಳಗೆ

ವಿಶ್ವನಾಥ ಎನ್. ನೇರಳಕಟ್ಟೆ
ಮತ್ತೆ ಹೊಸ್ತಿಲು ದಾಟಿ
ಮತ್ತೆ ಮೈಕ್ ಮುಂದೆ ನಿಂತಾಗ
ಮತ್ತದೇ ಅವನು; ಮತ್ತದೇ ಮಾತು

ಛಿದ್ರವಾಗಿದೆ ಅನ್ನದಾತನ ಹೃದಯ ಸದಾ ವರ್ಷವಿಲ್ಲದೆ ಕಂಗಾಲಾಗಿ ಕೂತಿಹನು|
ಭದ್ರತೆ ದೊರೆಯದೆ ತಳದಹೂಳಿಗೆ ಕಣ್ಕುಕ್ಕಿ ಬೆದರುತ ಹುದುಗಿದೆ ನಿತ್ಯ|

ನಿಷ್ಠೆ,ನಂಬಿಕೆ, ಪ್ರೀತಿ,ಮಮತೆಗಳೆಲ್ಲ ಕಪ್ಪ ಕೇಳುತ್ತಿವೆ
ದುಡಿದ ಕೈ ಈಗ ಹತಾಶೆಯ ಗಾಯದಲಿ ದಣಿದಿದೆ

ಆ ನಿಸ್ತೇಜ ಕಣ್ಣುಗಳಲ್ಲಿ ಬಿರಿದ ನೆಲ, ಕಮರಿದ ಫಸಲು
ನಿನ್ನ ಹೆಣದ ಮೇಲೆ ಚದುರಂಗ ಆಡುತ್ತಾರೆ ಎಲ್ಲರೂ

ಅಂಕಣ ಬರಹ . ರಾಮಕೃಷ್ಣ ಗುಂದಿ ಅವರ ಆತ್ಮಕಥೆ—23 ಆತ್ಮಾನುಸಂಧಾನ ಅಂಕೋಲೆಯ ಗೋಖಲೆ ಸೆಂಟನರಿ ಕಾಲೇಜಿಗೆ… ಬಿ.ಎ. ಪದವಿ ಶಿಕ್ಷಣ ಪಡೆಯುವುದಕ್ಕಾಗಿ ಅಂಕೋಲೆಯ ಗೋಖಲೆ ಸೆಂಟನರಿ ಕಾಲೇಜಿಗೆ ಸೇರಲು ಬಯಸಿದೆ. 1966ರಲ್ಲಿ ಮಾನ್ಯ ದಿನಕರ ದೇಸಾಯಿಯವರು ತಮ್ಮ ಕೆನರಾ ವೆಲ್ಫೇರ್ ಟ್ರಸ್ಟ್ ಶಿಕ್ಷಣ ಸಂಸ್ಥೆಯ ಮೂಲಕ ಸ್ಥಾಪಿಸಿದ ಗೋಖಲೆ ಸೆಂಟನರಿ ಕಾಲೇಜು ನನ್ನಂಥ ಸಾವಿರಾರು ಬಡ ವಿದ್ಯಾರ್ಥಿ ಗಳ ಪದವಿ ಶಿಕ್ಷಣದ ಕನಸನ್ನು ನನಸಾಗಿಸಿದ್ದು ಈಗ ಇತಿಹಾಸ. ನಾನು ವಿದ್ಯಾರ್ಥಿಯಾಗಿ ಕಾಲೇಜು ಸೇರುವ ಹೊತ್ತಿಗೆ ಪದವಿ ಅಭ್ಯಾಸ […]

Back To Top