ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನನ್ನ ಕನಸಿನ ಹುಡುಗಿಗೆ ಒಂದು ಕವಿತೆ

Human Hands Forming Heart on White Surface

ಮೂಗಪ್ಪ ಗಾಳೇರ

ನನ್ನ ಕನಸಿನ ಹುಡುಗಿಗೆ ಒಂದು ಕವಿತೆ


ನನ್ನೆಲ್ಲಾ ಒಂದೊಂದು ಕನಸುಗಳಿಗೆ
ಬಣ್ಣ ಹಚ್ಚಿದವಳು ನೀನು
ರೆಕ್ಕೆಪುಕ್ಕ ಕಟ್ಟಿದವಳು ನೀನು
ಆ ಕನಸುಗಳಿಗೆ ಜೀವ ತುಂಬಿದ
ರಮಣೀಯ ಕಾಮ ದೇವಿಯ ಪುತ್ರಿ ನೀನು

ನಿನ್ನ ಕಂಡೊಡನೆ
ನನ್ನ ಹೃದಯದ ಇಂಚರದ ಮೇಳ
ತಾನು ತಾನಾಗಿ ನುಡಿಯದೆ
ಹೊಸದೊಂದು
ಸಂಗೀತ ಸ್ವರ ಲೋಕ ಸೃಷ್ಟಿಸುತ್ತದೆ

ನಿನ್ನ ಮಾತುಗಳೆಲ್ಲವು
ಒಂದೊಂದು ಬಾರಿ
ಅದೆಂತಾ ಮೌನ ಲೋಕ ಸೃಷ್ಟಿಸುತ್ತವೆ
ಆ ಲೋಕದಲ್ಲಿ
ಹೃದಯದ ನಾದವೊಂದೆ ಮಾತಾಗಿರುತ್ತದೆ

ಅಂತ ಚೆಲುವು ನನ್ನುಡುಗಿ
ಎಂದೆಳಲು ನನ್ನ ಕವನ ಮಿಡಿಯುತಿದೆ
ಕನಸಲ್ಲಿ ಹೃದಯ ಕದಿಯುವ
ಆ ನನ್ನ ಪ್ರೇಮ ಕಳ್ಳಿಗೆ
ಪ್ರೇಮಿಗಳ ದಿನದ ಶುಭಾಶಯಗಳು

**********

About The Author

Leave a Reply

You cannot copy content of this page

Scroll to Top