ಸ್ವಾತ್ಮಗತ

ಸ್ವಾತ್ಮಗತ

ರೈತ ದಿನಾಚರಣೆ ಕೆ.ಶಿವು ಲಕ್ಕಣ್ಣವರ್ ಬೆವರು ಕಂಬನಿ ರಕುತವ ಸುರಿಸಿ, ನೆಲವನು ತಣಿಸಿ, ಕೆಸರಿನಿಂದ ಅಮೃತಕಲಶನೆತ್ತಿ ಕೊಡುತಿರುವ ರೈತನ ದಿನಾಚರಣೆ ಇಂದು..! ಇಂದು ಡಿಸೆಂಬರ್ 23. ಅಂದರೆ ರೈತ ದಿನಾಚರಣೆ. ಈ ದಿನಾಚರಣೆ ನಮ್ಮೆಲ್ಲರ ಊಟವನ್ನು ಮಾಡಿಸುತ್ತಿರುವ ರೈತನ ನೆನೆ, ನೆನೆದು ಉಣ್ಣುವ ದಿನ… ಆ ನಿಮಿತ್ಯ ರೈತನನ್ನು ನೆನೆವ ಲೇಖನವಿದು… ಗದ್ದೆ ಕೆಸರನು ಕುಡಿದು ಕಾಡು ಮುಳ್ಳನು ಕಡಿದು, ಮುಂಜಾನೆಯಿಂದ ಸಂಜೆಯವರೆಗೆ ದುಡಿದುಡಿದು ಚಳಿಯೋ ಮಳೆಯೋ ಬಿಸಿಲೋ ಬೇಗೆಯಲ್ಲವ ಸಹಿಸಿ, ಬೆವರು ಕಂಬನಿ ರಕುತವ ಸುರಿಸಿ, […]

ಕಾವ್ಯಯಾನ

ಥೇಟ್ ನಿನ್ನ ಹಾಗೆ! ಸಂತೆಬೆನ್ನೂರು ಫೈಜ್ನಾಟ್ರಾಜ್ ಅದೇ ಹಾಡು ತುಟಿಗೆ ಬಂದು ವಾಪಾಸಾಯಿತು ಏಕೋ ಏನೋ ಹೀಗೆ ರಸ್ತೆಯ  ಕೊನೇ ತಿರುವಲ್ಲಿ ಕಾದಿರು ಈಗ ಬಂದೆ ಎಂದು ಮಾಯವಾದ ಥೇಟ್ ನಿನ್ನ  ಹಾಗೆ! * ಕಾಫಿಯ ಘಮವೋ ಮುಡಿದ ಮಲ್ಲಿಗೆ ಗಂಧವೋ… ಉಳಿದ ಮಾತುಗಳು ಹೇಳಲಾರದೇ ಖಾಲಿಯಾದವು…. ನಿನ್ನಂತೆ! * ನೂರು ಮಾತುಗಳು ಆಡಿದರೇನು ಬರಿದೆ; ಚಹ ಪುಡಿಯಿಲ್ಲದ ಚಹ ಕುಡಿದಂತೆ ಬರಿದೆ! * ಮುಳ್ಳ ಬೆನ್ನ ಮೇಲೆಯೇ ಗುಲಾಬಿ ಕೆಸರ ಸೊಂಟದ ಪಕ್ಕದಲ್ಲೇ ಕಮಲ ಮಣ್ಣ […]

ಕಾವ್ಯಯಾನ

ಗಝಲ್ ಅರುಣ್ ಕೊಪ್ಪ ನೀನು ನಗುತ್ತಿಲ್ಲ,ತಾರೆಯಾ ಹೊದ್ದು ಭೂಪನಂತಿದ್ದರೂ ಅಹಂಕಾರವಿಲ್ಲದ ನಿಗರ್ವಿ ನೀನು ನಿನಗಾಗಿ ಅಲ್ಲವೆ ನೀನು ಕಪ್ಪಾದ ಪಂಜರದಲ್ಲಿ ಮೌನ ಸಾಕಿ ಬೀಗುವದಿಲ್ಲ ಬಡಾಯಿ ಕೊಚ್ಚೊ ಬೊಗಳೇದಾಸನಾ ನೀನು ನಿನಗಾಗಿ ಅಲ್ಲವೆ ಮುಳ್ಳು ಮೈಗೆ ಆವರಿಸಿದರೂ ಮೊಗ ನಗು ಮೊಗ್ಗು ಹೂವುಗಳು ಕೆಲ ತಾವುಗಳಲಿ ಸುರಸುಂದರಿ ನೀನು ನಿನಗಾಗಿ ಅಲ್ಲವೆ ಸುತ್ಮೂರು ಹಳ್ಳಿಗಳ ಹಿಶೆ, ನ್ಯಾಯಕೆ ಜಗರಿ ಕೂರುವ ಒಂಟಿ ಸಲಗದಂತೆ ಬೇಕು ಬೇಡಗಳ ನುಂಗಿ, ತಂಪು ಚೆಲ್ಲುವ ತಂಗಾಳಿ ಆಲ ನೀನು ನಿನಗಾಗಿ ಅಲ್ಲವೆ […]

ಸ್ವಾತ್ಮಗತ

ಚಿಂದೋಡಿ ಲೀಲಾ ನಾಟಕರಂಗದ ಒಂದು ಸಾಹಸ ಪಯಣ ಕೆ.ಶಿವು ಲಕ್ಕಣ್ಣವರ್ ಸುಮಾರು ಎಂಟು ದಶಕಗಳ ಇತಿಹಾಸವುಳ್ಳ ಕನ್ನಡ ವೃತ್ತಿ ನಾಟಕ ಮಂಡಲಿಯ ಒಡತಿ. ಶತಮಾನೋತ್ಸವ, ಸಹಸ್ರಮಾನೋತ್ಸವಗಳನ್ನಾಚರಿಸಿದ ನಾಟಕಗಳ ಪ್ರಧಾನ ಅಭಿನೇತ್ರಿ ಚಿಂದೋಡಿ ಲೀಲಾ ಅವರು… ಕನ್ನಡ ವೃತ್ತಿರಂಗ ಭೂಮಿಯಲ್ಲಿ ಇನ್ನೂ ಸರಿಗಟ್ಟಲಾಗದ ದಾಖಲೆಗಳನ್ನು ಸ್ಥಾಪಿಸಿದ ಸಾಹಸಿ. ಜನ್ಮ ದಾವಣಗೆರೆಯಲ್ಲಿ 1941ರಲ್ಲಿ… ತಂದೆ ಚಿಂದೋಡಿ ವೀರಪ್ಪನವರು. ಪ್ರಖ್ಯಾತ ಗಾಯಕರು, ನಟರೂ ಆಗಿದ್ದವರು. ತಾಯಿ ಶಾಂತಮ್ಮ ಗೃಹಿಣಿಯಾಗಿದ್ದರು… ಚಿಂದೋಡಿ ವೀರಪ್ಪ ದಾವಣಗೆರೆಯಲ್ಲಿ ಸ್ಥಾಪಿಸಿದ್ದ ‘ಶ್ರೀಗುರು ಕರಿಬಸವ ರಾಜೇಂದ್ರ ನಾಟಕ’ ಮಂಡಳಿ […]

ಅನುವಾದ ಸಂಗಾತಿ

ಮೂಲ-ಜಯಂತ ಮಹಾಪಾತ್ರ ಒರಿಸ್ಸಾದ ಭಾರತೀಯ ಆಂಗ್ಲ ಕವಿ ಅನುವಾದ–ಕಮಲಾಕರ ಕಡವೆ “ಪುರಿಯಲ್ಲಿ ಬೆಳಗು” ಕೊನೆಯಿರದ ಕಾಗೆಗಲಭೆಪವಿತ್ರ ಮರಳಲ್ಲಿ ತಲೆಬುರುಡೆಯೊಂದುಹಸಿವಿನೆಡೆಗೆ ವಾಲಿಸುತ್ತದೆ ಖಾಲಿ ದೇಶವನ್ನು. ಬಿಳಿತಳೆದ ವಿಧವೆಯರುತಮ್ಮ ಬಾಳಿನ ಮಧ್ಯದಾಚೆಮಹಾಮಂದಿರದೊಳಗೆ ಹೊಗಲು ಕಾದಿದ್ದಾರೆ. ಅವರ ವಿರಕ್ತ ಕಣ್ಣುಗಳುಬಲೆಯಲ್ಲಿ ಸಿಕ್ಕಿಬಿದ್ದವರಂತೆ ದಿಟ್ಟಿಸುತ್ತವೆ,ಬೆಳಬೆಳಗ್ಗೆ ಶ್ರದ್ಧೆಯ ಬೆಳಗಿನೆಳೆಗೆ ಜೋತುಬಿದ್ದು. ನಿತ್ರಾಣ ಮುಂಜಾನೆ ಬೆಳಕಿಗೆ ಬಿದ್ದಿವೆಒಂದನಿನ್ನೊಂದು ಆತಿರುವ ಪಾಳು ತೊನ್ನುಭರಿತ ಚಿಪ್ಪುಗಳು,ಹೆಸರಿರದೆ ಕುಗ್ಗಿಹೋದ ಮುಖಗಳ ಮುಂದೆ, ತಟ್ಟನೆ ನನ್ನ ತೊಗಲೊಳಗಿಂದ ಹೊರಬೀಳುವ ಬಿಕ್ಕುಸೇರುತ್ತದೆ ಏಕಾಕಿ ಮಂಕು ಚಿತೆಯೊಂದರ ಹೊಗೆಯನನ್ನ ಮುದಿ ಅಮ್ಮನ ಕವಿಯುವ ಧಗೆಯ: […]

ಕಾವ್ಯಯಾನ

ಮೌನದ ಹಾಡು ದೇವು ಮಾಕೊಂಡ, ಸಿಂದ್ಗಿ ಇಳಿಸಂಜೆಯ ಒಬ್ಬಂಟಿತನದಲಿ ಮೈನೆರೆದು ನಿಂತ ಮುಳ್ಳುಕಂಟಿಗಳ ನಡುವೆ ಬೆಣ್ಣೆಯುಂಡೆಯಾಗಿದ್ದೇನೆ ಹೆಪ್ಪುಗಟ್ಟಿವೆ ಕ್ರೀಯೆಗಳು ಬಂಡೆಗಲ್ಲಿನ ಹಾಗೆ ಪತರಗುಟ್ಟುತ್ತಿವೆ ಭಾವಗಳು ಚಪ್ಪರದಂತೆ ನಿಷ್ಕ್ರೀಯಗೊಂಡಿದೆ ಚಲನೆ ಸೀಮೆಗಲ್ಲಿನಷ್ಟು ಮಧು ಕುಡಿದು ಎದೆಚುಚ್ಚುವ  ರಣಹದ್ದುಗಳದ್ದೇ ಕಾರುಬಾರುವಿಲ್ಲಿ ಅದಕ್ಕೆಂದೆ ಹೂವುಗಳು ರಾತ್ರಿಯೆದ್ದು ಹಗಲು ಮಲಗುತ್ತವೆ ಕರಾಳ ಬೆಳಕಿಗಂಜಿ ಹೆಪ್ಪುಗಟ್ಟಿದ ಬೆಳಕಿಗೆ ನೆರಳುಗಳಾಡಿಸುವ  ಹಗಲು ರಾತ್ರಿಗಳ ಪಂಜೆಗಳು ವಿಭೇದಿಸುವ ಕಪ್ಪು ನೆಲವೇ ರೂಪರೇಖೆ ನಮ್ಮೊಳಗಿನ ಮೌನದ ಹಾಡೆ ಸುಖದ ಹೆರಿಗೆ

ಅನುವಾದ ಸಂಗಾತಿ

ಲೋರ್ನ್ ಗುಡಿಸನ್(1947

ಜಮೈಕಾ ದೇಶದ ಕವಿಯಿತ್ರಿ

ಕೆರಿಬಿಯನ್ ಕಾವ್ಯ

ಅನುವಾದ-ಕಮಲಾಕರ ಕಡವೆ

ಗಝಲ್

ಗಝಲ್ ಸುಜಾತ ರವೀಶ್ ಬಾಳಬಾನಲಿ ಹೊಂಬೆಳಕಾಗಿ ಬಂದೆ ಏನಿರಲಿಲ್ಲ ಕಾರಣ ಇಂದೀಗ ಅಮಾವಾಸ್ಯೆಯ ಕಗ್ಗತ್ತಲು ತಿಳಿಯುತ್ತಿಲ್ಲ ಕಾರಣ ಜೀವನವನದಿ ಅರಳಿ ನಗುತ್ತಿದ್ದವು ಸುಂದರ ಹೂಗಳು ಈಗೆಲ್ಲಾ ಬರೀ ಬೋಳು ಬರಡು ಅರಿಯಲಾಗುತ್ತಿಲ್ಲ ಕಾರಣ ಜೀವ ವೀಣೆ ಮಿಡಿದು ಅಂದು ಹೊರಟಿತ್ತು ಒಂದು ಸುಶ್ರಾವ್ಯ ಗಾನ ತಂತಿ ಏಕೋ ಮುರಿದು ಅಪಸ್ವರ ಕೇಳಲಾಗುತ್ತಿಲ್ಲ ಕಾರಣ ಹೊಸ ಹೊಸ ಆಸೆ ತರಂಗಗಳು ಗಗನದೆತ್ತರ ವಿಸ್ತಾರ ಅಗಲಿಕೆಯ ಬಿರುಗಾಳಿ ಏಕೆ ಹೇಳಲಾಗುತ್ತಿಲ್ಲ ಕಾರಣ ಹಂಬಲಗಳ ನವ ಕನಸುಗಳು ಮೂಡಿಸಿದ್ದವು ಚಿತ್ತಾರ ದುಃಖಿತೆ […]

ಕಾವ್ಯಯಾನ

ಪುಣ್ಯವಂತೆ… ಅವ್ಯಕ್ತ ಕಾಣಲಿರುವ ಒಡನಾಟದ ಚುಕ್ಕಿಯಾಗಿ ಬಂದಳು ಕನಸುಗಳ ಹೊತ್ತು ನನಸ ಮಾಡುವ ಬಿರುಸಿನಲಿ ಮಿಡಿಯೋ ಮನಸುಗಳಿಗೆ ಮಿಲನದ ಔತಣವನಿಟ್ಟು ಮುಗಿಲೆತ್ತರದ ಭಾವಗಳ ಮುಟ್ಪಿಬರುವ ರೆಕ್ಕೆ ಹೊತ್ತು ನೋವುಗಳ ನುಂಗಿ ನಗುತ ನಲಿಸುವ ಕಲೆಯೇ ಸುಂದರ ಅಂತ್ಯದೆಡೆಗೆ ಹೂಹಾಸಿ ನಲಿಯುತ ಹರಿಯುವುದೇ ಸುಂದರ ತುಸು ಕ್ಷಣದ ಹನಿಗಳಲಿ ,ಮೈಮರೆತು ಲೀನಳಾಗಿ.. ನಿನ್ನಲ್ಲೆಲ್ಲೋ ನನ್ನ ಕಂಡೆ ನನ್ನಲ್ಲೆಲ್ಲೋ ನಿನ್ನ ಕಂಡೆ. ಕಣ್ರೆಪ್ಪೆ ಮಿಟುಕಿಸುವಷ್ಟರಲ್ಲಿ ಹೇಳದೇ ಮಾಯವಾಗುವವರಲ್ಲಿ, ಹೇಳಿಹೋದ ಸೌಂದರ್ಯ ಕನಿಕೆ.. ಸಾಧನೆಯ ಪುಟಗಳಲ್ಲಿ ಮಿನುಗುನಕ್ಷತ್ರ.. ನೀನಿಲ್ಲದೆ ನೀನಿಲ್ಲಿರುವೆ, ನೀನಳಿದರು […]

ಅನಿಸಿಕೆ

ಸಿಂಪಿ’ಲ್ಲಾಗ್ ಒಂದು ಲವ್ ಸ್ಟೋರಿ ಶ್ರೀವತ್ಸ ಜೋಶಿ ಅದು ಸ್ವಾತಿ ಮಳೆಯೇ ಇರಬೇಕು! ನಿನ್ನ ಎದೆಯಿಂದ ಜಾರಿದ ಹನಿಯೊಂದು ನನ್ನ ತುಟಿ ಸಿಂಪಿಯ ಸೇರಿ ಈಗ- ಮುತ್ತಾಗಿದೆ ! @ಡಾ.ಗೋವಿಂದ ಹೆಗಡೆ ‘ಸಿಂಪಿ’ಲ್ಲಾಗ್ ಒಂದು ಲವ್ ಸ್ಟೋರಿ ಹುಬ್ಬಳ್ಳಿಯಲ್ಲಿ ಅರಿವಳಿಕೆ ತಜ್ಞರಾಗಿರುವ ಡಾ. Govind Hegdeಯವರು ಒಬ್ಬ ಸೂಕ್ಷ್ಮಮನಸ್ಸಿನ, ಕವಿಹೃದಯದ ಕವಿ. ಪ್ರಚಾರ ಬಯಸದ ಪ್ರತಿಭಾವಂತ. ಕನ್ನಡದಲ್ಲಿ ಹನಿಗವನಗಳನ್ನು, ಕಬೀರನ ‘ದೋಹಾ’ಗಳಂತಿರುವ ದ್ವಿಪದಿಗಳನ್ನು, ಪೂರ್ಣಪ್ರಮಾಣದ ಕವಿತೆಗಳನ್ನೂ ಬರೆಯುತ್ತಿರುತ್ತಾರೆ. ನೂರಕ್ಕೂ ಹೆಚ್ಚು ಕನ್ನಡ ಗಜ಼ಲ್‌ಗಳನ್ನು ಬರೆದಿದ್ದಾರೆ. ಅವುಗಳನ್ನು ಯಾರಾದರೂ […]

Back To Top