ಅನುವಾದ ಸಂಗಾತಿ

Image result for images of old woman beggar in paintings

ಮೂಲ: ಅರುಣ್ ಕೊಲ್ಜಾಟ್ಕರ್

ಮಹಾರಾಷ್ಟ್ರದ ದ್ವಿಭಾಷಾ ಕವಿ

Image may contain: 1 person

ಅನುವಾದ:ಕಮಲಾಕರ ಕಡವೆ

ಮುದುಕಿ


ಮುದುಕಿ
ಅಂಗಿ ಅಂಚನು ಹಿಡಿದು
ಬೆನ್ನು ಬೀಳುತ್ತಾಳೆ.

ಅವಳು ಬೇಡುತ್ತಾಳೆ ಎಂಟಾಣೆ
ಕುದುರೆ ಲಾಳದ ಮಂದಿರ ನಿಮಗೆ
ತೋರಿಸುವಳಂತೆ

ನೀವದನ್ನು ಅದಾಗಲೇ ನೋಡಿದ್ದೀರಿ
ಅಂದರೂ ಕುಂಟುತ್ತ ಬರ್ತಾಳೆ ಹಿಂದೆ
ಬಿಗಿಯಾಗಿ ಹಿಡಿದು ಅಂಗಿ ಅಂಚನು

ನಿಮಗೆ ಹೋಗಗೊಡುವುದಿಲ್ಲ ಅವಳು
ಗೊತ್ತಲ್ಲ, ಮುದುಕಿಯರ ಪರಿ
ಹತ್ತಿ ಹೂವಂತೆ ಅಂಟಿಕೊಳ್ಳುವರು

ತಿರುಗಿ ಎದುರಿಸುವಿರಿ ನೀವು
ಅವಳನ್ನು, ಈ ಆಟ ಮುಗಿಸುವ
ಖಡಾಖಂಡಿತ ನಿಲುವಲ್ಲಿ

ಅವಳಾಗ ಅನ್ನುತ್ತಾಳೆ: “ಇನ್ನೇನು
ಮಾಡಿಯಾಳು ಮುದುಕಿಯೊಂಟಿ
ಇಂಥ ದರಿದ್ರ ಕಲ್ಲುಗುಡ್ಡಗಳಲ್ಲಿ?”

ನೀವು ನೋಡುತ್ತೀರಿ. ನಿರಾಳ ಆಕಾಶ
ಅವಳ ಗುಂಡು ಕೊರೆದ ತೂತಿನಂತಹ
ಕಣ್ಣುಗಳ ಮೂಲಕ.

ನೀವು ನೋಡುತ್ತಲಿರುವಂತೇ
ಅವಳ ಕಣ್ಣುಗಳ ಸುತ್ತ ಸುರುವಾಗುವ
ಸುಕ್ಕುಗಳು ಪಸರುತ್ತವೆ ಚರ್ಮದಾಚೆಗೂ

ಗುಡ್ಡಗಳು ಬಿರುಕು ಬಿಟ್ಟು
ಮಂದಿರಗಳು ಬಿರುಕು ಬಿಟ್ಟು
ಆಕಾಶ ಕಳಚಿ ಬೀಳುತ್ತದೆ

ಗ್ಲಾಸು ಬಿದ್ದು ಚೂರಾಗುವ ಗೌಜಲ್ಲಿ
ಏಕಾಕಿ ನಿಂತ
ಒಡೆಯಲಾಗದ ಮುದಿ ಜೀವ

ಹಾಗೂ ನೀವಾಗಿರುತ್ತೀರಿ
ಅವಳ ಕೈಯಲ್ಲಿನ
ಚಿಲ್ಲರೆ ನಾಣ್ಯ.

========

ಆಂಗ್ಲಮೂಲ:

An Old Woman

An old woman grabs
hold of your sleeve
and tags along.

She wants a fifty paise coin.
She says she will take you
to the horseshoe shrine.

You’ve seen it already.
She hobbles along anyway
and tightens her grip on your shirt.

She won’t let you go.
You know how old women are.
They stick to you like a burr.

You turn around and face her
with an air of finality.
You want to end the farce.

When you hear her say,
‘What else can an old woman do
on hills as wretched as these?’

You look right at the sky.
Clear through the bullet holes
she has for her eyes.

And as you look on
the cracks that begin around her eyes
spread beyond her skin.

And the hills crack.
And the temples crack.
And the sky falls

with a plateglass clatter
around the shatter proof crone
who stands alone.

And you are reduced
to so much small change
in her hand.

=======

Leave a Reply

Back To Top