” ಹಡೆದವ್ವ”
ನಿರ್ಮಲಾ
ಅಪ್ಪಿಕೋ ನನ್ನ ನೀ ಹಡೆದವ್ವ
ಮಲಗಿಸಿಕೊ ಮಡಿಲಲಿ ನನ್ನವ್ವ
ನಿನ್ನ ಮಡಿಲಲಿ ಮಲಗಿ ಜಗವ ಮರೆವೆನವ್ವ
ನೀ ಮಮಕಾರದ ಗಣಿಯೇ ಕೇಳವ್ವ
ಜಗದಲಿ ಸಾಟಿಯೇ ಇಲ್ಲ ನಿನ್ನೊಲವಿಗೆ
ದಾರಿದೀಪವಾದೆ ನನ್ನೀ ಬದುಕಿಗೆ
ಇನ್ನೊಂದು ಹೆಸರೇ ನೀನಾದೆ ಕರುಣೆಗೆ
ಅಮ್ಮ ಎಂದರೆ ಎಂತ ಆನಂದ ಮನಸಿಗೆ
ಭೂಮಿಯ ಮೇಲೆ ನೀ ತ್ಯಾಗದ ಪ್ರತೀಕ
ನೀನಿಲ್ಲದೆ ಇಲ್ಲ ಈ ಲೋಕ
ನಿನ್ನ ಮಮಕಾರವದು ಬೆಲ್ಲದ ಪಾಕ
ನೀನೇ ಸರ್ವಸ್ವವೂ ನನಗೆ ಕೊನೆತನಕ
ವರವಾಗಿ ನೀಡಿದೆ ನನಗೆ ಈ ಜನುಮವ
ನಿನ್ನ ಋಣವ ನಾನೆಂದೂ ತೀರಿಸೆನವ್ವ
ನನ್ನ ಅಳುವಿಗೆ ಸದಾ ನಗುವಾದೆ ನನ್ನವ್ವ
ಏಳೇಳು ಜನ್ಮಕೂ ನೀನೇ ನನ್ನ ಹಡೆದವ್ವ.