ಅಂಕಣ ಸಂಗಾತಿ ಸುಜಾತಾ ರವೀಶ್ ವೃತ್ತಿ ವೃತ್ತಾಂತ ವೃತ್ತಿ ಬದುಕಿನ ಹಿನ್ನೋಟ-36 ನಾವು ಆ ಶಾಖೆಗೆ ಹೋದಾಗ ಶಾಖಾಧಿಕಾರಿ ಆಗಿದ್ದವರು ಶ್ರೀ ಸತ್ಯನಾರಾಯಣ ಅವರು. ಅವರು ಮೂಲತಃ ಶ್ರೀನಿವಾಸಪುರರದವರು. ನನ್ನ ತಂದೆಯ ಊರು ಸಹ ಅದೇ ಆಗಿದ್ದು ಕೆಲವು ಹಳಬರನ್ನು ನೆನೆಸಿಕೊಂಡು ಮಾತನಾಡುತ್ತಿದ್ದೆವು. ಅವರಿಗೆ ಆಫೀಸಿನಲ್ಲೇ ಹೃದಯಘಾತ ಆಗಿತ್ತು. .ನಂತರ ಚೇತರಿಸಿಕೊಂಡರು. ಆದರೆ ನಮಗೆಲ್ಲ ಒಂದು ರೀತಿಯ ಶಾಕ್ ಆಗಿದ್ದಂತೂ ನಿಜ .ಆಗ ಇಷ್ಟೆಲ್ಲ ಹೃದಯಾಘಾತಗಳ ವಿಷಯ ಕೇಳದೆ ಇದ್ದರಿಂದ ಅದು ಅಪರೂಪದ ಸಂಗತಿಯಾಗಿತ್ತು. ಹಾಗೆಯೇ ಶಾಖೆ ಎರಡರಲ್ಲಿ ಅತ್ಯಂತ ನೆನಪಿನಲ್ಲಿ ಉಳಿದ ವಿಷಯವೆಂದರೆ ಜನವರಿ ಒಂದನೆಯ ತಾರೀಕು ನಾವು ಹೆಂಗಳೆಯರೆಲ್ಲ ಸೇರಿ ಗೋಸಾಯಿ ಘಾಟ್ ಗೆ ಪ್ರವಾಸ ಹೋಗಿದ್ದು. ಆ ಬಾರಿ ಜನವರಿ ಒಂದನೆಯ ತಾರೀಕು ಶನಿವಾರ ಬಂದದ್ದು ಅಂದು ನಮಗೆ ಅರ್ಧ ದಿನ ಮಾತ್ರ ಕಚೇರಿ ಆದ್ದರಿಂದ ನೀವು ಪ್ರವಾಸವನ್ನು ಯೋಚಿಸಿದೆ ಕೆಳಗಡೆ ಇದ್ದ ಟ್ರಾವೆಲ್ ಏಜೆನ್ಸಿಯಲ್ಲಿ ಒಂದು ಸಣ್ಣ ಮೆಟದ ಬುಕ್ ಮಾಡಿಕೊಂಡು ಮದ್ಯಾಹ್ನ ಹೊರಟೆವು ಎಲ್ಲರೂ ಅವರವರ ಮನೆಯಿಂದ ವಿಶೇಷ ತಿಂಡಿಗಳನ್ನು ಮಾಡಿಕೊಂಡು ಬರುವುದಾಗಿ ನಾನು ಅಂದು ಅವರೇ ಕಾಳು ರೊಟ್ಟಿ ಮಾಡಿ ತಂದಿದ್ದೆ. ಹತ್ತು ರೊಟ್ಟಿಗಳು ನಮಗಾಗಿ ಹಾಗೂ ಮತ್ತೆ ಎರಡು ಬೇರೆ ಬಾಕ್ಸ್ ನಲ್ಲಿ ಮಂಜುಗಾಗಿ. ತುಂಬಾ ಖುಷಿಯಾಗಿ ತಿಂದಿದ್ದ ಅಂದು.ಸರಿ ಅಲ್ಲಿ ಮಧ್ಯಾಹ್ನ ಹೋದ ತಕ್ಷಣ ಎಲ್ಲರೂ ಡಬ್ಬಿಗಳಿಂದ ಹಂಚಿಕೊಂಡು ತಿಂದದ್ದಾಯಿತು. ಇನ್ನು ಮೂರು ರೊಟ್ಟಿಗಳು ಉಳಿದಿದ್ದನ್ನು ರಾಜಿ ಮನೆಗೆ ತೆಗೆದುಕೊಂಡು ಹೋದಳು. ಸುಮಾ ತಂದಿದ್ದ ಉಳಿದ ಪೂರಿ ಆಲೂಗೆಡ್ಡೆ ಪಲ್ಯ ನಾನು ಮನೆಗೆ ತೆಗೆದುಕೊಂಡು ಬಂದೆ. ಸ್ವಲ್ಪ ಹೊತ್ತು ನೀರಿನಲ್ಲಿ ಇಳಿದು ಹಾಡಿ ನಂತರ ದೋಣಿಯಲ್ಲಿ ಒಂದು ರೌಂಡ್ ಹೋಗಿ ಬಂದು ಐದು ಗಂಟೆಗೆ ಮತ್ತೆ ಮೈಸೂರಿಗೆ ವಾಪಸ್ ಆಗಿದ್ದೆವು ಪ್ರತಿ ವರ್ಷ ಜನವರಿ ಒಂದನೆಯ ತಾರೀಕು ಆ ದಿನ ನಾವು ಹೋದ ಪ್ರವಾಸದ ನೆನಪು ಆಗುತ್ತಲೇ ಇರುತ್ತದೆ.ಹಾಗೆ ಮತ್ತೊಂದು ಕಹಿ ನೆನಪು ಎಂದರೆ ಪ್ರತಿ ನಿಧಿ ಬಾಂಧವರೂ ಪರ ಮನೆಯ ಗೃಹಪ್ರವೇಶಕ್ಕೆ ಹೋದಾಗ ನನ್ನದೊಂದು ಸಣ್ಣ ಚಿನ್ನದ ಸರ ಕಳೆದುಹೋದದ್ದು. ನಂಜನಗೂಡಿನ ಗೆಳತಿ ಇಂದುಮತಿ ಅವರ ತಮ್ಮನ ಮೂಲಕ ದುಬೈ ನಿಂದ ತರಿಸಿದ್ದ ೫ ಗ್ರಾಂ ನ ಸರ. ಬಹಳ ವರ್ಷಗಳಿಂದ ಭೇಟಿ ಆಗದೆ ಇದ್ದ ಪಿಯುಸಿ ಗೆಳತಿ ಲತಾ ಅವರ ನೆರೆಯ ಮನೆಗೆ ನಾವು ಗೃಹಪ್ರವೇಶಕ್ಕೆ ಹೋಗಿದ್ದು ಅವಳು ಸಿಕ್ಕಿದ್ದು ತುಂಬಾ ಖುಷಿಯಾಗಿತ್ತು. ಆಗಿನು ಮೊಬೈಲು ಕಾಲಿಟ್ಟ ಸಮಯ ಅವಳ ಬಳಿ ನನ್ನ ಬಳಿ ಇಬ್ಬರ ಬಳಿಯೂ ಮೊಬೈಲ್ ಇರಲಿಲ್ಲ ಹಾಗಾಗಿ ಮತ್ತೆ ಸ್ನೇಹ ಮುಂದುವರಿಸಲು ಆಗಲಿಲ್ಲ. ಮೊದಲೇ ಹೇಳಿದಂತೆ ಮನೆಯ ಬಳಿ ಇದ್ದ ಶಾಖೆ ಐದಕ್ಕೆ ವರ್ಗಾವಣೆ ಕೇಳಿದ್ದು ಆದರೆ ಅಲ್ಲಿ ಹೆಚ್ ಜಿ ಎ ಅಂದರೆ ನಮ್ಮ ಪೋಸ್ಟ್ ಖಾಲಿ ಇರಲಿಲ್ಲ. ಅಲ್ಲಿಗೆ ವರ್ಗಾವಣೆ ಬಯಸಿದವರಲ್ಲಿ ನನ್ನ ಜೊತೆಗೆ ಬಂದು ರಿಪೋರ್ಟ್ ಆದ ಮೊದಲನೇ ಸ್ಥಾನ ಹಾಗೂ ನನ್ನದು ಎರಡನೆಯ ಸ್ಥಾನ. ಅಲ್ಲಿ ಪೋಸ್ಟ್ ಖಾಲಿ ಇಲ್ಲ ಅಂದಮೇಲೆ ಈ ವರ್ಷ ನಮಗೆ ವರ್ಗಾವಣೆ ಇಲ್ಲ ಎಂದು ಖಾತ್ರಿ ಯಾಗಿತ್ತು ಆದರೆ ಇಲ್ಲಿನ ವಾತಾವರಣ ತುಂಬಾ ಚೆನ್ನಾಗಿ ಇದ್ದುದರಿಂದ ಇನ್ನೂ ಒಂದು ವರ್ಷ ಹಾಯಾಗಿ ಇರಬಹುದು ಆದರೆ ಈ ಶಾಖೆ ಇವಾಗ ಕಟ್ಟಡಕ್ಕೆ ಅಂದರೆ ಬನ್ನಿ ಮಂಟಪಕ್ಕೆ ಸ್ಥಳಾಂತರ ಗೊಳ್ಳುವ ಯೋಜನೆ ಇತ್ತು. ಹಾಗಾಗಿ ಸ್ಥಳಾಂತರಗೊಳ್ಳುವ ಮೊದಲು ನಮಗೆ ವರ್ಗಾವಣೆ ಸಿಕ್ಕಿದರೆ ಒಳ್ಳೆಯದು ಎಂದಿತ್ತು. ಏಕೆಂದರೆ ನಮ್ಮ ಏರಿಯಾದಿಂದ ಬನ್ನಿಮಂಟಪಕ್ಕೆ ಎರಡೆರಡು ಬಸ್ ಹಿಡಿದು ಹೋಗಬೇಕಿತ್ತು. ಬಹಳ ದೂರವೂ ಇತ್ತು. ಆ ದೇವರಿಗೆ ನಮ್ಮ ಮೊರೆ ಕೇಳಿಸಿತೇನೋ ಎಂಬಂತೆ ಆ ವರ್ಷ ಶಾಖೆ ಎರಡರ ಇಬ್ಬರಿಗೆ ಸಹಾಯಕ ಅಧಿಕಾರಿಗಳಾಗಿ ಬಡ್ತಿ ಸಿಕ್ಕಿತು ಗಿರಿಜಾ ಮತ್ತು ರೇಣುಕುಮಾರಿ ಇಬ್ಬರು ಪದೋನ್ನತಿ ಹೋಗಲು ಒಪ್ಪಿಗೆ ಕೊಟ್ಟಿದ್ದರಿಂದ ನಮಗೆ ಅಲ್ಲಿ ಎರಡು ಪೋಸ್ಟ್ ಖಾಲಿ ಆಗಿತ್ತು, ಇನ್ನು ವರ್ಗಾವಣೆ ಆದೇಶ ಬರುವುದಷ್ಟೇ ಬಾಕಿ. ನಾನು ರಜೆ ಹಾಕಿದ್ದೆ. ಒಂದ್ಸಲ ನಮ್ಮ ಮನೆಯಲ್ಲಿ ಕಾಲ್ ಮಾಡಿದ್ದಳು ನನ್ನ ರಿಲವಿಂಗ್ ಆರ್ಡರ್ ಬಂದಿದ್ದು 15ನೆಯ ತಾರೀಕು ನಾವು ಆಗಬೇಕಿತ್ತು ಅಂದೇ ಮಧ್ಯಾಹ್ನ ನಾವಿಬ್ಬರೂ ಯಾಕೆಯವರಿಗೆ ಊಟ ಕೊಡಿಸೋಣವ ಎಂದು ಕೇಳಿದಳು ಆಯಿತು ಎಂದು ಹೇಳಿ ಹಬ್ಬದ ಮಾರನೆಯ ದಿನ ಮಧ್ಯಾಹ್ನ ನಮ್ಮ ಪಾರ್ಟಿ ಕೊಟ್ಟು ಸಂಜೆಗೆ ರಿಲೀಸ್ ಆದದ್ದು 1೭ನೆಯ ತಾರೀಕು ಸೋಮವಾರ ನಾವು ಶಾಖೆ ಐದಕ್ಕೆ ರಿಪೋರ್ಟ್ ಆಗಬೇಕಿತ್ತು ಈ ಹಿಂದೆ ನಂಜನಗೂಡಿನಲ್ಲಿ ನಮಗೆ ಬ್ರಾಂಚ್ ಮ್ಯಾನೇಜರ್ ಆಗಿದ್ದ ಸಿಕೆ ರವಿ ಅವರೇ ಅಲ್ಲಿ ಈಗ ಶಾಖಾಧಿಕಾರಿಗಳು ಅವರು ಶಾಖೆಗೆ ಫೋನ್ ಮಾಡಿ ನನಗೆ ಹೊಸ ವ್ಯವಹಾರ ವಿಭಾಗ ಕೊಡುವುದಾಗಿ ತಿಳಿಸಿದರು. ವತ್ಸಲಾಗೆ ಮಾರುಕಟ್ಟೆ ವಿಭಾಗ. ನನ್ನದೇನೂ ಅಭ್ಯಂತರವಿರಲಿಲ್ಲ. ಅಂತೂ ಇಂತೂ ಶಾಖೆ ಐದಕ್ಕೆ ಬಂದು ರಿಪೋರ್ಟ್ ಆದೆವು. ಮೊಟ್ಟ ಮೊದಲ ಬಾರಿ ಡ್ಯೂಟಿ ರಿಪೋರ್ಟ್ ಜೊತೆಗೆ ವರ್ಗಾವಣೆ ಕೋರಿಕೆ ಪತ್ರ ಇರಲಿಲ್ಲ. ಮುಂದೆ ನಿವೃತ್ತಿಯಾಗುವವರೆಗೂ ಬರೋಬರಿ 21 ವರ್ಷ ಇದೆ ಶಾಖೆಯಲ್ಲಿ ಸೇವೆ ಸಲ್ಲಿಸುತ್ತೇವೆ ಎಂಬ ಅಂದಾಜು ಸಹ ಅಂದು ಇರಲಿಲ್ಲ. ಸಾಹುಕಾರ್ ಚನ್ನಯ್ಯ ರಸ್ತೆಯಲ್ಲಿ ಇದ್ದ ಆ ಶಾಖೆಯ ಪಕ್ಕದಲ್ಲಿ ರಾಜ್ಯ ಸರ್ಕಾರದ ಕೆ ಜಿ ಐ ಡಿ ಕಚೇರಿಯೂ ಸಹ ಇತ್ತು. ರಸ್ತೆಯ ಎಡಬದಿಯಲ್ಲಿ ಇದ್ದ ಆ ಶಾಖೆ 2 ಅಂತಸ್ತಿನದಾಗಿತ್ತು ನನ್ನ ಹೊಸ ವ್ಯವಹಾರ ವಿಭಾಗ ಮೊದಲನೆಯ ಮಹಡಿಯಲ್ಲಿ ಇತ್ತು. ಮೊದಲಿಂದ ಪರಿಚಿತರಾಗಿದ್ದ ಶೈಲಾ ವೀಣಾ ಮಂಗಳ ಶಾಂತ ಹಾಗೂ ಎದುರು ಮನೆಯಲ್ಲಿ ಇದ್ದ ಸಾವಿತ್ರಿ ಎಲ್ಲರೂ ಇಲ್ಲೇ ಇದ್ದರು. ಹೊಸ ವಾತಾವರಣ ಅನಿಸಲೇ ಇಲ್ಲ ತುಂಬಾ ಬೇಗ ಅಂದುಕೊಳ್ಳುವಂತೆ ಆಯಿತು.ನಮ್ಮ ಹೊಸ ವ್ಯವಹಾರ ವಿಭಾಗಕ್ಕೆ ರಾಜೇಂದ್ರ ಅವರು ಸಹಾಯಕ ಆಡಳಿತ ಅಧಿಕಾರಿಗಳಾಗಿ ಇದ್ದರೆ ಸಹಾಯಕ ರಾಗಿ ನನ್ನದೇ ಹೆಸರಿನ ಜಿ ಸುಜಾತ ಮತ್ತು ಗುರುರಾಜ್ ಅವರು ಅಲ್ಲಿ ಇಬ್ಬರು ಹೆಜ್ಜೆಯಗಳಿದ್ದು ನಮ್ಮದೇ ಯೂನಿಯನ್ ನ ಸಿ ಚಂದ್ರಕುಮಾರ್ ಅವರು ಸಹ ಅದೇ ವಿಭಾಗದಲ್ಲಿ ಇದ್ದರು. ಆಗಿಲ್ಲ ಪಾಲಿಸಿಗಳು ಹೆಚ್ಚಾಗಿ ಬರುತ್ತಿದ್ದು ಆ ವಿಭಾಗದಲ್ಲಿ ಕೈ ತುಂಬಾ ಕೆಲಸ ಇತ್ತು ಆಸಕ್ತಿದಾಯಕವಾಗಿಯೂ ನಾನು ಈ ಮೊದಲು ಅದೇ ಹೊಸ ವ್ಯವಹಾರ ವಿಭಾಗದಲ್ಲಿ ಮಾಡಿದಾಗ ಪೂರ್ತಿ ಮಾನ್ಯುಯಲ್ ಕೆಲಸಗಳಿತ್ತು ಈಗ ಎಲ್ಲವೂ ಕಂಪ್ಯೂಟರ್ನಲ್ಲಿ ಮಾಡಬೇಕಿತ್ತು ಹೊಸದಾಗಿ ಕಲಿಯುವ ಆಸಕ್ತಿಯು ತುಂಬಾ ಖುಷಿಯಾಗುವಂತಿತ್ತು. ರವೀಶ್ ಅವರು ಊರಿನಲ್ಲಿ ಇದ್ದಾಗ ಮದ್ಯಾಹ್ನ ಊಟಕ್ಕೂ ಸಹ ಕರೆದುಕೊಂಡು ಹೋಗಿ ಬಂದು ಬಿಡುತ್ತಿದ್ದರು. ಸಕಲೇಶಪುರ ಬಿಟ್ಟ ಮೇಲೆ ಮಧ್ಯಾಹ್ನ ಮನೆಯ ಬಿಸಿಯೂಟ ಮತ್ತೆ ದೊರೆಯಿತು ಅನ್ನಬಹುದು.(ಮುಂದುವರೆಯುವುದು) ಸುಜಾತಾ ರವೀಶ್
“ಸಂಗೀತ ಶಿಕ್ಷಣ ಮತ್ತು ಮಕ್ಕಳ ಕಲಿಕೆ” ವೀಣಾ ಹೇಮಂತ್ ಗೌಡ ಪಾಟೀಲ್
ಮಕ್ಕಳ ಸಂಗಾತಿ “ಸಂಗೀತ ಶಿಕ್ಷಣ ಮತ್ತು ಮಕ್ಕಳ ಕಲಿಕೆ” ವೀಣಾ ಹೇಮಂತ್ ಗೌಡ ಪಾಟೀಲ್ ಅದೆಷ್ಟೇ ಮನಸ್ಸು ಕ್ಷೋಭೆಗೊಳಗಾಗಿರಲಿ ಆತಂಕಿತ ವಾಗಿರಲಿ ಸಂಗೀತದ ನಾದ ತರಂಗಕ್ಕೆ ಮನದ ನೋವು ನಿವಾರಿಸುವ ಶಕ್ತಿ ಇದೆ. ಮನಸ್ಸನ್ನು ಸಮಾಧಾನಗೊಳಿಸುವ, ಆಳವಾದ ನೆಮ್ಮದಿಯನ್ನು ನೀಡುವ ಮನಸ್ಸನ್ನು ಅದ್ವಿತೀಯ ವಿಶ್ರಾಂತ ಸ್ಥಿತಿಗೆ ಕರೆದೊಯ್ಯುವ ಶಕ್ತಿ ಇದೆ…. ಸಂಗೀತ ನಮ್ಮನ್ನು ನಾವಿರುವ ಭಾವದಿಂದ ತನ್ನದೇ ಆದ ಲೋಕಕ್ಕೆ ಕರೆದೊಯ್ಯುತ್ತದೆ.ಲಲಿತ ಕಲೆಗಳಲ್ಲಿ ಒಂದಾದ ಸಂಗೀತವು ಮಕ್ಕಳಲ್ಲಿ ರಾಗ, ತಾಳ, ಲಯಗಳ ಜ್ಞಾನದ ಜೊತೆಗೆ ಹತ್ತು ಹಲವು ವಿಭಿನ್ನ ಸಂಗತಿಗಳಲ್ಲಿ ಹೆಚ್ಚಿನ ಕಲಿಕೆಯನ್ನು ನೀಡುತ್ತದೆ.ವ್ಯಕ್ತಿಯ ಬೌದ್ಧಿಕ ಭಾವನಾತ್ಮಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಬದುಕಿಗೆ ಒಳ್ಳೆಯ ಬುನಾದಿಯನ್ನು ಹಾಕುತ್ತದೆ. ಆದ್ದರಿಂದಲೇ ಮಕ್ಕಳನ್ನು ಚಿಕ್ಕಂದಿನಲ್ಲಿಯೇ ಸಂಗೀತ ಕಲಿಯಲು ಪ್ರೋತ್ಸಾಹಿಸಲಾಗುತ್ತದೆ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಆಟ ಪಾಠಗಳಂತೆ ಲಲಿತ ಕಲೆಗಳಲ್ಲಿ ಒಂದಾದ ಸಂಗೀತವೂ ಕೂಡ ಅತ್ಯವಶ್ಯಕ ಎಂಬುದನ್ನು ಮನಗಂಡಿರುವ ಶಿಕ್ಷಣ ಇಲಾಖೆಯು ಶಾಲೆಗಳಲ್ಲಿ ಪ್ರತಿ ವಾರಕ್ಕೆ ಎರಡರಿಂದ ಮೂರು ಅವಧಿಯಲ್ಲಿ ಸಂಗೀತ ಶಿಕ್ಷಣವನ್ನು ಕಡ್ಡಾಯವಾಗಿ ಕಲಿಸುವ ವ್ಯವಸ್ಥೆ ಮಾಡಿದೆ. ಪರಿಣಾಮವಾಗಿ ಶಾಸ್ತ್ರೀಯವಾಗಿ ಸಂಗೀತವನ್ನು ಕಲಿಯದೆ ಹೋದರೂ ಕೂಡ ತಕ್ಕಮಟ್ಟಿಗೆ ಸಂಗೀತದ ಜ್ಞಾನ ಮಕ್ಕಳಿಗೆ ದೊರೆಯುತ್ತದೆ. ಸಂಗೀತ ಕಲೆ…. ಕೇವಲ ಕಲೆಯಲ್ಲ..ಅದು ಜೀವನವನ್ನು ಅರಿಯುವ ಮಾರ್ಗ. ಸಂಗೀತವನ್ನು ಕಲಿಯುವ ಮಕ್ಕಳಲ್ಲಿ ಗಮನಾರ್ಹ ಬದಲಾವಣೆಯನ್ನು ನಾವು ಕಾಣಬಹುದು. ಸೂಕ್ಷ್ಮವಾದ ಹಾಗೂ ಅತ್ಯುತ್ತಮವಾದ ಗ್ರಹಿಕೆಯ ಶಕ್ತಿ ಮಕ್ಕಳದಾಗುತ್ತದೆ. ಸ್ಮರಣಶಕ್ತಿ ಕೂಡ ಹೆಚ್ಚುತ್ತದೆ. ಚಿಕ್ಕ ಪುಟ್ಟ ಬದಲಾವಣೆಗಳಿಂದ ಉಂಟಾಗುವ ವ್ಯತ್ಯಾಸಗಳ ಅರಿವು ಮೂಡುತ್ತದೆ…. ಇದರ ಪರಿಣಾಮವಾಗಿ ಮಕ್ಕಳು ಶಾಲೆಯ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಹಾಗೂ ಬದುಕಿನ ಎಲ್ಲಾ ಹಂತಗಳಲ್ಲಿ ತಮ್ಮ ಗ್ರಹಣ ಶಕ್ತಿಯ ಸೂಕ್ಷ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಾರೆ. ಸಂಗೀತ ಶಿಕ್ಷಣವು ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸುತ್ತದೆ. ಸಂಗೀತದ ಮೂಲಕ ಮಕ್ಕಳು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುವಂತೆ ಮಕ್ಕಳನ್ನು ಕ್ರಿಯಾಶೀಲಗೊಳಿಸುತ್ತದೆ. ಮಕ್ಕಳ ಸೃಜನಶೀಲತೆ ಅರಳುವುದು ಇಂತಹ ಕ್ರಿಯಾಶೀಲ ಅಭಿವ್ಯಕ್ತಿಗಳಿಂದ ಮಾತ್ರ. ಹೊಸ ವಿಚಾರಗಳನ್ನು ಅರಿಯಲು, ಹೊಸ ವಿಷಯಗಳನ್ನು ಪ್ರಸ್ತುತಪಡಿಸಲು ಸಂಗೀತವು ಅವರಿಗೆ ಸೂಕ್ಷ್ಮವಾದ ಕಲಿಕಾ ಕೌಶಲ್ಯವನ್ನು ನೀಡುತ್ತದೆ.ಸಂಗೀತದಿಂದ ಮಾನಸಿಕ ಶಾಂತಿ, ನೆಮ್ಮದಿ ದೊರೆಯುತ್ತದೆ ಎಂದರೆ ಅಚ್ಚರಿ ಪಡದಿರಿ. ನಿರಂತರವಾಗಿ ಸಂಗೀತದ ಅಭ್ಯಾಸವನ್ನು ಮಾಡುವುದರಿಂದ ಹಾಗೂ ಒಳ್ಳೆಯ ಸುಮಧುರವಾದ ಸಂಗೀತವನ್ನು ಕೇಳುವ ಮೂಲಕ ಉದ್ರಿಕ ನರಗಳನ್ನು ಶಾಂತಗೊಳಿಸಬಹುದು. ಮೈ-ಮನಗಳಲ್ಲಿ ನೆಮ್ಮದಿ ಹಾಗೂ ಶಾಂತಿಯನ್ನು ತರುವ ಸಂಗೀತದ ನಾದ ತರಂಗಗಳು ಮನಸ್ಸಿನ ಬೇಗುದಿಯನ್ನು ತೊಡೆದು ಹಾಕುವ ಮೂಲಕ ಶಾಂತ ಮನಸ್ಥಿತಿಗೆ ಕಾರಣವಾಗುತ್ತದೆ. ಸಂಗೀತವು ವ್ಯಕ್ತಿಯ ಆತ್ಮವಿಶ್ವಾಸ ವೃದ್ದಿಗೆ ಸಾಧನ…. ನಿರಂತರವಾದ ತರಬೇತಿಯ ಮೂಲಕ ಕಲಿಕೆಯಲ್ಲಿ ಆತ್ಮವಿಶ್ವಾಸ ಹೆಚ್ಚಿದರೆ, ವೇದಿಕೆಯನ್ನು ಏರಿ ಕಲಿತ ವಿದ್ಯೆಯನ್ನು ಪ್ರಸ್ತುತಪಡಿಸಲು ಅತ್ಯವಶ್ಯಕವಾದ ಧೈರ್ಯವನ್ನು ಸಂಗೀತವು ನೀಡುತ್ತದೆ. ಆತ್ಮವಿಶ್ವಾಸ ವೃದ್ಧಿಗೆ ಇದಕ್ಕಿಂತ ಇನ್ನೇನು ಬೇಕು ? ಸಾರ್ವಜನಿಕರೊಂದಿಗೆ ಸಂವಹನ ಸಾಧ್ಯವಾಗುತ್ತದೆ. ಮತ್ತಷ್ಟು ಮಗದಷ್ಟು ಕಲಿಕಾ ಆಸಕ್ತಿ ಹೆಚ್ಚುತ್ತದೆ.ಸಾಂಸ್ಕೃತಿಕ ಮೌಲ್ಯಗಳ ಪರಿಚಯ ಮಾಡಿಕೊಡುವ ಸಂಗೀತವು ನಮ್ಮ ದೇಶದ ಮಹೋನ್ನತ ಸಂಗೀತ ಪರಂಪರೆಯ ಅರಿವನ್ನು ಮೂಡಿಸುತ್ತದೆ. ವಿವಿಧ ರಾಗ ತಾಳ ಲಯಗಳ ಜ್ಞಾನವನ್ನು ನಮಗೆ ಪ್ರಚುರಪಡಿಸುತ್ತದೆ. ಸಂಗೀತದ ವೈವಿಧ್ಯಗಳ ಕುರಿತು ಹೊಸ ಕುತೂಹಲವನ್ನು ಮೂಡಿಸುತ್ತದೆ. ವಿವಿಧ ಶೈಲಿಗಳ, ತಾಳ ವಾದ್ಯಗಳ ಅರಿವನ್ನು ಮೂಡಿಸಿ ನಮ್ಮ ಮಹೋನ್ನತ ಗುರು ಪರಂಪರೆಯ ಕುರಿತು ಕೃತಜ್ಞತಾ ಭಾವವನ್ನು ಮೂಡಿಸುತ್ತದೆ. ಸಂಗೀತ ಕಲಿಕೆಯು ನಮ್ಮ ಬದುಕಿನಲ್ಲಿ ಶಿಸ್ತಿನ ಪಾಲನೆಗೆ ಕಾರಣವಾಗುತ್ತದೆ… ಪ್ರತಿದಿನವೂ ಸಂಗೀತವನ್ನು ಕಲಿಯುವ ನಿಟ್ಟಿನಲ್ಲಿ ತರಬೇತಿ ಹೊಂದುವ ಪ್ರತಿ ಮಗುವು ಕೂಡ ತಮ್ಮದೇ ಆದ ಕೆಲ ಪದ್ಧತಿಗಳನ್ನು ರೂಡಿಸಿಕೊಳ್ಳುತ್ತಾರೆ. ತಮಗೆ ಒಗ್ಗುವ ಊಟೋಪಚಾರ, ಆಹಾರ ವಿಹಾರಗಳನ್ನು ಪಾಲಿಸುತ್ತಾರೆ ಇದು ಅವರಲ್ಲಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಶಿಸ್ತಿನ ಪರಿಪಾಲನೆಗೆ ಸಹಕಾರಿಯಾಗುತ್ತದೆ. ನಿಯಮ ಹಾಗೂ ಸಮಯ ಪಾಲನೆಯ ಕಾರಣದಿಂದಾಗಿ ಒಂದು ಬಗೆಯ ಶಿಸ್ತು ಅವರಲ್ಲಿ ಉಂಟಾಗುತ್ತದೆ. ಗುಂಪಿನಲ್ಲಿ ಹಾಡುವ ಮೂಲಕ ಸಾಮಾಜಿಕ ಸಾಂಗತ್ಯದ ಸಾಮರ್ಥ್ಯ ಬೆಳೆಯುತ್ತದೆ ವಿಭಿನ್ನತೆಯಲ್ಲಿಯೂ ಏಕತೆಯನ್ನು ಕಾಣುವ ಶಕ್ತಿ ಸಂಗೀತಕ್ಕಿದೆ. ಇತರರಲ್ಲಿರುವ ವಿಭಿನ್ನ ಗ್ರಹಿಕೆಯ ಶಕ್ತಿ,, ಕಲಿಕಾ ಸಾಮರ್ಥ್ಯ, ಸಮಯ ಪಾಲನೆ, ಶ್ರದ್ಧೆ,ಕಾರ್ಯ ತತ್ವರತೆಗಳು ನಮ್ಮನ್ನು ಪ್ರೇರೇಪಿಸುತ್ತವೆ. ಸಂಗೀತವು ಸ್ನೇಹ ಭಾವವನ್ನು ಹಾಗೂ ಗೌರವವನ್ನು ವೃದ್ಧಿಸುತ್ತದೆ. ನಮ್ಮ ಮನದಾಳದ ಮಾತುಗಳನ್ನು ನಮಗರಿವಿಲ್ಲದೆ ಸಂಗೀತದ ಮೂಲಕ ಹೊರಹಾಕುವ ಪ್ರತಿ ವ್ಯಕ್ತಿಯು ಇನ್ನಿಲ್ಲದ ನಿರುಮ್ಮಳತೆಯನ್ನು ಅನುಭವಿಸುತ್ತಾರೆ….ಆದ್ದರಿಂದ ತರಗತಿಯ ಕೋಣೆಯಲ್ಲಿ ಕಡ್ಡಾಯವಾಗಿ ದೊರೆಯುವ ಸಂಗೀತ ಶಿಕ್ಷಣದಿಂದ ನಿಮ್ಮ ಮಕ್ಕಳನ್ನು ವಂಚಿತಗೊಳಿಸದಿರಿ. ವೀಣಾ ಹೇಮಂತ್ ಗೌಡ ಪಾಟೀಲ್
“ಸಂಗೀತ ಶಿಕ್ಷಣ ಮತ್ತು ಮಕ್ಕಳ ಕಲಿಕೆ” ವೀಣಾ ಹೇಮಂತ್ ಗೌಡ ಪಾಟೀಲ್ Read Post »
ಧಾರಾವಾಹಿ ಸಂಗಾತಿ-21 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್ ಚೇತನ ಜಯದೇವಿ ತಾಯಿಯವರು ಕೋರ್ಟ್ ಕೇಸ್ನ್ನ ಗೆದ್ದು…..“ನ್ಯಾಯಕ್ಕೆ ಜೀವ ತುಂಬಿದರು.*ಆಗಿನ ಕಾಲದಲ್ಲಿ ಜಯದೇವಿ ತಾಯಿಯವರ ಪತಿಯು ಬಾಲಕರೆಂದು ಬ್ರಿಟಿಷರ ಮೇಲ್ವಿಚಾರಣೆಯಲ್ಲಿದ್ದ ದೊಡ್ಡ ಆಸ್ತಿ, ಜಮೀನು, ಮನೆ, ವ್ಯವಹಾರ—ಎಲ್ಲವು ಒಂದೇ ಕ್ಷಣದಲ್ಲಿ ತಾಯಿ ಯ ಹೆಗಲ ಮೇಲೆ ಬಿದ್ದವು.ಪುರುಷರೇ ಹೆದರಿಬಿಡುವಂತಹ ಜವಾಬ್ದಾರಿಯನ್ನು ಒಬ್ಬ ಹೆಣ್ಣು ಮಗಳು ಒಬ್ಬಳೇ ಹೊತ್ತು ನಿಲ್ಲುವುದು ಅಂದಿನ ಸಮಾಜದಲ್ಲಿ ಅಸಾಧ್ಯವೆಂದು ಎಲ್ಲರೂ ಭಾವಿಸಿದ್ದರು.ಆದರೆ ಜಯದೇವಿ ತಾಯಿ ಒಬ್ಬ ಸಬಲ ತಾಯಿತನದ ಶಕ್ತಿಯಾಗಿ ನಿಂದರು.ಒಂದೆಡೆ ಗಂಡನ ಅಗಲಿಕೆಯ ನೋವು ಹೃದಯದಿ ಮುಚ್ಚಿಟ್ಟು ಮತ್ತೊಂದೆಡೆ ಐದು ಮಕ್ಕಳ ಭವಿಷ್ಯ ಅವರ ಕಣ್ಣೆದುರಿಗೆ ನಿಂತಿತ್ತು ಬೆಳಗ್ಗೆ ಉದಯಿಸುವ ಸೂರ್ಯನಿಗಿಂತ ಮುಂಚೆಯೇ ಎದ್ದು ಮನೆಯ ಕೆಲಸ, ಮಕ್ಕಳ ಆರೈಕೆ, ಕಾರ್ಮಿಕರ ನೋಡಿಕೊಳ್ಳುವುದು, ಆಸ್ತಿಯ ಲೆಕ್ಕಪತ್ರ, ನ್ಯಾಯದ ವಿಚಾರ …..ಎಲ್ಲವನ್ನೂ ನಿರ್ವಹಿಸುತ್ತಿದ್ದರು. ಅವರಲ್ಲಿ ಆವರಿಸಿದ ಖಾಲಿತನವನು ಸಿದ್ದರಾಮನ ನೆನಹುನಲಿ ನಮ್ಮೆದೆಯ ತುಂಬಲಾರಂಭಿಸಿದರು. ಇಚ್ಛೆಯಿಂದಲೇ ಸರ್ವ|ತುಚ್ಚಿೀಕರಿಸಿ ಬೇಗ ಎಚ್ಚರದಿಂದ ಇರಬೇಕು- ನಮ್ಮಲಿಯಸಚ್ಚಿದಾನಂದನ ಸ್ಮರಿಸೂತ||*B ಸಚ್ಚಿದಾನಂದ ಶಿವಮಯನಾದ ಸಿದ್ದರಾಮನು ನೆನೆಯುತ ಐದು ಮಕ್ಕಳ ಬದುಕನ್ನು ಕಟ್ಟುವ ಉಕ್ಕಿನ ಮನೋಬಲವಿತ್ತು. ಮಕ್ಕಳ ಬದುಕು ಅರಳಬೇಕೆಂಬು ಕನಸು ಹೊತಿದ್ದರು… ಮಕ್ಕಳಿಗೆ ಪರ್ವತದಂತೆ ಬಲವಾಗಿ ನಿಂತರು.ಅದರಲ್ಲೇ ಅವರ ತಾಯಿತನದ ದಿವ್ಯತೆ ಇತ್ತು. ಇಲ್ಲಿ ಒಂದೆರಡು ಘಟನೆಗಳನ್ನು ನೆನಪಿಸಿಕೊಳ್ಳಲೇ ಬೇಕು ತಾಯಿಯವರು ಆಗಿಂದ್ದಾಂಗ ಹೇಳುತ್ತಿದ್ದರು. ಮೊದಲ ಮಗಳು ಶಶಿಕಲಾ ಅವರಿಗೆ ರಾಜಶೇಖರ ಮಡಕಿ ಸ್ವಂತ ತಮ್ಮನಿಗೆ ಕೊಟ್ಟು ಮದುವೆ ಮಾಡಲಾಗಿತ್ತು . ಅವರು ಸುಖ ಸಂಸಾರದಲ್ಲಿ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಸಾಹಿತ್ಯವನ್ನು ರಚಿಸುತ್ತಾ ಸುಖವಾಗಿ ಇದ್ದರು. ತಾಯಿಯವರ ಹಿರಿಯ ಮಗಳು ಶಶಿಕಲಾ ಮಡಕಿ ಅಳಿಯ ರಾಜಶೇಖರ್ ಮಡಿಕೆ ಎರಡನೇ ಮಗ ಶ್ರೀಕಂಠ ಮೂರನೇ ಮಗ ಪ್ರಭುರಾಜ ಇವರಿಬ್ಬರನ್ನು ಪಂಚಗಣಿಯ ಶಾಲೆಯಲ್ಲಿ ಓದಲು ಕಳಿಸಿಕೊಟ್ಟಿದ್ದರು .ಸುಖದ ಸುಪತ್ತಿನಲ್ಲಿ ಬೆಳೆದು ಬಂದ್ದಿದ್ದ ಮಕ್ಕಳಿಗೆ ಅಲ್ಲಿಯ ಕಠಿಣವಾದ ಶಿಸ್ತು ಬದ್ಧತೆ ,ಕಟ್ಟುನಿಟ್ಟಾದ ನಿಯಮಗಳು, ಶಾಲೆಯ ಅಭ್ಯಾಸದ ಭಾರವು ಅವರಿಗೆ ಸರಿ ಹೊಂದಲಿಲ್ಲ, ಊಟದಲಿ ವ್ಯತ್ಯಾಸ ಸಹಿಸಲಾಗಲಿಲ್ಲ. ಹೀಗಾಗಿ ಅವರು ಅಲ್ಲಿ ಇರಲು ಒಪ್ಪಿಕೊಳ್ಳಲಿಲ್ಲ… ಹಿರಿಯ ಮಗ ಶ್ರೀಕಂಠ ಆದರೂ ತಾಯಿಗೆ ಹೆದರಿ ಮೊದಲು ಮಗ ಶ್ರೀಕಂಠ ಶಾಲೆಯ ರಜೆ ಪ್ರಾರಂಭವಾಗುವವರೆಗೂ ಇದ್ದು ರಜೆಗೆಂದು ಮನೆಗೆ ಬಂದಾಗ ಹಿಂತಿರುಗಿ ಹೋಗಲು ಸಾಧ್ಯವೇ ಇಲ್ಲವೆಂದು ತನ್ನ ಅಭಿರುಚಿಯು ಕೃಷಿಯಲ್ಲಿ ಹಾಗೂ ಅಂಗಡಿ ಮನೆ ನೋಡಿಕೊಂಡು ಹೋಗುವದರಲ್ಲಿ ಇದೆ ಎಂದು ತಿಳಿಸಿದಾಗ ತಾಯಿಯವರು ಅವರ ವಿಚಾರದ ವಿರುದ್ಧ ಹೋಗಲು ಒಪ್ಪಲಿಲ್ಲ ಏಕೆಂದರೆ ಶ್ರೀಕಂಠವರಿಗೆ ಕೃಷಿಯಲ್ಲಿ ಅಭಿರುಚಿ ಹೆಚ್ಚಿಗೆ ಇರುವುದನ್ನು ಗಮನಿಸಿದ್ದ ತಾಯಿಯವರು ಅವರಂತೆ ಒಪ್ಪಿಕೊಂಡರು.ಇಲ್ಲಿ ತಾಯಿಯವರು ಮಕ್ಕಳಿಗೆ ಯಾವುದೇ ರೀತಿಯಾದ ಒತ್ತಾಯದಿಂದ ಯಾವ ಶಿಕ್ಷಣವನ್ನು ಕೊಡಬಾರದು ಅನ್ನುವುದನ್ನು ಮನಗಂಡಿದ್ದರು ಅವರವರ ಅಭಿರುಚಿಯಂತೆ ಅವರವರ ಜೀವನದ ದಾರಿಯನ್ನು ತೊರಿ ಕೊಡಬೇಕು ಅನ್ನುವ ಅಭಿಪ್ರಾಯ ಹೊಂದಿದ್ದರು. ಇನ್ನು ಎರಡನೇ ಮಗ ಪ್ರಭುರಾಜ ಅತ್ಯಂತ ಮೃದು ಹೃದಯ, ಜಾಣ ಬುದ್ಧಿವಂತನು ಇವರಿಗೆ ದೊಡ್ಡ ಶಿಕ್ಷಣವನ್ನು ಕೊಡಿಸಬೇಕೆನ್ನುವ ಆಸೆ ತಾಯಿಯವರು ಹೊತ್ತಿದ್ದರು .ಅವರು ಕೂಡ ತಿರುಗಿ ಹೋಗಲು ಒಪ್ಪದಿದ್ದಾಗ ತಾಯಿಯವರು ನನಗಾಗಿ ನೀನು ಹೋಗಲೇ ಬೇಕು ಅನ್ನುವ ಪ್ರಮಾಣ ತೆಗೆದುಕೊಂಡರು… ಏಕೆಂದರೆ ಅವರಲ್ಲಿ ಮುಂದೆ ಕಲಿಯುವ ಯೋಗ್ಯತೆ ಇದೆ ಅನ್ನುವುದನ್ನು ಅರೆತಿದ್ದರು …..ಅನಿವಾರ್ಯವಾಗಿ ಪ್ರಭುರಾಜರಿಗೆ ಹೋಗ ಬೇಕಾಗಿ ಬಂತು. ಎರಡನೆ ಮಗ ಪ್ರಭುರಾಜ ಪ್ರಭುರಾಜ್ ಅವರ ಪ್ರತ್ನಿ ಪ್ರಮೀಳಾ (ಗದಗಿನ ಎಳೆಮಲಿ ಶಾಂತಪ್ಪನವರ ಮಗಳು) ತಾಯಿಯವರನ್ನು ಒಂದು ಕ್ಷಣವು ಬಿಟ್ಟಿರದಿದ್ದ ಪ್ರಭು ರಾಜರು ತಾಯಿಯ ನೆರಳಲ್ಲಿದವರು ಹಾಗೂ ಕರುಳಿನ ಸಂಬಂಧ ಗಾಡವಾಗಿತ್ತು. ತಾಯಿಯ ಮೇಲೆ ಅಪಾರ ಪ್ರೀತಿ ಹೊಂದಿದ ಅವರಿಗೆ ತಾಯಿಯಿಂದ ದೂರಿರುವುದು ಬಹಳ ಅಸಹನಿಯವಾಗಿತ್ತು ಹಿಂಸೆ ಕೊಡಲಾರಂಭಿಸಿತ್ತು …. ತಾಯಿಗೆ ಪತ್ರ ಬರೆದು ಹಿಂತಿರುಗಿ ಬರುವುದಾಗಿ ಒತ್ತಾಯಿಸುತ್ತಿದ್ದರು. ಮನೆಯಲ್ಲಿ ಇದ್ದಾಗ ಕೂಡ ಪ್ರಭುರಾಜರಿಗೆ ತಾಯಿಯವರು ಅವನ ಸಮೀಪದಲ್ಲಿ ಇದ್ದರೆ ಮಾತ್ರ ಮನಸ್ಸಿಗೆ ಶಾಂತಿ….ತಾಯಿ ಕಣ್ಣೆದುರಿನಿಂದ ಸ್ವಲ್ಪ ದೂರವಾದರೂ ಅವನ ಹೃದಯ ಖಾಲಿಯಾಗಿಬಿಡುತ್ತಿತ್ತು. ಇನ್ನು ದೂರದ ಊರಲ್ಲಿ ಇದ್ದರೆ ಕೇಳಬೇಕೆ ಅವರ ಸ್ಥಿತಿ ಹೇಳಲಾಗಿತ್ತುಶಾಲೆಯಲ್ಲಿ ಕುಳಿತಿದ್ದರು ಪ್ರಭುರಾಜ್ ಮನಸ್ಸು ಅಲ್ಲಿ ನೆಲಸಲೇ ಇಲ್ಲ. ಸುತ್ತಲೂ ವಿದ್ಯಾರ್ಥಿಗಳು ಕುಳಿತು ಶಿಕ್ಷಕರು ಪಾಠ ಮಾಡುತ್ತಿದ್ದರೆ ಅವನ ಕಿವಿಯಲ್ಲಿ ಕೇಳಿಸುತ್ತಿದ್ದದ್ದು ತಾಯಿಯ ಧ್ವನಿಯೇ. ಊಟಕ್ಕೆ ಕೂತರೂ ತಾಯಿಯ ಕೈತುತ್ತಿನ ನೆನಪು, ರಾತ್ರಿ ಮಲಗಿದರೂ ತಾಯಿಯ ಮುಖವೇ ಕಣ್ಣಮುಂದೆ ತೇಲುತ್ತಿತ್ತು. ದಿನದಿಂದ ದಿನಕ್ಕೆ ತಾಯಿಯ ನೆನಪು ಅವನ ಮನಸ್ಸನ್ನು ಕಾಡಲಾರಂಭಿಸಿತು …..!!ಪ್ರಿಯ ಓದುಗರೆಇದೆಲ್ಲಾ ಏನೋ ನಾನು ಅತಿಶೋಯುಕ್ತಿಯಾಗಿ ಬರೆಯುತ್ತಿದ್ದೇನೆ ಅಂತ ಏನು ತಿಳಿಯಬೇಡಿ…. ಪ್ರಭು ರಾಜರ ತಾಯಿಯ ಮೇಲಿದ್ದ ಅಗಾಧವಾದ ಪ್ರೀತಿ ಯಾವದಕ್ಕೂ ಸಾಟಿಯಾಗದು….!!!!ಏನು ಹೇಳಿದರೂ ತಾಯಿಯು ಯಾವುದಕ್ಕೂ ಒಪ್ಪದಾದಾಗ ಕೊನೆಗೆ ತಾಳಲಾರದೆ ತಾಯಿಗೆ ಪತ್ರ ಬರೆದನು.“ಅವ್ವಾ… ನನಗೆ ಇಲ್ಲಿ ಇರಲು ಆಗುತ್ತಿಲ್ಲ. ನಿಮ್ಮನ್ನು ಬಿಟ್ಟು ಒಂದು ಕ್ಷಣವೂ ಇರಲಾಗುತ್ತಿಲ್ಲ. ನಾನು ಹಿಂದಿರುಗಿ ಬರುತ್ತೇನೆ. ಇಲ್ಲವಾದರೆ ಇಲ್ಲಿಯೇ ಗುಡ್ಡು ಪರ್ವತಗಳನ್ನು ಏರಿ, ಬಿದ್ದು ಸಾಯ್ತೀನಿ…” ಎಂದು ಕಣ್ಣೀರಿನಿಂದ ಬರೆದ ಆ ಮಾತುಗಳಲ್ಲಿ ಮಗನ ಅತಿಯಾದ ಮಮತೆ ಮತ್ತು ಅಧೈರ್ಯ ಎರಡೂ ತುಂಬಿಕೊಂಡಿದ್ದವು.ಆ ಪತ್ರ ಓದಿದ ತಾಯಿಯವರು ಕ್ಷಣಕಾಲ ಮೌನವಾಗಿದ್ದರು. ಮಗನ ಪ್ರೀತಿಯ ತೀವ್ರತೆ ಅವರಿಗೆ ಗೊತ್ತಿತ್ತು. ಆದರೆ ಜೀವನವೆಂದರೆ *ಕೇವಲ ಭಾವನೆಗಳಿಗೆ ತಲೆಬಾಗುವುದಲ್ಲ, ಧೈರ್ಯದಿಂದ ಎದುರಿಸುವ ಪಥ ಎನ್ನುವರು…… *ಕಣ್ಣೊಳಗಿನ ಕಸ |ಸಣ್ಣಾಗಿದ್ದರೆ ಏನುಕಣ್ಣು ಚುಚ್ಚಿ ನೀರು ಸುರಿವುದು- ಮಾಯೆಯುಸಣ್ಣಲ್ಲ ಕಣ್ಣಿನ ವಿಸ್ತಾರ ||* ಈ ರೀತಿಯ ಮನಸ್ಸಿನ ಪ್ರವೃತ್ತಿಯು ಚಿಕ್ಕದಲ್ಲ ಅನ್ನುವುದು ಅರ್ಥವಾಯಿತು ಹೀಗಾಗಿ ತಾಯಿಗೆ ಕಠಿಣವಾದರೂ ಜೀವನದ ಪಾಠವಾಗುವ ಉತ್ತರ ಬರೆದರು… *ಬಾಳಿನಲ್ಲಿ ಕೆಟ್ಟ |ಕೀಳತನಕ್ಕೆ ಜಾಗಎಳ್ಳಿನ ಮನೆಯಷ್ಟು ಕೊಡದಿರು- ನಿನ್ನಲ್ಲಿಒಳ್ಳೆತನದಿ ಗಟ್ಟಿತನವು ಬೆಳೆಯಲಿ||* ಎನ್ನುತ….. ಹೀಗೆ ಬರೆದರು“ನನ್ನ ಹೊಟ್ಟೆಯಲ್ಲಿ ಹುಟ್ಟಿದವನು ಇಂಥ ಹೇಡಿಯೇ.. ಇಂಥ ಅಧೈರ್ಯ ಹೇಗೆ ಬಂತು? ಜೀವನದಲ್ಲಿ ಸಾಧನೆ ಮಾಡಲು ದೂರದ ಊರಿಗೆ ಹೋದರೆ ಕಷ್ಟಗಳು ಬರುತ್ತವೆ, ಏಕಾಂತ ಕಾಡುತ್ತದೆ. ಅದಕ್ಕೆ ಓಡಿ ಮನೆಗೆ ಬರಬೇಕೆಂದರೆ ಬದುಕಿನಲ್ಲಿ ಏನನ್ನೂ ಸಾಧಿಸಲಾಗದು. ಧೈರ್ಯವಾಗಿ ನಿಂತು ಹೋರಾಡಬೇಕು.‘ನಾನು ಅಲ್ಲೇ ಬಿದ್ದು ಸಾಯ್ತೀನಿ’ ಅಂತ ಹೇಳುವಷ್ಟು ದುರ್ಬಲನಾಗಿ ನನ್ನ ಮಗ ಹುಟ್ಟಿಲ್ಲ.ಸಾಯಬೇಕೆಂದರೆ ಅಲ್ಲೇ ಸಾಯಿ… ಆದರೆ ಓಡಿ ಬರುವ ಹೇಡಿತನದ ಮಾತು ಬೇಡ!” ಎಂದು ಕಡಾ ಖಂಡಿತವಾಗಿ ಪತ್ರವನ್ನು ಬರೆದರು. *ಹಿರಿಯರಲ್ಲಿ ಶ್ರದ್ಧೆ |ಸ್ಥಿರವಾಗಿ ಇರಲಿಹರಕೆ ಕೊಡುವವರು ನಿನಗೆ -ಈ ಮಾತುಪರಕಿಸಿ ನೋಡು ಬಾಳಲಿ ||*ಎನ್ನುವಂತೆ ತಾಯಿಯವರ ಆ ಮಾತುಗಳು ಪ್ರಭುರಾಜ್ ಹೃದಯಕ್ಕೆ ಮಿಂಚಿನಂತೆ ತಾಕಿದವು. ಮೊದಲಿಗೆ ಅವರ ಕಣ್ಣು ತುಂಬಿ ಬಂದರೂ, ತಾಯಿಯವರ ಮಾತಿನೊಳಗಿನ ಕಠೋರ ಪ್ರೀತಿಯನ್ನು ಅವರು ಅರ್ಥ ಮಾಡಿಕೊಂಡರು.ಆ ದಿನದಿಂದ ತನ್ನ ಕಲಿಕೆಯಲ್ಲಿ ಶ್ರದ್ಧೆಯಿಂದ ಓದಲಾರಂಭಿಸಿದರು ಮುಂದೆ ಎಲ್ ಎಲ್ ಬಿ…. ಕಲಿತು ವಕೀಲರಾದರು.. ಮುಂದೆ ದೊಡ್ಡ ರಾಜಕಾರಣಿ ಕೂಡ ಆದರು…ಮಮಕಾರದ ತಾಯಿಯಾಗಿ ಜೀವನದ ಬಿರುಗಾಳಿಯನ್ನು ಎದುರಿಸಲು ಮಕ್ಕಳ ಮನಸ್ಸನ್ನು ಉಕ್ಕಿನಂತೆ ಗಟ್ಟಿಗೊಳಿಸುವ ಗುರು ಕೂಡಾ ಆಗಿದ್ದರು. ಹೀಗೆ ಅತ್ಯಂತ ಧೈರ್ಯದಿಂದ ಆಸ್ತಿಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಾ. ಸಿದ್ದರಾಮನ ಅಪ್ಪಟ ಭಕ್ತಿಯಾಗಿ, ಅನ್ಯಾಯದ ವಿರುದ್ಧ ಹೋರಾಡುವ ಮನೋಭಾವ ಹೊಂದಿದ ತಾಯಿಯವರು ಬಹಳ ಸುಭದ್ದವಾಗಿ ಭಧ್ಧತೆಯಿಂದ ತಾಯಿತನದ ಜವಾಬ್ದಾರಿಯನ್ನು, ಆಸ್ತಿಯ ಮಾಲೀಕತ್ವತೆಯನು ಹಾಗೂ ಜನ ಸೇವಕಿಯಾಗಿ ಕೆಲಸ ನಿರ್ವಹಿಸಲಾರಂಭಿಸಿದರು…. ಬಹಳ ಜನರು “ಹೆಂಗಸು ಒಬ್ಬಳೇ ಇಷ್ಟು ದೊಡ್ಡ ಜವಾಬ್ದಾರಿ ನಿಭಾಯಿಸಲಾರಳು” ಎಂದು ಮಾತಾಡಿದವರಿಗೆ ಉತ್ತರವಾಗಿ ತಮ್ಮ ಬದುಕನ್ನು ಬದುಕಿ ತೋರಿಸಿದರು.ಅವರ ಜೀವನ ಒಂದು ಅಳಲಿನ ಕಥೆಯನು ಒರಸಿ ಅದು ತಾಯಿತನದ ಮಹಾಕಾವ್ಯವನು ಬರೆದರು. *ದುಃಖ ದುಮ್ಮಾನಗಳು |ಸಿಕ್ಕಿ ಒದ್ದಾಡದಿರುಸುಖ ಬಂದಿತ್ತೆಂದು ಹಿಗ್ಗದಿರು -ಮನವೇಸುಖ ದುಃಖ ಅರ್ಪಿಸು ಶಿವನಡಿಗೆ ||*ಎಂದು ಬಾಳನು ಆರಂಭಿಸಿದರು. ಸವಿತಾ ದೇಶಮುಖ್
ಶರಣ ಸಂಗಾತಿ ಸಾವಿಲ್ಲದ ಶರಣರು ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಶ್ರೇಷ್ಠ ಶಿವಯೋಗ ಸಾಧಕರು ಮಲೆ ಮಹದೇಶ್ವರ ಹನ್ನೆರಡನೆಯ ಶತಮಾನದ ಶರಣರನ್ನು ಸಂತರನ್ನು ಹೊಂದಿರುವ ಕನ್ನಡದ ಈ ನೆಲದಲ್ಲಿ ಏಳು ಬೆಟ್ಟಗಳ ಮಲೆಯ ಮಹದೇಶ್ವರರು ಹುಟ್ಟಿ ಬರುತ್ತಾರೆ. ಕರ್ನಾಟಕದ ಅತ್ಯಂತ ಪ್ರಸಿದ್ಧ ಮತ್ತು ಪವಿತ್ರ ಲಿಂಗಾಯತ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ಇದು ದಕ್ಷಿಣ ತುದಿಯ ಗಡಿ ಜಿಲ್ಲೆಯಾದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿದೆ. ಜನಪದ ಕಾವ್ಯಗಳು ಮತ್ತು ಸ್ಥಳ ಪುರಾಣಗಳ ಪ್ರಕಾರ, ಶ್ರೀ ಮಲೆ ಮಹದೇಶ್ವರ ಸ್ವಾಮಿಯ ತಂದೆ ತಾಯಿಗಳ ವಿವರ ತಂದೆ: ಚಂದ್ರಶೇಖರ ಮೂರ್ತಿ (ಕೆಲವು ಕಡೆ ಚಂದ್ರಶೇಖರ ಗುರುಗಳು ಎಂದೂ ಕರೆಯಲಾಗುತ್ತದೆ). ತಾಯಿ: ಉತ್ತರಾಜಮ್ಮ (ಕೆಲವು ಜನಪದ ಕಥೆಗಳ ಪ್ರಕಾರ ಇವರನ್ನು ಸುಗುಣಾದೇವಿ ಎಂದೂ ಗುರುತಿಸಲಾಗುತ್ತದೆ).ಹಿನ್ನೆಲೆ ಮತ್ತು ನಂಬಿಕೆಗಳು: ದೈವಿಕ ಜನನ: ಜನಪದ ಚರಿತ್ರೆಯ ಪ್ರಕಾರ, ಉತ್ತರಾಜಮ್ಮನಿಗೆ ದೀರ್ಘಕಾಲ ಮಕ್ಕಳಾಗದಿದ್ದಾಗ ಅವರು ಶಿವನನ್ನು ಕುರಿತು ತಪಸ್ಸು ಮಾಡುತ್ತಾರೆ. ಭಕ್ತಿಗೆ ಮೆಚ್ಚಿದ ಶಿವನು ಅವಳ ಕನಸಿನಲ್ಲಿ ಬಂದು ಗಂಡು ಸಂತಾನದ ವರವನ್ನು ನೀಡುತ್ತಾನೆ. ಅದರಂತೆ ಜನಿಸಿದ ಬಾಲಕನೇ ಮುಂದೆ ‘ಮಹದೇಶ್ವರ’ರಾಗಿ ಪ್ರಸಿದ್ಧಿ ಪಡೆದರು ಎಂಬ ಪ್ರತೀತಿ ಇದೆ. *ಅವತಾರ ಪುರುಷ: ಮಹದೇಶ್ವರರು ಯಾವುದೇ ಸಾಮಾನ್ಯ ಮಾನವನಂತೆ ಜನಿಸದೆ, ಲೋಕ ಕಲ್ಯಾಣಕ್ಕಾಗಿ ಭೂಮಿಗೆ ಬಂದ ಶ್ರೇಷ್ಠ ಚಿಂತಕ ಅನುಭವಿ. ಎಂಬುದು ಭಕ್ತರ ದೃಢ ನಂಬಿಕೆಯಾಗಿದೆ. ಅವರು ಸಣ್ಣ ವಯಸ್ಸಿನಲ್ಲೇ ಸಂಸಾರ ಮತ್ತು ಲೌಕಿಕ ಜೀವನವನ್ನು ತೊರೆದು ಆಧ್ಯಾತ್ಮಿಕ ಹಾದಿ ಹಿಡಿದರು.ಮಹದೇಶ್ವರ ಸ್ವಾಮಿಯ ಬಾಲ್ಯದ ಪವಾಡಗಳು ಅಥವಾ ಅವರು ಶ್ರೀಶೈಲದಿಂದ ಕರ್ನಾಟಕಕ್ಕೆ ಬಂದ ಇತಿಹಾಸದ ಬಗ್ಗೆ ಪುರಾಣ ಕಥನಗಳ ದಾಖಲೆಗಳಿವೆ. *ಹಿನ್ನೆಲೆ ಮತ್ತು ಸ್ಥಳ* ಪುರಾಣಮಹದೇಶ್ವರ ಸ್ವಾಮಿ: 14-15ನೇ ಶತಮಾನದಲ್ಲಿ ಬಾಳಿ ಬದುಕಿದ ಪವಾಡ ಪುರುಷ ಹಾಗೂ ಶರಣ ಸಂಸ್ಕೃತಿಯ ಸಂತ ಶ್ರೀ ಮಹದೇಶ್ವರರು ಸಾಕ್ಷಾತ್ ಶಿವನ ಅವತಾರ ಎಂದು ಅಲ್ಲಿನ ಜನಪದಿಗರು ನಂಬಿದ್ದಾರೆ. *ತಪೋಭೂಮಿ ಮತ್ತು ಮುಕ್ತಿ:* ಮಹದೇಶ್ವರರು ಈ ಬೆಟ್ಟಗಳಲ್ಲಿ ತಪಸ್ಸು ಆಚರಿಸಿ, ಭಕ್ತರ ಕಷ್ಟಗಳನ್ನು ನಿವಾರಿಸಿ, ಕೊನೆಗೆ ಇಲ್ಲೇ ಲಿಂಗ ರೂಪದಲ್ಲಿ ಐಕ್ಯರಾದರು (ಸಮಾಧಿ ಹೊಂದಿದರು). ಹುಲಿ ವಾಹನ: ಜನಪದ ಕಾವ್ಯಗಳ ಪ್ರಕಾರ, ಬಾಲಯೋಗಿ ಮಹದೇಶ್ವರರು ಕಾಡಿನ ಹುಲಿಯನ್ನೇ ತಮ್ಮ ವಾಹನವಾಗಿಸಿಕೊಂಡು ಬೆಟ್ಟಗಳಲ್ಲಿ ಸಂಚರಿಸುತ್ತಿದ್ದರು.ಶ್ರವಣ ಸಂಹಾರ: ಈ ಭಾಗದಲ್ಲಿ ಜನರಿಗೆ ಹಿಂಸೆ ನೀಡುತ್ತಿದ್ದ ಕ್ರೂರ ರಾಜ ‘ಶ್ರವಣ’ನನ್ನು ಮಹದೇಶ್ವರರು ಸಂಹರಿಸಿ ಜನರನ್ನು ಮುಕ್ತಗೊಳಿಸಿದರು ಎಂಬ ಇತಿಹಾಸವಿದೆ. ಏಳು ಮಲೆಗಳು (ಬೆಟ್ಟಗಳು)ಮಲೆ ಮಹದೇಶ್ವರ ಕ್ಷೇತ್ರವು ಸಮುದ್ರ ಮಟ್ಟದಿಂದ ಸುಮಾರು 3,200 ಅಡಿ ಎತ್ತರದಲ್ಲಿದ್ದು, ದಟ್ಟವಾದ ಅರಣ್ಯದಿಂದ ಆವೃತವಾದ ಏಳು ಬೆಟ್ಟಗಳ ಸಾಲನ್ನು ಒಳಗೊಂಡಿದೆ: ಆನೆಮಲೆ ಜೇನುಮಲೆ ಕಾಡುಮಲೆ ಕಾನುಮಲೆ ಪೊನ್ನಾಚಿಮಲೆ ಪಾವಲಮಲೆ (ಪವಲಮಲೆ) ಪಚ್ಚೆಮಲೆ ಪ್ರಮುಖ ಆಕರ್ಷಣೆಗಳು ಮತ್ತು ವಿಶೇಷತೆಗಳುಲಿಂಗ ರೂಪದ ದರ್ಶನ: ದೇವಸ್ಥಾನದ ಗರ್ಭಗುಡಿಯಲ್ಲಿ ಮಹದೇಶ್ವರರು ಸ್ವಯಂಭೂ ಲಿಂಗ ರೂಪದಲ್ಲಿ ನೆಲೆಸಿದ್ದಾರೆ. ಅಂತರಗಂಗೆ: ಬೆಟ್ಟದ ಸಮೀಪವಿರುವ ಒಂದು ಪವಿತ್ರ ನೀರಿನ ಸೆಲೆ. ಇಲ್ಲಿ ವರ್ಷದ ಯಾವುದೇ ಋತುವಿನಲ್ಲೂ ನೀರು ಬತ್ತುವುದಿಲ್ಲ. ಭಕ್ತರು ಇಲ್ಲಿ ಸ್ನಾನ ಮಾಡಿ ದೇವರ ದರ್ಶನ ಪಡೆಯುತ್ತಾರೆ. ದೊಡ್ಡ ನಂದಿ ವಿಗ್ರಹ: ದೇವಾಲಯದ ಆವರಣದಲ್ಲಿ ಶಿವನ ವಾಹನವಾದ ನಂದಿಯ ಬೃಹತ್ ಮೂರ್ತಿಯಿದೆ. ಜಾನಪದ ಕಾವ್ಯ: ಮಲೆ ಮಹದೇಶ್ವರ ಕಾವ್ಯ ಅಥವಾ ತಂಬೂರಿ ಶೈಲಿಯ ಗಾಯನವು ಕರ್ನಾಟಕದ ಪ್ರಸಿದ್ಧ ಜಾನಪದ ಪರಂಪರೆಯಾಗಿದೆ. ಭಕ್ತರು ಇಂದಿಗೂ ಕಾಲ್ನಡಿಗೆಯ ಮೂಲಕ ಬೆಟ್ಟ ಹತ್ತುತ್ತಾ ಮಾದಪ್ಪನ ಕಥೆಗಳನ್ನು ಹಾಡುತ್ತಾರೆ. ಕಾಡಿನ ಸೋಲಿಗರು ಮತ್ತು ಇತರೆ ಬುಡಕಟ್ಟಿನ ಜನರಿಗೆ ಲಿಂಗ ಸಂಸ್ಕಾರ ನೀಡಿ ಕಾಯಕ ದಾಸೋಹ ಗುರು ಲಿಂಗ ಜಂಗಮ ತತ್ವಗಳನ್ನು ಪರಿಚಯಿಸಿದ ಸಾವಿಲ್ಲದ ಶ್ರೇಷ್ಠ ಶಿವಯೋಗ ಸಾಧಕರು ಮತ್ತು ಶರಣರು. ಬಸವ ಪರಂಪರೆಯ ಶ್ರೇಷ್ಠ ಚಿಂತಕರ ಬದುಕಿನ ತಿರುಳನ್ನು ಮೈಸೂರು ಚಾಮರಾಜನಗರ ಜಿಲ್ಲೆಯಲ್ಲಿ ತಿರುಗಾಡಿ ಬಸವ ತತ್ವ ಅಧ್ಯಯನ ಶಿವಯೋಗ ಸಾಧನೆಯನ್ನು ಅಲ್ಲಿನ ಬುಡಕಟ್ಟು ಮುಂತಾದ ಜನರಿಗೆ ಅರಿವು ಮೂಡಿಸುವ ಕಾರ್ಯ ಮಾಡಿದರು. ________________________’ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ
ಧಾರಾವಾಹಿ ಸಂಗಾತಿ ಅರ್ಜುನ ಉವಾಚ ಡಾ.ವಿಶ್ವನಾಥ ಎನ್ ನೇರಳೆಕಟ್ಟೆ ಹಯ ಹೆಣ್ಣಾಯಿತು; ಹುಲಿಯಾಯಿತು ಧರ್ಮರಾಯನಿದ್ದ ಪುರಕ್ಕೆ ಬಂದ ದಾನವಾಂತಕ ಚಂಪಕಾನಗರಿಯ ಸಮಸ್ತ ವಿಚಾರಗಳನ್ನು ಅವನಿಗೆ ಹೇಳಿದ. ಹಂಸಧ್ವಜ ಕೊಟ್ಟಿದ್ದ ಸಕಲ ಸಂಪದಗಳನ್ನು ಯುದಿಷ್ಠಿರನಿಗಿತ್ತ.ನಮ್ಮ ಯಾಗದ ಕುದುರೆಯದು ಈಗ ಉತ್ತರ ದಿಕ್ಕಿನಲ್ಲಿದ್ದ ಪಥವನ್ನು ಹಿಡಿದಿತ್ತು. ಆಗ ಗ್ರೀಷ್ಮ ಕಾಲ. ಬೇಸಿಗೆಯ ಬಿಸಿ ಸಂಪೂರ್ಣ ಧರೆಯನ್ನು ಇನ್ನಿಲ್ಲದಂತೆ ಸುಡತೊಡಗಿತ್ತು. ನಮಗೆ ಕಾಣುತ್ತಿದ್ದುದು ಸೂರ್ಯನುರಿಗೆ ಕಂಗೆಟ್ಟುಹೋಗಿದ್ದ ಕನಕಾಚಲ. ತನ್ನ ಕಣ್ಣಿಗೆ ಬೀಳದ ಹಾಗೆ ಈ ಪರ್ವತ ಮರೆಯಾಗಿನಿಂತಿದೆ ಎಂದು ಕ್ರೋಧಗೊಂಡ ಸೂರ್ಯ ಅದನ್ನು ಉರಿಸಿಹಾಕುವ ಸನ್ನಾಹದಲ್ಲಿದ್ದಾನೋ ಎನ್ನುವಂತೆ ಬಿರುಬಿಸಿಲು ಕನಕಾಚಲ ಪರ್ವತವನ್ನು ಬಿಸಿಬಿಸಿಯಾಗಿಸಿತ್ತು.ಸೂರ್ಯನ ಬಿಸಿ ತಾಪವನ್ನು ಹೊತ್ತು ಮೆರೆಯುತಿರುವ ತೇರು, ನೀರಿದೆಯೇನೋ ಎಂಬ ಭ್ರಮೆ ಹುಟ್ಟಿಸುವ ಬಿಸಿಲು ಕುದುರೆ, ಗಾಳಿಯನ್ನು ಹೊತ್ತುತರುತ್ತಿರುವ ಸೈನಿಕರು, ಬಿಸಿಲೆಂಬ ಆನೆ ಇವೆಲ್ಲವೂ ಗ್ರೀಷ್ಮರಾಜನ ಚತುರಂಗ ಬಲದಂತೆ ತೋರುತ್ತಿದ್ದವು.ಧರ್ಮಶಾಲೆಯಲ್ಲಿದ್ದ ಸುಂದರ ನೀರೆಯರು ದಾರಿಹೋಕರ ಕರಗಳಿಗೆ ನೀರನ್ನೆರೆಯುತ್ತಾ ಅವರ ದಾಹವನ್ನು ತಣಿಸುತ್ತಿದ್ದರು. ಬಯಲಿನಲ್ಲಿದ್ದ ತೊರೆಗಳು ಬಾಯಾರಿಕೆಯಿಂದ ಬಳಲಿದ್ದ ಮೃಗಗಳ ತೃಷೆಯನ್ನು ಮಣಿಸುತ್ತಿದ್ದವು. ಉಪ್ಪರಿಗೆಗಳ ಮೇಲೆ ಚೆಲುವೆಯರ ಜೊತೆ ದೇಹಸುಖವನ್ನು ಪಡೆಯುತ್ತಿದ್ದ ಕೆಲವರು ಸುಂದರಿಯರ ತುಟಿಗಳಿಂದ ಜಿನುಗುತ್ತಿದ್ದ ಅಮೃತದ ರುಚಿ ನೋಡುತ್ತಿದ್ದರು.ಪ್ರದ್ಯುಮ್ನ, ವೃಷಕೇತು, ಯೌವನಾಶ್ವ, ನೀಲಧ್ವಜ, ಅನುಸಾಲ್ವ ಈ ಐದು ಮಂದಿ ನನಗೆ ಸಹವರ್ತಿಗಳಾಗಿದ್ದರು. ನನ್ನ ಜೊತೆಜೊತೆಗೇ ಹೆಜ್ಜೆ ಹಾಕುತ್ತಿದ್ದರು. ಈಗ ಹಂಸಧ್ವಜನೂ ನಮ್ಮೊಡನೆ ಸೇರಿಕೊಂಡಿದ್ದ.ಹಾಗೆಯೇ ಮುಂದೆ ಮುಂದೆ ಹೋದ ಹಯವೀಗ ಪಾರಿಪ್ಲವ ಎಂಬ ಹೆಸರಿನ ದೇಶವನ್ನು ತಲುಪಿತ್ತು. ಅಲ್ಲಿಯ ನೆಲದ ಮೇಲೆ ಕುದುರೆ ಕಾಲಿಟ್ಟ ಕ್ಷಣದಲ್ಲಿಯೇ ನಾವೆಲ್ಲರೂ ವಿಸ್ಮಯಕ್ಕೀಡಾಗುವ ಪ್ರಸಂಗವದು ಎದುರಾಯಿತು. ಯಾಗಕ್ಕೆ ನಾವು ಆರಿಸಿದ ವಿಶೇಷಕುದುರೆಯದು ಗಂಡಾಗಿತ್ತು. ಪಾರಿಪ್ಲವದ ನೆಲದ ಸ್ಪರ್ಶವಾದೊಡನೆಯೇ ಹೆಣ್ಣುಗುದುರೆಯಾಗಿ ಬದಲಾಯಿತು. ಅಲ್ಲೇ ಇದ್ದ ಸರೋವರದ ನೀರನ್ನು ಕುಡಿದ ತಕ್ಷಣವೇ ಹುಲಿಯಾಯಿತು. ಇದಾವ ಬಗೆಯ ಮಾಯೆಯಿದು ಎಂದು ನಾವೆಲ್ಲರೂ ಸೋಜಿಗಪಟ್ಟೆವು. ನನ್ನಲ್ಲಿ ಆ ಕ್ಷಣಕ್ಕೆ ಮೂಡಿದ್ದು ಕೃಷ್ಣ ಸ್ಮರಣೆ. ನೆನೆದೆ ಶ್ರೀಹರಿಯನ್ನು. ಮೊದಲಿನಂತೆಯೇ ಗಂಡು ಕುದುರೆಯಾಯಿತು ನಮ್ಮ ಯಜ್ಞಾಶ್ವ. ಹೀಗೆ ನಮ್ಮ ಅಶ್ವವದು ತಕ್ಷಣದಲ್ಲಿಯೇ ಎರಡು ರೂಪಗಳನ್ನು ಹೊಂದುವುದಕ್ಕೆ ಕಾರಣವಿತ್ತು.ಹಿಂದೊಮ್ಮೆ ಪರ್ವತರಾಜನ ಮಗಳಾದ ಪಾರ್ವತಿದೇವಿ ಶಿವನನ್ನು ಪೂರ್ಣಮನಸ್ಸಿನಿಂದ ಅರ್ಚಿಸುವೆನೆಂಬ ನಿರ್ಧಾರ ಮಾಡಿದಳು. ತನ್ನ ತಪಸ್ಸಿಗೆ ಸರಿಹೊಂದುವ ತಾಣವೆಲ್ಲಿದೆ ಎಂದು ಹುಡುಕಾಟ ಆರಂಭಿಸಿದಳು. ಪ್ರಶಾಂತಮಯವಾದ, ಚಿತ್ತಾಕರ್ಷಕವಾದ ಸ್ಥಳವನ್ನು ಅವಳ ಮನಸ್ಸು ಬಯಸುತ್ತಿತ್ತು.ಹೀಗೆ ಅರಸಿ ಬರುತ್ತಿದ್ದ ಶಿವನರಸಿಗೆ ಕಾಣಿಸಿದ್ದು ನಯನಮನೋಹರವೆನಿಸುವ ಒಂದು ಸರೋವರ. ಹಂಸಗಳು ಜಲದಲ್ಲಿ ಈಜುತ್ತಿದ್ದವು. ದುಂಬಿಗಳು ಹಾರಾಡುತ್ತಿದ್ದವು. ಕಮಲಗಳು ಅರಳಿನಿಂತಿದ್ದವು. ಕೋಗಿಲೆಗಳ ಮಧುರ ಧ್ವನಿಯದು ಕೇಳಿಬರುತ್ತಿತ್ತು. ಹೊಳೆವ ಶುಭ್ರ ಜಲವದು ರತ್ನದಿಂದ ನಿರ್ಮಿಸಲಾದ ಹಾಸಿಗೆಯಂತೆ ತೋರುತ್ತಿತ್ತು. ಸುಂದರವಾದ ಮೀನುಗಳಿದ್ದವು. ಸರೋವರದ ಸವಿನೀರನ್ನು ಸವಿಯುವ ಚಕ್ರವಾಕ ಪಕ್ಷಿಗಳಿದ್ದವು. ಮೊಸಳೆಗಳಿದ್ದವು. ಸುಗಂಧಭರಿತವಾದ ಗಾಳಿ ಅಲ್ಲೆಲ್ಲಾ ಬೀಸುತ್ತಿತ್ತು. ತಂಪುತAಪಾದ ವಾತಾವರಣವಿತ್ತು. ಹೀಗೆ ಕಣ್ಣಿಗೆ ಶೋಭಾಯಮಾನವಾಗಿ ಕಾಣುತ್ತಿತ್ತು ಆ ಸರೋವರ.ಕಮಲದೆಲೆಗಳ ಹಸಿರು ಕಾಂತಿ. ಕೆಂದಾವರೆಗಳ ಕೆಂಪು ಕಾಂತಿ. ಬಿಳಿದಾವರೆಗಳ ಬಿಳುಪಿನ ಕಾಂತಿ. ಹೊಂದಾವರೆಗಳ ಹಳದಿ ಕಾಂತಿ. ಹೀಗೆ ಹಲವು ಬಣ್ಣಗಳ ಬೆಳಕಿನಿಂದ ಕಂಗೊಳಿಸುತ್ತಿದ್ದ ಆ ಸರೋವರ ಕಾಮನಬಿಲ್ಲಿನ ನೆನಪನ್ನು ತರುವಂತಿತ್ತು.ಶಿವಧ್ಯಾನಕ್ಕಿದು ಸೂಕ್ತ ಸ್ಥಳ ಎಂದು ತೋರಿತು ಗಿರಿಜೆಗೆ. ಸರೋವರವಿದ್ದ ತಾಣವನ್ನು ತನ್ನ ತಪಸ್ಸಿನ ಸ್ಥಾನವಾಗಿ ಆಯ್ಕೆ ಮಾಡಿದಳು. ಹೀಗೆ ಅಂದು ಪಾರ್ವತಿ ಆರಿಸಿದ ತಾಣವದು ಈಗ ನಮ್ಮ ಯಾಗದ ಕುದುರೆ ಪ್ರವೇಶಿಸಿದ್ದ ಪಾರಿಪ್ಲವ ದೇಶ.ಆಶ್ರಮವೊಂದನ್ನು ನಿರ್ಮಿಸಿಕೊಂಡಳು ಪಾರ್ವತಿ. ಈಶ್ವರನ ಅನುಮೋದನೆಯೂ ದೊರಕಿತು. “ನಿನ್ನ ತಪಸ್ಸಿಗೆ ಯಾವ ತೊಂದರೆಯೂ ಎದುರಾಗದು ಇಲ್ಲಿ” ಎಂದು ಗಿರಿಜೆಯನ್ನು ಆಶೀರ್ವದಿಸಿದ ಗೌರೀರಮಣ. ಆ ತಾಣವೇ ಅನುದಿನದ ತಾಣವಾಯಿತು ಅವಳಿಗೆ. ತಪಸ್ಸಿನಲ್ಲಿ ಸುಖ ಕಂಡುಕೊಳ್ಳುವ ಯೋಗಿನಿಯಂತಾದಳು ಶಿವನ ಮಡದಿ. ಇದು ನಿಜಕ್ಕೂ ವಿಸ್ಮಯ. ಶಿವನ ಅರ್ಧ ಶರೀರ ಎನಿಸಿಕೊಂಡಿದ್ದ ಪಾರ್ವತಿ ಅವನಿದ್ದ ತಾಣವನ್ನು ತೊರೆದು ಇಲ್ಲಿಗೆ ಬಂದು ಮತ್ತೆ ಅವನನ್ನೇ ಧ್ಯಾನಿಸುವುದೆಂದರೆ, ಪೂಜಿಸುವುದೆಂದರೆ ಅದು ಭಕ್ತಿ ಪ್ರಕಟಣೆಯ ಇನ್ನೊಂದು ರೀತಿ. ದೇಹಗಳ ಅಂತರ ಅಧಿಕವಾದಾಗ ಪ್ರೀತಿ ಹೆಚ್ಚುವಂತೆ ಭಕ್ತಿಯೂ ಹೆಚ್ಚುವುದು ಎಂಬ ತತ್ವವನ್ನು ಸ್ವಯಂ ಮನಗಾಣಲು ಬಯಸಿದ್ದಳೋ ಏನೋ ಆ ಪಾರ್ವತಿದೇವಿ!ಸರೋವರದ ನೀರಿನಲ್ಲಿ ಜಳಕ. ಬಳಿಕ ಶಿವಜಪದ ಪುಳಕ. ಇದು ಗಿರಿಜೆಯ ಅನುದಿನದ ಬದುಕಾಗಿಹೋಯಿತು.ಅವಳ ತಪಜಪಗಳು ಆರಂಭಗೊAಡ ನಂತರ ಪೂರ್ಣ ವಾತಾವರಣವದು ಸುಂದರತೆಯನ್ನು ಪಡೆಯಿತು. ಬಿಸಿಗಾಳಿ ಬೀಸಲಿಲ್ಲ. ಗಿಡಮರಗಳು ಒಣಗಲಿಲ್ಲ. ನೀರ ಮೂಲಗಳು ಅಳಿಯಲಿಲ್ಲ. ಸದಾಕಾಲ ತಂಪುತಂಪಾದ ವಾತಾವರಣ. ಇಂಪುಇಂಪಾದ ಧ್ವನಿಯ ಅನುರಣನ. ಪಾರ್ವತಿಯಿದ್ದ ಕಾರಣದಿಂದಾಗಿ ಅಲ್ಲಿಯ ಪ್ರಾಣಿ ಪಕ್ಷಿಗಳು ತಮ್ಮ ವೈರತ್ವವನ್ನು ಮರೆತವು. ಶಿವಪೂಜೆಯನ್ನು ಅತೀವ ಭಕ್ತಿಭಾವದಿಂದ ನಡೆಸುತ್ತಿದ್ದಳು ಪಾರ್ವತಿ. ಜಗನ್ಮಾತೆಯಾದ ಪಾರ್ವತಿಗೇಕೆ ಶಿವನ ತಪಸ್ಸಿನ ಕಡು ಒಲವು! ಎಂದು ದೇವವೃಂದವೇ ಅಚ್ಚರಿಪಡುವ ರೀತಿಯಲ್ಲಿ ತ್ರಿನೇತ್ರನನ್ನು ಅರ್ಚಿಸುತ್ತಿದ್ದಳು ಭಕ್ತಿಭಾವನೇತ್ರೆ.ಅದೊಂದು ದಿನ ಎಂದಿನಂತೆ ಪಾರ್ವತಿದೇವಿ ಶಿವಧ್ಯಾನದಲ್ಲಿದ್ದಳು. ಆಗಲೇ ಅಲ್ಲಿ ಕಾಣಿಸಿದ್ದು ರಾಕ್ಷಸನೊಬ್ಬನ ದೈತ್ಯ ನೆರಳು… ಡಾ. ವಿಶ್ವನಾಥ ಎನ್ ನೇರಳಕಟ್ಟೆ
ಧಾರಾವಾಹಿ ಸಂಗಾತಿ-119 ರುಕ್ಮಿಣಿ ನಾಯರ್ ಒಬ್ಬ ಅಮ್ಮನ ಕಥೆ ಸುಮತಿಯ ಒಳತೋಟಿ ಹೇಗೋ ಸಾವರಿಸಿಕೊಂಡು ಕಾರಿನಲ್ಲಿ ಕುಳಿತಿದ್ದ ಮಹಾನುಭಾವರಿಗೆ ವಂದಿಸಿ ಕ್ಷಮೆ ಯಾಚಿಸಿದಳು. ನಂತರ ಹೇಗೋ ಯಾಂತ್ರಿಕವಾಗಿ ರಸ್ತೆಯನ್ನು ದಾಟಿ ಅಲ್ಲಿಂದ ನೇರವಾಗಿ ಅನಾಥಾಶ್ರಮಕ್ಕೆ ಬಂದಳು. ಅನಾಥಾಶ್ರಮಕ್ಕೆ ಬಂದಾಗ ಮಕ್ಕಳೆಲ್ಲರೂ ಅದಾಗಲೇ ಶಾಲೆಯಿಂದ ಬಂದಿದ್ದರು. ಅವಳ ಜೊತೆಗೆ ಸಹಾಯಕ್ಕಾಗಿ ಹೊಸದಾಗಿ ಬಂದ ಅವಳದೇ ವಯಸ್ಸಿನ ಹುಡುಗಿಯು ಇವಳನ್ನು ಕಂಡೊಡನೆ ಹತ್ತಿರ ಬಂದು…. ಏನಾಯ್ತು?…. ನಿನ್ನ ಮುಖ ಪೂರ್ತಿ ಕಳೆಗುಂದಿದೆ…. ಮಧ್ಯಾಹ್ನದ ಊಟ ಮಾಡಿಲ್ಲವೇ? ಎಂದು ಕೇಳಿದಳು. ಇಲ್ಲವೆಂಬಂತೆ ತಲೆ ಆಡಿಸಿ ತನ್ನ ರೂಮಿನೊಳಗೆ ಹೋದಳು. ಆ ಹುಡುಗಿ ಆಕೆಯನ್ನು ಹಿಂಬಾಲಿಸಿ ಬಂದಳು. ಅವಳ ಹೆಗಲ ಮೇಲೆ ಕೈಯಿಟ್ಟು…. ಏನಾಯ್ತು ಹೇಳು…. ಬಂದಾಗಿನಿಂದ ನಿನ್ನನ್ನು ಗಮನಿಸುತ್ತಿದ್ದೇನೆ….. ಇಷ್ಟೊಂದು ಹತಾಶಳಾಗಿ ನಿನ್ನನ್ನು ಕಂಡಿದ್ದೇ ಇಲ್ಲ…. ಏನಾಯ್ತು…. ಎಂದು ಕೇಳಲು, ಅಲ್ಲಿಯವರೆಗೂ ಅವಳು ತಡೆಹಿಡಿದಿದ್ದ ಮನಸ್ಸಿನ ಭಾರ ಒಮ್ಮೆಲೆ ಹೊರಗೆ ಬರುತ್ತಿರುವಂತೆ ಅವಳಿಗನಿಸಿತು. ಇವಳು ಆ ಹುಡುಗಿಯ ಹೆಗಲ ಮೇಲೆ ತಲೆ ಇಟ್ಟಳು. ಅವಳನ್ನು ಬಿಗಿಯಾಗಿ ಅಪ್ಪಿಕೊಂಡಳು. ಆದರೆ ಕಣ್ಣಿನಿಂದ ಒಂದು ಹನಿ ನೀರೂ ಆಚೆ ಬರಲಿಲ್ಲ. ಅಳಬೇಕೆಂದು ಪ್ರಯತ್ನ ಪಟ್ಟರೂ ಅಳು ಗಂಟಲಲ್ಲಿ ಉಳಿದು ಹೋಯಿತು. ಅವಳ ಆ ಸ್ಥಿತಿಯನ್ನು ಗಮನಿಸಿದಾಗ ಪರಿಸ್ಥಿತಿಯು ಗಂಭೀರವಾಗಿದೆ ಎಂಬುದು ಅವಳ ಜೊತೆಗಿದ್ದ ಹುಡುಗಿಗೆ ಅರ್ಥವಾಯಿತು. ಒಂದು ಲೋಟ ನೀರು ತರುವಂತೆ ಮಕ್ಕಳಿಗೆ ಹೇಳಿ ಆ ಹುಡುಗಿಯು ಇವಳನ್ನು ಅಲ್ಲಿದ್ದ ಬೆಂಚಿನ ಮೇಲೆ ಕುಳ್ಳಿರಿಸಿದಳು. “….ಏನಾಯ್ತು ಹೇಳು”…. ಎಂದಾಗ, ವೈದ್ಯರು ಹೇಳಿದ ಅಷ್ಟೂ ವಿಷಯಗಳನ್ನು ಆ ಹುಡುಗಿಗೆ ತಿಳಿಸಿದಳು. ಆ ಹುಡುಗಿಯು ಕೊಡಗಿನ ನಿವಾಸಿಯಾಗಿದ್ದಳು. ಹಾಸನದಲ್ಲಿ ದಾದಿಯರ ತರಬೇತಿಗೆಂದು ಬಂದವಳಾಗಿದ್ದಳು. ಆ ವರ್ಷದ ಅಡ್ಮಿಶನ್ ಅವಧಿ ಮುಗಿದಿದ್ದ ಕಾರಣ ಸ್ವಲ್ಪ ದಿನ ಅನಾಥಾಶ್ರಮದಲ್ಲಿ ಸಹಾಯಕಿಯಾಗಿ ಕೆಲಸಕ್ಕೆ ಸೇರಿಕೊಂಡಿದ್ದಳು. ಮುಂದಿನ ವರ್ಷದ ನರ್ಸಿಂಗ್ ತರಬೇತಿಗೆ ಸೇರಲು ತೀರ್ಮಾನಿಸಿದ್ದಳು. ಈ ಹುಡುಗಿಯು ಬಂದಿದ್ದು ಸುಮತಿಯ ಮಗಳಿಗೆ ಬಹಳ ಸಹಾಯಕವಾಗಿತ್ತು. ಅಡುಗೆಯ ಕೆಲಸವನ್ನು ಚೆನ್ನಾಗಿ ಬಲ್ಲವಳಾಗಿದ್ದ ಅವಳು ರುಚಿಕರವಾದ ಅಡುಗೆಯನ್ನು ಮಾಡಿ ಸುಮತಿಯ ಮಗಳಿಗೂ ಅನಾಥಾಶ್ರಮದ ಮಕ್ಕಳಿಗೂ ಉಣ ಬಡಿಸುತ್ತಿದ್ದಳು. ಬಹಳ ಬೇಗ ಇಬ್ಬರೂ ಸ್ನೇಹಿತೆಯರಾಗಿ ಬಿಟ್ಟಿದ್ದರು. ಅಲ್ಲದೆ ಅನಾಥಾಶ್ರಮದ ಮೇಲೆ ಇರುವ ಕಟ್ಟಡದ ವನಿತಾ ಹಾಸ್ಟಲ್ ನಲ್ಲಿ ಬಾಡಿಗೆಗೆ ವಾಸವಾಗಿದ್ದ ಯುವತಿಯರು ಕೂಡಾ ಸುಮತಿಯ ಮಗಳಿಗೆ ಸ್ನೇಹಿತೆಯರಾಗಿದ್ದರು. ಕೆಲವೊಮ್ಮೆ ಅಪರೂಪಕ್ಕೆ ಹಾಸ್ಟೆಲ್ ಗೆ ಹೋಗಿ ಅವರೊಂದಿಗೆ ಸಮಯ ಕಳೆಯುತ್ತಿದ್ದಳು. ಸುಮತಿಯ ಮಗಳು ಮಧುರವಾಗಿ ಹಾಡುಗಳನ್ನು ಹಾಡುತ್ತಿದ್ದ ಕಾರಣ ಆ ಯುವತಿಯರೆಲ್ಲರಿಗೂ ಬಹಳ ಇಷ್ಟವಾಗಿದ್ದಳು. ಅವಳ ತಾಯಿಯ ಆರೋಗ್ಯ ಸರಿ ಇಲ್ಲದಿರುವುದು ಆ ಯುವತಿಯರಿಗೂ ತಿಳಿದಿತ್ತು. ಹಾಗಾಗಿ ಸುಮತಿಯ ಮಗಳನ್ನು ಕಂಡು ಮಾತನಾಡಿಸಿಕೊಂಡು ಹೋಗಲು ಆ ಯುವತಿಯರು ಅನಾಥಾಶ್ರಮದ ಒಳಗೆ ಬಂದರು. ಸುಮತಿಯ ಮಗಳ ಸ್ಥಿತಿಯನ್ನು ಕಂಡು ಹಾಗೂ ಅವಳ ಮಾತುಗಳನ್ನು ಆಲಿಸಿ, ಅವಳ ತಾಯಿಗೆ ಗಂಭೀರವಾದ ಸಮಸ್ಯೆ ಇರುವುದನ್ನು ಮನಗಂಡರು. ಸಾಧ್ಯವಾದಷ್ಟು ಸಾಂತ್ವನ ಹೇಳಿ, ಮೇಲಿನ ಹಾಸ್ಟೆಲ್ ಗೆ ಕರೆದುಕೊಂಡು ಹೋದರು. ಅಲ್ಲಿ ಅವಳಿಗೆ ಹಣ್ಣಿನ ಪಾನಕವನ್ನು ಕೊಟ್ಟರು. ಎಲ್ಲರ ಸಾಂತ್ವನದ ಮಾತುಗಳು ಮತ್ತು ಕಾಳಜಿ ಅವಳಿಗೊಂದಿಷ್ಟು ಸಮಾಧಾನವನ್ನು ಕೊಟ್ಟಿತು. ಅವಳ ಜೊತೆಗಿದ್ದ ಹುಡುಗಿಯಂತೂ ಅವಳ ಬಲಗೈಯಂತೆ ಅವಳಿಗೆ ಸಹಾಯ ಮಾಡುತ್ತಿದ್ದಳು. ಸುಮತಿಗೆ ರಾತ್ರಿ ಊಟಕ್ಕೆ ಬೇಕಾದ ಅಡುಗೆಯನ್ನು ಮಾಡಿ ಸ್ಟೀಲ್ ಡಬ್ಬಿಯಲ್ಲಿ ತುಂಬಿ, ತನ್ನ ಸ್ನೇಹಿತರಿಗೂ ಊಟ ಬಡಿಸಿ ಸ್ವಲ್ಪವಾದರೂ ತಿನ್ನುವಂತೆ ಬಲವಂತ ಮಾಡಿದರು. ಅವಳ ಕಾಳಜಿಯನ್ನು ನೋಡಿ ಊಟ ಸೇರದಿದ್ದರೂ ಒಂದೆರಡು ತುತ್ತು ತಿಂದು, ರಾತ್ರಿ ತಾಯಿಯ ಜೊತೆ ಆಸ್ಪತ್ರೆಯಲ್ಲಿ ಮಲಗಲು ಹೊರಟಳು. ತನಗೆ ಸಹಾಯಕಿ ಹಾಗೂ ಸ್ನೇಹಿತೆ ಅನಾಥಾಶ್ರಮದಲ್ಲಿ ಇರುವುದರಿಂದ ಅವಳಿಗೆ ಮಕ್ಕಳ ಬಗ್ಗೆ ಯಾವುದೇ ಚಿಂತೆ ಇರಲಿಲ್ಲ. ಹಾಗೂ ಅನಾಥಾಶ್ರಮದ ಮೇಲುಸ್ತುವಾರಿ ನೋಡಿಕೊಳ್ಳುವವರು ಅನುಮತಿಯನ್ನು ನೀಡಿದ್ದರಿಂದ ಸ್ವಲ್ಪ ನಿರಾಳವಾಗಿದ್ದಳು. ಅನಾಥಾಶ್ರಮದಿಂದ ಹೊರಟವಳು ಬೇಗ ಬೇಗನೆ ಆಸ್ಪತ್ರೆಯ ಕಡೆ ಹೆಜ್ಜೆ ಹಾಕಿದಳು. ಅಲ್ಲಿ ಬಂದಾಗ ತನ್ನ ದಾರಿಯನ್ನೇ ಕಾಯುತ್ತಿದ್ದ ಸುಮತಿಯನ್ನು ಕಂಡಳು. ಇನ್ನೂ ಹದಿನಾರರ ಹರೆಯದ ಮೂರನೇ ಮಗಳು ಒಬ್ಬಳೇ ಊರಲ್ಲಿರುವುದರಿಂದ ಸುಮತಿ ಚಿಂತಾಕ್ರಾಂತಳಾಗಿದ್ದಳು. ಮಂಗಳೊಂದಿಗೆ ತನ್ನ ಮನದ ದುಗುಡವನ್ನು ಹೇಳಿಕೊಂಡಳು. ಅಕ್ಕ ಪಕ್ಕದಲ್ಲಿ ಮನೆಗಳಿದ್ದರೂ ಹೆಣ್ಣು ಮಗಳು ಒಬ್ಬಳೇ ಅಲ್ಲಿರುವಳಲ್ಲ ಎನ್ನುವ ಚಿಂತೆ ಸುಮತಿಯ ಮನಸ್ಸನ್ನು ಕೊರೆಯುತ್ತಿತ್ತು. ತಾಯಿಯ ಚಿಂತೆಯನ್ನು ಅರಿತು ಮಗಳು…. ಅಮ್ಮಾ …..ಹಾಗೆಲ್ಲ ಚಿಂತಿಸಬೇಡ…. ಅವಳು ಧೈರ್ಯವಂತಳು….ಅವಳು ಅಲ್ಲಿದ್ದು ಶಾಲೆಗೆ ಹೋದರೆ ತಾನೇ ನಿನ್ನ ತಿಂಗಳಿನ ಸಂಬಳ ನಮಗೆ ಸಿಗುವುದು…. ಆ ಸಂಬಳ ಇರದಿದ್ದರೆ ನಾವು ತುಂಬಾ ಕಷ್ಟ ಪಡಬೇಕಾಗುತ್ತದೆ ಅಲ್ಲವೇ?…. ಎಂದು ಕೇಳಿದಳು. ಮಗಳು ಹೇಳಿದ ಮಾತು ಅಕ್ಷರಶಃ ಸತ್ಯವೆಂದು ಸುಮತಿಗೆ ತಿಳಿದಿದೆ ಆದರೂ ಒಳ ಮನಸ್ಸಿಗೆ ಸಮಾಧಾನವೇ ಇರಲಿಲ್ಲ. ಆಸ್ಪತ್ರೆಯಲ್ಲಿ ಡಾಕ್ಟರ್ ಹಾಗೂ ನರ್ಸ್ ಸುಮತಿಯನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರು. ತಾಯಿಗೆ ರಾತ್ರಿ ಊಟವನ್ನು ಕೊಟ್ಟು, ನರ್ಸ್ ಕೊಟ್ಟ ಗುಳಿಗೆಗಳನ್ನು ನುಂಗಿಸಿ, ಮಲಗಲು ಹೇಳಿ ಪ್ರೀತಿಯಿಂದ ತಲೆಯನ್ನು ಸವರಿ…. “ಅಮ್ಮಾ …..ನಾನು ಇಲ್ಲಿಯೇ ವಾರ್ಡಿನ ಹೊರಗೆ ಆಸ್ಪತ್ರೆಯ ಉದ್ಯಾನದ ಕಾರಂಜಿಯ ನಡುವೆ ಇರುವ ವಿದ್ಯುತ್ ದೀಪದ ಬೆಳಕಿನಲ್ಲಿ ನನ್ನ ಪಠ್ಯಪುಸ್ತಕಗಳನ್ನು ಓದುತ್ತಿರುತ್ತೇನೆ…. ಇನ್ನೇನು ವಾರ್ಷಿಕ ಪರೀಕ್ಷೆಯು ಹತ್ತಿರ ಬರುತ್ತಿದೆ…. ಎಂದಳು. ಸುಮತಿ ಮಗಳ ಮುಖವನ್ನು ಒಮ್ಮೆ ನೋಡಿದಳು. ನನ್ನ ಮಕ್ಕಳಿಗೆ ಈ ಚಿಕ್ಕ ವಯಸ್ಸಿಗೆ ಎಷ್ಟೊಂದು ಜವಾಬ್ದಾರಿಗಳು? ನನ್ನಂತಹಾ ನತದೃಷ್ಟಳ ಹೊಟ್ಟೆಯಲ್ಲಿ ಏಕೆ ಇಂತಹಾ ಒಳ್ಳೆಯ ಮಕ್ಕಳನ್ನು ಹುಟ್ಟಿಸಿದೆ ದೇವರೇ. ನನ್ನ ಮಕ್ಕಳು ಜೀವನದ ಪ್ರತಿಯೊಂದು ಹಂತದಲ್ಲೂ ಒಂದಲ್ಲ ಒಂದು ರೀತಿಯ ಕಷ್ಟಕರ ಸವಾಲುಗಳನ್ನು ಎದುರಿಸುತ್ತಾ ಬದುಕುತ್ತಿದ್ದಾರೆ. ಇದಕ್ಕೆಲ್ಲಾ ನಾನೇ ಕಾರಣ ಎಂದು ಸುಮತಿ ವ್ಯಥೆ ಪಟ್ಟಳು.
ಶರಣರ ಸಂಗಾತಿ ಡಾ.ಶಶಿಕಾಂತ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಕರ್ನಾಟಕದ ಏಕೀಕರಣದ ರೂವಾರಿ ಅನಕೃ ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಕಾದಂಬರಿ ಸಾರ್ವಭೌಮ ಏಕೀಕರಣದ ರೂವಾರಿ ಅನಕೃ. ಕನ್ನಡ ಸಾಹಿತ್ಯ ಲೋಕದಲ್ಲಿ ‘ಕಾದಂಬರಿ ಸಾರ್ವಭೌಮ’ ಎಂದೇ ಪ್ರಖ್ಯಾತರಾದ ಅ.ನ. ಕೃಷ್ಣರಾಯ (ಅನಕೃ) ಅವರು ಪ್ರಗತಿಶೀಲ ಸಾಹಿತ್ಯ ಚಳವಳಿಯ ಪ್ರವರ್ತಕರು ಮತ್ತು ಅಪ್ಪಟ ಕನ್ನಡಾಭಿಮಾನಿ ಹೋರಾಟಗಾರರು. ಅವರ ಜೀವನ ಚರಿತ್ರೆಯ ಪ್ರಮುಖ ಅಂಶಗಳು ಇಲ್ಲಿವೆ: ಜನನ ಮತ್ತು ಬಾಲ್ಯಪೂರ್ಣ ಹೆಸರು: ಅರಕಲಗೂಡು ನರಸಿಂಗರಾವ್ ಕೃಷ್ಣರಾವ್. ಜನನ: ಮೇ 9, 1908 ರಂದು ಕೋಲಾರದಲ್ಲಿ ಜನಿಸಿದರು. ಪೋಷಕರು: ತಂದೆ ನರಸಿಂಗರಾಯರು,ತಾಯಿ ಅನ್ನಪೂರ್ಣಮ್ಮನವರು. ಇವರ ಮೂಲ ಹಾಸನ ಜಿಲ್ಲೆಯ ಅರಕಲಗೂಡು. ಶಿಕ್ಷಣ: ಪ್ರಾಥಮಿಕ ಶಿಕ್ಷಣವನ್ನು ಕೋಲಾರದಲ್ಲಿ ಮುಗಿಸಿ, ನಂತರ ಬೆಂಗಳೂರಿನ ದೇಶೀಯ ವಿದ್ಯಾಶಾಲೆಯಲ್ಲಿ ಪ್ರೌಢಶಿಕ್ಷಣ ಪಡೆದರು. ಸಾಹಿತ್ಯಿಕ ಕೊಡುಗೆಗಳುಅನಕೃ ಅವರು ಕನ್ನಡ ಸಾಹಿತ್ಯಕ್ಕೆ ಸುಮಾರು 200ಕ್ಕೂ ಹೆಚ್ಚು ಕೃತಿಗಳನ್ನು ನೀಡಿದ್ದಾರೆ: ಪ್ರಗತಿಶೀಲ ಸಾಹಿತ್ಯ: ಕನ್ನಡದಲ್ಲಿ ‘ಪ್ರಗತಿಶೀಲ ಸಾಹಿತ್ಯ’ ಚಳವಳಿಯನ್ನು ಆರಂಭಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಪ್ರಮುಖ ಕಾದಂಬರಿಗಳು: ಸಂಧ್ಯಾ ರಾಗ (ಅವರ ಅತ್ಯಂತ ಜನಪ್ರಿಯ ಕೃತಿ), ಮಂಗಲಸೂತ್ರ, ನಟಸಾರ್ವಭೌಮ ಇತ್ಯಾದಿ.ಇತರ ಪ್ರಕಾರಗಳು: ಕಾದಂಬರಿಗಳಲ್ಲದೆ ನಾಟಕಗಳು (ಬಣ್ಣದ ಬೀಸಣಿಗೆ),ಜೀವನ ಚರಿತ್ರೆಗಳು (ಕನ್ನಡ ಕುಲರಸಿಕರು), ಮತ್ತು ಆತ್ಮಕಥೆ (ಬರಹಗಾರನ ಬದುಕು, ನನ್ನನ್ನು ನಾನೇ ಕಂಡೆ) ಬರೆದಿದ್ದಾರೆ.ಕನ್ನಡ ಪರ ಹೋರಾಟಅನಕೃ ಅವರು ಕೇವಲ ಸಾಹಿತಿಯಾಗಿರದೆ, ಕನ್ನಡ ನಾಡು-ನುಡಿಯ ರಕ್ಷಣೆಗಾಗಿ ಹೋರಾಡಿದ ಧೀಮಂತ ನಾಯಕ: ಕನ್ನಡ ಅಸ್ಮಿತೆ: ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಸ್ಥಾನ ಸಿಗಬೇಕು ಎಂದು ಪ್ರತಿಪಾದಿಸಿದರು.ಸಂಗೀತ ಮತ್ತು ಚಿತ್ರರಂಗ: ಕರ್ನಾಟಕ ಸಂಗೀತ ಕಚೇರಿಗಳಲ್ಲಿ ಕನ್ನಡ ಕೃತಿಗಳಿಗಾಗಿ ಮತ್ತು ಬೆಂಗಳೂರಿನ ಚಿತ್ರಮಂದಿರಗಳಲ್ಲಿ ಕನ್ನಡ ಚಲನಚಿತ್ರಗಳ ಪ್ರದರ್ಶನಕ್ಕಾಗಿ ಬಲವಾದ ಚಳವಳಿ ನಡೆಸಿದರು. ಶುದ್ಧ ಕನ್ನಡಿಗ: ಖ್ಯಾತ ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಅನಕೃ ಅವರನ್ನು “ಶುದ್ಧ ಕನ್ನಡಿಗ” ಎಂದು ಬಣ್ಣಿಸಿದ್ದಾರೆ. ಗೌರವ ಮತ್ತು ಪ್ರಶಸ್ತಿಗಳು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ: 1960ರಲ್ಲಿ ಮಣಿಪಾಲದಲ್ಲಿ ನಡೆದ 42ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಗೌರವ ಡಾಕ್ಟರೇಟ್: ಮೈಸೂರು ವಿಶ್ವವಿದ್ಯಾಲಯವು ಇವರಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿದೆ.ಬಿರುದು: ಇವರ ಅದ್ಭುತ ಕಾದಂಬರಿ ರಚನಾ ಶಕ್ತಿಯಿಂದಾಗಿ ‘ಕಾದಂಬರಿ ಸಾರ್ವಭೌಮ’ ಎಂಬ ಬಿರುದು ಲಭಿಸಿದೆ. ಅನಕೃ ಅವರು ಜುಲೈ 8, 1971 ರಂದು ನಿಧನರಾದರು. ಅವರ ಸಾಹಿತ್ಯ ಮತ್ತು ಹೋರಾಟ ಇಂದಿಗೂ ಕನ್ನಡಿಗರಿಗೆ ಸ್ಫೂರ್ತಿಯಾಗಿದೆ. *ಕರ್ನಾಟಕ ಏಕೀಕರಣಕ್ಕೆ ಕೊಡುಗೆ* ಅನಕೃ (ಅ.ನ. ಕೃಷ್ಣರಾಯರು) ಕರ್ನಾಟಕ ಏಕೀಕರಣ ಚಳವಳಿಯ ಪ್ರಮುಖ ರೂವಾರಿಗಳಲ್ಲಿ ಒಬ್ಬರು. ಹರಿದು ಹಂಚಿಹೋಗಿದ್ದ ಕನ್ನಡದ ಭಾಗಗಳನ್ನು ಒಂದುಗೂಡಿಸಿ ಅಖಂಡ ಕರ್ನಾಟಕವನ್ನು ನಿರ್ಮಿಸುವಲ್ಲಿ ಅವರು ಸಾಹಿತ್ಯ ಮತ್ತು ಹೋರಾಟ ಎರಡರ ಮೂಲಕವೂ ದೊಡ್ಡ ಕೊಡುಗೆ ನೀಡಿದ್ದಾರೆ: ಜನಜಾಗೃತಿ ಮತ್ತು ಭಾಷಣಗಳು:ಕರ್ನಾಟಕದ ಏಕೀಕರಣಕ್ಕೆ ಹಳೆಯ ಮೈಸೂರು ಭಾಗದಲ್ಲಿ ಆರಂಭದಲ್ಲಿ ಹೆಚ್ಚಿನ ಬೆಂಬಲವಿರಲಿಲ್ಲ. ಇಂತಹ ಸಂದರ್ಭದಲ್ಲಿ ಅನಕೃ ಅವರು ಉತ್ತರ ಕರ್ನಾಟಕದ ಪ್ರತಿಯೊಂದು ಊರಿಗೂ ಪ್ರವಾಸ ಮಾಡಿ, ತಮ್ಮ ವಾಗ್ಝರಿಯಿಂದ ಜನರಲ್ಲಿ ಕನ್ನಡದ ಅಸ್ಮಿತೆಯನ್ನು ಜಾಗೃತಗೊಳಿಸಿದರು. ಸಾಹಿತ್ಯಿಕ ಪ್ರಭಾವ: ತಮ್ಮ ಬರಹಗಳ ಮೂಲಕ ಕನ್ನಡಿಗರಲ್ಲಿ ಸುಪ್ತವಾಗಿದ್ದ ಸ್ವಾಭಿಮಾನವನ್ನು ಬಡಿದೆಬ್ಬಿಸಿದರು. ಸಾಹಿತಿಗಳು ರಾಜಕೀಯ ನಾಟಕಗಳಿಂದ ಹೊರಬಂದು ಜನರ ಭಾವನೆಗಳನ್ನು ಪ್ರತಿನಿಧಿಸಬೇಕು ಎಂದು ನಂಬಿದ್ದ ಅವರು, ಕರ್ನಾಟಕದ ಇತಿಹಾಸ ಮತ್ತು ಸಂಸ್ಕೃತಿಯನ್ನು ಜನಪ್ರಿಯಗೊಳಿಸಿದರು. ಸಂಘಟನೆಗಳ ನೇತೃತ್ವ: ಅವರು ‘ಕರ್ನಾಟಕ ಸಂಯುಕ್ತ ರಂಗ’ ದಂತಹ ಸಂಘಟನೆಗಳ ಅಧ್ಯಕ್ಷರಾಗಿ ಹೋರಾಟವನ್ನು ಮುನ್ನಡೆಸಿದರು. 1945ರಲ್ಲಿ ಮುಧೋಳದಲ್ಲಿ ನಡೆದ ಕರ್ನಾಟಕ ಏಕೀಕರಣ ಸಭೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.ಕನ್ನಡದ ಪ್ರಾಬಲ್ಯಕ್ಕಾಗಿ ಹೋರಾಟ: ಬೆಂಗಳೂರಿನಂತಹ ನಗರಗಳಲ್ಲಿ ಕನ್ನಡಕ್ಕೆ ಅಗ್ರಸ್ಥಾನ ಸಿಗಬೇಕು ಎಂದು ಅವರು ಸತತವಾಗಿ ಹೋರಾಡಿದರು. ಚಿತ್ರಮಂದಿರಗಳಲ್ಲಿ ಕನ್ನಡ ಚಲನಚಿತ್ರಗಳ ಪ್ರದರ್ಶನ ಮತ್ತು ಸಂಗೀತ ಕಚೇರಿಗಳಲ್ಲಿ ಕನ್ನಡ ಕೃತಿಗಳ ಅಳವಡಿಕೆಗಾಗಿ ಅವರು ನಡೆಸಿದ ಚಳವಳಿಗಳು ಏಕೀಕರಣದ ಆಶಯಕ್ಕೆ ಸಾಂಸ್ಕೃತಿಕ ಬಲ ನೀಡಿದವು. ಧೀಮಂತ ನಿಲುವು:ಕನ್ನಡದ ಹಿತಾಸಕ್ತಿಗೆ ಧಕ್ಕೆಯಾದಾಗ ಅವರು ಎಂದಿಗೂ ರಾಜಿಯಾಗುತ್ತಿರಲಿಲ್ಲ. ಕನ್ನಡ-ಹಿಂದಿ ವಾಗ್ವಾದದ ಸಂದರ್ಭದಲ್ಲಿ ಕನ್ನಡದ ಪರವಾದ ನಿಲುವು ತಳೆದು ‘ಕನ್ನಡ ನುಡಿ’ ಪತ್ರಿಕೆಯ ಸಂಪಾದಕತ್ವವನ್ನೇ ತ್ಯಜಿಸಿದರು.ಅನಕೃ ಅವರು ಕೇವಲ ಸಾಹಿತಿಯಾಗಿ ಉಳಿಯದೆ, ‘ಕರ್ನಾಟಕತ್ವ’ ದ ದರ್ಶನವನ್ನು ಜನರಿಗೆ ಮಾಡಿಸಿದ ಕ್ರಾಂತಿಕಾರಿ ಹೋರಾಟಗಾರರಾಗಿ ಇಂದಿಗೂ ಸ್ಮರಣೀಯರಾಗಿದ್ದಾರೆ. ಮನ್ಸೂರು ಅವರಿಗೆ ವಚನ ಹಾಡಲು ಪ್ರೇರಣೆ ಖ್ಯಾತ ಹಿಂದೂಸ್ತಾನಿ ಗಾಯಕ ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಅವರಿಗೆ ವಚನಗಳನ್ನು ಶಾಸ್ತ್ರೀಯ ಸಂಗೀತದ ಚೌಕಟ್ಟಿನಲ್ಲಿ ಹಾಡಲು ಪ್ರೇರಣೆ ನೀಡಿದವರಲ್ಲಿ ಅ.ನ. ಕೃಷ್ಣರಾಯರು (ಅನಕೃ) ಅತ್ಯಂತ ಪ್ರಮುಖರು.ಅನಕೃ ಅವರು ಮನ್ಸೂರರಿಗೆ ವಚನ ಗಾಯನದತ್ತ ಪ್ರೇರೇಪಿಸಿದ ಸಂದರ್ಭದ ಪ್ರಮುಖ ಅಂಶಗಳು ಇಲ್ಲಿವೆ: ವಚನಗಳ ಮಹತ್ವದ ಪರಿಚಯ: ಮನ್ಸೂರರು ಜೈಪುರ ಅತ್ರೌಲಿ ಘರಾಣೆಯ ಕಟ್ಟುನಿಟ್ಟಾದ ಶಾಸ್ತ್ರೀಯ ಸಂಗೀತದಲ್ಲಿ ಪರಿಣತರಾಗಿದ್ದರು. ಆ ಕಾಲದಲ್ಲಿ ವಚನಗಳನ್ನು ಶಾಸ್ತ್ರೀಯ ಸಂಗೀತದ ವೇದಿಕೆಗಳಲ್ಲಿ ಹೆಚ್ಚು ಬಳಸುತ್ತಿರಲಿಲ್ಲ. ಅನಕೃ ಅವರು ವಚನಗಳಲ್ಲಿನ ಆಳವಾದ ತತ್ವಜ್ಞಾನ ಮತ್ತು ಸಾಹಿತ್ಯದ ಸೌಂದರ್ಯವನ್ನು ಮನ್ಸೂರರಿಗೆ ಮನವರಿಕೆ ಮಾಡಿಕೊಟ್ಟರು. ಕರ್ನಾಟಕತ್ವದ ಜಾಗೃತಿ: ಕನ್ನಡದ ಅಸ್ಮಿತೆಗಾಗಿ ಹೋರಾಡುತ್ತಿದ್ದ ಅನಕೃ, ಕನ್ನಡದ ವಚನಗಳನ್ನು ಶಾಸ್ತ್ರೀಯವಾಗಿ ಹಾಡುವುದರಿಂದ ಅವುಗಳಿಗೆ ವಿಶ್ವವ್ಯಾಪಿ ಗೌರವ ಸಿಗುತ್ತದೆ ಎಂದು ಮನ್ಸೂರರನ್ನು ಪ್ರೋತ್ಸಾಹಿಸಿದರು. ರಾಗಗಳ ಅನ್ವಯ: ವಚನಗಳ ಭಾವಕ್ಕೆ ತಕ್ಕಂತೆ ಸೂಕ್ತವಾದ ರಾಗಗಳನ್ನು (ಉದಾಹರಣೆಗೆ ‘ಬಹಾದೂರಿ ತೋಡಿ’ ಅಥವಾ ‘ಖಟ್’ ರಾಗಗಳಲ್ಲಿ ವಚನಗಳನ್ನು ಹಾಡುವುದು) ಆಯ್ಕೆ ಮಾಡಿಕೊಳ್ಳುವಲ್ಲಿ ಅನಕೃ ಅವರ ಒಡನಾಟ ಮನ್ಸೂರರಿಗೆ ಸಹಕಾರಿಯಾಯಿತು. ಜನಪ್ರಿಯತೆ: ಅನಕೃ ಅವರ ಪ್ರೇರಣೆಯಿಂದ ಮನ್ಸೂರರು ವಚನಗಳನ್ನು ಹಾಡಲು ಪ್ರಾರಂಭಿಸಿದ ಮೇಲೆ, ‘ಅಕ್ಕ ಕೇಳವ್ವ ನಾನೊಂದು ಕನಸ ಕಂಡೆ’ ನಂತಹ ವಚನಗಳು ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧವಾದವು.ಹೀಗೆ, ಮಲ್ಲಿಕಾರ್ಜುನ ಮನ್ಸೂರರ ಗಾಯನದಲ್ಲಿ ವಚನ ಸಾಹಿತ್ಯವು ಶಾಸ್ತ್ರೀಯ ಘನತೆಯನ್ನು ಪಡೆಯಲು ಅನಕೃ ಅವರ ಸ್ನೇಹ ಮತ್ತು ಪ್ರೋತ್ಸಾಹವೇ ತಳಹದಿಯಾಯಿತು. 1967 ರಲ್ಲಿ ಶ್ರೀ ಬಸವೇಶ್ವರ ಅವರ ಅಷ್ಟ ಶತಮಾನೋತ್ಸವ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸರ್ಕಾರ ವರ್ಷವಿಡಿ ಈ ಕಾರ್ಯಕ್ರಮವನ್ನು ಮಾಡ ಬೇಕೆಂದು ನಿರ್ಧರಿಸಿ ಶ್ರೀ ಬಸವೇಶ್ವರ ಎಂಬ ಆಂಗ್ಲ ಭಾಷೆಯಲ್ಲಿ ಬಸವಣ್ಣನವರ ಬಗ್ಗೆ ಎಲ್ಲಾ ಸಾಹಿತಿಗಳಿಗೆ ಬರೆಯಲು ಹೇಳಿ ಬಸವಣ್ಣನವರ ಜೊತೆಗೆ ಇತರ ದಾರ್ಶನಿಕರನ್ನು ತುಲನಾತ್ಮಕವಾಗಿ ಅಧ್ಯಯನ ಮಾಡಿ ಸುಂದರ ಲೇಖನ ಬರೆಯಲು ಸ್ವತಃ ಕರ್ನಾಟಕದ ಅಂದಿನ ಮುಖ್ಯ ಮಂತ್ರಿ ಶ್ರೀ ಎಸ್ ನಿಜಲಿಂಗಪ್ಪನವರು ಎಲ್ಲಾ ಸಾಹಿತಿಗಳಿಗೆ ಪತ್ರ ಬರೆದರು.ಅದರಂತೆ ಶ್ರೀ ಎಸ್ ನಿಜಲಿಂಗಪ್ಪನವರು ಶ್ರೀ ಅನಕೃ ಅವರಿಗೆ ಪತ್ರ ಬರೆದು ನೀವು ಬಸವಣ್ಣ ಮತ್ತು ಚತುರಾಚಾರ್ಯರ ಬಗ್ಗೆ ಲೇಖನ ಬರೆಯಲು ಹೇಳಿದರು.ಆಗ ಶ್ರೀ ಅನಕೃ ಅವರುಜಗತ್ತಿನಲ್ಲಿ ಬಸವಣ್ಣನವರಿಗೆ ಯಾರನ್ನೂ ಹೋಲಿಸಲಾಗದು. ಒಂದು ವೇಳೆ ಹೋಲಿಸುವುದಿದ್ದರೆ ಅದು ಇನ್ನೊಬ್ಬ ಬಸವಣ್ಣನವರಿಗೆ ಮಾತ್ರ ಎಂದು ಹೇಳಿದರು. ಕನ್ನಡ ನೆಲ ಜಲ ಭಾಷೆ ಸಂಸ್ಕೃತಿ ಸಂರಕ್ಷಣೆಗೆ ತಮ್ಮ ಜೀವನವನ್ನು ಮುಡಿಪಿಟ್ಟ ಧೀಮಂತ ಸಾಹಿತಿ ಅನಕೃ ನಿತ್ಯ ಸ್ಮರಣೀಯರು ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
ಧಾರಾವಾಹಿ ಸಂಗಾತಿ-20 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್ ಚೇತನ ಭಾಗ- 20*ಜಯದೇವಿತಾಯಿ ಜೀವನ ವೃತ್ತಾಂತ*ಪತಿಯನ್ನು ದಿನರಾತ್ರಿ ಕಾಳಜಿಯಿಂದ ನೋಡಿಕೊಳ್ಳುತ್ತ ಜಯದೇವಿ ತಾಯಿಯವರು ತಮ್ಮ ಆರೋಗ್ಯವನ್ನು ಸಂಪೂರ್ಣವಾಗಿ ಮರೆತಿದ್ದರು. ತಮ್ಮ ದೇಹದ ನೋವನ್ನು ಕಡೆಗಣಿಸಿದ್ದರು. ಆ ಸಮಯದಲ್ಲಿ ಅವರಿಗೆ ಬೇನೆಯ ಅರಿವು ಆಗಲಿಲ್ಲ…. ನಂತರದ ದಿನಗಳಲ್ಲಿ ಒಳಗಿದ್ದ ನೋವುಗಳು ಒಂದೊಂದಾಗಿ ತಲೆ ಎತ್ತಲು ಶುರುಮಾಡಿದವು.ಆ ನಡುವೆ ಪತಿಯ ಸೇವೆ ಮಾಡುವಾಗ ಮೆಟ್ಟಲು ಏರಲು ಹೋಗಿ ಬಿದ್ದು ಬೆನ್ನಿನ ಎಲುಬಿಗೆ ಗಂಭೀರ ಹಾನಿ ಮಾಡಿತ್ತು. ಅವರು ತಾತ್ಕಾಲಿಕ ಚಿಕಿತ್ಸೆ ಪಡೆದು ಪತಿಗೆ ತನ್ನ ಆರೋಗ್ಯದ ಬಗ್ಗೆ ತಿಳಿಯದ ಹಾಗೆ ದಿನಗಳನ್ನು ಕಳೆಯುತ್ತಿದ್ದರು. ಪತಿಯ ಆರೈಕೆಯೇ ಅವರ ಪ್ರಪಂಚವಾಗಿತ್ತು. ಮೊದಲಿಗೆ ಅದು ಸಾಮಾನ್ಯವಾಗಿ ಕಂಡರೂ, ದಿನದಿಂದ ದಿನಕ್ಕೆ ತೀವ್ರವಾಗತೊಡಗಿತು. ತಲೆ ಸುತ್ತುವುದು, ನಿಶಕ್ತತೆ ಹೆಚ್ಚಾಗುತ್ತಿರುವುದು ಕಂಡುಬಂದಿತು…ದೇಹದಲ್ಲಿ ವಿಚಿತ್ರವಾದ ದುರ್ಬಲತೆ,.. ನಿಂತುಕೊಳ್ಳಲು ಸಾಧ್ಯವಾಗದಷ್ಟು ನೋವು ಕೊಡತೊಡಗಿತು. .. ಕೊನೆಗೆ ಮಕ್ಕಳು ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ವೈದ್ಯರು ಪರಿಶೀಲಿಸಿದಾಗ, ಬಹಳ ದಿನಗಳಿಂದ ನಿರ್ಲಕ್ಷ್ಯಗೊಂಡ ಆರೋಗ್ಯ ಸಮಸ್ಯೆಗಳು ಗಂಭೀರ ಹಂತಕ್ಕೆ ಬಂದಿವೆ ಎಂದು ತಿಳಿದುಬಂತು.ಮುಂಬೈಯಲ್ಲಿರುವ ದೊಡ್ಡ ಆಸ್ಪತ್ರೆಗೆ ಸೇರಿಸಲಾಯಿತು .ಪರೀಕ್ಷೆಗಳ ನಂತರ ವೈದ್ಯರು ಗಂಭೀರವಾಗಿ ಹೇಳಿದರು…..“ಇದು ತುಂಬಾ ದಿನಗಳಿಂದ ಇದ್ದ ಸಮಸ್ಯೆ. ಈಗ ಆಪರೇಷನ್ ಮಾಡಲೇಬೇಕು. ಆದರೆ…”“ಆದರೆ” ಎಂಬ ಒಂದು ಪದವೇ ಮಕ್ಕಳ ಮನಸ್ಸನ್ನು ನಡುಗಿಸಿತು.ವೈದ್ಯರು ಮುಂದುವರೆದು ಹೇಳಿದರು….“ಆಪರೇಷನ್ ಮಾಡಿದರೂ ಅವರು ಮತ್ತೆ ಸಹಜವಾಗಿ ಓಡಾಡುತ್ತಾರೆ ಎಂಬ ಗ್ಯಾರಂಟಿ ಕೊಡಲು ಸಾಧ್ಯವಿಲ್ಲ. ” ದೀರ್ಘಕಾಲದ ನಿರ್ಲಕ್ಷ್ಯ, ಮತ್ತು ಎಲುಬಿನ ಹಾನಿ….ಇವುಗಳ ಕಾರಣದಿಂದ ಫಲಿತಾಂಶ ಅನಿಶ್ಚಿತ.”ಎಂದರು.ಆ ಮಾತು ಕೇಳಿ ಮಕ್ಕಳ ಕಣ್ಣು ನೀರಾಯಿತು. ಆದರೆ ತಾಯಿಯವರು ಮಾತ್ರ ಶಾಂತವಾಗಿದ್ದರು.“ನನಗೆ ಭಯ ಇಲ್ಲ… ನಾನು ನನ್ನ ಜೀವನವನ್ನು ನನ್ನವರಿಗಾಗಿ ಬದುಕಿದ್ದೇನೆ. ಈಗ ಏನಾದರೂ ಆಗಲಿ, ನಾನು ಒಪ್ಪಿಕೊಂಡಿದ್ದೇನೆ…” ಎಂದು ವಿಶ್ವಾಸದಿಂದ ಹೇಳಿದರು.ಆಸ್ಪತ್ರೆಯ ಹಾಸಿಗೆಯಲ್ಲಿ ಇದ್ದಾಗಲೂ ಅವರು ತಮ್ಮ ನೋವನ್ನು ಹೇಳಿಕೊಳ್ಳಲಿಲ್ಲ. ಬದಲಾಗಿ ಮಕ್ಕಳ ಮುಖ ನೋಡುತ್ತಾ,“ನೀವು ಚೆನ್ನಾಗಿರಬೇಕು… ನಾನು ಹುಷಾರಾಗಿ ಬೇಗ ಬರುತ್ತೇನೆ…” ಅನ್ನುವ ಮನೋಬಲದ ಧೈರ್ಯ ತೋರುತ್ತಿದ್ದರು . ಆಪರೇಷನ್ ದಿನ ಬಂದಿತು. ವೈದ್ಯರು ತಮ್ಮ ಶ್ರೇಷ್ಠ ಪ್ರಯತ್ನ ಮಾಡಿದರು.ಐದು ಗಂಟೆಗಳ ಕಾಲ ನಡೆದ ಆ ಶಸ್ತ್ರಚಿಕಿತ್ಸೆ ಕುಟುಂಬದವರಿಗೆ ಯುಗದಷ್ಟು ಉದ್ದವಾಗಿತ್ತು.ಆಪರೇಷನ್ ನಂತರ, ಹಾಸಿಗೆಯಲ್ಲಿದ್ದರೂ ಅವರು ಮಕ್ಕಳಿಗೆ ಆಶೀರ್ವಾದ ಕೊಡುತ್ತಾ,“ನೀವು ಖುಷಿಯಾಗಿ ಇರಿ… ಅದೇ ನನ್ನ ಗೆಲುವು…”ಎಂದು ಹೇಳುತ್ತಿದ್ದರು.ತಾಯಿಯವರಿಗಾದ ಈ ಅನುಭವದಿಂದ ನಮ್ಮೆಲ್ಲರಿಗೂ ಒಂದು ಮಾತನ್ನು ಹೇಳುತ್ತಿದ್ದರು…. “ನಮ್ಮ ಆರೋಗ್ಯವನ್ನು ಕಡೆಗಣಿಸುವ… ತ್ಯಾಗ ಒಂದು ದಿನ ನೋವಿನ ರೂಪದಲ್ಲಿ ಹಿಂದಿರುಗುತ್ತದೆ. ಹೀಗಾಗಿ ದೇಹದ ಆರೋಗ್ಯದತ್ತ ಯಾವಾಗಲೂ ನಾವು ಅಲಕ್ಷಿಸಬಾರದು ದೇಹದಲ್ಲಿ ಸ್ವಲ್ಪಾದರೂ ಏರುಪೇರಾದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ ಅದರ ಚಿಕಿತ್ಸೆಯನ್ನು ಪಡೆದುಕೊಳ್ಳಲೇಬೇಕು. ದೇವರು ದಯಪಾಲಿಸಿದ ಅತ್ಯ ಅಮೂಲ್ಯವಾದ ನಮ್ಮ ಆತ್ಮ- ನಮ್ಮ ದೇಹದ ಕಾಳಜಿಯನ್ನು ನಾವೇ ತೆಗೆದುಕೊಳ್ಳಲೇ ಬೇಕೆನ್ನುವ ವೈಚಾರಿಕತೆಯಿಂದ ತಿಳಿ ಹೇಳುತ್ತಿದ್ದರು. ಆಪರೇಷನ್ ಆದ ನಂತರದ ದಿನಗಳು….. ತಾಯಿಯವರ ಜೀವನದಲ್ಲಿ ಅತ್ಯಂತ ಕಠಿಣವಾದ ಅಧ್ಯಾಯವಾಗಿತ್ತು. ವೈದ್ಯರು ಸ್ಪಷ್ಟವಾಗಿ ಸೂಚಿಸಿದ್ದರು…“ಇನ್ನೂ ಕೆಲವು ವಾರಗಳು, ಬೋರಲಾಗಿಯೇ (ಹಾಸಿಗೆಯ ಮೇಲೆಯೇ) ಮಲಗಿರಬೇಕು… ಚಲನವಲನ ಬಹಳ ಕಡಿಮೆ ಇರಬೇಕು.”ದಿನವಿಡೀ ಓಡಾಡುತ್ತಿದ್ದ…ಎಲ್ಲರಿಗೂ ಆಧಾರವಾಗಿದ್ದ ತಾಯಿಯವರು ಈಗ ಹಾಸಿಗೆಯ ಮೇಲೆ ಮಲಗಬೇಕಾದ ಪರಿಸ್ಥಿತಿ…ಅದು ದೇಹ- ಮನಸ್ಸಿಗೂ ದೊಡ್ಡ ಪರೀಕ್ಷೆ.ಬೆನ್ನು ನೋವು ಇನ್ನೂ ತೀವ್ರವಾಗಿತ್ತು. ಪ್ರತಿಯೊಂದು ತಿರುಗಾಟವೂ ನೋವಿನ ಅಲೆ ತರಿಸುತ್ತಿತ್ತು. ಆದರೆ ಆ ನೋವನ್ನೂ ಅವರು ತಮ್ಮ ಮುಖದಿ ತೋರಿಸಲಿಲ್ಲ.ಡಾಕ್ಟರ್‌ಗಳು, ನರ್ಸ್‌ಗಳು ಭೇಟಿ ನೀಡಿದಾಗ“ನೋವು ಹೇಗಿದೆ?” ಎಂದು ಕೇಳಿದರೆ,ಅವರು ತುಂಟ ನಗೆಯೊಂದಿಗೆ,“ಚೆನ್ನಾಗಿದೆ… ನಾನು ಬಲವಾಗಿದ್ದೇನೆ…” ಎಂದು ಉತ್ತರಿಸುತ್ತಿದ್ದರು. *ಗಟ್ಟಿಕೊಂಡಿದೆ ಮನ| ಬೆಟ್ಟದ ಎತ್ತರವಾಗಿಪೆಟ್ಟಿಗೆ ಮಣೆಯಾದ ನಿಶ್ಚಲ- ನಿಲ್ಲುವದುಕಟ್ಟು ಕಾವಲು ಇಲ್ಲದಲೆ||* ಎನ್ನುತ ತಾಯಿಯ ಮೊಗದ ನಗು …. ಅವರ ಮನೋಬಲದ ಪ್ರತಿಬಿಂಬವಾಗಿತ್ತು……!! ಒಳಗೆ ಎಷ್ಟೇ ನೋವು ಇದ್ದರೂ, ಹೊರಗೆ ಅವರು ಪ್ರಸನ್ನ ಚಿತ್ತರಾಗಿ ಇರುತ್ತಿದ್ದರು.ಮಕ್ಕಳು ಅವರ ನೋವನ್ನು ಅರಿತುಕೊಳ್ಳುತ್ತಿದ್ದರು. ಕೆಲವೊಮ್ಮೆ ಕಣ್ಣೀರು ತಡೆಯಲಾಗದೆ ಹೊರಬಂದಾಗ, ತಾಯಿಯವರು ಅವರನ್ನು ಸಮಾಧಾನಪಡಿಸುತ್ತಿದ್ದರು..“ನೀವು ಅಳಬೇಡಿ… ನಾನು ಚೆನ್ನಾಗುತ್ತೇನೆ…”ಎನ್ನುವ ಸಕಾರಾತ್ಮಕತೆಯ ಭಾವನೆ ಬಲವೇ ಅವರನ್ನು ಬೇಗನೆ ಚೇತರಗೊಳಿಸಿತು ಅನ್ನುತ್ತಿದ್ದರು. ದಿನಗಳು ಕಳೆದಂತೆ, ವೈದ್ಯರು ಕೂಡ ಆಶ್ಚರ್ಯಪಟ್ಟಿದರು.ಅವರ ಚೇತರಿಕೆಯ ವೇಗ, ಅವರ ಸ್ಥಿತಿಗಿಂತ ಹೆಚ್ಚು ಉತ್ತಮವಾಗಿತ್ತು.“ಇದು ನಮ್ಮ ಚಿಕಿತ್ಸೆಕಿಂತ… ಅವರ ಮನೋಬಲವೇ ಅವರನ್ನು ಗುಣಪಡಿಸಿದೆ,” ಎಂದು ವೈದ್ಯರು ಹೇಳಿದರು.ಹೌದು, ದೇಹದ ಗಾಯಗಳನ್ನು ಔಷಧಿಗಳು ಗುಣಪಡಿಸಿದಂತೆ….. ನಮ್ಮಲ್ಲಿ ಬಲವಾಗಿದ್ದ ಸಕಾರಾತ್ಮಕತೆಯೇ ಅದೇ ನಿಜವಾದ ಚಿಕಿತ್ಸಕ ಎನ್ನುವರು ತಾಯಿಯವರು. *ಬಿದ್ದು ಹೋಗುವ| ದೇಹಕ್ಕೆ ಕಾದಿಡುವುದೆತಕ್ಕೆಸಾಧಿಸಬೇಕು ಅದರಿಂದ- ಮಾಕಾರ್ಯಶೋಧಿಸಬೇಕು ತನ್ನಿರುವ|| ಎನ್ನುವಂತೆ ತಮ್ಮ ಮುಂದಿನ ಕಾರ್ಯಕ್ಕೆ ಅಣೆಯಾಗಲು ಸಿದ್ದರಾದರು. ಸ್ವಲ್ಪ ಸ್ವಲ್ಪವಾಗಿ ಅವರು ಕುಳಿತುಕೊಳ್ಳಲು ಆರಂಭಿಸಿದರು… ನಂತರ ನಿಧಾನವಾಗಿ ಹೆಜ್ಜೆ ಇಡಲು ಪ್ರಯತ್ನಿಸಿದರು. ಪ್ರತಿಯೊಂದು ಹೆಜ್ಜೆಯಲ್ಲೂ ನೋವು ಇದ್ದರೂ, ಅವರ ಮುಖದಲ್ಲಿ ನಗು ಕಡಿಮೆಯಾಗಲಿಲ್ಲ.ಅವರ ಚೇತರಿಕೆ ವೈದ್ಯಕೀಯ ಸಾಧನೆ ಜೊತೆಗೆಅವರ ಅಜೇಯ ಮನೋಬಲದ ಜಯವಾಗಿತ್ತು….!! ದೇಹ ದುರ್ಬಲವಾದರೂ, ಮನಸ್ಸು ಬಲವಾಗಿದ್ದರೆ ಅಸಾಧ್ಯವೂ ಸಾಧ್ಯವಾಗುತ್ತದೆ…. ಎನ್ನುವುದನ್ನು ಸ್ಪಷ್ಟವಾಗಿ ತೋರಿಸಿಕೊಟ್ಟರು ತಾಯಿಯವರು ಅಂತ ವೈದ್ಯರು ಹೊಗಳುತ್ತಿದ್ದರು. *ಎಲೆ ಎಲೆ ಮಾನವ |ಏನಿದೆ ನಿನ್ನ ಕೈಯಲಿಕಾಲನ ಕೈವಾಡ ತಿಳಿದುಕೊ- ಮರ್ತ್ಯದಿಖಾಲಿ ಬಂದು ಖಾಲಿ ಹೋಗುವುದು||* ಅನ್ನುವಂತೆ ನನ್ನ ಕೈಯಲ್ಲಿ ಏನಿದೆ ಎಲ್ಲಾ ಸಿದ್ದರಾಮ ನಡೆಸಿದಂಗೆ …ಅವನ ಆಶೀರ್ವಾದದಿಂದಲೇ ನಾನು ಮತ್ತೆ ಎದ್ದು ಬದುಕಿ ಬಂದೆ ಅಂತ ಹೇಳುತಿದ್ದರು. ಇನ್ನು ಮಾಡುವ ಕೆಲಸ ನೂರಾರು ಇದೆ ಅದಕ್ಕೆ ಸಿದ್ದರಾಮನು ಮತ್ತೆ ನನಗೆ ಕರುಣಿಸಿದನು ಎನ್ನುವರು. ಎಲ್ಲ ನೋವುಗಳಿಗೂ ಗಟ್ಟಿಯಾಗಿ ನಿಂತ ದೇಹವು ಎಲ್ಲದಕ್ಕೂ ಅಣಿಯಾಗಿ ಆರೋಗ್ಯವಂತರಾಗಿ ಸೊಲ್ಲಾಪುರಕ್ಕೆ ಬರುತ್ತಿದ್ದಂತೆ ಅವರಿಗೆ ಇನ್ನೊಂದು ಆಘಾತ ಕಾಯಿದಿತ್ತು. ಬರುವಾಗ ತರಲಿಲ್ಲ| ಬರಿದಾಗಿ ಹೋಗುವೆವೈರಿತನ ಬೆಳೆಸಿ ಎಷ್ಟು ದಿನ- ಬಾಳುವಿಪರರ ಹೃದಯ ಕಮರಿಸಿ || ಎನ್ನುವಂತೆ ಹೃದಯವನ್ನು ಕಮರಿಸಿದ ಗಂಡನ ತಮ್ಮ ಜಯದೇವಪ್ಪ…. ತಾಯಿಯವರ ಮೇಲೆ ಕೋರ್ಟಿನಲ್ಲಿ ಕೇಸು ದಾಖಲೆ ಮಾಡಿದ್ದ. *ದೂಶಿಸುತ ಅನ್ಯರ |ರೋಷ ಹಿಡಿದು ನೀನುದ್ವೇಷ ಮಾಡುವಿ ಏ ಮರಳೇ ಆಸ್ಥಿರ,ಆಯುಷ್ಯ ಪಡೆದು ಬಂದಿರುವೆ ||* ಅನ್ನುವಂತೆ ತಾಯಿಯವರು ಮಾಡಿದ ಮಹಾನ್ ಕಾರ್ಯಗಳಲಿ ಒಂದಾದ ಬಡ್ಡಿ ವ್ಯವಹಾರವನ್ನು ನಿಲ್ಲಿಸಿ, ಜನರಿಂದ ಕಿತ್ತುಕೊಂಡ ಆಸ್ತಿಗಳನ್ನು ತಿರುಗಿ ಕೊಟ್ಟಿದ್ದೇ ಒಂದು ದೊಡ್ಡ ಅಪರಾಧವಾಗಿತ್ತು ಜಗದೇಪ್ಪನಿಗೆ….. ಜಗದೇವಪ್ಪನು ಅಣ್ಣನ ಹೆಸರಿನಲ್ಲಿ ಇರುವ ಆಸ್ತಿಯ ಮೇಲೆ ಕಣ್ಣಿಟ್ಟಿದ್ದವನು…. ತಾಯಿಯವರು ಅಸಹಾಯಕರ ಆಸ್ತಿಯನ್ನು ಹಿಂದಿರುಗಿಸುವ ತ್ಯಾಗವನ್ನು…. ದೌರ್ಬಲ್ಯವೆಂದು ಭಾವಿಸಿದ. “ಅಣ್ಣನ ಮಕ್ಕಳು ಚಿಕ್ಕವರು… ಆಸ್ತಿಯ ಜವಾಬ್ದಾರಿ ನನ್ನದು ಆಗಬೇಕು…” ಎಂಬ ದುರಾಸೆ ಅವನ ಮನಸ್ಸನ್ನು ಆವರಿಸಿತು. ತಾಯಿಯವರು ಎಲ್ಲ ಆಸ್ತಿಯನ್ನು ಜನರಿಗೆ ಹಿಂತಿರುಗಿಸುತ್ತಿರುವುದನ್ನು ನೋಡಿ, ಅವನ ಅಹಂಕಾರಕ್ಕೆ ಹೊಡೆತ ಬಂತು. *ಅಹಂಕಾರ ತಲೆಗೇರಿ| ಮಂಕನಂತೆ ಮಾತಾಡಿಬೆಂಕಿ ಉಡಿಯಲ್ಲಿ ಕಟ್ಟಿದಂತೆ ನೋಡಯ್ಯಬೆಂಕಿ ಆರಿಸುವದೇ ಬಲು ಲೇಸು ||* ಅಹಂಕಾರದ ಬೆಂಕಿಯ ಹುಡಿಯಲ್ಲಿ ಕಟ್ಟಿಕೊಂಡ ಜಗದೇವಪ್ಪನು ಅತ್ತಿಗೆಯು ಇನ್ನೂ ಎಲ್ಲಾ ಆಸ್ತಿಗಳನ್ನು ಹೀಗೆ ದಾನ ಮಾಡಿ ಕರಗಿಸಿ ಬಿಡುವಳು ಅಂತ ದಾವೇ ಮಾಡಿದ.ಆ ಸುದ್ದಿ ಕೇಳಿದ ಕ್ಷಣದಲ್ಲಿ, ತಾಯಿಯವರ ಹೃದಯ ಕ್ಷಣಮಾತ್ರ ಕಲುಕಿತು… ಆದರೆ ಮುಖದಲ್ಲಿ ಅದೇ ಶಾಂತಿ.*ಕಾಲನ ಕೈವಾಡ |ಅಲಗಿನಂತೆ ಕ್ರೂರಬಲ್ಲವರಿಗಿಲ್ಲ ಇಲ್ಲಿ ಸುಖವಿಲ್ಲ- ಪಾಪದಚೆಲ್ಲಾಟಕೆ ತಾಣವಾಗಿದೆ *||ಎನ್ನುವಂತಿದ್ದ ಸನ್ನಿವೇಶವನ್ನು ಎದುರಿಸುತ “ನಾನು ತಪ್ಪೇನೂ ಮಾಡಿಲ್ಲ… ಜನರ ಹಕ್ಕನ್ನು ಅವರಿಗೆ ತಿರುಗಿ ಕೊಟ್ಟಿದ್ದೇನೆ…” ಎಂದು ವಾದಿಸಿದರು ಆ ನಂಬಿಕೆ ಅವರಿಗೆ ಬಲ ನೀಡಿತು *ಅಂಜಿಕೆ ನನಗಿಲ್ಲ| ಹಿಂಜರಿಯಲಾರೆ ನಾಪಂಜು ಹಿಡಿದು ನಿಜ ತತ್ವ -ಸಾರುವೇ ಕೆಂಜಡೆಯವನ ಕೃಪೆಯಿಂದ ||*ಎಂದು ಎದೆಗುಂದದೆ ಕೋರ್ಟಿಗೆ ಹೋದರು… ಕೋರ್ಟ್‌ನ ವಾತಾವರಣ….ತಾಯಿಯವರು ಮೊದಲ ಬಾರಿಗೆ ಅಲ್ಲಿ ಕಾಲಿಟ್ಟರು.ಒಂದು ಕಡೆ ಜಗದೇವಪ್ಪನ ದುರಾಸೆಯ ಧ್ವನಿ,ಇನ್ನೊಂದು ಕಡೆ ತಾಯಿಯವರ ಸತ್ಯದ ಧರ್ಮ. ಜಗದೇವಪ್ಪ ತನ್ನ ವಾದಗಳನ್ನು ಜೋರಾಗಿ ಮಂಡಿಸುತ್ತಿದ….“ಆಸ್ತಿ ನಮ್ಮ ಕುಟುಂಬದವರದು… ಇವರಿಗೆ ಹಕ್ಕಿಲ್ಲ…ಅದನ್ನು ಬೇಕಾದ ಹಾಗೆ ದಾನವನ್ನು ಮಾಡುತ್ತಿರುವುದಾಗಿಯು… ಹಾಗೆ ತವರು ಮನೆಯವರು ಆಸ್ತಿಯನ್ನು ಲಪಟಾಯಿಸಲು ಕುಳಿತುಕೊಂಡಿದ್ದಾರೆ ಅನ್ನುವ ವಾದ ಮಂಡಿಸಿದ. ತಾಯಿಯವರು ತಲೆಯನ್ನು ತಗ್ಗಿಸದೆ, ಶಾಂತವಾಗಿ ನಿಂತಿದ್ದರು.ಅವರ ಕಣ್ಣುಗಳಲ್ಲಿ ನೋವು ಇದ್ದರೂ, ಅವುಗಳಲಿ ನೈತಿಕತೆಯ ಧೈರ್ಯ ಹೊಳೆಯುತ್ತಿತ್ತು.ಅವರು ಮಾತನಾಡಿದಾಗ, ಮಾತುಗಳು ಮೃದುವಾಗಿ ಅರ್ಥ ಗಂಭೀರವಾಗಿತ್ತು“ನಾವು ಜನರಿಂದ ಅನ್ಯಾಯವಾಗಿ ಪಡೆದಿದ್ದನ್ನು ನಾನು ಹಿಂತಿರುಗಿಸಿದೆ. ಅದರಲ್ಲಿ ತಪ್ಪೇನಿದೆ?”ಕೋರ್ಟ್‌ನಲ್ಲಿದ್ದವರ ಹೃದಯಕೆ ಆ ಮಾತುಗಳು ತಲುಪಿದವು. *ಗೊತ್ತಾಯಿತು ಲೋಕದ| ಗತ್ತುಗಾರಿಕೆಯಲ್ಲಬಿತ್ತುವರು ಮೋಸದ ಬೀಜವೂ ಜನಗಳುಸತ್ತು ಹೋಗುವರು ವಿಷವುಂಡು||*ಎನ್ನುವಂತೆಒಬ್ಬ ತಾಯಿ, ತನ್ನದೇ ಸೌಕರ್ಯವನ್ನು ಬಿಟ್ಟು, ಅನ್ಯಾಯದ ವಿರುದ್ಧ ನಿಂತಿದ್ದಳು…ದೇಹದ ನೋವು, ಆಪರೇಷನ್‌ನ ತೊಂದರೆ ಎಲ್ಲವನ್ನೂ ಮರೆತು, ತಾಯಿಯವರು ಧರ್ಮದ ಪರವಾಗಿ ನಿಂತ ದೃಶ್ಯ,ಎಲ್ಲರ ಮನಸ್ಸನ್ನೂ ಸ್ಪರ್ಶಿಸಿತು.ಜಗದೇವಪ್ಪನ ದುರಾಸೆ ಒಂದು ಕಡೆ,ತಾಯಿಯವರ ಧರ್ಮಬಲ ಇನ್ನೊಂದು ಕಡೆ… ಕೋರ್ಟ್ ಹಾಲ್‌ನಲಿ…ಎಲ್ಲರ ಕಣ್ಣುಗಳು ಒಂದೇ ದಿಕ್ಕಿನಲ್ಲಿ ನೆಟ್ಟಿದ್ದವು…ಅಲ್ಲಿ ಮೊದಲ ಬಾರಿಗೆ ನಿಂತಿದ್ದ ಜಯದೇವಿ ತಾಯಿಯವರ ಮೇಲೆ…ಚಿಕ್ಕ ವಯಸ್ಸಿನ ವಿಧವೆ ಬಿಳಿ ಸೀರೆ ತೊಟ್ಟು, ಕಪ್ಪು ಕೂದಲು,ನೊಸಲ ಮೇಲೆ ಬೆಳ್ಳಿಯ ಕಿರಣಗಳಂತೆ ಹೊಳೆ ಹೊಳೆವ ಮೂರು ಬಿಟ್ಟು ವಿಭೂತಿ ಬೊಟ್ಟು,ಅತ್ಯಂತ ಸೌಮ್ಯ ದೈವಿ ಕಳೆ ಹೊಂದಿದ… ಶಾಂತ ಮನಸ್ಸು ಆ ನೋವನ್ನು ಮೀರಿತ್ತು……ಅವರು ತ್ಯಾಗದ ಪ್ರತಿಮೆಯಂತೆ ನಿಂತಸಂಗಮರಮರಿಯ ಮೂರ್ತಿಯಂತೆ ಕಂಡರು……ನ್ಯಾಯವಾದಿಯು ತಾಯಿಯವರನ್ನು ದೀರ್ಘವಾಗಿ ಒಮ್ಮೆ ನೋಡಿ “ಏನಪ್ಪಾ ನಿನ್ನ ಸಮಸ್ಯೆ???”ಅಂತ ಜಗದೇವಪ್ಪನ ತತ್ತಿರುವಿ ಕೇಳದರು… ಜಗದೇವಪ್ಪ ತನ್ನ ಮಾತನ್ನು ಮಂಡಿಸಿದ.ಜಯದೇವಿ ತಾಯಿಯವರ ಕಣ್ಣು ನಿಧಾನವಾಗಿ ತಿರುಗಿ ಜಗದೇವಪ್ಪನ ಮೇಲೆ ಬಿದ್ದವು…ಆ ಕ್ಷಣ…ತಾಯಿಯ ಕಣ್ಣಲ್ಲಿ ಕೋಪ ಇರಲಿಲ್ಲ…ದ್ವೇಷ ಇರಲಿಲ್ಲ…ಇದ್ದದ್ದು ಮಾತ್ರ ಮಮತೆ…ತಮ್ಮ ಮಗನಂತೆ ನೋಡಿದ ಆ ವ್ಯಕ್ತಿ…ಇಂದು ಕೋರ್ಟ್‌ನಲ್ಲಿ ಎದುರಾಳಿ…!!!ಜಗದೇವಪ್ಪನನ್ನು ನೋಡಿ ಕನಿಕರ ಪಟ್ಟರು. ಜಗದೇವಪ್ಪ ತಲೆತಗ್ಗಿಸಿದ್ದ…ಆ ಕಣ್ಣೋಟವನ್ನು ಎದುರಿಸಲು ಅವನಿಗೆ ಧೈರ್ಯ ಇರಲಿಲ್ಲ… ನ್ಯಾಯವಾದಿಯು ತಿರುಗಿ ತಾಯಿ ಅವರಿಗೆ ಯಾವ ಪ್ರಶ್ನೆಯನ್ನು ಕೇಳದೆ” ಸರಿ ಹಾಗಿದ್ದರೆ ಇವರು ಯಾರು ??”ಅಂತ ಜಗದೇವಪ್ಪನಿಗೆ ಕೇಳಿದರು “ಇವರೇ ನನ್ನ ಅಣ್ಣನ ಹೆಂಡತಿ ಇವರೇ” ಅಂತ ಹೇಳಿದ .”ಆತುರ ಆತುರದಲಿ*ಹಾಗಿದ್ದರೆ ಅಣ್ಣನ ಹೆಂಡತಿ ಎಂದರೆ ತಾಯಿಯ ಸಮಾನ ಹೀಗಾಗಿ ಅವರಿಗೆ ನಿನ್ನ ಆಸ್ತಿಯನ್ನೆಲ್ಲಒಪ್ಪಿಸಿಬಿಡು….. ನಿನ್ನ ಮಕ್ಕಳು ದೊಡ್ಡವರಾದ ಮೇಲೆ ಅವರು ಎಲ್ಲವನ್ನು ನಿನಗೆ ಜೋಪಾನವಾಗಿ ಇಟ್ಟುಕೊಂಡು ಒಪ್ಪಿಸುತ್ತಾರೆ “ಅಂತ ತೀರ್ಪನ್ನು ಕೊಟ್ಟು …..ಮರು ಮಾತನಾಡದೆ ನ್ಯಾಯವಾದಿಗಳು ಅಲ್ಲಿಂದ ಎದ್ದು ಹೊರಟು ಹೋದರು.ಕೋರ್ಟ್‌ನಲಿ ಕ್ಷಣಕಾಲ ಎಲ್ಲರೂ ಬೆರಗಾದರು…ಜಗದೇವಪ್ಪ ನಿಬ್ಬೆರಗಾಗಿ ಮಾತಿಲ್ಲದೆ ನಿಂತುಬಿಟ್ಟ…ಆದರೆ ತಾಯಿಯವರು…ಹಿಂದಿರುಗಿ ನೋಡಲಿಲ್ಲ…ಅವರ ಹೆಜ್ಜೆಗಳು ನಿಧಾನವಾಗಿ ಹೊರಗೆ ನಡೆದವು…ಅದು ಜಯದ ಹೆಜ್ಜೆಗಳಾಗಿದ್ದವು…..“ಸ್ವಾರ್ಥದ ಮೇಲೆ ಮಾನವೀಯತೆಯ ಜಯ”… *ಹೇಸಿ ಈ ಲೌಕಿಕದ| ಆಸೆಯು ಎನಿತಿಲ್ಲಈಶ ಸಿದ್ದರಾಮನ ಚಿಂತನೆ -ನನಗೆಹೊಸ ಬೆಳಕು ನೀಡಿ ಸಲಹುವದು ||* ಲೌಕಿಕದ ಆಸೆಗಳಿಗೆ ಹೇಸಿದ ತಾಯಿಯವರು ಸಿದ್ದರಾಮನ ಚಿಂತೆಯಲ್ಲಿ ಅವರಿಗೆ ಯಾವ ಸೋಲು ಗೆಲುವಿಗೆ ಪ್ರಾಮುಖ್ಯತೆ ಇರುತ್ತಿರಲಿಲ್ಲ…. *ಈ ಸನ್ನಿವೇಶದಲ್ಲಿ ತಾಯಿಯವರು ಸೋಲಲಿಲ್ಲ“ನ್ಯಾಯಕ್ಕೆ ಜೀವ ತುಂಬಿದರು.(ಮುಂದುವರೆಯುವುದು) ಸವಿತಾ ದೇಶಮುಖ
ಧಾರಾವಾಹಿಸಂಗಾತಿ-26 ಅರಜುನ ಉವಾಚ ಡಾ.ವಿಶ್ವನಾಥ ಎನ್ ನೇರಳಕಟ್ಟೆ ಹಯಯಾಗಕ್ಕೆ ಹಾರೈಸುವವನಾದ ಹಂಸಧ್ವಜ ಗರುಡನ ಬಳಿಬಂದ ನಂದಿ ಸುರಥ ಶಿರವನ್ನು ತನಗೆ ಕೊಡುವಂತೆ ವಿನಮ್ರತೆಯಿಂದ ಕೇಳಿದ. ಗರುಡ ಒಪ್ಪಲಿಲ್ಲ. ತನ್ನ ಒಡೆಯನೆನಿಸಿಕೊಂಡ ಆ ಶ್ರೀಹರಿ ವಹಿಸಿದ ಕಾರ್ಯವನ್ನು ಇದುವರೆಗೂ ನಡೆಸದೇ ಇದ್ದವನಲ್ಲ. ಈಗ ಈ ಶಿರವನ್ನು ಪ್ರಯಾಗದಲ್ಲಿ ಬಿಟ್ಟುಬರುವಂತೆ ಹೇಳಿದ್ದಾನೆ. ಹಾಗೆಯೇ ಮಾಡದೆ ಶಿರವನ್ನು ಬಿಟ್ಟುಕೊಡುವವನು ತಾನಲ್ಲ ಎಂಬ ಮಾತನ್ನು ಹೇಳಿದ.ಗರುಡರಾಜನ ಮಾತನ್ನು ಕೇಳಿದ ವೃಷಭರಾಜ ವಿಚಾರವನ್ನು ಒಡನೆಯೇ ಬಂದುತಲುಪಿಸಿದ್ದು ತನ್ನೊಡೆಯನಾದ ಈಶ್ವರನಿಗೆ. ನಂದಿಯ ಮಾತದು ಪಾರ್ವತಿಯ ಕಿವಿಗೆ ಬಿತ್ತು. ಗರುಡರಾಜನನ್ನು ಮನಸಾರೆ ಹೊಗಳಿದಳು ಗಿರಿಜೆ. ಶಿವ ವಹಿಸಿದ ಕಾರ್ಯವನ್ನು ನೆರವೇರಿಸದ ನಂದಿಯನ್ನು ಬೈದಳು.ಅವಮಾನವಾಯಿತು ಶಿವನ ವಾಹನನಿಗೆ. ಲಜ್ಜೆ ಮೂಡಿತು. ಮೊಗ ಬಾಡಿತು. ಸಂತಸ ಇಲ್ಲದವನಾದ ನಂದಿಯನ್ನು ಸಂತೈಸಿದ್ದು ಆ ಪರಶಿವನೇ. “ಶಿರವನ್ನು ತರುವ ಕಾರ್ಯವದು ನಿನ್ನಿಂದ ಸಾಧ್ಯವಿದೆ. ಹೋಗು. ಪ್ರಯತ್ನಪಡು” ಎಂದು ಪ್ರೇರಣೆಯಿತ್ತು ಮತ್ತೆ ಕಳುಹಿಸಿಕೊಟ್ಟ.ಅತಿವೇಗದಿಂದ ಗಗನಮಾರ್ಗದಲ್ಲಿ ಸಾಗುತ್ತಿದ್ದ ಗರುಡನನ್ನು ಅಷ್ಟೇ ರಭಸದಿಂದ ಹಿಂಬಾಲಿಸಿದ ನಂದಿ. “ನಿನ್ನ ಕರದಲ್ಲಿರುವ ಶಿರವದು ಹರನಿಗೆ ಸಲ್ಲಬೇಕು. ಅವನ ಕೊರಳ ಮಾಲೆಯನ್ನದು ಅಲಂಕರಿಸಬೇಕು. ಅದನ್ನು ನನಗೆ ಕೊಡು. ಕೊಡದೇ ಹೋದರೆ ತೀವ್ರತರವಾದ ತೊಂದರೆ ನಿನಗೆದುರಾಗುತ್ತದೆ” ಎಂದು ಎಚ್ಚರಿಕೆಯ ಮಾತನ್ನು ಹೇಳಿದ ನಂದಿ, ಪಕ್ಷಿರಾಜನಿಗೆ.“ಕೃಷ್ಣನಿತ್ತ ಆದೇಶದಂತೆ ಈ ಶಿರವನ್ನು ಹೊತ್ತು ಸಾಗುತ್ತಿರುವೆ ನಾನು ಆ ಪ್ರಯಾಗದೆಡೆಗೆ. ಪ್ರಯಾಸ ನೀಡುವವನು ನೀನಾಗದಿರು” ಎಂದು ಪ್ರತಿಕ್ರಿಯೆಯಿತ್ತ ಗರುಡ.ಮೂರೂ ಲೋಕಗಳವು ಅಲ್ಲಾಡುವಂತೆ ಅತಿಭರದಿಂದ ರೆಕ್ಕೆಗಳನ್ನು ಬಡಿಯುತ್ತಾ ಸಾಗುತ್ತಿದ್ದ ಪಕ್ಷಿರಾಜ. ಅಟ್ಟಿಸಿಕೊಂಡು ಬರುತ್ತಿದ್ದ ನಂದಿಯ ಮೂಗಿನ ಉಚ್ಛ್ವಾಸ ನಿಶ್ವಾಸಗಳಿಂದ ಬಿರುಸು ಪಡೆದ ಗಾಳಿಯದು ಗರುಡರಾಜನನ್ನು ಅತ್ತಿತ್ತ ಸೆಳೆಯತೊಡಗಿತ್ತು. ಆಯಾಸವಾದರೂ ಅದನ್ನು ತಡೆದುಕೊಂಡ ಗರುಡ. ಪ್ರಯಾಗವನ್ನು ತಲುಪಿ ಸುರಥ ಶಿರವನ್ನು ಅಲ್ಲಿ ಎಸೆದು ತಕ್ಷಣವೇ ಕೃಷ್ಣನಿರುವ ಚಂಪಕಾನಗರದೆಡೆಗೆ ಮತ್ತೆ ಮುಖಮಾಡಿದ. ಆಗ ನಂದಿ ಗರುಡ ಎಸೆದಿದ್ದ ಆ ಶಿರವನ್ನು ತ್ವರಿತಗತಿಯಲ್ಲಿ ಅಲ್ಲಿಂದ ಎತ್ತಿಕೊಂಡು ಕೈಲಾಸಕ್ಕೆ ಬಂದ. ಶಿವನಿಗದನ್ನು ನೀಡಿದ.ಸಂತಸಗೊAಡ ಶಿವ. ಪಾರ್ವತಿಯ ಮುಖದಲ್ಲಿ ನಗು ಮೂಡಿತು. ತನ್ನ ರುಂಡಮಾಲೆಯಲ್ಲಿ ಸುರಥ ಶಿರವನ್ನು ಧರಿಸಿದ ಶಂಕರ.ಕೃಷ್ಣ ಯುಕ್ತಿಯದು ಅರ್ಜುನ ಶಕ್ತಿಯೊಡಗೂಡಿ ತನ್ನ ತನುಜ ಸುರಥ ಇನ್ನಿಲ್ಲವಾಗಿದ್ದಾನೆ ಎಂಬ ಸುದ್ದಿ ಹಂಸಧ್ವಜನನ್ನು ತಲುಪಿಯಾಗಿತ್ತು. ಶರೀರದ ಮೇಲಿದ್ದ ಗಾಯಕ್ಕೆ ಕಬ್ಬಿಣವನ್ನು ಕಾಯಿಸಿ ಇಟ್ಟಂತಾಯಿತು ಅವನ ಸ್ಥಿತಿ. ಸುತ ಸುಧನ್ವನ ಸಾವಿನಿಂದ ನೊಂದಿದ್ದ ಆತ ಈಗ ಸುರಥನ ಮರಣದಿಂದಾಗಿ ಅತಿಯಾಗಿ ನೊಂದ. ಇನ್ನು ತಾನು ಮರಣ ಹೊಂದುವುದೇ ಲೇಸು ಎಂಬ ಭಾವ ಅವನಲ್ಲಿ ಮೂಡಿತು. ಯುದ್ಧದಲ್ಲಿ ಆ ಕೃಷ್ಣನನ್ನು ಮೆಚ್ಚಿಸುವಂತೆ ಹೋರಾಡಿದರೆ ತನಗೆ ಮೋಕ್ಷ ಪ್ರಾಪ್ತವಾಗುವುದೆಂಬ ಯೋಚನೆ ಅವನಲ್ಲಿ ಮೂಡಿಬಂತು. ರಣದ ಮೂಲಕ ಮರಣದ ನಿಶ್ಚಯ ಮಾಡಿಕೊಂಡು ರಣರಂಗಕ್ಕೆ ಬಂದ.ಈ ಬಗೆಯಲ್ಲಿ ಹಂಸಧ್ವಜ ನನ್ನೆದುರು ನಿಂತಾಗ ಅಳುಕಿದವನು ಶ್ರೀಕೃಷ್ಣ. ಅವನಿಗೆ ಹಂಸಧ್ವಜನ ಜೊತೆಗಿನ ಕದನವದು ಸರಿಗಾಣಲಿಲ್ಲ. ಸುತರಿಬ್ಬರನ್ನು ಕಳೆದುಕೊಂಡ ಅವನನ್ನು ಇನ್ನೂ ನೋಯಿಸುವುದು ಉಚಿತವಲ್ಲವೆಂಬ ಭಾವ ಇದ್ದಿರಬಹುದು ದೇವ ಕೃಷ್ಣನ ಹೃದಯದೊಳಗೆ!“ಯುದ್ಧ ಆರಂಭಿಸಬೇಡ. ಇರು” ಎಂದು ನನ್ನನ್ನು ತಡೆದ ಕೃಷ್ಣ ಕುದುರೆಗಳ ಲಗಾಮನ್ನು ಬಿಗಿದ. ಹೆಗಲಿನಿಂದ ಜಾರುತ್ತಿತ್ತು ಅವನ ಪೀತಾಂಬರ. ಅದನ್ನು ಮತ್ತೆ ಹೆಗಲಿನ ಮೇಲೆಯೇ ಹಾಕಿಕೊಂಡ. ರಥದಿಂದ ಕೆಳಗಿಳಿದ. ಸಿಂಹವನ್ನು ಸೋಲಿಸುವ ಘನಗತಿಯಲ್ಲಿ ನಡೆಯತೊಡಗಿದ, ಹಂಸಧ್ವಜನೆಡೆಗೆ. ಭಕ್ತನ ಕಡೆಗೆ ನಡೆದುಹೋಗುತ್ತಿದ್ದ ಕೃಷ್ಣನ ಹೆಜ್ಜೆಗಳು ಭಕ್ತರ ಭಕ್ತ ಶ್ರೀಕೃಷ್ಣ ಎಂಬ ಪರಮಸಂದೇಶವನ್ನು ಸಾರಿಹೇಳುವ ಪರಮಾತ್ಮ ಹೆಜ್ಜೆಗಳಾಗಿ ಕಂಡವು ನನ್ನ ದೃಷ್ಟಿಗೆ.ಹೊಳೆಯುತ್ತಿತ್ತು ಕೃಷ್ಣ ಕಿರೀಟ ಶಿರದಲ್ಲಿ. ತಿಲಕವದು ಶೋಭಿಸುತ್ತಿತ್ತು ಹಣೆಯಲ್ಲಿ. ಕುಸುಮ ಕಣ್ಣದು ಕೃಷ್ಣನದ್ದು. ಕಾಂತಿ ಕೆನ್ನೆಯದು ಅವನದ್ದು. ಸೊಗಸನ್ನು ಸಾರುತ್ತಿದೆ ನಸುನಗೆಯಿಂದರಳಿದ ದೇವವದನ. ದಾನವಾಂತಕನ ದಂತಗಳವು ಮನಮೋಹಕ. ಮೂರು ಆಕರ್ಷಕವಾದ ಸರಗಳು ಅಲಂಕರಿಸಿವೆ ಹರಿ ಕೊರಳನ್ನು. ಕನಕವರ್ಣದ ಉಡುಗೆಯದು ಮೆರುಗು ನೀಡಿ ಮೆರೆಸಿದೆ ಹರಿ ಕಾಯವನ್ನು.ದೇವನಡೆಯದು ಪಡೆಯಿತು ನಿಲುಗಡೆ ಚಂಪಕಾಪುರದೊಡೆಯನ ಮುಂದುಗಡೆ. ಸುತರನ್ನು ಕಳೆದುಕೊಂಡ ದುಃಖವನ್ನು ಮರೆಸಿತು ಕೃಷ್ಣ ನಿಲುವು. ದೇವಮೊಗವನ್ನು ಕಾಣುತ್ತಿದ್ದ ಅರಸನ ಮುಖದಲ್ಲಿ ಪೂರ್ಣ ನಲಿವು. ಸಾಷ್ಟಾಂಗ ನಮಸ್ಕರಿಸಿದ ಹಂಸಧ್ವಜ. “ನಿನ್ನ ರಥದಿಂದಿಳಿದು ಇಲ್ಲಿ ಬಂದೆಯೇಕೆ ಪರಮ ದೇವ?!” ಎಂದು ಕೇಳಿದ ಕರವನ್ನು ಮುಗಿಯುತ್ತ.“ಯುದ್ಧದಲ್ಲಿ ಅರ್ಜುನನನ್ನು ಗೆಲ್ಲುತ್ತೇನೆಂಬ ಕ್ಷಾತ್ರಭಾವವದು ನಿನ್ನಲ್ಲಿ ಏತಕ್ಕೆ! ಈ ಬಗೆಯ ಛಲದಿಂದಲೇ ಮಕ್ಕಳನ್ನು ಕಳೆದುಕೊಂಡೆ. ಪಾರ್ಥ ವಿಜಯಕ್ಕೆ ನಾನು ಮಾಡುತ್ತಿರುವ ಸಹಾಯವನ್ನು ಕಂಡವ ನೀನು. ಮಿತ್ರಭಾವವನ್ನು ಹೊಂದು ನಮ್ಮಲ್ಲಿ. ವೈರಭಾವವದು ಬೇಡ. ಕುದುರೆಯನ್ನು ಬಿಡು. ಯಾಗಕ್ಕೆ ಅನುಕೂಲನೆನಿಸು” ಎಂದು ಹಂಸಧ್ವಜನಿಗೆ ಹರಿ ಅರುಹಿದ.“ಗಂಗೆಯಲ್ಲಿ ಮುಳುಗಿದವನಿಗೆ ಬಾಯಾರಿಕೆ ಇರುವುದೇ! ನಿನ್ನ ಸ್ನೇಹ ಸಂಪಾದಿಸಿದ ಎನಗೆ ಇನ್ನು ದುಃಖವೆಲ್ಲಿಯದು!” ಎಂದು ಹೇಳಿದ ಹಂಸಧ್ವಜ ಹರಿಯನ್ನು ಅಪ್ಪಿದ, ಒಪ್ಪಿದ. ಕಟ್ಟಿದ್ದ ಕುದುರೆಯನ್ನು ಬಿಡಿಸಿ ಇತ್ತ. ಸಕಲ ಸಂಪದವನ್ನಿತ್ತ. ನಮ್ಮ ಯಾಗಕ್ಕೆ ತಾನೂ ನೆರವು ನೀಡುವ ಬಗೆಯಲ್ಲಿ ನಮ್ಮ ಜೊತೆಗೇ ಬಂದ. ನಮ್ಮನ್ನು ಬೀಳ್ಕೊಟ್ಟ ಶ್ರೀಕೃಷ್ಣ, ಧರ್ಮಜನನ್ನು ಕಾಣುವುದಕ್ಕಾಗಿ ಹಸ್ತಿನಾವತಿಗೆ ಹೊರಟ. ಡಾ. ವಿಶ್ವನಾಥ ಎನ್ ನೇರಳಕಟ್ಟೆ
ಧಾರಾವಾಹಿ ಸಂಗಾತಿ-118 ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ಮಗಳ ನೋವು ಅರ್ಥಮಾಡಿಕೊಂಡ ತಾಯಿ ಮನಸ್ಸು ಸ್ವಲ್ಪ ಸ್ಥಿಮಿತಕ್ಕೆ ಬಂತು ಎಂದು ಅರಿತ ಹುಡುಗಿ ನಿಧಾನವಾಗಿ ಬೆಂಚಿನ ಮೇಲಿಂದ ಎದ್ದು ತಾಯಿಯನ್ನು ಅಡ್ಮಿಟ್ ಮಾಡಿದ್ದ ವಾರ್ಡಿನ ಕಡೆಗೆ ನಡೆದಳು. ಅವಳು ಒಳಗೆ ಹೋಗಿ ನೋಡಿದಾಗ ಸುಮತಿ ಹಾಸಿಗೆ ಮೇಲೆ ತಲೆ ದಿಂಬಿಗೆ ಒರಗಿ ಕಣ್ಣು ಮುಚ್ಚಿ ಮಲಗಿದ್ದಳು. ತಾಯಿಯ ಬಳಿಗೆ ಬಂದ ಮಗಳು…” ಅಮ್ಮಾ….”ಎಂದು ಮೆಲ್ಲನೆ ಕರೆದಾಗ ಏನನ್ನೋ ಆಲೋಚಿಸುತ್ತಾ ಮಲಗಿದ್ದ ಸುಮತಿ ಕಣ್ಣು ತೆರೆದು ಮಗಳನ್ನು ನೋಡಿದಳು. ಮಗಳ ಮುಖ ಬಾಡಿದ ಹಾಗೆ ಕಂಡಿತು….”ಏನಾಯ್ತು ಮಗಳೇ….. ವೈದ್ಯರು ಏನು ಹೇಳಿದರು?… ಎಂದು ಕಾತುರದಿಂದ ಸುಮತಿ ಕೇಳಿದಾಗ, ತನ್ನ ಮನಸ್ಸಿನ ನೋವು ತಾಯಿಗೆ ತಿಳಿಯದಿರಲಿ ಎಂದು ಸಮಾಧಾನ ಚಿತ್ತ ತಂದುಕೊಂಡು ತಾಯಿಯನ್ನು ನೋಡುತ್ತಾ…. ಏನಿಲ್ಲಮ್ಮ…..ವೈದ್ಯರು ಕೆಲವು ಔಷಧಿಗಳನ್ನು ಬರೆದುಕೊಟ್ಟಿದ್ದಾರೆ…. ಸ್ವಲ್ಪ ದಿನ ಇಲ್ಲಿಯೇ ಆಸ್ಪತ್ರೆಯಲ್ಲಿದ್ದು ನೀನು ವಿಶ್ರಾಂತಿ ತೆಗೆದುಕೊಳ್ಳಬೇಕಂತೆ…. ನಿನಗೆ ಬೇಕಾದ ಚಿಕಿತ್ಸೆ ಹಾಗೂ ಶುಶ್ರೂಷೆಯನ್ನು ಇಲ್ಲಿನ ದಾದಿಯರು ಮಾಡುತ್ತಾರೆ…. ಸ್ವಲ್ಪ ಹುಷಾರಾದ ಬಳಿಕ ನೀನು ಮನೆಗೆ ಹೋಗಬಹುದು ಎಂದು ಹೇಳಿದ್ದಾರೆ”…. ಎಂದಳು. ಮಗಳು ಹೇಳಿದ ಮಾತುಗಳನ್ನು ಸುಮತಿ ನಂಬಿದರೂ ಕೂಡ ಅವಳ ಕಣ್ಣಿನಲ್ಲಿ ಮಡುಗಟ್ಟಿದ ದುಃಖ, ನೋವು ಸುಮತಿಯ ಕಣ್ಣಿಗೆ ಬೀಳದೇ ಇರಲಿಲ್ಲ. ಎಷ್ಟಾದರೂ ತಾಯಿ ಕರುಳು ಅಲ್ಲವೇ? ಸದಾ ಲವಲವಿಕೆಯಿಂದ ಚಿಗರೆಯಂತೆ ಓಡಾಡುತ್ತಿದ್ದ ಹಸನ್ಮುಖಿಯಾದ ಮಗಳ ಮುಖ ಬಾಡಿ ಬಳಲಿರುವುದು ಸುಮತಿಯ ಕಣ್ಣಿಗೆ ಗೋತರಿಸದೇ ಇರಲಿಲ್ಲ. ಮಗಳ ಮುಖವನ್ನೇ ನೋಡುತ್ತಾ ಏನಾಯ್ತು ಮಗಳೇ …. ನಿನ್ನ ಮನಸ್ಸನ್ನು ಕಾಡುತ್ತಿರುವ ಚಿಂತೆ ಏನೆಂದು ನನ್ನಲ್ಲಿ ಹಂಚಿಕೊಳ್ಳಬಾರದೇ? …. ಎಂದು ಸುಮತಿ ಕೇಳಿದಾಗ ಮಗಳು…. “ಹಾಗೇನೂ ಇಲ್ಲಮ್…. ಸ್ವಲ್ಪ ಆಯಾಸ ಆಗಿದೆ ಅಷ್ಟೇ…. ನೀನು ಈಗ ನನ್ನ ಬಗ್ಗೆ ಯೋಚಿಸುವುದನ್ನು ಬಿಟ್ಟು ಚೆನ್ನಾಗಿ ನಿದ್ರೆ ಮಾಡು… ನಿನಗೆ ಈಗ ವಿಶ್ರಾಂತಿಯ ಅಗತ್ಯವಿದೆ….ನಾನು ಹೊರಗೆ ಹೋಗಿ ವೈದ್ಯರು ಬರೆದುಕೊಟ್ಟ ಔಷಧಿಯನ್ನು ಖರೀದಿಸಿ ಬರುತ್ತೇನೆ…. ಎಂದು ಹೇಳುವಾಗ ಅವಳ ಕಣ್ಣು ತುಂಬಿ ಬಂದರೂ ಅದನ್ನು ಮರೆಮಾಚಿ ಬೇಗನೆ ಬಾಗಿಲಿಂದ ಆಚೆ ಹೋದಳು. ಹೊರಗೆ ಬಂದು ಆಸ್ಪತ್ರೆಯ ಮೆಟ್ಟಿಲಿನ ಮೇಲೆ ಕುಳಿತಳು. ಜೋರಾಗಿ ಅಳು ಒತ್ತರಿಸಿ ಬಂದರೂ ಅವಳು ಅಳುವಂತಿರಲಿಲ್ಲ. ಏಕೆಂದರೆ ಸುತ್ತಮುತ್ತಲಿನ ಜನರು ತನ್ನನ್ನು ನೋಡುತ್ತಾರೆ ಎನ್ನುವ ಮುಜುಗರ ಅವಳಗಿತ್ತು. ಒಂದೆರಡು ನಿಮಿಷ ಹಾಗೆಯೇ ಕುಳಿತಿದ್ದವಳು, ಔಷಧಿ ತರಲು ತಡವಾಗಬಾರದೆಂದು ಅಲ್ಲಿಂದ ಎದ್ದು ಆಸ್ಪತ್ರೆಯ ಗೇಟಿನಿಂದ ಆಚೆ ಹೋದಳು. ಆಸ್ಪತ್ರೆಯಿಂದ ಸ್ವಲ್ಪ ದೂರದಲ್ಲಿತ್ತು ಔಷಧೀಯ ಅಂಗಡಿ. ಎಸ್ಟೇಟಿನ ಲೆಕ್ಕದಲ್ಲಿ ಆ ಅಂಗಡಿಯಲ್ಲಿ ಔಷಧಿ ಖರೀದಿಸಬಹುದಾಗಿದ್ದುದರಿಂದ ಅಲ್ಲಿಗೆ ಹೋಗಿ ಔಷಧಿಯನ್ನು ಖರೀದಿಸಿ, ನಂತರ ಅನಾಥಾಶ್ರಮಕ್ಕೆ ಹೋಗಿ ತಾಯಿಗೆ ಮಧ್ಯಾಹ್ನಕ್ಕೆ ಬೇಕಾದ ಅಡುಗೆಯನ್ನು ಮಾಡಿ ಆಸ್ಪತ್ರೆಯ ಕಡೆಗೆ ಹೊರಟಳು. ತಾಯಿ ಆಸ್ಪತ್ರೆಗೆ ದಾಖಲಾಗಿದ್ದರಿಂದ ಅಲ್ಲಿ ಮನೆಯಲ್ಲಿ ತಂಗಿ ಒಬ್ಬಳೇ ಇದ್ದಳು. ಅವಳಿಗೆ ತಾಯಿ ಆಸ್ಪತ್ರೆಗೆ ದಾಖಲಾದ ವಿಷಯವನ್ನು ತಿಳಿಸಬೇಕಿತ್ತು. ಎಸ್ಟೇಟಿನ ಬಂಗಲೆಯಲ್ಲಿ ಟೆಲಿಫೋನ್ ಇದ್ದ ಕಾರಣ ಸುಮತಿಯ ಎರಡನೇ ಮಗಳು ಅಲ್ಲಿಗೆ ಕರೆ ಮಾಡಿ ತಾಯಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿರುವ ವಿಷಯವನ್ನು ತಂಗಿಗೆ ತಿಳಿಸಿ ಎಂದು ಎಸ್ಟೇಟ್ ಮ್ಯಾನೇಜರ್ ರವರಲ್ಲಿ ವಿನಂತಿಸಿಕೊಂಡಳು. ನಂತರ ಅನಾಥಾಶ್ರಮದ ಮೇಲುಸ್ತುವಾರಿ ನೋಡಿಕೊಳ್ಳುವವರಿಗೆ ತನ್ನ ತಾಯಿಯ ಅನಾರೋಗ್ಯದ ವಿಷಯ ಹಾಗೂ ಆಸ್ಪತ್ರೆಯಲ್ಲಿ ದಾಖಲಾಗಿರುವ ವಿಷಯವನ್ನು ತಿಳಿಸಿದಳು. ಆ ಹುಡುಗಿಯ ಮನೆಯ ಪರಿಸ್ಥಿತಿಯನ್ನು ಅರಿತಿದ್ದ ಅವರು…. “ನಿನ್ನ ತಾಯಿಯ ಯೋಗ ಕ್ಷೇಮವನ್ನು ಚೆನ್ನಾಗಿ ನೋಡಿಕೋ…. ಏನೇ ಸಹಾಯವಿದ್ದರೂ ನಮಗೆ ತಿಳಿಸು…. ತಾಯಿಗೆ ಬೇಕಾದ ಊಟ ತಿಂಡಿ ಎಲ್ಲವನ್ನೂ ಆಶ್ರಮದಿಂದಲೇ ಮಾಡಿಕೊಂಡು ಹೋಗಮ್ಮ…. ಅವರು ಆಸ್ಪತ್ರೆಯಲ್ಲಿ ಇರುವವರೆಗೂ ನಮ್ಮ ಕೈಲಿ ಆದ ಸಹಾಯವನ್ನು ನಿನಗೆ ಮಾಡುತ್ತೇವೆ”…. ಎಂದರು. ಅವರ ಮಾತು ಕೇಳಿ ಆ ಹುಡುಗಿಯ ಕಣ್ಣುಗಳು ತುಂಬಿದವು….. “ಧನ್ಯವಾದಗಳು ಸರ್…. ನಿಮ್ಮ ಈ ಉಪಕಾರವನ್ನು ನಾನು ಎಂದಿಗೂ ಮರೆಯಲಾರೆ”….. ಎಂದು ಹೇಳಿ ಅವರಿಗೆ ವಂದಿಸಿ, ಅಲ್ಲಿಂದ ಆಸ್ಪತ್ರೆಗೆ ಹೋದಳು. ತಾಯಿಗೆ ಊಟವನ್ನು ಕೊಟ್ಟಳು. ತಾಯಿ ಊಟ ಮಾಡಿದ ನಂತರ ಊಟದ ಡಬ್ಬಿ ಮತ್ತು ತಟ್ಟೆಯನ್ನು ತೊಳೆದಿಟ್ಟಳು. ವಾರ್ಡಿನ ನರ್ಸ್ ಬಂದು ಅವಳಿಂದ ಔಷಧಿಯನ್ನು ಪಡೆದುಕೊಂಡು ಹೋದರು. ಹಾಗೂ ಆಸ್ಪತ್ರೆಯಲ್ಲಿ ನಾಳೆ ಬೆಳಗ್ಗೆಯಿಂದ ರೋಗಿಗೆ ಉಚಿತ ಆಹಾರವು ದೊರಕುವುದು ಎಂದು ಮಗಳಿಗೆ ತಿಳಿಸಿದರು. ಮಕ್ಕಳು ಶಾಲೆಯಿಂದ ಹಿಂತಿರುಗುವ ಮುನ್ನ ಆ ಹುಡುಗಿಯು ಅನಾಥಾಶ್ರಮವನ್ನು ತಲುಪಬೇಕಿತ್ತು. ತಾಯಿಯನ್ನು ಅಡ್ಮಿಟ್ ಮಾಡಬೇಕಾಗಿದ್ದ ಕಾರಣ ಅಂದು ಅವಳು ಕಾಲೇಜಿಗೂ ಹೋಗಿರಲಿಲ್ಲ. ತಾಯಿಯ ಜೊತೆ ಸ್ವಲ್ಪ ಹೊತ್ತು ಆಸ್ಪತ್ರೆಯಲ್ಲಿದ್ದು ವಾರ್ಡಿನ ಬಳಿ ಕಾಫಿ ಬಂದಾಗ ತಾಯಿಗೆ ಒಂದು ಲೋಟ ಕಾಫಿಯನ್ನು ಕೊಡಿಸಿ , ತಾನು ರಾತ್ರಿ ಇಲ್ಲಿ ಮಲಗಲು ಬರುವುದಾಗಿ ತಿಳಿಸಿ ಹುಡುಗಿಯು ಅನಾಥಾಶ್ರಮದ ಕಡೆಗೆ ನಡೆದಳು. ತಾಯಿಯನ್ನು ಆಸ್ಪತ್ರೆಯಲ್ಲಿ ಬಿಟ್ಟು ಬಂದ ನಂತರ ಇಂದೇಕೋ ತನ್ನ ತಾಯಿಯಿಂದ ಬಹಳ ದೂರ ಬಂದಂತೆ ಅವಳಿಗೆ ಅನಿಸಿತು. ಫಿಸಿಷಿಯನ್ ಹೇಳಿದ ಮಾತುಗಳೇ ಅವಳ ಕಿವಿಯಲ್ಲಿ ಪ್ರತಿಧ್ವನಿಸುತ್ತಿದ್ದವು. ನನ್ನ ತಾಯಿ ವೈದ್ಯರು ಹೇಳಿದಂತೆ ಬಹಳ ಗಂಭೀರ ಸ್ಥಿತಿಯಲ್ಲಿ ಇದ್ದಾರೆ. ಎಂದಿಗೂ ತನಗಾಗುವ ನೋವನ್ನು ನಮ್ಮ ಮುಂದೆ ತೋರಿಸಿಕೊಂಡಿಲ್ಲ ಹೇಳಿಕೊಂಡಿಲ್ಲ ನನ್ನಮ್ಮ. ದೇವರೇ ವೈದ್ಯರ ಮಾತು ಸುಳ್ಳಾಗಲಿ. ಅಮ್ಮನಿಗೆ ಇದ್ಯಾವುದೂ ತಿಳಿಯುವುದೇ ಬೇಡ. ಈ ಸಂಗತಿಯನ್ನು ಅಕ್ಕನಿಗೆ ಹಾಗೂ ತಂಗಿಗೆ ನಾನು ಹೇಳಲೇಬೇಕಾದ ಅನಿವಾರ್ಯತೆ ಇದೆ. ಸಾಧ್ಯವಾದಷ್ಟೂ ನಾವು ಅಮ್ಮನನ್ನು ಖುಷಿಯಾಗಿಟ್ಟುಕೊಳ್ಳುವುದರ ಕಡೆಗೆ ಗಮನ ಕೊಡಬೇಕು. ಅವಳ ಆರೈಕೆ ಮಾಡಬೇಕು. ಎಷ್ಟು ಸಾಧ್ಯವೋ ಅಷ್ಟು ಅವಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಎಂದು ಯೋಚಿಸುತ್ತಾ ರಸ್ತೆಯಲ್ಲಿ ನಡೆಯುತ್ತಿದ್ದವಳಿಗೆ ಇದ್ದಕ್ಕಿದ್ದ ಹಾಗೆ ತನ್ನನ್ನು ಯಾರೋ ಹಿಡಿದೆಳೆದಂತಾಯಿತು….. ಪಕ್ಕಕ್ಕೆ ತಿರುಗಿ ನೋಡಿದರೆ ಯಾರೋ ಅಪರಿಚಿತನೊಬ್ಬ ತನ್ನ ಕೈಹಿಡಿದು ರಸ್ತೆಯ ಬದಿಗೆ ಎಳೆದ. ಹಿಂದೆಯೇ ಕಾರೊಂದು ಬ್ರೇಕ್ ಹಾಕಿ ನಿಂತಿದ್ದು ಕೂಡಾ ಅವಳಿಗೆ ತಿಳಿಯಲಿಲ್ಲ. ಕಾರಿನಲ್ಲಿದ್ದಾತ ಕೋಪದಿಂದ….”ಏ…. ಹುಡುಗೀ….ನಿನಗೆ ಕಣ್ಣು ಕಾಣಿಸುವುದಿಲ್ಲವೇ? ರಸ್ತೆ ಮಧ್ಯೆ ನಡೆಯುತ್ತಿದ್ದೀಯಲ್ಲಾ… ನಿನಗೆ ಜೀವದ ಮೇಲೆ ಆಸೆ ಇಲ್ಲವೇ…. ನೀನು ಸಾಯಲು ನನ್ನ ಕಾರೇ ಬೇಕೆ?…. ಎಂದು ಜೋರಾಗಿ ಹೇಳಿದ.







