ಹೋದಿರೆಲ್ಲಿ..?

ಮಕ್ಕಳ ಕವಿತೆ

ಹೋದಿರೆಲ್ಲಿ..?

ಮಲಿಕಜಾನ ಶೇಖ

ಗುಬ್ಬಿ ಗುಬ್ಬಿ ಪುಟ್ಟನೆ ಗುಬ್ಬಿ
ಚಿಂವ್ ಚಿಂವ್ ಹಾಡುತ್ತಾ
ಮನೆಯಲಿ ಬಂದು
ಕನ್ನಡಿ ನೋಡುತಾ
ಮುಖವನು ತೋರುತಾ
ಆಡುತಾ ಹಾರುತಾ
ಹೋಗುತಲಿದ್ದೆ ನೀ ಅಂದು
ಕಾಣುತ್ತಿಲ್ಲ ನೀನು,,
ಹೋದೆ ಎಲ್ಲಿ ಇಂದು..?

ಜಿಂಕೆ ಜಿಂಕೆ ಮುದ್ದಿನ ಜಿಂಕೆ
ಜಿಗಿಯುತ ನಲಿಯುತ
ತೋಟಕೆ ಬಂದು
ಚಿಗುರಿದ ಹುಲ್ಲು
ತಂಪನೆ ನೀರು
ಕುಡಿಯುತ ಆಡುತಾ
ಓಡತಲಿದ್ದೆ ನೀ ಅಂದು
ಕಾಣುತ್ತಿಲ್ಲ ನೀನು,,
ಹೋದೆ ಎಲ್ಲಿ ಇಂದು..?

ಗಿಳಿಯೆ ಗಿಳಿಯೆ ಮುದ್ದಿನ ಗಿಳಿಯೆ
ಮಿಟು ಮಿಟು ಗುನಗುತಾ
ಹಿತ್ತಲ ಬಂದು
ಸವಿ ಸವಿ ಪೇರಲ
ತರ ತರ ಕಾಯಿ
ತಿನ್ನುತಾ ಕುಣಿಯುತಾ
ಹಾರುತಲಿದ್ದೆ ನೀ ಅಂದು
ಕಾಣುತ್ತಿಲ್ಲ ನೀನು,,
ಹೋದೆ ಎಲ್ಲಿ ಇಂದು..?

ಗರುಡನೆ ಗರುಡನೆ ಶೌರ್ಯದ ಗರುಡನೆ
ಭರ್ರನೆ ಬಂದು
ಕೆಡಕರ ಕೊಂದು
ಸರ್ರನೆ ಗಗನಕ್ಕೆ 
ಹಾರುತ್ತಲಿದ್ದೆ ನೀ ಅಂದು
ಕಾಣುತ್ತಿಲ್ಲ ನೀನು,,
ಹೋದೆ ಎಲ್ಲಿ ಇಂದು..?

ಹುಳವೆ ಹುಳವೆ ಎರೆ ಹುಳವೆ
ತೋಟಕ್ಕೆ ಬಂದು
ಮಣ್ಣು ಹದಿಸಿ
ರೈತನ ಬದುಕಿನ
ಆಸರೆಯಾಗಿ
ಬಾಳನು ಬೆಳಗಿಸಿ
ಹೋಗುತ್ತಲಿದ್ದೆ ನೀ ಅಂದು
ಕಾಣುತ್ತಿಲ್ಲ ನೀನು,,
ಹೋದೆ ಎಲ್ಲಿ ಇಂದು..?

ಬನ್ನಿರೆ ಬನ್ನಿರೆ ಎಲ್ಲರೂ ಬನ್ನಿರೆ
ಕೂಡಿ ಬಾಳೋಣ ಇಂದು
ನೀವು ನಮಗೆ ನಾವು ನಿಮಗೆ
ಇದ್ದರೆ ಬಾಳು ಬಹಳ ಚಂದ.
ಪ್ರೀತಿ, ಪ್ರೇಮ ಸಾರಿ
ಬದಕನು ಹರ್ಷದಿ ಕಳೆಯೋಣ..

*******************************

9 thoughts on “ಹೋದಿರೆಲ್ಲಿ..?

  1. ತುಂಬಾ ಸೊಗಸಾಗಿ ಮೂಡಿ ಬಂದಿದೆ ಗುರುಗಳೇ ಮಕ್ಕಳ ಮನವನ್ನು ಗೆಲ್ಲುವ ಕವಿತೆ

  2. ಪರಿಸರ ಕಾಳಜಿ, ಅಭಿನಂದನೆಗಳು

Leave a Reply

Back To Top