ಯುವ ಗಜಲ್‌ ಕವಿ ಶಿವಪ್ರಕಾಶ ರು ಕುಂಬಾರ ಹೆಸರು: ಶಿವಪ್ರಕಾಶ ರು ಕುಂಬಾರ(ನಂರುಶಿ ಕಡೂರು) ವಯಸ್ಸು: ೩೨ ಶಿಕ್ಷಣ: ಐಟಿಐ ,ಡಿಪ್ಲೋಮಾ ವೃತ್ತಿ: ಬೆಂಗಳೂರು ಮೆಟ್ರೋ ರೈಲ್ವೆನಲ್ಲಿ ಕಿರಿಯ ಅಭಿಯಂತರ ಪ್ರಕಟಿತ ಕೃತಿಗಳು : ೧) ಅಮೃತ ಸಿಂಚನವು ನಿಮಗಾಗಿ ( ಕವನ ಸಂಕಲನ) ೨) ಕಾಮನ ಬಿಲ್ಲು ಬಣ್ಣ ಬೇಡುತಿದೆ (ಗಜಲ್ ಸಂಕಲನ) ೩) ನೇರಿಶಾ (ಗಜಲ್ ಸಂಕಲನ) ಸಂಗಾತಿಓದುಗರಿಗೆ ಇವರದೊಂದು ಗಜಲ್ ಸತ್ತವನ ಮನೆಯ ಗೋಳು ನನಗೂ ಕೇಳುತಿದೆ ಗಾಲಿಬ್ಯಮ ಕಿಂಕರರ ನರ್ತನ ಎಲ್ಲೇ […]

ಅನುವಾದಿತಕವಿತೆ ನನ್ನ ಗಾಂಧಿ ಕನ್ನಡಕ್ಕೆ: ಶೈಲಜಾ ಬಿ. ಇಂಗ್ಲೀಷಿಗೆ: ಸಮತಾ ಆರ್. ನನ್ನ ಗಾಂಧಿ ಬೋಳು ತಲೆ ಕಣ್ಣಲ್ಲಿ ಚಾಳೀಸುಕೈಯಲ್ಲಿ ಕೋಲುಮುಖದಲೊಂದು ಮಾಗಿದ ನಗೆಯಗಾಂಧಿ ನನ್ನೊಳಗೆ ನೀನುತಾತನಾಗಿ ಹುಟ್ಟಿದೆ ಹೆಡ್ ಮಾಸ್ತರರ ಕೋಣೆಯಗೋಡೆಯ ಮೇಲೆಪೋಟೋದಲ್ಲಿ ನೀನಿದ್ದೆವರುಷದಲ್ಲಿ ಮೂರು ಬಾರಿನನ್ನ ಕೈಗೂ ನಿಲುಕಿಚೌಕಟ್ಟು ತಿಕ್ಕಿ ಗಾಜು ಒರೆಸಿಹೂಮಾಲೆ ಹಾಕಿ ಜೈಕಾರ ಕೂಗಿಲಡ್ಡು ತಿನ್ನುವಾಗಬಾಯಿ ತುಂಬ ಸಿಹಿಮನದಲ್ಲಿ ಖುಷಿ ಬೆಳೆದಂತೆ ನಾನು ನೀನೂ ಬೆಳೆದೆತಾತ ಮಹಾತ್ಮನಾದೆಸರಳ ಸತ್ಯ ಅಹಿಂಸೆಗಳಸಾಕಾರ ಮೂರ್ತಿಯಾದೆಬೆಳಕಾದೆ ಧಮನಿಯಲಿ ಬಿಸುಪುಮನದಲ್ಲಿ ಹುರುಪುತುಂಬಿದ್ದ ಕಾಲದಲಿಹೊನಲಿಗೆದುರು ಈಜುವ ಕನಸಿತ್ತುಕಂಗಳಲಿ ನಿನ್ನ […]

ಅಂಕಣ ಬರಹ ಗುರುತುಗಳು ಗುರುತುಗಳುಮೂಲ ಮಲೆಯಾಳ ; ಸೇತು ಕನ್ನಡಕ್ಕೆ : ಡಾ.ಅಶೋಕ್ ಕುಮಾರ್ಪ್ರಕಾಶನ : ಕೇಂದ್ರಸಾಹಿತ್ಯ ಅಕಾಡೆಮಿಪ್ರಕಟಣೆಯ ವರ್ಷ : ೨೦೧೧ಬೆಲೆ : ರೂ.೨೦೦ಪುಟಗಳು : ೩೪೬ ಇದು ಮುಖ್ಯವಾಗಿ ಸಿಂಗಲ್ ಪೇರೆಂಟ್ ಆಗಿರುವ ಒಬ್ಬ ತಾಯಿ ಮತ್ತು ಮಗಳ ಸುತ್ತ ಹೆಣೆಯಲಾದ ಕತೆ.  ತಾಳ ತಪ್ಪಿದ ವೈವಾಹಿಕ ಜೀವನದಿಂದ ನೊಂದು ಸ್ವತಂತ್ರವಾಗಿ ಬಾಳುತ್ತೇನೆಂದು ಸಬರ್‌ವಾಲ್ ಕುಟುಂಬವು ನಡೆಸುತ್ತಿರುವ ಒಂದು ಕಂಪೆನಿಯ ಹೆಚ್.ಆರ್.ಮುಖ್ಯಸ್ಥೆಯಾಗಿ ಸೇರುತ್ತಾಳೆ ಪ್ರಿಯಂವದಾ ಮೆನೋನ್.  ಬುದ್ಧಿವಂತೆಯಾದ ಆಕೆ ಪರಿಶ್ರಮ ಪಟ್ಟು ದುಡಿಯುವವಳು.   ತನ್ನ […]

ವಾರದ ಕತೆ ಧ್ರುವ ತಾರೆ ವಿನುತಾ ಹಂಚಿನಮನಿ . ಸಂಜೆ ನಾಲ್ಕು ಗಂಟೆಯ ಸಮಯ ಹುಬ್ಬಳ್ಳಿಯ ಶಕುಂತಲಾ ಆಸ್ಪತ್ರೆಯಲ್ಲಿ ಗದ್ದಲ ಸ್ವಲ್ಪ ಕಡಿಮೆಯಾಗಿದೆ. ಈಗ ಸಾಧಾರಣವಿರುವ ದವಾಖಾನೆಗೆ ಮಹತ್ವ ಬಂದು, ಕೊರೊನಾ ರೋಗಿಗಳಿಂದ ಯಾವಾಗಲೂ ಗಿಜಿಗುಟ್ಟುತ್ತಿದೆ. ರೋಗಿಗಳನ್ನು ಬಿಟ್ರೆ ಬೇರೆ ಯಾರೂ ಇಲ್ಲಿಗೆ ಬರುವ ಧೈರ್ಯ ಮಾಡುವುದಿಲ್ಲ. ಅಲ್ಲಿಯೇ ಒದಗಿಸುವ ಊಟದ ಸಮಯ ಮುಗಿದಿದ್ದರಿಂದ ನರ್ಸ್, ಆಯಾ ಓಡಾಟ ಕೂಡ ಕಡಿಮೆಯಾಗಿದೆ. ಡಾಕ್ಟರ್ ಇನ್ನು ಬರುವುದು ರಾತ್ರಿಗೇ.  ಹೊರಗಡೆ ಸಿಟಿಯಲ್ಲಿ ಲಾಕ್ಡೌನ್ ಇದ್ದುದರಿಂದ ಜನಸಂಚಾರವಿಲ್ಲ. ವಾಹನಗಳ ಸದ್ದು […]

ನೆರಳಿಲ್ಲದ ಜೀವ

ಕವಿತೆ ನೆರಳಿಲ್ಲದ ಜೀವ  ಆನಂದ ಆರ್ ಗೌಡ ಬಿರುಕು ಬಿಟ್ಟ ಅದೇ ಗೋಡೆಯೊಳಗೆಹಸಿದ ಕಣ್ಣುಗಳು ಇಣುಕಿನೋಡುತ್ತಿದ್ದವುಅವ್ವನ ಹೆಜ್ಜೆ ಗುರುತುಗಳನು ಒಡಲೊಳಗಿನ ಬಸಿರಲಿಪಿಸುಮಾತು ಮೇಯ್ದ ಕರುಳ ಕುಡಿಗಳಿಗೆನೊಂದ ಬೇಗೆಯಲಿ ಗಳಿಸಿದ ತುತ್ತುಜೋಗುಳವ ಹಾಡುತ್ತಿತ್ತು ! ಮಾಂಗಲ್ಯ ತೊಡಿಸಿದ ಕೈಯ ಅಗ್ನಿಯಲಿಸುಟ್ಟ ಸೀರೆ ಇನ್ನೂ ಅವಳ ಬಿಟ್ಟಿಲ್ಲತವರು ಅರಸಿ ಬಂದ ಕಣ್ಣವೆಗಳುಹಸುಳೆಗಳ ಪಿಡುಗು ಇಂಗಿಸಿಲ್ಲ ಅನ್ನ ಅರಸಿದ ಪಾದ ಮಾಸದ ಗಾಯಕರುಣೆ ಕನಿಕರ ಕಾಣದ ತನ್ಹಸಿವುಹೊದ್ದು ಮಲಗಿದ ಪರಿಯುಎಲ್ಲವ ಮರೆಸಿ ನಿಶ್ಯಬ್ಧವಾಗಿಸಿದೆ ಘಾಸಿಗೊಂಡ ಮನಸುಹೊನ್ನು ಮಣ್ಣು ಮೋಹಿಸಿಲ್ಲನೆರಳಿಲ್ಲದ ಜೀವ ಕನಸುಗಳನು […]

ಕನಸುಗಳ ದೊಂಬರಾಟ

ಕವಿತೆ ಕನಸುಗಳ ದೊಂಬರಾಟ ಸುಮನಸ್ವಿನಿ. ಎಂ ನೀ ಮರಳುವೆಯೆಂಬಪವಾಡವೊಂದು ಘಟಿಸಿಯೇತೀರುತ್ತದೆಂದು ನನ್ನ ನಂಬಿಸಲುಹರಸಾಹಸ ಪಡುವಕನಸುಗಳ ದೊಂಬರಾಟಕ್ಕೆನಕ್ಕುಬಿಡುತ್ತೇನೆ ಈಗೀಗ..ಹೊರಳಿ ನೋಡಿದರೂ ಸಹಕಾಣದಷ್ಟು ದೂರದಲ್ಲಿ ನೀನನ್ನಿರಿಸಿಬಿಟ್ಟಿರುವುದರಿಂದ! ದಿನಕ್ಕೆರಡು ಬಾರಿಯಾದರೂಕಣ್ತುಂಬಿ ತುಳುಕಿ ಉರುಳಿಹೋಗಲು ನಿನ್ನ ನೆನಪುಗಳುನನ್ನೊಂದಿಗೆ ಜಿದ್ದಿಗೆ ಬೀಳುತ್ತವೆ..ಎದೆಯೊಳಗೆ ಹನಿಯೊಡೆದುಹರಡಿಕೊಂಡಂತೆಲ್ಲಾ ಜಾಗಸಾಲದಾದಾಗ, ಪಾಪ!ಅಮಾಯಕ ನೆನಪುಗಳುತಾನೇ ಏನು ಮಾಡಿಯಾವು? ಏಳುಸಮುದ್ರಗಳಾಚೆಗಿನಏಳುಸುತ್ತಿನ ಏಕಾಂತ ಕೋಟೆಯತುತ್ತತುದಿಯ ಕೋಣೆಗೂ ನುಗ್ಗಿ‘ರಾಜ’ಕುಮಾರನೊಬ್ಬ ಬರುತ್ತಾನೆಂಬನಿರೀಕ್ಷೆಯ ಅದಮ್ಯ ನಂಬಿಕೆಗೆಬೆರಗಾಗುತ್ತೇನೆ ಬಹಳವೇ,ಮುಗಿದ ದಾರಿಯ ಕಡೆಯಲ್ಲೊಂದುಹೊಸ ತಿರುವು ಸೃಷ್ಟಿಯಾಗುವಭ್ರಮೆಯ ‘ಬಗೆ’ಗೆ ಸೋಜಿಗಪಡುತ್ತಾ! *************************************

ಹಾಯ್ಕುಗಳು

ಹಾಯ್ಕುಗಳು ವಿ.ಹರಿನಾಥ ಬಾಬು ಒಲೆಯ ಮುಂದೆಕರುಳ ಸುಟ್ಟ ಅಮ್ಮತಾಯ ಮಮತೆ* ಕುದಿ ಎಸರುತಾಯಿಯ ಎದೆಹಾಲುಕಟ್ಟಿದ ಬಾಯಿ* ಅಳುವ ಮಗುನಿಷ್ಕರುಣಿ ಜಗತ್ತುತಬ್ಬಲಿ ತಾಯಿ* ಕರುಳ‌ ಕುಡಿಭಯ ಭೀತಗೊಂಡಿದೆಕತ್ತಲ ರಾಜ್ಯ* ರಸ್ತೆಯ ಮೇಲೆಎಳೆದು ನಿಂತ ತೇರುಜೀವನ ಮುಕ್ತಿ* ಕಡಲ ನೀರುಸವಿಯಲೊಲ್ಲೆ ಉಪ್ಪುಸಪ್ಪೆ ಬದುಕು* ಓಡಿದ ನದಿಸೇರಿತು ಕಡಲನುಬದುಕು ಅಂತ್ಯ* ಮೇಲೆ ಚಂದಿರಈಕೆ ಬೆಳದಿಂಗಳುಬಾಳು ಹುಣ್ಣಿಮೆ* ಬೀಸುವ ಗಾಳಿಉದುರಿದವು ಎಲೆಅಪ್ಪಿತು ಮುಪ್ಪು* ಗುಡಿಯ ಮುಂದೆಭಿಕ್ಷುಕರದೇ ಸಾಲುಭಕ್ತಿ ಕುರುಡು* ದೇವನಿರದಗುಡಿಯೊಳಗೆ ನಾನುಅನಾಥ ಪ್ರಜ್ಞೆ* ಕೂಗಿತು ಕೋಳಿಹರಿಯಿತು ಬೆಳಕುನಗುವ ಸೂರ್ಯ* ಉರಿವ ಬೆಂಕಿಒಲೆಯ ಮೇಲೆ […]

ಆಧುನಿಕ ವಚನಗಳು

ಆಧುನಿಕ ವಚನಗಳು ರತ್ನಾ ಕಾಳೇಗೌಡ ಅರಮನೆಯ ರಾಜನಾದರೇನು?ಬಡವ ಭಿಕ್ಷುಕನಾದರೇನು?ಇಬ್ಬರಿಗೂ ಒಂದೇ ರೀತಿಯ ಹಸಿವುಅನ್ನವೇ ಇಬ್ಬರ ಹೊಟ್ಟೆ ತುಂಬಿಸುವುದುಅರಮನೆಯಲ್ಲಿ ಮಲಗುವುದಕ್ಕೆ ಮಂಚಭಿಕ್ಷುಕರಿಗೆ ಪಾರ್ಕಿನ ಕಲ್ಲು ಬೆಂಚೇಮಂಚ:ಇಬ್ಬರೂ ಮಾಡುವುದು ನಿದ್ದೆ ಎಂಬುದತಿಳಿದು ಬಾಳಯ್ಯ — ರತ್ನದೀಪ ನಿರ್ಗತಿಕ ಮಾಡಿ ಬಂಧುಗಳ ಮನೆಗೆಹೋದಾಗ ಗುರುತಿಲ್ಲದವರಂತೆ ಮುಖತಿರುಗಿಸಿಕೊಂಡು ಸೋದರತ್ತೆಧನಿಕಳೆಂದು ತಿಳಿದಾಗ ಮುಗಿ ಬಿದ್ದುಬಂದಿರಯ್ಯಎತ್ತೆತ್ತಲೂ ನನ್ನದೆ ಗುಣಗಾನಮಾಡುತಿಹರಯ್ಯಗುಣ ನಡೆ ನುಡಿಯಿಂದಲೇ ಸಮಾಜದಲ್ಲಿಸ್ಥಾನ ಮಾನ ದೊರೆಯುವುದೆಂದುತಿಳಿಯರಯ್ಯಗುಣ ನಡತೆಯನ್ನು ಮೂಲೆಗೆ ತಳ್ಳಿ ಹಣಕ್ಕೆಬೆಲೆ ಕೊಡುವ ದಾನ ದಾಹಿಗಳನು ಮನೆಗೆಹೇಗೆ ಸೇರಿಸಲಯ್ಯ –ರತ್ನದೀಪ ಗಜನ ಮಣಿಸಿ ದಂತ ಪಡೆಯಬಹುದುವ್ಯಾಘ್ರನ […]

ಮುಂಜಾವಿನ ಬೆರಗು

ಕವಿತೆ ಮುಂಜಾವಿನ ಬೆರಗು ಡಾ.ಪ್ರೀತಿ ಕೆ.ಎ. ಅದೊಂದು ತಿಳಿ ಮುಂಜಾವುಎದ್ದಿದ್ದೆ ನಿನ್ನ ನೆನಪುಗಳಿಂದಕಣ್ಣ ಮೇಲಿನ ಮುಂಗುರುಳನ್ನುಹಗೂರಕ್ಕೆ ಹಿಂದೆ ಸರಿಸಿಬೆಚ್ಚಗಿನ ಚಹಾವನ್ನು ಇಷ್ಟಿಷ್ಟೇಹೀರುತ್ತಾ ಬಾಲ್ಕನಿಯಲ್ಲಿ ನಿಂತಿದ್ದೆ ನಿನ್ನೆವರೆಗೆ ಮೊಗ್ಗಾಗಿದ್ದಕೆಲವೇ ಕೆಲವು ಗಳಿಗೆಗಳಹಿಂದಷ್ಟೇ ಹೂವಾಗಿ ಬಿರಿದಆ ಸೇವಂತಿಗೆಯ ಮೃದು ಪಕಳೆಗಳಿಗೆನಿನ್ನದೇ ಮೈಯ ಘಮ ಚೀವ್ ಚೀವ್ ಗುಬ್ಬಿಮರಿಗಳಜೊತೆ ಸೇರಿದ ಹೊಸ ಹಕ್ಕಿಗಳಸಂಗೀತ ಸುಧೆಯಲ್ಲಿನಿನ್ನದೇ ನಾದ ಮೆಲ್ಲನೇ ಬೀಸುತ್ತಿರುವತಂಗಾಳಿಗೆ ಸಾಥ್ ಕೊಡುವಂತೆಅತ್ತಿಂದಿತ್ತ ಓಲಾಡುತ್ತಿರುವಆ ಎಳೇ ಸಂಪಿಗೆ ಗಿಡಕ್ಕೆನಿನ್ನದೇ ಲಯ ನೀಲಾಕಾಶದಲ್ಲಿ ತುಸುವೇಮೊಗವನ್ನು ತೋರುತ್ತಿದ್ದಇದೀಗ ಬಂಗಾರದ ಬಣ್ಣದಿಂದಮಿರಿ ಮಿರಿ ಹೊಳೆಯುತ್ತಿರುವ ಸೂರ್ಯನಿಗೆನಿನ್ನ ಕಣ್ಣುಗಳಲ್ಲಿದ್ದಷ್ಟೇ […]

ದ್ವಿಪದಿಗಳು

ದ್ವಿಪದಿಗಳು ಸಿದ್ಧರಾಮ ಕೂಡ್ಲಿಗಿ ಖಾಲಿಯಾದ ಕಣ್ಣುಗಳಲಿ ತೇಲುತ್ತವೆ ಕಂಬನಿದುಂಬಿದ ಮೋಡಗಳು ಒಮ್ಮೊಮ್ಮೆ ಭೋರ್ಗರೆಯುತ್ತವೆ ಒಮ್ಮೊಮ್ಮೆ ಕಣ್ಣಂಚಿನಲೇ ನಿಲ್ಲುತ್ತವೆ – ಬಂಜೆ ನೆಲಕೂ ಆಗಾಗ ಕನವರಿಕೆ ಒಡಲು ತುಂಬುವ ಸರದಾರ ಬರಬಹುದೆಂದು – ಬರಿದಾದ ತಲೆಯಲಿ ಚಿಂತೆಯ ಹದ್ದುಗಳದೇ ಗಲಾಟೆ ಬೇಟೆ ಸಿಕ್ಕರೆ ಭೂರಿ ಭೋಜನ ಇಲ್ಲದಿರೆ ಬರೀ ಗಾನ ಬಜಾನ – ಮತ್ತೊಬ್ಬರ ಬೂಟಿನಲಿ ಮೂಗು ತೂರಿಸುವ ಹೆಜ್ಜೆಗಳು ತಮಗೊಂದು ಅಸ್ತಿತ್ವವಿದೆಯೆಂದು ಎಂದೂ ಯೋಚಿಸವು – ಮುಗುಳ್ನಗೆಗಳು ಹಾರಾಡುತ್ತವೆ ಚಿಟ್ಟೆಯಂತೆ ಪ್ರೀತಿ ಇದ್ದಲ್ಲಿ ಕೂರುತ್ತವೆ ಇಲ್ಲದಿದ್ದಲ್ಲಿ ಮುಂದೆ […]

Back To Top