ತಾಮ್ರದ ಕೊಡ
ಸಂಜಯ ಮಹಾಜನ
ತಾಮ್ರದ ಕೊಡ
ಭಾರವಾದವೋ ತಾಮ್ರದ ಕೊಡ
ತಲೆಯ ಮೇಲೆ ಭಾರದಾದವೋ
ತಾಮ್ರದಕೊಡ ಕಾಣದಾದವೋ
ನುರು ವರುಷ ಹೊಳಪು ತಾಳಿತಾದರೂ
ತಲೆಯಮೇಲೆ ಹೊತ್ತು ಭಾರ ತಾಳದಾದವೋ
ತಾಮ್ರದಕೊಡ ಕಾಣದಾದವೋ
ಆರೋಗ್ಯ ವೃದ್ಧಿಸಿದರೂ
ತಾಂಮ್ರದ ಕೊಡ ವೃದ್ಧಿಯಾಗಲಾರವೋ
ತಾಮ್ರದಕೊಡ ಕಾಣದಾದವೋ
ತೂತುಬಿದ್ದ ಕರಳುಗಳಿಗೆ ಅಮೃತ ಬಿಂದು ನೀಡಿತಾದರೂ
ಕೊಡದ ತಳಕೆ ಬಿದ್ದ ತೂತು ತುಂಬದಾದವೋ
ತಾಮ್ರದಕೊಡ ಕಾಣದಾದವೋ
ಹಳೆಯ ಕೊಡ ಅಟ್ಟದಲಿ ಉಳಿಯಿತಾದರೂ
ಹೊಳಪು ಕಳೆದುಕೊಂಡು ಕಪ್ಪಾಗಿ ಮಾತನಾಡದಾದವೋ
ತಾಮ್ರದಕೊಡ ಕಾಣದಾದವೋ
ತವರಿನಿಂದ ಉಡುಗೊರೆಯಾಗಿ ಬಂದಿತಾದರೂ
ತವರ ಸಿರಿಯ ನೆನಪು ಮಾಸದಾದವೋ
ತಾಮ್ರದಕೊಡ ಕಾಣದಾದವೋ
ಶುಭ ಸಮಾರಂಭದಲ್ಲಿ ಅಲ್ಪ ಬಳಕೆಯಾರೂ
ಶುಭಾರಂಭಗಳಲ್ಲಿ ಮೊದಲಾದವೋ
ತಾಮ್ರದಕೊಡ ಕಾಣದಾದವೋ
ವರುಷಗಳ ಹಿಂದೆ ಮೌಲ್ಯ ಕಡಿಮೆಯಾಗಿದ್ದರೂ
ವರುಷ ವರುಷ ಉರುಳಿದರೂ ಮೌಲ್ಯ ಕಳೆದುಕೋಳ್ಳದಾದವೋ
ತಾಮ್ರದಕೊಡ ಕಾಣದಾದವೋ
***********