ವ್ಯಾಲಂಟಯನ್ಸ್ ಡೇ ಸ್ಪೆಶಲ್

ಪ್ರೇಮದ ಹನಿಗಳು

women holding red heart pillow

ಎ.ಹೇಮಗಂಗಾ

ಯಾವ ಆಚರಣೆಯೂ
ನಮ್ಮ ಪ್ರೇಮಕ್ಕೆ ಬೇಕಿಲ್ಲ
ಕಾರಣ, ನಾನೂ ನೀನೂ
ಪ್ರೇಮಿಸದ ದಿನವೇ ಇಲ್ಲ !

ಆದ ನನ್ನ ಇನಿಯ
ನೊಂದ ಬಾಳಿಗೆ ಒತ್ತಾಸೆ
ನನಗೋ ಅವನ ಕೆನ್ನೆಗೆ
ಕೆನ್ನೆ ಒತ್ತುವ ಆಸೆ !

ಸ್ವಭಾವದಲ್ಲಿ ನನ್ನ ನಲ್ಲ
ನಿಜಕ್ಕೂ ವಾಚಾಳಿ
ಬಿಡುವುದಿಲ್ಲ ಪರಿಪರಿಯಾಗಿ
ನನ್ನ ಕಾಡಿಸುವ ಚಾಳಿ

ಹೆದರುವುದಿಲ್ಲ ನಾನು
ದಿನವೂ ಬರುವ ಇರುಳಿಗೆ
ಇದೆಯಲ್ಲಾ ಪ್ರಿಯಸಖನ
ಕಣ್ಬೆಳಕಿನ ದೀವಿಗೆ !

ಬೇಕಿಲ್ಲ ನನಗೆಂದಿಗೂ
ಮಧುಶಾಲೆಯ ಮಧುಪಾತ್ರೆ
ನೀಡು ಕೊನೆತನಕ ನಿನ್ನಧರದ
ಮಧುವಿನ ಅಕ್ಷಯಪಾತ್ರೆ !

*******

Leave a Reply

Back To Top