ಧಾರಾವಾಹಿ ಸಂಗಾತಿ-41
ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ

ಅರ್ಜುನ ಉವಾಚ
ಮಕ್ಕಳಿಗೆ ಜನುಮವಿತ್ತು
ಮಾತೆ ಎನಿಸಿಕೊಂಡಳು ಸೀತೆ

ಲಕ್ಷ್ಮಣನ ಶಿರವದು ಕಣ್ಣಿಂದ ಮರೆಯಾದ ಒಡನೆಯೇ ಬಾಯಾರಿಕೆಯಿಂದ ಕಂಗೆಟ್ಟು ಬಳಲಿದಳು ಸೀತೆ. ಭಯ ಶೋಕಗಳು ಅವಳನ್ನು ಆವರಿಸಿದವು. ಬುಡದಿಂದಲೇ ಕೊಲ್ಲಲ್ಪಟ್ಟ ಬಳ್ಳಿಯಂತೆ ಭೂಮಿಯ ಮೇಲೊರಗಿದಳು ಭೂಮಿಯ ಮಗಳು.
ರಾಮಕರುಣೆಗೆ ಈಡಾಗದ ಅವಳ ಮೇಲೆ ಕಾರುಣ್ಯ ಕಣ್ಣೋಟ ಹರಿಸಿದ್ದು ಅಲ್ಲಿದ್ದ ಪಕ್ಷಿ ಪ್ರಾಣಿಗಳು. ಸೀತಾಮಾತೆಯ ಸೋತ ಪರಿಯನ್ನು ಕಂಡ ಮೃಗ- ಖಗಗಳು ಅವಳ ಬಳಿಬಂದವು. ತಮ್ಮ ತಮ್ಮ ವೈರತ್ವವನ್ನೇ ಮರೆತವು. ಆಹಾರ ಬೇಕೆನಿಸಲಿಲ್ಲ ಅವುಗಳಿಗೆ ಆ ಸಮಯಕ್ಕೆ. ಅಲ್ಲಿದ್ದ ಗಿಡ- ಮರ- ಬಳ್ಳಿ- ಕಲ್ಲುಗಳಲ್ಲಿಯೂ ಶೋಕಭಾವ ಮೂಡಿತು. ಒಳ್ಳೆಯ ಗುಣದವಳ ಅಳಿವನ್ನು, ಅಳುವನ್ನು ಸಹಿಸದಾಯಿತು ಅಲ್ಲಿಯ ಪರಿಸರ.
ದುಂಬಿಗಳ ನಾದವದು ನಿಂತೇಹೋಯಿತು. ನವಿಲುಗಳ ಕುಣಿತದ ಉತ್ಸಾಹ ಇನ್ನಿಲ್ಲವಾಯಿತು. ಚಕ್ರವಾಕ ಪಕ್ಷಿಗಳಿಗೆ ಬೆರೆಯುವ ಮನಸ್ಸಿಲ್ಲ. ಹಂಸಗಳಿಗೆ ನಡೆಯುವುದರೆಡೆಗೆ ಗಮನವಿಲ್ಲ. ಮೌನವಾದವು ಗಿಳಿಗಳು. ಮೌನಿಗಳಾದವು ಕೋಗಿಲೆಗಳು. ಜಿಂಕೆ. ಆನೆ, ಸಿಂಹ ಇವೆಲ್ಲವೂ ಸೀತೆಯ ಶೋಕಕ್ಕೆ ಸ್ಪಂದಿಸಿದವು, ತಂತಮ್ಮ ರೀತಿಯಲ್ಲಿ.
ಪರಿತಾಪದಲ್ಲಿದ್ದ ಸೀತೆಯ ಹೃದಯತಾಪವದು ಅಳಿದುಹೋಗುವಂತೆ ಚಾಮರವ ಬೀಸಿದವು ಚಮರೀ ಮೃಗಗಳು. ಸೀತೆಯ ಕಣ್ಣೀರು ಇನ್ನಿಲ್ಲವಾಗುವಂತೆ ನೀರ ಹನಿಗಳನ್ನು ಚಿಮುಕಿಸಿದವು ನೀರ ಹಕ್ಕಿಗಳು.
ಗಂಗಾನದಿಯ ಅಲೆಯ ಮಧ್ಯೆ ಸಿಲುಕಿ ಹೊರಬರದಂತಾಗಿದ್ದರೂ, ಗಂಗೆಯೊಡಲಲ್ಲಿದ್ದ ಕಮಲ ಸುವಾಸನೆಯನ್ನು ಪೂರ್ಣ ಹೊತ್ತು ತರಲಾಗದಿದ್ದರೂ ಸೀತೆಗೆ ಸುಖವನ್ನು ನೀಡಲೇಬೇಕೆಂದು ಬಯಸಿದ ತಂಗಾಳಿಯದು ಗಂಗೆಯ ನೀರಿನ ತಂಪನ್ನು ಹೊಂದಿದ, ಗಂಗೆಯ ಪದುಮ ಗಂಧದಿAದ ಕೂಡಿದ ಗಂಗಾಳಿಯಾಗಿ ಬಂದು ತಲುಪಿತು ಸೀತಾಮಾತೆಯ ಮುಖವನ್ನು, ಮೃದು ಮಧುರ ಭಾವದಲ್ಲಿ ಸ್ಪರುಷಿಸಿ.
ಚೇತರಿಸಿಕೊಂಡಳು ಸೀತೆ. ತನಗಿನ್ನು ದಾರಿಯೇನಿದೆ ಎಂದು ಅತ್ತಿತ್ತ ನೋಡಿದಳು. ಶಿಥಿಲವಾಗಿತ್ತು ಅವಳ ಅಂಗಾAಗಗಳು. ಶರೀರವೆಲ್ಲಾ ಧೂಳು ಹಿಡಿದಿತ್ತು. ಮುಡಿ ಬಿಚ್ಚಿಹೋಗಿತ್ತು. ಅದಾವುದೂ ಗಣನೆಗೆ ಬರಲಿಲ್ಲ ಅವಳಿಗೆ ಆ ಕ್ಷಣದಲ್ಲಿ. ಮಿಥಿಲೇಂದ್ರ ವಂಶದಲ್ಲಿ ಜನಿಸಿದ ತಾನು ದಶರಥನ ಸೊಸೆ ಎನಿಸಿಕೊಂಡಿದ್ದರೂ ಈ ಬಗೆಯಲ್ಲಿ ಕಾಡಿನಲ್ಲಿ ದಿಕ್ಕೆಟ್ಟು ಅಲೆಯುವಂತಾಯಿತಲ್ಲಾ! ಎಂದು ರೋಧಿಸಿದಳು, ಕಲ್ಲಿನ ಎದೆಯದು ಕರಗುವಂತೆ.
ಈ ಕ್ಷಣವೇ ತೊರೆದುಬಿಡುತ್ತೇನೆ ಈ ಪ್ರಾಣವನ್ನು ಎಂಬ ಯೋಚನೆ ಬಂತು ಅವಳಲ್ಲಿ. ಮರುಕ್ಷಣವೇ, ಭ್ರೂಣಹತ್ಯಾದೋಷಕ್ಕೆ ಗುರಿಯಾಗುವ ಅಳುಕು ಅವಳನ್ನು ಕಾಡಿತು. ಹೀಗೆ ಬಗೆಬಗೆಯಲ್ಲಿ ಪ್ರಲಾಪಿಸುತ್ತಾ ಕಾಡಿನಲ್ಲಿ ಅಲೆದಾಡುತ್ತಿದ್ದಳು ಪೃಥ್ವಿತನುಜೆ.
ಆ ಸಮಯದಲ್ಲಿಯೇ ಯಜ್ಞಕ್ಕೆ ಬೇಕಾದ ಸ್ತಂಭವನ್ನು ಅರಸುತ್ತಾ ಆ ವನಕ್ಕೆ ಬಂದವರು ರಾಮಧ್ಯಾನದಲ್ಲಿ ಚಿತ್ತವನ್ನು ಹುತ್ತಗಟ್ಟಿಸಿಕೊಂಡಿದ್ದ ವಾಲ್ಮೀಕಿ ಮಹರ್ಷಿಗಳು. ಸೀತೆಯ ರೋಧನವದು ಅವರ ಕರ್ಣವನ್ನು ಕೆಣಕಿತು. ಹೆಂಗಳೆಯ ಅಳು ಕೇಳಿ ತಲ್ಲಣಿಸಿದರು ಮುನಿವರ್ಯ. ಮೊರೆತದ ಸ್ವರವನ್ನನುಕರಿಸಿ ಚಲಿಸಿದ ಅವರಿಗೆ ಕಾಣಿಸಿದಳು ಸೀತೆ. ‘ಯಾರಿವಳು? ಏಕಿದ್ದಾಳೆ ಈ ಅರಣ್ಯದಲ್ಲಿ ಒಂಟಿಯಾಗಿ?’ ಎಂಬ ಕೌತುಕ ಮೂಡಿತು ಅವರಲ್ಲಿ.
ಮಾತನಾಡಿಸಿದರು. ತಾನು ವಾಲ್ಮೀಕಿ ಎನ್ನುವುದನ್ನು ಹೇಳಿಕೊಂಡರು. ಶೋಕಭಾವವನ್ನು ಮೀರಿದ ಹರುಷ ಭಾವ ಮೂಡಿತು ಸೀತೆಯಲ್ಲಿ. ನಡೆದದ್ದೆಲ್ಲವನ್ನೂ ಮುಚ್ಚುಮರೆಯಿಲ್ಲದೆ ಬಿಚ್ಚಿಟ್ಟಳು ಬುವಿಸುತೆ. ಒಳಗಣ್ಣು ತೆರೆದು ಸೀತೆಯ ಗರ್ಭಸ್ಥಳವನ್ನು ವೀಕ್ಷಿಸಿದ ಮುನಿಗಳಿಗೆ ಅವಳು ಅವಳಿ ಮಕ್ಕಳ ಮಾತೆಯಾಗುವಳೆನ್ನುವುದು ತಿಳಿದುಬಂತು. ಅದನ್ನೇ ಹೇಳಿದರು ಅವಳಲ್ಲಿ. ತನ್ನ ಆಶ್ರಮಕ್ಕೆ ಬರುವಂತೆ ಸೂಚಿಸಿದರು. ಗರ್ಭಿಣಿಯ ಬಯಕೆಗಳೆಲ್ಲವನ್ನೂ ಪೂರೈಸುವ ಹೊಣೆ ತನ್ನದೆಂದರು. ಅವರ ದೃಢವಾದ ನುಡಿಗಡಲು ಸೀತೆಯ ಶೋಕವನ್ನು ಮುಳುಗಿಸಿತು. ಧೈರ್ಯಸ್ಥೆಯಾದಳು ಸೀತೆ. ಅವರೊಡನೆ ನಡೆದಳು ಆಶ್ರಮದೆಡೆಗೆ, ಶ್ರಮವಿಲ್ಲದೆ.
ಎಲೆಗಳಿಂದ ಮಾಡಲಾದ ಕುಟೀರ. ಋಷಿಪತ್ನಿಯರ ಉಪಚಾರ. ಋತುಗಳ ಭೇದವೆಣಿಸದೆಯೇ ಬೆಳೆಯುವ ಗಿಡ ಮರಗಳು. ವೈರತ್ವ ಭಾವವನ್ನು ಮರೆತು ಬೆರೆಯುವ ಖಗ- ಮೃಗಗಳು. ಸೊಗಸೆನಿಸಿತು ಸೀತೆಗೆ ಆಶ್ರಮದ ಅ-ಶ್ರಮ ಬದುಕು.
ಮುನಿಸತಿಯರ ಸಹವಾಸದಲ್ಲಿಯೇ ಸೀತೆಯ ಬಸುರಿಗೆ ನವಮಾಸ ತುಂಬಿತು. ಗರ್ಭದಲ್ಲಿರುವ ಶಿಶುಗಳನ್ನು ಭೂಮಿಗೆ ಇಳಿತರುವ ಕ್ಷಣವನ್ನು ನಿರುಕಿಸುತ್ತಿದ್ದಳು ಸೀತೆ.
ಒಂದಿರುಳು ಅವಳ ತವಕವದು ಸಾಕಾರವಾಯಿತು. ಅವಳಿ ಶಿಶುಗಳು ಬಂದರು ಭೂಮಿಗೆ, ಭೂಸುತೆಯ ಗರ್ಭದಿಂದೀಚೆಗೆ. ಆಶ್ರಮದ ಪ್ರೌಢ ಸ್ತಿçÃಯರು ಅವಳ ಆರೈಕೆ ಮಾಡಿದರು. ಮುನಿವಟುಗಳು ತವಕದಿಂದ ಸುದ್ದಿಯನ್ನು ತಲುಪಿಸಿದರು ವಾಲ್ಮೀಕಿ ಮಹರ್ಷಿಗಳಿಗೆ.
ಸಾನಂದದಿAದ ಬಂದು ಕಂದAಗಳ ಮೊಗಗಳನ್ನು ಕಂಡ ಮುನಿಗಳು ದರ್ಭೆಯ ಚೂರಿನಿಂದ ನೀರನ್ನು ಪ್ರೋಕ್ಷಿಸಿ, ದರ್ಭೆಯ ಚೂರನ್ನೇ ಸೂಚಿಸುವ ಕುಶ ಲವ ಎಂಬ ಹೆಸರುಗಳನಿಟ್ಟರು ಅವಳಿ ಮಕ್ಕಳಿಗೆ.
ಚೆಲುವು ಎರಡು ರೂಪವನ್ನು ಪಡೆಯಿತೋ! ಶುಭ್ರತೆ ಎರಡು ಕವಲಾಗಿ ಒಡೆಯಿತೋ! ಗೆಲುವು ಗೆಳೆತನವನ್ನು ಗಳಿಸಿತೋ! ಕೀರ್ತಿ ಅಮೃತ ಧಾರೆಯಲ್ಲಿ ಹರಡಿ ಎರಡಾಯ್ತೋ! ಎಂಬAತೆ ಆ ಎಳೆಯ ಶಿಶುಗಳು ತೋರಿದರು ಆಶ್ರಮವಾಸಿಗಳ ಕಣ್ಣಿಗೆ.
ಬೆಳೆಯತೊಡಗಿದರು ಕುಶಲವ ಇಬ್ಬರೂ, ಋಷಿಮುನಿಗಳ ಪ್ರೀತಿಯೊಲವನ್ನು ಪಡೆಪಡೆದು. ಕಾಲಕಾಲಕ್ಕೆ ಆಗಬೇಕಾದ ಸಂಸ್ಕಾರಗಳನ್ನೆಲ್ಲವನ್ನೂ ಕೊಡಿಸಿದರು ವಾಲ್ಮೀಕಿ ಮುನಿ ಅವರಿಗೆ. ಹನ್ನೆರಡು ವರುಷಗಳಾದಾಗ ಉಪನಯನ ಶಾಸ್ತç ಮಾಡಿಸಿದರು. ಶಸ್ತಾçಭ್ಯಾಸ ಮತ್ತು ಶಾಸ್ತಾçಭ್ಯಾಸ ಎರಡೂ ನಡೆದವು ಏಕಕಾಲಕ್ಕೆ. ರಾಮನೇ ತಮ್ಮ ತಂದೆಯೆAದು ಅರಿಯದ ಆ ಮಕ್ಕಳು ರಾಮಾಯಣವನ್ನು ಅನುದಿನವೂ ಹಾಡುತ್ತಿದ್ದರು ಭಕ್ತಿಭಾವದಿಂದ.
ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ




