ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹೆಂಗಳೆಯರ ತರಲೆ ಹಾಡು

four people holding fireworks and forming cool word

ಅವ್ಯಕ್ತ

ಮದುವೆ ಯಾಕೆ ಪುರುಷಿ!
ನೀ ಬದುಕು ನೂರು ಆಯುಷಿ!

ಮದುವೆ ಆದಮ್ಯಾಗೇ!
ನಿನ್ನ ಹೆಸರು ಮರೆಯುತಾರ!
ಮದುವೆ ಆದಮ್ಯಾಗೇ!
ನಿನ್ನ ಹೆಸರು ಮರೆಯುತಾರ!
ರಾತ್ರಿಗ ಬಾರೇ ಅನ್ನುತಾರಾ,
ಹಗಲಲಿ ಬೇರೆ ಹೆಣ್ಣಿಗ ಹಲ್ಕಿರಿತಾರಾ
ಕಾಪಿ ತಿಂಡಿ ಎಂದು ಕೂಗುತಾರ ನಿನ್ನ,
ಚಡ್ಡಿಇಂದ ಟೈವರೆಗೂ ಕೂತಲ್ಲಿ ತರಿಸುತಾರ ,
ನಿನ್ನ ಪ್ರಾಣ ತಿನ್ನುತಾರಾ!!!
ನಿನ್ನ ಗೇಲಿ ಮಾಡುತ್ತಾರಾ!!!

ಮದುವೆ ಯಾಕೆ ಪುರುಷಿ!
ನೀ ಬದುಕು ನೂರು ಆಯುಷಿ!

ವಾರಪೂರ್ತಿ ಉಣ್ಣಾಕ ನೀನೇ ಮಾಡಬೇಕಾ
ನಿನ್ನನೀ ಮರೆತು ಅವರಿಷ್ಟದ್ ಕಾಳಜಿ ವಹಿಸಬೇಕ,
ಶಾಪಿಂಗ್ ಎಲ್ಲರದ ನೀ ಒಬ್ಬಾಕಿ ಮಾಡಬೇಕ,
ಆಫೀಸಿಗೂ ಹೋಗಿ ನೀನು
ಕೆಲಸ ಮುಗಿಸೀ ಮುಂದಾ..
ಬಿರ್ರನೆ ಮನೆಯಾಗ ಬಂದು ಓಟಿ ಮಾಡಬೇಕ!
ಆಫೀಸಿಗೂ ಹೋಗಿ ನೀನು
ಕೆಲಸ ಮುಗಿಸೀ ಮುಂದಾ..
ಬಿರ್ರನೆ ಮನೆಯಾಗ ಬಂದು ಓಟಿ ಮಾಡಬೇಕ!

ನೀನು ಈಗಿರೋದು ಬಾಡಿಗೆ ಮನೆಯೊಳಗೆ,
ಸ್ವಂತ ಮನೆಯ ಕನಸ ನನಸ ಮಾಡಬೇಕು ನೀನೇ.!
ಗಂಡ ಬ್ಯಾoಕು ಸಾಲ ತಂದ, ತೀರ್ಸಕ್ಕೆ ಆಗ್ದೆ ನಿಂದ!
ಹೊಟ್ಟೆ ಬಟ್ಟೆ ಕಟ್ಟಿ ಕಷ್ಟ ಸೆರಗಲಿ ಬಚ್ಚಿಟ್ಟಿ
ಸಾಲ ತೀರಿಸ ಬೇಕ!

ಮದುವೆ ಯಾಕೆ ಪುರುಷಿ!
ನೀ ಬದುಕು ನೂರು ಆಯುಷಿ!
ಮದುವೆ ಯಾಕೆ ಪುರುಷಿ!
ನೀ ಬದುಕು ನೂರು ಆಯುಷಿ!

ಸ್ವರ್ಗ ನರಕ ಎಲ್ಲಾ ಮೇಲಿಲ್ಲ ಕೇಳು ಪುರುಷಿ!
ಇಲ್ಲೇ ಕಾಣುಸ್ತಾರ ಮದವ್ಯಾದ
ಮರು ನಿಮಿಷಾಕ!
ಸ್ವರ್ಗ ನರಕ ಎಲ್ಲಾ ಮೇಲಿಲ್ಲ ಕೇಳು ಪುರುಷಿ!
ಇಲ್ಲೇ ಕಾಣುಸ್ತಾರ ಮದವ್ಯಾದ ಮರು ನಿಮಿಷಾಕ!

ಮದುವೆ ಮದುವೆ ಎಂದು ನೀ ಮುಲುಕಬ್ಯಾಡ
ಮೂಢಿ!
ಮದುವೆ ಎಂಬುದೇ ಮಾಯೇ ನೀ ಮರೆತು
ಹೋಗಬೇಡ!
ಮದುವೆ ಮದುವೆ ಎಂದು ನೀ ಮುಲುಕಬ್ಯಾಡ
ಮೂಢಿ!
ಮದುವೆ ಎಂಬುದೇ ಮಾಯೇ ನೀ ಮರೆತು ಹೋಗಬೇಡ!
ಪ್ರೀತಿಯ ಕೆಡ್ಡವಿದು ತಾಯಿ
ಬೀಳುವ ಮುನ್ನ ತಿಳಿದಿರು ಇದರ ಮಾಯೆ!

ಮದುವೆ ಯಾಕೆ ಪುರುಷಿ!
ನೀ ಬದುಕು ನೂರು ಆಯುಷಿ!😆😆

ಎಲ್ಲಾ ಹೆಂಗಳೆಯರಿಗೆ, ಹಾಗು ಫನ್ಲವಿಂಗ್ ಗಂಡಸರಿಗೆ!!

******
ಅವ್ಯಕ್ತ…

About The Author

1 thought on “ಕಾವ್ಯಯಾನ”

  1. ತುಂಬಾ ಚೆನ್ನಾಗಿದೆ… ಆದರೆ ಇದೇ ನಿಜವಲ್ಲ… ಓದಿ ಆನಂದಿಸಿ

Leave a Reply

You cannot copy content of this page

Scroll to Top