ಲಹರಿ
ಕವಿತೆಯ ಜಾಡು ಹಿಡಿದು ಸ್ಮಿತಾಅಮೃತರಾಜ್. ಸಂಪಾಜೆ ಈ ಕವಿತೆ ಒಮ್ಮೊಮ್ಮೆ ಅದೆಷ್ಟು ಜಿಗುಟು ಮತ್ತುಅಂಟಂಟು ಅಂದ್ರೆ ಹಲಸಿನ ಹಣ್ಣಿನ ಮೇಣದ ತರ.ಮತ್ತೆ ಮತ್ತೆ ತಿಕ್ಕಿದಷ್ಟೂ ಅಂಟಿಕೊಳ್ಳುತ್ತಾ,ಬಿಡದೇ ಕಾಡುತ್ತಾ ,ಸತಾಯಿಸುತ್ತಾ,ಹಿಂದೆ ಮುಂದೆ ಸುತ್ತಿಸುಳಿದು ಯಾವುದೋ ಭಾವನಾ ತೀರಕ್ಕೆ ಲಗ್ಗೆಯಿಡುತ್ತಾ ತನ್ನನ್ನು ತಾನು ಮರೆವಿಗೆ ನೂಕಿಬಿಡುತ್ತದೆ.ಅರೆ ಕ್ಷಣವೂ ಬಿಟ್ಟೂ ಬಿಡದ ಆತ್ಮಸಂಗಾತಿಯಂತೆ ಪಕ್ಕಕ್ಕಿರುತ್ತದೆ.ಕವಿತೆ ಯಾವೊತ್ತೂ ನನ್ನ ಕೈ ಬಿಡಲಾರದು ಎಂಬ ಗುಂಗಿನಲ್ಲೇ, ತುಸು ಹೆಚ್ಚೇ ಹಚ್ಚಿಕೊಂಡು,ಯಾವುದಕ್ಕೂವಿನಾಕಾರಣ ತಲೆಕೆಡಿಸಿಕೊಳ್ಳದೇ,ಕವಿತೆಯನ್ನು ನನ್ನ ತೆಕ್ಕೆಯೊಳಗಿಟ್ಟೋ..ಅಥವಾ ಕವಿತೆಯತೆಕ್ಕೆಯೊಳಗೆ ತಾನು ಬಿದ್ದೋ,ಒಟ್ಟಿನಲ್ಲಿ ಕವಿತೆಯ ಸಾಂಗತ್ಯದಲ್ಲಿ ಬದುಕು ಸುಖಿ ಅಂತಗುನುಗಿಕೊಳ್ಳುತ್ತಿರುವಾಗಲೇ..ಹಾದಿಯುದ್ದಕ್ಕೂ […]
ಗಝಲ್ ಸಂಗಾತಿ
ಗಝಲ್ ಡಾ.ಗೋವಿಂದ ಹೆಗಡೆ ತಪ್ಪು ನನ್ನದೇ ಗೆಳತಿ,ಬಿಡದೆ ಚುಂಬಿಸಿದೆ ಕೊಳ್ಳಿಯನ್ನು ಊದಿ ಊದಿ ಉರಿಸಬಾರದಿತ್ತು ಹೀಗೆ ನಿನ್ನ ಒಡಲನ್ನು ಎದೆಯ ಆಳ-ಅಗಲಗಳ ನಾನೇಕೆ ಕುಗ್ಗಿಸಿಕೊಂಡೆ ಅಗ್ಗವಾಗಿಸಬಾರದಿತ್ತು ಹೀಗೆ ನನ್ನ ನಿಲುವುಗಳನ್ನು ಕಂಬನಿಯಿಂದಲ್ಲವೇ ಕಿಲುಬೆದೆಯ ತೊಳೆಯುವುದು? ನಿಚ್ಚಳ ನೋಡಬೇಕಿನ್ನು ಹರಿದೆಲ್ಲ ಪೊರೆಗಳನ್ನು ಹಸಿದಿರುವೆನೆಂದು ಸಿಕ್ಕಿದ್ದನ್ನೆಲ್ಲ ತಿನ್ನಲಾದೀತೇನು ಉಳಿಸಿಕೊಳ್ಳಲೇಬೇಕು ನೀನು ಕೊಟ್ಟ ಒರೆಗಳನ್ನು ಬಿದ್ದಾಗಲೂ ನಾನು ನಾನೇ ಮರೆಯಬಾರದು, ಸಖೀ ಉಳಿಸುವೆ ಉಡುಗಲು ಬಿಡದೆ ಎದೆಯ ಪಿಸುದನಿಗಳನ್ನು =============
ಅನುವಾದ ಸಂಗಾತಿ
ಮೂಲ: ಜಾವಿದ್ ಆಖ್ತರ್.. ಅನುವಾದ ಸಂಗೀತ ಶ್ರೀಕಾಂತ ಯಾವಗಲೆಲ್ಲ ನೋವಿನ ಮೋಡ ಹರಡುತ್ತದೆಯೊ, ಯಾವಗಲೆಲ್ಲ ಬೇಸರದ, ನೆರಳು ಹರಡುತ್ತದೆಯೋ, ಯಾವಗಲೆಲ್ಲಾ ಕಣ್ಣಿಂದ ಹನಿ ರೆಪ್ಪೆಯ ಬಳಿ ಬರುತ್ತದೆಯೋ, ಯಾವಗಲೆಲ್ಲಾ ಏಕಾಂತದಿಂದ ಹೃದಯ ಹೆದರುತ್ತದೆಯೋ, ಆಗೆಲ್ಲ ನಾನು ನನ್ನ ಹೃದಯವನ್ನು ಸಂತೈಸಿದ್ದೆನೆ ಏ ಹೃದಯವೇ ನೀನೆಕೆ ಹೀಗೆ ಆಳುತ್ತಿದ್ದಿಯಾ ಜಗತ್ತಿನಲ್ಲಿ ಎಲ್ಲರಿಗೂ ಹೀಗೆ ಆಗುತ್ತದೆ. =======
ಸ್ವಾತ್ಮಗತ
ಡಾ.ಕಾಳೇಗೌಡ ನಾಗವಾರ ಅಕ್ಷರಲೋಕದ ಮಹಾತಪಸ್ವಿ ಕೆ.ಶಿವು ಲಕ್ಕಣ್ಣವರ ಅಕ್ಷರಲೋಕದ ಮಹಾತಪಸ್ವಿ ಡಾ.ಕಾಳೇಗೌಡ ನಾಗವಾರರು..! ಮೊನ್ನೆ ನನ್ನ ಪುಸ್ತಕದ ಸಂದೂಕದಲ್ಲಿ ಏನೋ ಒಂದು ಪುಸ್ತಕ ಹುಡುಕುತ್ತಿದ್ದೆ. ಆಗ ಅಕಸ್ಮಾತ್ತಾಗಿ ನನ್ನ ನೆಚ್ಚಿನ ಬರಹಗಾರ ಕಾಳೇಗೌಡ ನಾಗವಾರರ ‘ಬೆಟ್ಟಸಾಲು ಮಳೆ’ ಕತಾ ಸಂಕಲನ ಕೈಗೆಟುಕಿತು. ಆ ಕತಾ ಸಂಕಲನವನ್ನು ಸಮಾಜವಾದಿ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾಗಿದ್ದ ಎನ್. ಎನ್. ಕಲ್ಲಣ್ಣನವರ ಮಗ, ನನ್ನ ಆತ್ಮೀಯ ಗೆಳೆಯನಾದ ಚಿತ್ತರಂಜನ ಕಲ್ಲಣ್ಣನವರ (ಈ ಚಿತ್ತರಂಜನ ಕಲ್ಲಣ್ಣನವರ ಈಗಿಲ್ಲ) ಕೊಟ್ಟಿದ್ದನು. ಅದನ್ನು ಹಾಗೇ […]
ಕಾವ್ಯಯಾನ
ಆತನೊಲವು ಆತ್ಮ ಭಲವು ಜಗವ ಪ್ರೀತಿಸಿದ ಸಂತನ ಹುಟ್ಟು ಹಬ್ಬದ ಶುಭಾಷಯಗಳು ಸತ್ಯಮಂಗಲ ಮಹಾದೇವ ಕೇಳುತ್ತೀರಿ ನೀವು ನೀನು ಯಾರು ಎಂದು ಉತ್ತರಿಸಿದರೆ ಸಾಕು ನಿಮ್ಮದೇ ಉಯಿಲು ಲೋಕದ ಪಡಸಾಲೆಯಲ್ಲಿ ಹೇಳುವುದನ್ನು ಹೇಳಲೇ ಬೇಕು ಕಲ್ಲು ಮುಳ್ಳಿನ ಹಾದಿಯಲಿ ಮುಳ್ಳಿನ ಕಿರೀಟ ಹೊತ್ತ ಸಂತ ಮೈ ತುಂಬಾ ರಕ್ತದ ಧಾರೆ ಹರಿಯುತ್ತಿರಲು ಪ್ರೇಮದ ಸಾಕ್ಷಿ ಈ ರಕುತವೆಂದ ತಿವಿದವರ ತಿಳುವಳಿಕೆಯ ಕ್ಷಮಿಸಿರೆಂದ ಸಂಕಟಪಡುವವರ ಆತ್ಮ ಸಖನಾದ ನನ್ನೊಳಗೆ ನನ್ನನ್ನು ತಿಳಿಸಿದ ನೀನು ಯಾರು ಯಾವ ಊರು, ಯಾರಮಗ, […]
ಕಾವ್ಯಯಾನ
” ಹಡೆದವ್ವ” ನಿರ್ಮಲಾ ಅಪ್ಪಿಕೋ ನನ್ನ ನೀ ಹಡೆದವ್ವ ಮಲಗಿಸಿಕೊ ಮಡಿಲಲಿ ನನ್ನವ್ವ ನಿನ್ನ ಮಡಿಲಲಿ ಮಲಗಿ ಜಗವ ಮರೆವೆನವ್ವ ನೀ ಮಮಕಾರದ ಗಣಿಯೇ ಕೇಳವ್ವ ಜಗದಲಿ ಸಾಟಿಯೇ ಇಲ್ಲ ನಿನ್ನೊಲವಿಗೆ ದಾರಿದೀಪವಾದೆ ನನ್ನೀ ಬದುಕಿಗೆ ಇನ್ನೊಂದು ಹೆಸರೇ ನೀನಾದೆ ಕರುಣೆಗೆ ಅಮ್ಮ ಎಂದರೆ ಎಂತ ಆನಂದ ಮನಸಿಗೆ ಭೂಮಿಯ ಮೇಲೆ ನೀ ತ್ಯಾಗದ ಪ್ರತೀಕ ನೀನಿಲ್ಲದೆ ಇಲ್ಲ ಈ ಲೋಕ ನಿನ್ನ ಮಮಕಾರವದು ಬೆಲ್ಲದ ಪಾಕ ನೀನೇ ಸರ್ವಸ್ವವೂ ನನಗೆ ಕೊನೆತನಕ ವರವಾಗಿ ನೀಡಿದೆ ನನಗೆ […]
ಕಾವ್ಯಯಾನ
ಇವಳು_ಅವಳೇ ! ಹರ್ಷಿತಾ ಕೆ.ಟಿ. ಅಲಂಕಾರದ ಮೇಜಿಗೆ ಹಿಡಿದಿದ್ದ ಧೂಳು ಹೊಡೆಯುತ್ತಿದ್ದ ನನ್ನ ಶೂನ್ಯ ದೃಷ್ಟಿಗೆ ಅಚಾನಕ್ಕಾಗಿ ಕಂಡಳಿವಳು ನೀಳ್ಗನ್ನಡಿಯ ಚೌಕಟ್ಟಿನೊಳಗೆ ಒತ್ತಿ ತುಂಬಿಸಿದಂತೆ ಉಸಿರು ಕಟ್ಟಿಕೊಂಡು ನಿಂತಿದ್ದವಳು ಬೆಚ್ಚಿ ಹಿಂಜಗಿದು ಕ್ಷಣಗಳೆರೆಡು ಗುರುತು ಸಿಗದೆ ಕಣ್ಣು ಕಿರಿದು ಮಾಡಿ ದಿಟ್ಟಿಸಿದೆ ಅವಳೂ ಚಿಕ್ಕದಾಗಿಸಿದಳು ಗುಳಿ ಬಿದ್ದ ಎರಡು ಗೋಲಿಗಳನು ಅರೇ.. ನಾನೇ ಅದು! ಎಷ್ಟು ಬದಲಾಗಿದ್ದೇನೆ? ನಂಬಲಾಗದಿದ್ದರೂ ಕನ್ನಡಿಯ ಮೇಲೆ ಬೆರಳಾಡಿಸಿ ಅವಲೋಕಿಸಿದೆ ಗುಳಿಬಿದ್ದ ಕೆನ್ನೆಗಳಲಿ ಈಗ ನಕ್ಷತ್ರಗಳಿಲ್ಲ ಬರೇ ಕಪ್ಪುಚುಕ್ಕೆಗಳು, ಮೊಡವೆಯ ತೂತುಗಳು ಅವರು […]
ರೈತ ದಿನಾಚರಣೆ
ನೇಗಿಲಯೋಗಿ ಎನ್.ಶಂಕರರಾವ್ ರೈತರ ದಿನಾಚರಣೆ ಅಂಗವಾಗಿ ವಿಷಯ. ನೇಗಿಲ ಯೋಗಿ ಸುಮಾರು ಶೇಕಡಾ ೬೦ ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ , ಹಳ್ಳಿ ಹಳ್ಳಿಗಳಲ್ಲಿ ನಮ್ಮ ರೈತರು ತಮ್ಮ ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ದೇಶದ ಆಹಾರ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಪರಿಶ್ರಮ ಪಡುತ್ತಿದ್ದಾರೆ. ಡಾ. ಸ್ವಾಮಿನಾಥನ್ ಅವರು ಹಸಿರು ಕ್ರಾಂತಿಯ ಹರಿಕಾರ. ಆಹಾರ ಸಮಸ್ಯೆ ಎದುರಿಸುತ್ತಿರುವ ಕಾಲದಲ್ಲಿ, ಹಸಿರು ಕ್ರಾಂತಿಯಿಂದ ಸುಭಿಕ್ಷವಾಯಿತು. ಭತ್ತ, ಗೋಧಿ ಬೆಳೆಯುವ ಯೋಜನೆ ಜಾರಿಗೆ ಬಂದು, ನಂತರ, ದ್ವಿದಳ ಧಾನ್ಯಗಳು ಮತ್ತು […]
ಅನುವಾದ ಸಂಗಾತಿ
ಮೂಲ: ಅರುಣ್ ಕೊಲ್ಜಾಟ್ಕರ್ ಮಹಾರಾಷ್ಟ್ರದ ದ್ವಿಭಾಷಾ ಕವಿ ಅನುವಾದ:ಕಮಲಾಕರ ಕಡವೆ ಮುದುಕಿ ಮುದುಕಿಅಂಗಿ ಅಂಚನು ಹಿಡಿದುಬೆನ್ನು ಬೀಳುತ್ತಾಳೆ. ಅವಳು ಬೇಡುತ್ತಾಳೆ ಎಂಟಾಣೆಕುದುರೆ ಲಾಳದ ಮಂದಿರ ನಿಮಗೆತೋರಿಸುವಳಂತೆ ನೀವದನ್ನು ಅದಾಗಲೇ ನೋಡಿದ್ದೀರಿಅಂದರೂ ಕುಂಟುತ್ತ ಬರ್ತಾಳೆ ಹಿಂದೆಬಿಗಿಯಾಗಿ ಹಿಡಿದು ಅಂಗಿ ಅಂಚನು ನಿಮಗೆ ಹೋಗಗೊಡುವುದಿಲ್ಲ ಅವಳುಗೊತ್ತಲ್ಲ, ಮುದುಕಿಯರ ಪರಿಹತ್ತಿ ಹೂವಂತೆ ಅಂಟಿಕೊಳ್ಳುವರು ತಿರುಗಿ ಎದುರಿಸುವಿರಿ ನೀವುಅವಳನ್ನು, ಈ ಆಟ ಮುಗಿಸುವಖಡಾಖಂಡಿತ ನಿಲುವಲ್ಲಿ ಅವಳಾಗ ಅನ್ನುತ್ತಾಳೆ: “ಇನ್ನೇನುಮಾಡಿಯಾಳು ಮುದುಕಿಯೊಂಟಿಇಂಥ ದರಿದ್ರ ಕಲ್ಲುಗುಡ್ಡಗಳಲ್ಲಿ?” ನೀವು ನೋಡುತ್ತೀರಿ. ನಿರಾಳ ಆಕಾಶಅವಳ ಗುಂಡು ಕೊರೆದ ತೂತಿನಂತಹಕಣ್ಣುಗಳ […]
ಪ್ರಬಂಧ
ಒಂದು ವಿಳಾಸದ ಹಿಂದೆ ಸ್ಮಿತಾ ಅಮೃತರಾಜ್. ಸಂಪಾಜೆ. ವಿಳಾಸವಿಲ್ಲದವರು ಈ ಜಗತ್ತಿನಲ್ಲಿ ಯಾರಾದರೂ ಇರಬಹುದೇ?. ಖಂಡಿತಾ ಇರಲಾರರು ಅಂತನ್ನಿಸುತ್ತದೆ. ಇಂತಹವರ ಮಗ, ಇಂತಹ ಊರು,ಇಂತಹ ಕೇರಿ,ಇಂತಹ ಕೆಲಸ..ಹೀಗೆ ಇಂತಹವುಗಳ ಹಲವು ಪಟ್ಟಿ ಹೆಸರಿನ ಹಿಂದೆ ತಾಕಿಕೊಳ್ಳುತ್ತಾ ಹೋಗುತ್ತದೆ. ವಿಳಾಸವೊಂದು ನಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆಯೆಂಬ ಮಾತನ್ನು ನಾವ್ಯಾರು ಅಲ್ಲಗಳೆಯುವ ಹಾಗಿಲ್ಲ. ಯಾವುದೇ ಆಮಂತ್ರಣ ಪತ್ರವಾಗಲಿ, ದಾಖಲೆಗಳಾಗಲಿ ವಿಳಾಸವಿಲ್ಲದಿದ್ದರೆ ಅಪೂರ್ಣವಾಗುತ್ತದೆ. ಪರಿಪೂರ್ಣ ವಿಳಾಸವಂತೂ ಇವತ್ತಿನ ಆಧುನಿಕ ಯುಗದ ಜರೂರು ಕೂಡ. ನಮಗೆಲ್ಲ ಗೊತ್ತಿರುವಂತೆ ಅಕ್ಷರಾಭ್ಯಾಸ ಮಾಡಿ ಶಾಲೆ […]