ಮಕ್ಕಳ ಸಾಹಿತ್ಯ

ಮತ್ತೆ ಶಾಲೆ ಶುರುವಾಯಿತು

ಸಿಂಧು ಬಾರ್ಗವ್

ದಸರ ಮುಗಿಯಿತು, ಶಾಲೆ ಶುರುವಾಯಿತು
ಪುಟ್ಟಿಗೆ ಮಾತ್ರ ಮನಸಿಲ್ಲ, ರಜೆಯ ಗುಂಗು ಹೋಗಿಲ್ಲ

ಪಾಠೀಚೀಲ ಎಲ್ಲಿದೆಯಮ್ಮ
ಪುಸ್ತಕಗಳು ಕಾಣದಮ್ಮ
ಪೆನ್ಸಿಲ್ ರಬ್ಬರ್ ಬೇಕು ಅಮ್ಮ
ಅಂಗಡಿಗೆ ಹೋಗಿ ತರಬೇಕಮ್ಮ!!

ಅಜ್ಜಿ ಮನೆಯು ಮಜವಾಗಿತ್ತು
ಗೆಳೆಯರ ಜೊತೆಯಲಿ ಆಟವು ಇತ್ತು
ಬಗೆಬಗೆ ಹಣ್ಣುಗಳ ಸವಿಯು ಇತ್ತು
ಅಜ್ಜಿಯ ಕೈರುಚಿ ಸೊಗಸಾಗಿತ್ತು!!

ಹೋಮ್ ವರ್ಕ್ ತುಂಬಾ ಕೊಟ್ಟಿಹರಮ್ಮ
ಇನ್ನೂ ಬರೆದು ಮುಗಿದಿಲ್ಲಮ್ಮ
ಮಿಸ್ಸು ಬೈದರೆ ಏನು ಮಾಡಲಿ?
ತಲೆಕೆಳ ಮಾಡಿ ನಾನು ನಿಲ್ಲಲೇ!?

ಎನಿತು ಬಾರಿ ಹೇಳಿದೆ ಪುಟ್ಟಿ
ಪಾಠವು ಮೊದಲು ಮುಗಿಸಬೇಕು
ಆಟವ ನಂತರ ಆಡಬೇಕು
ಸಮಯವ ಹಾಳುಮಾಡದಿರೆಂದು
ರಜೆಯ ಮೋಜಲಿ ಮುಳುಗದಿರೆಂದು!!

ಸಿಟಿಯಲಿ ಸಂಭ್ರಮ ಏನಿದೆಯಮ್ಮ
ಅಜ್ಜಿಯ ಮನೆಯೇ ಸ್ವರ್ಗವಮ್ಮ
ಪಾಠಿಚೀಲವ ಧರಿಸಿ ನಾನು
ಶಾಲೆಯ ಕಡೆಗೆ ನಡೆಯುವೆನಮ್ಮ!!

ಸಿಂಧು ಭಾರ್ಗವ್. ಬೆಂಗಳೂರು

ಪರಿಚಯ:

ಪೂರ್ಣ ಹೆಸರು: ತುಳಸಿ ಭಟ್.ಕಾವ್ಯನಾಮ : ಸಿಂಧು ಭಾರ್ಗವ್. ಪ್ರಸ್ತುತ ನವಪರ್ವ ಫೌಂಡೇಶನ್(ರಿ) ಬೆಂಗಳೂರು ಇದರ ಉಪಾಧ್ಯಕ್ಷೆ. (ಸಾಮಾಜಿಕ ಮತ್ತು ಸಾಹಿತ್ಯ ಸೇವಾ ಸಂಸ್ಥೆ) ಹವ್ಯಾಸಗಳು: ನೈಜ ಕಥೆಗಳನ್ನು ಬರೆಯುವುದು, ಶಿಶುಗೀತೆ ರಚನೆ, ಪರಿಸರಮುಖಿ ಕವನಗಳು, ಚುಟುಕುಗಳು, ಮಕ್ಕಳ‌ ನೀತಿಕಥೆಗಳನ್ನು ಬರೆಯುವುದು, ಸಮಾಜಮುಖಿ ಲೇಖನಗಳನ್ನು ಬರೆಯುವುದು.


One thought on “ಮಕ್ಕಳ ಸಾಹಿತ್ಯ

Leave a Reply

Back To Top