ಕವಿತೆ
ನೆರಳಿಲ್ಲದ ಜೀವ
ಆನಂದ ಆರ್ ಗೌಡ
ಬಿರುಕು ಬಿಟ್ಟ ಅದೇ ಗೋಡೆಯೊಳಗೆ
ಹಸಿದ ಕಣ್ಣುಗಳು ಇಣುಕಿ
ನೋಡುತ್ತಿದ್ದವು
ಅವ್ವನ ಹೆಜ್ಜೆ ಗುರುತುಗಳನು
ಒಡಲೊಳಗಿನ ಬಸಿರಲಿ
ಪಿಸುಮಾತು ಮೇಯ್ದ ಕರುಳ ಕುಡಿಗಳಿಗೆ
ನೊಂದ ಬೇಗೆಯಲಿ ಗಳಿಸಿದ ತುತ್ತು
ಜೋಗುಳವ ಹಾಡುತ್ತಿತ್ತು !
ಮಾಂಗಲ್ಯ ತೊಡಿಸಿದ ಕೈಯ ಅಗ್ನಿಯಲಿ
ಸುಟ್ಟ ಸೀರೆ ಇನ್ನೂ ಅವಳ ಬಿಟ್ಟಿಲ್ಲ
ತವರು ಅರಸಿ ಬಂದ ಕಣ್ಣವೆಗಳು
ಹಸುಳೆಗಳ ಪಿಡುಗು ಇಂಗಿಸಿಲ್ಲ
ಅನ್ನ ಅರಸಿದ ಪಾದ ಮಾಸದ ಗಾಯ
ಕರುಣೆ ಕನಿಕರ ಕಾಣದ ತನ್ಹಸಿವು
ಹೊದ್ದು ಮಲಗಿದ ಪರಿಯು
ಎಲ್ಲವ ಮರೆಸಿ ನಿಶ್ಯಬ್ಧವಾಗಿಸಿದೆ
ಘಾಸಿಗೊಂಡ ಮನಸು
ಹೊನ್ನು ಮಣ್ಣು ಮೋಹಿಸಿಲ್ಲ
ನೆರಳಿಲ್ಲದ ಜೀವ ಕನಸುಗಳನು ಹೊತ್ತು
ಮತ್ತೆ ಹೆಜ್ಜೆಯಿಟ್ಟಿದೆ ಹೊಟ್ಟೆ ತುಂಬಲು !!
******************************
ಸೊಗಸಾದ ಕವನ
ಸೊಗಸಾಗಿದೆ ಕವನ
ಅದ್ಭುತ ಕವಿತೆ ಸೂಪರ್
ಕವಿತೆ ಮಾರ್ಮಿಕವಾಗಿದೆ..
ತುಂಬಾ ಮನ ಮುಟ್ಟುವಂತಿದೆ