ಪುಸ್ತಕ ಸಂಭ್ರಮ

ಪುಸ್ತಕ ಸಂಭ್ರಮ

ಪುಸ್ತಕ ಬಿಡುಗಡೆ ಕಾವ್ಯಕಂದೀಲು ಬಳಗ,ಬಾಗಲಕೋಟೆ ಹಾಗೂ ಕನ್ನಡಸಾಹಿತ್ಯಪರಿಷತ್ತು,ಬಾಗಲಕೋಟೆ ಹಾಗೂ ಫೀನಿಕ್ಸ್ ಪ್ರಕಾಶನ’_ ತೀರ್ಥಹಳ್ಳಿ,  ಇವರುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ;20/10/2019ರಬಾನುವಾರ ಬಾಗಲಕೋಟೆಯ  ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕನ್ನಡ ಸಾಹಿತ್ಯ ಲೋಕದ ಎರಡು  ಹೊಸ ಪುಸ್ತಕಗಳೂ ಲೋಕಾರ್ಪಣೆಗೊಂಡವು ‘ನವಿಲೂರ _ದಾರಿಯಲ್ಲಿ’ (ಕಥಾಸಂಕಲನ)- ಶ್ರೀಹರಿದೂಪದ  ‘ತೊರೆದು ಜೀವಿದಬಹುದೆ?’(ಭಾವಲಹರಿಗಳ ಗುಚ್ಛ)-ಪುನರ್ವಸು ಪ್ರಶಾಂತ್         

ಮೀನು ಶಿಕಾರಿಯ ಸಂಭ್ರಮ

ಮಳೆಗಾಲದ ಆರಂಭ ಮತ್ತು ಮೀನು ಶಿಕಾರಿ… ರಮೇಶ್ ನೆಲ್ಲಿಸರ ‘ಮಳ್ಗಾಲ ಅನ್ನೋದ್ ಯಾವಾಗ್ ಬಂದ್ ಈ ಸುಡ್ಗಾಡ್ ಶೆಕೀನ ಹೊತ್ಕಂಡ್ ಹೋಯ್ತದೋ ಆ ದ್ಯಾವ್ರೆ ಬಲ್ಲ’, ಅಂತ ಬೇಸ್ಗೀಲಿ ಹಾಗೇಯ “ಈ ಹಾಳಾದ್ ಮಳಿ ದಸೇಂದ್ ಮನೆ ಹೊರ್ಗ್ ಕಾಲಿಡಕ್ ಆಗ್ದು” ಅಂತ ಮಳ್ಗಾಲದಾಗೆ , ಈ ಬಗೀ ಮಾತು ನಮ್ ಮಲ್ನಾಡ್ ಕಡೆ ಎಲ್ರೂ ನಾಲ್ಗಿ ಮೇಲೂ ನಲೀತರ‌್ದದೆ. ಏನ್ ಶೆಕಿ ಅಂತೀರಾ, ಹೋದ್ ಮಳ್ಗಾಲ‌್ದಲ್ ಆ ನಮೂನಿ ಮಳೆ ಹೊಯ್ದ್ರು ನೀರ್ ಅನ್ನದ್ ಪಾತಾಳ್‌ಮಟ […]

ಕಾವ್ಯಯಾನ

ಹೇಳಿ ಹೋಗು ಕಾರಣ ಸಂಗೀತ ಶ್ರೀಕಾಂತ್ ನುಡಿವೊಮ್ಮೆ ನಲ್ಲ ನಿನ್ನ ಕೊಳಲ!! ಕೊರಳ ಮಧುರ ಭಾವ ಹೊರಬರಲಿ.. ಎದೆಯೊಳಗಿರುವ ನಂಜು- ನೋವುಗಳೆಲ್ಲಾ ಹಾಡಾಗಿ ಹೊರ ಬಂದು ಕೇಳುವಂತಾಗಲಿ…. ಭಾವಧ್ಯುಯ್ಯಲೆಯಲಿ ಬದುಕಾ ದುಡುತ್ತಿರುವಾಗ ಅದನ್ನು ಧಿಕ್ಕರಿಸುತ್ತೆನೆಂಬುದು ಎಂಥ ಮೂರ್ಖತನವಾದಿತು? ನಿರ್ಭಾವದಲಿ ನಿಜವ ಕೊಲ್ಲ ಹೊರಟಿರುವುದೇಕೆ? ಬೆರಗಾಗಿದ್ದೆ ಹಿಂದೊಮ್ಮೆ ಬಂಡೆಗಳ ಮೇಲೂ ಚಿಗುರೊಡೆಯಬಲ್ಲೆ ಎಂಬ ಅದಮ್ಯ ಉತ್ಸಾಹಕ್ಕೆ ಜಗತ್ತನ್ನೆದುರಿಸಿ ನೆಡೆಯುತ್ತಿದ್ದ ನಿರ್ಭಿತ ನೆಡೆಗೆ.. ವಿರಹದ ದಳ್ಳುರಿಯ ದಾವನಲದಲ್ಲಿ ನಾ ಬೆಂದು ಬಸವಳಿಯುತ್ತಿರುವಾಗ ಬಂಧನ- ಬಿಡುಗಡೆ, ವಿರಹ- ವಿದಾಯ ಎಂಬೆಲ್ಲ ಅರ್ಥವಿರದ […]

ಲಹರಿ

ಒಮ್ಮೆ ತಿರುಗಿ ನೋಡು ನನ್ನ ಕೊನೆಯ ತಿರುವು ಬರುವ ಮುನ್ನ. ವಿಷ್ಣು ಭಟ್ ಹೊಸ್ಮನೆ ನನ್ನ ಮನಸ್ಸು ಅವಳು ತಿರುಗಿ ನೋಡಲೇಬಾರದು. ಮುಂದೆ ಎಂದಿಗೂ ಸಂಧಿಸದ ಹಾದಿಯಲ್ಲಿ ನಾನು ಮತ್ತು ಅವಳು ಸಾಗುತ್ತ ಇರಬೇಕು ಅಂದುಕೊಂಡಿತ್ತು. ಅವತ್ತು ತಿರುಗಿ ನೋಡದೇ ಹೋದರೂ ಎರಡು ದಿನ ಬಿಟ್ಟು ಮತ್ತೆ ಅವಳು ಬಂದಿದ್ದಳು. ಅವಳನ್ನು ಮತ್ತೆ ನೋಡಿದೆ ಎಂಬೊಂದು ಖುಷಿ ಬಿಟ್ಟರೆ ಮತ್ತೇನೂ ನನ್ನಲ್ಲಿ ಹುಟ್ಟಲಿಲ್ಲ. ಆದರೆ ಅವಳು ಎದೆ ತುಂಬ ಪ್ರೀತಿಯನ್ನು ಹೊತ್ತು ತಂದಿದ್ದಳು. ಅವಳು ಕಾದುಕಾದು ಕೇಳಿದ್ದು […]

ಸಂಪ್ರದಾಯದ ಸೊಬಗು

ಅರುಣ್ ಕೊಪ್ಪ ಊರ ಬಾಗಿಲು ಮುಂದೆ ಭಯಭಕ್ತ ಕಲ್ಲುಗಳು, ತೀರಾ ಹಳೆಯವು ಅಲ್ಲಲ್ಲಿ ಹಾಲು ಸೋಕುವ ಮರಗಳು, ಮುಗಿದರೆ ಕೈ ದೇವರು, ಹಾಗೋ ಹೀಗೋ ಗಾಳಿ ಬಂದಾಗ ಬುಡಸಡಿಲವಾಗುವ ಭಯ ಮಹಾಮಯ ! ಮುಂಗಾರಮುಂದೆ ಮಾತು ಕಥೆ, ಅಂತೂ ಕುದುರಿಸಿಯೇ ಬಿಟ್ಟರು ಮಾರಿ ಹಬ್ಬವಂತೆ, ಕುರಿ ಕೋಳಿಯ ಜಾತ್ರೆ ಊರೊಳಗೆ, ಮುಟ್ಟು ಮೈಲಿಗೆ ಹೆಂಗಸರ ಸ್ಥಳಾಂತರ ಒಪ್ಪ, ವಾಗತಿಯಲಿ ಹಬ್ಬ ಸಜ್ಜು ಊರ ಹಬ್ಬದ ಸಲುವಾಗೆ ಶಣ್ಣಿ ಮದುವಿ ಮುಂದಾತು ಕಿವಿಗಿಲ್ಲ ಮೂಗಿಗಿಲ್ಲ ಎಲ್ಲ ದುಬಾರಿಮಯ.. ಇದ್ದದ್ದು […]

ಮುಖವಾಡ

ದಾಕ್ಷಾಯಣಿ ನಾಗರಾಜ್ ಮತ್ತೆ ಮುಸ್ಸಂಜೆಯಲಿ ಮುಸುಕಿನ ಗುದ್ದಾಟ ಆಗಷ್ಟೇ ಮುದ್ದೆಯಾದ ಹಾಸಿಗೆಯಲಿ ನಲುಗಿದ ಹೂಗಳ ಅಘ್ರಾಣಿಸಿ ತಡಕಾಡುತ್ತೇನೆ ಒಂದಷ್ಟಾದರೂ ನಿನ್ನ ಪ್ರೀತಿ ಘಮಲು ಉಳಿದಿದೆಯೇ ? ಪ್ರತಿಸಾರಿಯಂತೆಯೇ, ರವಷ್ಟು ಕೂಡ ಮುಲಾಜಿಲ್ಲದೆ ರಾಚುತ್ತದೆ ಮೂಗಿಗೆ ತುಸು ಕಾಮ ಮತ್ತಷ್ಟು ಗೆದ್ದೆನೆಂಬ ನಿನ್ನ ಅಹಂ,, ಜಾರಿದ ಕಣ್ಣಹನಿಗೆ ಜತನದಿಂದ ನಗುವಿನ ಮುಖವಾಡ ತೊಡಿಸಿಬಿಡುತ್ತೇನೆ ನೀನಿಲ್ಲದ ಮತ್ತೊಂದು ಮುಸ್ಸಂಜೆಯಲಿ ಮುಖವಾಡ ಕಳಚಿಟ್ಟು ನಿಂದಿಸುತ್ತೇನೆ ಹೇ ನಿರ್ದಯಿ ಬದುಕೇ ಅದೆಷ್ಟು ಮುಖವಾಡಗಳ ತೊಡಿಸುವೆ? ಜಾರಿಸುತ್ತಾ ಕಂಬನಿಗಳ ,,,, ದಾಕ್ಷಾಯಣಿ ನಾಗರಾಜ್ ಕವಿ […]

ಕಾವ್ಯನಮನ

ಕೆ.ಬಿ.ಸಿದ್ದಯ್ಯ ನಮ್ಮನ್ನು ಅಗಲಿದ ಕವಿ ಮತ್ತು ಅದ್ಭುತ ಸಂಘಟನಾಕಾರರಾದ ಹಿರಿಯ ಚೇತನ ಶ್ರೀ ಕೆ.ಬಿ.ಸಿದ್ದಯ್ಯನವರಿಗೆ ಸಂಗಾತಿ ಬಳಗ ಶ್ರದ್ದಾಂಜಲಿ ಸಲ್ಲಿಸುತ್ತಿದೆ ಕವಿಮಿತ್ರ ಶ್ರೀಬಿದಲೋಟಿರಂಗನಾಥ್ ಅವರ ಕವಿತೆಯ ನುಡಿ ನಮನ ಹೊಳೆದು ಉರುಳಿದ ನಕ್ಷತ್ರ ಕೆ ಬಿ ಸಿದ್ದಯ್ಯ ಕತ್ತಲೊಡನೆ ಮಾತಾಡುತ್ತ ದಕ್ಲದೇವಿ ಕಥೆಗಳನ್ನು ಹೇಳುತ್ತ ಗಲ್ಲೆಬಾನಿಯಲಿ ನೆನಪುಗಳ ಕಲೆಸಿದ ಬಕಾಲ ಮುನಿಯೇ… ನಿಮ್ಮದು ಚಿಟ್ಟೆಗೆ ಜೀವ ತುಂಬಿದ ಜೀವ. ಮೌನದಲಿದ್ದು ನಲುಗಿ ಒಂದು ಮಾತೂ ಹೇಳದೆ ಎದ್ದೋದ ಕರುಳು ಬಂಧುವೇ… ಇಷ್ಟು ಬೇಗ ಹೋಗಬೇಕಿತ್ತೆ ? ನಿಮ್ಮ […]

ಪ್ರಬಂದ

ಶ್ರಮಜೀವಿ ಜೇನ್ನೊಣಗಳು ನಾಗರಾಜ ಮಸೂತಿ ಶ್ರಮಜೀವಿಗಳಲ್ಲಿ ಒಂದಾದ ಜೇನುಹುಳು ಶ್ರಮದಿಂದಲೇ ತನ್ನ ಆಯಸ್ಸನ್ನು ಕಡಿಮೆ ಮಾಡಿಕೊಳ್ಳುವಂತೆ ಶ್ರಮವಹಿಸಿ ದುಡಿಮೆ ಮಾಡುತ್ತದೆ. ಇದರ ಆಯಸ್ಸು ಸುಮಾರು ಒಂದು ತಿಂಗಳು ಅಥವಾ ಮೂವತ್ತು ದಿನಗಳು ಮಾತ್ರ. ಚಗಳಿ ಇರುವೆಯ ಜೀವನ ಶೈಲಿಯನ್ನು ಹೋಲುವ ಜೇನುಹುಳು ಎಲ್ಲರ ಕೋಪಕ್ಕೆ ತುತ್ತಾದರೆ ಅದರ ಶ್ರಮದ ಫಲ ಜೇನು ಹನಿ ಮಾತ್ರ ಎಲ್ಲರ ಪ್ರೀತಿಗೆ ಪಾತ್ರವಾಗಿದೆ. ಬಹುಶಃ ಜೇನುತುಪ್ಪ ಇಷ್ಟ ಪಡದ ವ್ಯಕ್ತಿ ಭೂಮಿಯ ಮೇಲೆ ಇರಲಿಕ್ಕಿಲ್ಲ. ಈ ಜೇನುಹನಿಯನ್ನ ಪೇರಿಸಲು ಅದು ಪಡುವ […]

Back To Top