ಮುಟ್ಟಬಾರದವರ ಕಥೆ

ಮುಟ್ಟಬಾರದವರ ಕಥೆ

‘ಉಚಲ್ಯಾ’ ಕೆ.ಶಿವುಲಕ್ಕಣ್ಣವರ ಲಕ್ಷ್ಮಣ ಗಾಯಕವಾಡರ ‘ಉಚಲ್ಯಾ’ ಎಂಬ ಹೀಗೊಂದು ಮುಟ್ಟಬಾರದವರ ಮರಾಠಿ ಕಥೆ..! ಅನುವಾದಕರು- ಚಂದ್ರಕಾಂತ ಪೋಕಳೆ Pages 120 ₹ 75.00 Year of Publication: 2017 Published by: ನವಕರ್ನಾಟಕ ಪ್ರಕಾಶನ Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001 Phone: 080-22203580/01/02 ಉಚಲ್ಯಾ’ ಮರಾಠಿಯ ಪ್ರಖ್ಯಾತ ಲೇಖಕ ಲಕ್ಷ್ಮಣ ಗಾಯಕವಾಡರ ಆತ್ಮಕತೆಯ ಕನ್ನಡಾನುವಾದ. ಚಂದ್ರಕಾಂತ ಪೋಕಳೆಯವರು ಉಚಲ್ಯಾವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಬುಡಕಟ್ಟು ಸಮುದಾಯದಿಂದ ಬಂದ ಲೇಖಕ ತನ್ನ ಜೀವನದ ಭೀಕರೆಯನ್ನು […]

ಕಾವ್ಯಯಾನ

ತಾಮ್ರದ ಕೊಡ ಸಂಜಯ ಮಹಾಜನ ತಾಮ್ರದ ಕೊಡ ಭಾರವಾದವೋ ತಾಮ್ರದ ಕೊಡ ತಲೆಯ ಮೇಲೆ ಭಾರದಾದವೋ ತಾಮ್ರದಕೊಡ ಕಾಣದಾದವೋ ನುರು ವರುಷ ಹೊಳಪು ತಾಳಿತಾದರೂ ತಲೆಯಮೇಲೆ ಹೊತ್ತು ಭಾರ ತಾಳದಾದವೋ ತಾಮ್ರದಕೊಡ ಕಾಣದಾದವೋ ಆರೋಗ್ಯ ವೃದ್ಧಿಸಿದರೂ ತಾಂಮ್ರದ ಕೊಡ ವೃದ್ಧಿಯಾಗಲಾರವೋ ತಾಮ್ರದಕೊಡ ಕಾಣದಾದವೋ ತೂತುಬಿದ್ದ ಕರಳುಗಳಿಗೆ ಅಮೃತ ಬಿಂದು ನೀಡಿತಾದರೂ ಕೊಡದ ತಳಕೆ ಬಿದ್ದ ತೂತು ತುಂಬದಾದವೋ ತಾಮ್ರದಕೊಡ ಕಾಣದಾದವೋ ಹಳೆಯ ಕೊಡ ಅಟ್ಟದಲಿ ಉಳಿಯಿತಾದರೂ ಹೊಳಪು ಕಳೆದುಕೊಂಡು ಕಪ್ಪಾಗಿ ಮಾತನಾಡದಾದವೋ ತಾಮ್ರದಕೊಡ ಕಾಣದಾದವೋ ತವರಿನಿಂದ ಉಡುಗೊರೆಯಾಗಿ […]

ಜ್ಞಾನಪೀಠ ಪ್ರಶಸ್ತಿ ವಿಜೇತರು

ವಿಶ್ವ ಮಾನವ” ಬರಹಗಾರ ಕುವೆಂಪು..! ಕೆ.ಶಿವು ಲಕ್ಕಣ್ಣವರ ವಿಶ್ವ ಮಾನವ” ಬರಹಗಾರ ಕುವೆಂಪು..! ಮಲೆನಾಡಿನ ಹಿಂದುಳಿದ ವರ್ಗದಿಂದ ಹುಟ್ಟಿ ಬಂದ ಕುವೆಂಪು ಅವರು ತಾವೇ ಹೇಳಿಕೊಂಡಂತೆ ಮಲೆನಾಡಿನ ಕವಿ. ಕುವೆಂಪು ಅವರು ಈ ದೇಶದ ಸಮಕಾಲೀನ ಸೃಜನಶೀಲತೆಯ ಉತ್ಕರ್ಷದ ನಿಜವಾದ ಪ್ರತಿನಿಧಿಯಾಗಿದ್ದಾರೆ. ಅವರ ಸಾಹಿತ್ಯದ ಹರಹು, ವೈವಿದ್ಯ ಮತ್ತು ಎತ್ತರಗಳು ಅವರು ಮೂಡಿಬಂದ ಸಹ್ಯಾದ್ರಿಯ “ಪರ್ವತಾರಣ್ಯ ಪ್ರಪಂಚ”ದಂತೆ ಬೆರಗು ಹುಟ್ಟಿಸುತ್ತದೆ. ಅವರ ಮಹಾಕಾವ್ಯ , ಕಾದಂಬರಿ, ನಾಟಕ, ಕವಿತೆ ಈ ಅರಣ್ಯಾನುಭವಗಳೇ ಮೂಲದ್ರವ್ಯದಂತೆ ಸರ್ವವ್ಯಾಪಿಯಾಗಿದೆ. ಅವರ ಬಹುತೇಕ […]

ವ್ಯಾಲಂಟೈನ್ಸ್ ಡೇ ಸ್ಪೆಶಲ್

ಗಝಲ್ ಎ.ಹೇಮಗಂಗಾ ಪ್ರೇಮಿಗಳ ದಿನವೇಕೆ ? ನಾವಿಬ್ಬರೂ ಪ್ರೇಮಿಸದ ದಿನವೇ ಇಲ್ಲ ಪ್ರೀತಿಯ ಅಭಿವ್ಯಕ್ತಿಯೇಕೆ ? ಉತ್ಕಟವಾಗಿ ಪ್ರೀತಿಸದ ದಿನವೇ ಇಲ್ಲ ಸಪ್ತಪದಿಯಲಿ ಒಂದಾದ ನಮಗೆ ಬಾಳು ದೈವ ನೀಡಿದ ಕೊಡುಗೆ ಬೇರೆ ಉಡುಗೊರೆಯೇಕೆ? ಮುತ್ತಿನ ವಿನಿಮಯವಿರದ ದಿನವೇ ಇಲ್ಲ ನಿನ್ನೊಲವ ಸಾಗರದಿ ಎಲ್ಲ ಮರೆತು ಮುಳುಗಿಹೋಗಿರುವೆ ಹೊನ್ನಿನ ತೋಳಬಂದಿಯೇಕೆ? ತೋಳ್ಸೆರೆಯಿರದ ದಿನವೇ ಇಲ್ಲ ಮಧುಶಾಲೆಯ ಬಾಗಿಲು ಕರೆದರೂ ನೀನತ್ತ ಇನ್ನು ಸುಳಿಯಲಾರೆ ಮಧುಪಾನದ ಅಮಲೇಕೆ? ಪ್ರೀತಿ ನಶೆಯಿರದ ದಿನವೇ ಇಲ್ಲ ಪವಿತ್ರ ಬಂಧನದಿ ಬೆಸೆದುಹೋಗಿರೆ ಅಂತರವೆಲ್ಲಿ […]

ವ್ಯಾಲಂಟೈನ್ಸ್ ಡೇ ಸ್ಪೆಶಲ್

ಅಧರಂ-ಮಧುರಂ ತುಟಿ ಜೇನು, ಮೊಗ ಜೇನು, ಸಕಲವೂ ಸವಿ ಜೇನು! (ವಲ್ಲಭಾಚಾರ್ಯರ “ಅಧರಂ ಮಧುರಂ” ಕನ್ನಡ ಭಾವಾನುವಾದದ ಪ್ರಯತ್ನ. ಪರಂಪರೆ ಕೂಡ ಹೇಗೆ ಪ್ರಿಯತಮನನ್ನು ಆರಾಧಿಸಿ ಭಜಿಸುತ್ತಿತ್ತು ಎನ್ನುವುದಕ್ಕೊಂದು ಪುರಾವೆ. ) ರಾಮಸ್ವಾಮಿ ಡಿ.ಎಸ್. ತುಟಿ ಜೇನು ಮೊಗ ಜೇನುಕಣ್ಣ ನೋಟವೆ ಜೇನು, ನಗೆ ಜೇನುಎದೆಯೊಳಗೆ ಸುರಿವ ಜೇನು, ನಡಿಗೆಗೆ ಸೋತೆಸವಿಯರಸನೇ ನೀನು, ಸಕಲವೂ ಸಿಹಿ ಜೇನು. ಮಾತಲ್ಲಿ ಜೇನು,ಚರಿತೆ ಚಪ್ಪರಿಸಿದರೆ ಜೇನು,(ಉಟ್ಟ) ಬಟ್ಟೆ ಸವಿ ಜೇನು, ಸಂಕೇತದೊಳಗೆ ಜೇನುನೀನಿತ್ತ ಬರುವುದು ನನ್ನ ಸುತ್ತುವುದಂತೂ ತಿಳಿಜೇನುಸವಿಯರಸನೇ ನೀನು, […]

ವ್ಯಾಲಂಟಯನ್ಸ್ ಡೇ ಸ್ಪೆಶಲ್

ಪ್ರೇಮದ ಹನಿಗಳು ಎ.ಹೇಮಗಂಗಾ ಯಾವ ಆಚರಣೆಯೂ ನಮ್ಮ ಪ್ರೇಮಕ್ಕೆ ಬೇಕಿಲ್ಲ ಕಾರಣ, ನಾನೂ ನೀನೂ ಪ್ರೇಮಿಸದ ದಿನವೇ ಇಲ್ಲ ! ಆದ ನನ್ನ ಇನಿಯ ನೊಂದ ಬಾಳಿಗೆ ಒತ್ತಾಸೆ ನನಗೋ ಅವನ ಕೆನ್ನೆಗೆ ಕೆನ್ನೆ ಒತ್ತುವ ಆಸೆ ! ಸ್ವಭಾವದಲ್ಲಿ ನನ್ನ ನಲ್ಲ ನಿಜಕ್ಕೂ ವಾಚಾಳಿ ಬಿಡುವುದಿಲ್ಲ ಪರಿಪರಿಯಾಗಿ ನನ್ನ ಕಾಡಿಸುವ ಚಾಳಿ ಹೆದರುವುದಿಲ್ಲ ನಾನು ದಿನವೂ ಬರುವ ಇರುಳಿಗೆ ಇದೆಯಲ್ಲಾ ಪ್ರಿಯಸಖನ ಕಣ್ಬೆಳಕಿನ ದೀವಿಗೆ ! ಬೇಕಿಲ್ಲ ನನಗೆಂದಿಗೂ ಮಧುಶಾಲೆಯ ಮಧುಪಾತ್ರೆ ನೀಡು ಕೊನೆತನಕ ನಿನ್ನಧರದ […]

ಕಾವ್ಯಯಾನ

ಹೆಂಗಳೆಯರ ತರಲೆ ಹಾಡು ಅವ್ಯಕ್ತ ಮದುವೆ ಯಾಕೆ ಪುರುಷಿ! ನೀ ಬದುಕು ನೂರು ಆಯುಷಿ! ಮದುವೆ ಆದಮ್ಯಾಗೇ! ನಿನ್ನ ಹೆಸರು ಮರೆಯುತಾರ! ಮದುವೆ ಆದಮ್ಯಾಗೇ! ನಿನ್ನ ಹೆಸರು ಮರೆಯುತಾರ! ರಾತ್ರಿಗ ಬಾರೇ ಅನ್ನುತಾರಾ, ಹಗಲಲಿ ಬೇರೆ ಹೆಣ್ಣಿಗ ಹಲ್ಕಿರಿತಾರಾ ಕಾಪಿ ತಿಂಡಿ ಎಂದು ಕೂಗುತಾರ ನಿನ್ನ, ಚಡ್ಡಿಇಂದ ಟೈವರೆಗೂ ಕೂತಲ್ಲಿ ತರಿಸುತಾರ , ನಿನ್ನ ಪ್ರಾಣ ತಿನ್ನುತಾರಾ!!! ನಿನ್ನ ಗೇಲಿ ಮಾಡುತ್ತಾರಾ!!! ಮದುವೆ ಯಾಕೆ ಪುರುಷಿ! ನೀ ಬದುಕು ನೂರು ಆಯುಷಿ! ವಾರಪೂರ್ತಿ ಉಣ್ಣಾಕ ನೀನೇ ಮಾಡಬೇಕಾ […]

ಪ್ರಸ್ತುತ

ಡಾ. ಸರೋಜಿನಿ ಮಹಿಷಿ ವರದಿಯಾಚೆಗೆ .. ಗಣೇಶ್ ಭಟ್ ಶಿರಸಿ ಡಾ. ಸರೋಜಿನಿ ಮಹಿಷಿ ವರದಿಯಾಚೆಗೆ .. ಕನ್ನಡ ನಾಡಿನಲ್ಲಿ ಕನ್ನಡಿಗರೇ ಸಾರ್ವಭೌಮ, ಕನ್ನಡಕ್ಕೇ ಮೊದಲ ಸ್ಥಾನ ಎನ್ನುವುದನ್ನು ಜನರು ಒಪ್ಪಿದರೂ, ಸರ್ಕಾರಗಳು ಅನುಷ್ಠಾನಕ್ಕೆ ತರಲು ಹಿಂದೇಟು ಹಾಕುತ್ತಿವೆ. ವೋಟಿಗಾಗಿ ನಾಟಕ ಮಾಡುವ ರಾಜಕೀಯ ಪಕ್ಷಗಳೆಲ್ಲವೂ ಕುಂಟು ನೆಪ ಮುಂದೆ ಮಾಡಿ ಡಾ. ಸರೋಜಿನಿ ಮಹಿಷಿ ವರದಿಯ ಜಾರಿಯನ್ನು ಮುಂದೂಡುತ್ತಲೇ ಇವೆ. ಕಳೆದ 35 ವರ್ಷಗಳಿಂದ ಅಧಿಕಾರದಲ್ಲಿದ್ದ ವಿವಿಧ ಪಕ್ಷಗಳು ( ಜನತಾ, ಕಾಂಗ್ರೆಸ್, ಬಿಜೆಪಿ) ಕನ್ನಡ […]

ವ್ಯಾಲಂಟೈನ್ಸ್ ಡೇ ಸ್ಪೆಶಲ್

ನನ್ನ ಕನಸಿನ ಹುಡುಗಿಗೆ ಒಂದು ಕವಿತೆ ಮೂಗಪ್ಪ ಗಾಳೇರ ನನ್ನ ಕನಸಿನ ಹುಡುಗಿಗೆ ಒಂದು ಕವಿತೆ ನನ್ನೆಲ್ಲಾ ಒಂದೊಂದು ಕನಸುಗಳಿಗೆ ಬಣ್ಣ ಹಚ್ಚಿದವಳು ನೀನು ರೆಕ್ಕೆಪುಕ್ಕ ಕಟ್ಟಿದವಳು ನೀನು ಆ ಕನಸುಗಳಿಗೆ ಜೀವ ತುಂಬಿದ ರಮಣೀಯ ಕಾಮ ದೇವಿಯ ಪುತ್ರಿ ನೀನು ನಿನ್ನ ಕಂಡೊಡನೆ ನನ್ನ ಹೃದಯದ ಇಂಚರದ ಮೇಳ ತಾನು ತಾನಾಗಿ ನುಡಿಯದೆ ಹೊಸದೊಂದು ಸಂಗೀತ ಸ್ವರ ಲೋಕ ಸೃಷ್ಟಿಸುತ್ತದೆ ನಿನ್ನ ಮಾತುಗಳೆಲ್ಲವು ಒಂದೊಂದು ಬಾರಿ ಅದೆಂತಾ ಮೌನ ಲೋಕ ಸೃಷ್ಟಿಸುತ್ತವೆ ಆ ಲೋಕದಲ್ಲಿ ಹೃದಯದ […]

ವ್ಯಾಲಂಟೈನ್ಸ್ ಡೇ ಸ್ಪೆಶಲ್

ನವಿಲನು ಮುಟ್ಟಿದ ಚಿತ್ರ ಬಿದಲೋಟಿ ರಂಗನಾಥ್ ನವಿಲನು ಮುಟ್ಟಿದ ಚಿತ್ರ ಅವಳ ನಿಟ್ಟುಸಿರ ಸದ್ದಿನಲಿ ಬೆವತ ಹೃದಯದ ಬಾಗಿಲು ಗೆದ್ದಲಿಡಿದು ನೋವಿನಲಿ ಮುಕ್ಕಾಗುತ್ತಿದೆ ಹಿಡಿದಿದ್ದ ಗುಲಾಬಿಯ ಬಣ್ಣದ ಗುರುತಿನ ಭಾವ ಗಾಳಿ ಮಳೆ ಬಿಸಿಲಿಗೆ ನಲುಗಿದರೂ ಅಳಿಸುತ್ತಿಲ್ಲ ಕಾಮನ ಬಿಲ್ಲಿನ ಮೇಲೆ ಇಬ್ಬರೂ ಕೂತು ನವಿಲನು ಮುಟ್ಟಿದ ಚಿತ್ರ ಮುಗಿಲ ಮೇಲೆ ಹಾಗೇ ಇದೆ ತಣ್ಣನೆಯ ಸ್ಪರ್ಶದ ಆ ನಿನ್ನ ನಗು ಮುಂಗುರುಳ ಮೇಲೆ ಆಡಿಸಿದ ಬೆರಳ ಆಟ ಕತ್ತಲೆಯಲಿ ಕರಗಿದ ನಮ್ಮಿಬ್ಬರ ಚಿತ್ತ ದಾರಿಯ ಪಯಣ […]

Back To Top