ಕಾವ್ಯಯಾನ

ಕಾವ್ಯಯಾನ

ನಿರೀಕ್ಷೆ ಅಪೇಕ್ಷೆ ರೇಖಾ ವಿ.ಕಂಪ್ಲಿ ಗೇಣಗಲ ಗಭ೯ದಲ್ಲಿ ಅದೆಷ್ಟು ಸುರಕ್ಷಿತ… ಅಮ್ಮ ನಿನ್ನಿಂದ ಬೇಪ೯ಟ್ಟು ನಾನೆಷ್ಟು ಅರಕ್ಷಿತ…. ಬರುತಲಿವೇ ಕಷ್ಟಗಳು ಅನಿರೀಕ್ಷಿತ… ಆದರೂ ಕಾದಿರುವೆ ಒಳಿತನು ನಿರೀಕ್ಷಸುತ…. ಯಾರಿಗೂ ಆಗಲು ಬಯಸುವುದಿಲ್ಲ ಆಕಷಿ೯ತ…. ಆದರೂ ಏಕೆ ನಾನು ಎಲ್ಲರಿಂದಲೂ ಅಲಕ್ಷಿತ…. ದೈವವು ನಿಂತಿದೆ ನನ್ನ ಸದಾ ಪರೀಕ್ಷಿಸುತ ಆದರೂ ಅಮ್ಮ ಸದಾ ನಿನ್ನ ಪ್ರೇಮ ಅಪೇಕ್ಷಿಸುತ.. *******

ಅನುವಾದ ಸಂಗಾತಿ

“ದುಃಖ” ಮೂಲ ಸುಮನಾ ರಾಯ್(ಇಂಗ್ಲೀಷ್) ಕನ್ನಡಕ್ಕೆ:ಕಮಲಾಕರ ಕಡವೆ “ದುಃಖ” ದುಃಖ ಒಂದು ಬಿಳಿ ಆಕಳ ಮೇಲೆ ಕೂತ ಬಿಳಿ ಕೊಕ್ಕರೆಒಂದು ಮಾತ್ರ ಇನ್ನೊಂದರ ತೂಕ ಸಹಿಸ ಬಲ್ಲದು ದುಃಖ ನದಿತೀರದ ಬಿಳಿ ಮರಳುಅದು ಒದ್ದೆಯಾಗಿದ್ದಾಗಲೂ ಬಿಳಿಯೇ. ದುಃಖ ಬೇಲಿ ಮೇಲಣ ಬಿಳಿ ದಾಸವಾಳಅದಕ್ಕೆ ಬಿಳಿ ಮೊಗ್ಗು, ಬಿಳಿ ಹೆಣ. ದುಃಖ ಮಂಜು-ಮುಸುಕಿದ ಮರ, ಬಿಳಿ ರೆಪ್ಪೆಗೂದಲುಅದರ ಹೆಣೆಗಳು ತಮ್ಮದೇ ತೂಕದಿಂದ ಜೋಲುತ್ತವೆ. ದುಃಖ ಕಾಡಾನೆಯ ದಂತ, ಚೂಪು, ವರ್ಷಾನುವರ್ಷಗಳ ಶೇಖರಣೆಅದರ ಸೌಂದರ್ಯ, ಶೋಭೆ ದೂರದಿಂದ ಮಾತ್ರ. ದುಃಖ […]

ಕಾವ್ಯಯಾನ

ಕೊಡುವುದಾದರೂ ಯಾರಿಗೆ? ವಿಜಯಶ್ರೀ ಹಾಲಾಡಿ ಹೌದು ಈ ಪ್ರೀತಿಯನ್ನು ಮೊಗೆಮೊಗೆದು ಕೊಡುವುದಾದರೂ ಯಾರಿಗೆ ? ನೇರಳೆಮರಕ್ಕೆ ಅಳಿಲಿಗೆ ಬೆಚ್ಚನೆ ಗೂಡಿನ ಹಕ್ಕಿಗೆ ? ಹೆಣ್ತನದ ಪರಿಧಿಗೆ ಎಂದೂ ದಕ್ಕದ ಮುಖ –ಮುಖವಾಡಗಳು … ರಾತ್ರಿ -ಹಗಲುಗಳನ್ನು ಗೆಜ್ಜೆಕಾಲಿನಲ್ಲಿ ನೋಯಿಸಲೆ … ಯಾತನೆಯನ್ನು ನುಂಗುತ್ತಿರುವೆ ಸಂಜೆಯ ಏಕಾಂತಗಳಲ್ಲಿ ಹೆಪ್ಪುಗಟ್ಟಿದ ಇರುಳುಗಳಲ್ಲಿ .. ಬೊಗಸೆಯೊಡ್ಡಿದ್ದೇನೆ ಮಂಡಿಯೂರಿದ್ದೇನೆ ಹಟಮಾರಿ ಕಡಲಾಗಿದ್ದೇನೆ.. ತರ್ಕಕ್ಕೆ ನಿಲುಕದ ಗಳಿಗೆ -ಗಳಲ್ಲಿ ಒಂಟಿಹೂವಂತೆ ನಿಂತುಬಿಟ್ಟಿದ್ದೇನೆ .. ಲೆಕ್ಕವಿಟ್ಟಿಲ್ಲ ಕೋಗಿಲೆ ಹಾಡಿದ ಹಾಡುಗಳನ್ನು… ಉದುರಿಬಿದ್ದ ಗರಿಗಳನ್ನು ಮತ್ತೆ ಹುಟ್ಟಿಸಿಕೊಳ್ಳಲು […]

ಕಾವ್ಯಯಾನ

ತುಮುಲ ಬಿ.ಎಸ್.ಶ್ರೀನಿವಾಸ್ ಬಿಟ್ಟು ಬಿಡಬೇಕು ಬಗ್ಗಡದ ನೀರನ್ನು ತನ್ನಷ್ಟಕ್ಕೆ ತಾನೇ ತಿಳಿಯಾಗಿ ಪ್ರತಿಬಿಂಬ ತೋರಿಸುವವರೆಗೂ ಹರಿಯಬಿಡಬೇಕು  ಯೋಚನೆಗಳ ಕಡಿವಾಣವಿಲ್ಲದ ಕುದುರೆಯನ್ನು ಓಡಲಾಗದೆ ತಾನೇ ನಿಲ್ಲುವವರೆಗೂ ಸುರಿಸಿಬಿಡಬೇಕು ಕಂಬನಿ ಮನದ ಬೇಗುದಿಯೆಲ್ಲ ಕರಗಿ ಶಾಂತಿ ನೆಲೆಸುವವರೆಗೂ ನಡೆದು ಹೋಗಲಿ ಪ್ರಳಯ ಪರಶಿವನ ತಾಂಡವ ನೃತ್ಯ ಭ್ರಮೆಗಳೆಲ್ಲ ಭಸ್ಮವಾಗುವವರೆಗೂ ಕರಗಿದಾ ಕತ್ತಲಲಿ ಬಸವಳಿದ ಮೈಮನಕೆ ಗಾಢನಿದ್ರೆಯು ಆವರಿಸಬೇಕು ಮುಂಜಾನೆ ಹಕ್ಕಿ ಚಿಲಿಪಿಲಿ ಅರುಣೋದಯ ರಾಗದಲಿ ಹೊಸಬೆಳಕು ಮೂಡಬೇಕು ********

ಪುಸ್ತಕ ಪರಿಚಯ

ತಗಿ ನಿನ್ನ ತಂಬೂರಿ , ಶರೀಫರ ತತ್ವ ಭಾಷ್ಯ” ಕೃತಿ: ತಗಿ ನಿನ್ನ ತಂಬೂರಿ(ಶರೀಫರ ತತ್ವ ಭಾಷ್ಯ) ಲೇಖಕಿ; ಚಂದ್ರಪ್ರಭ ಬಿ. ಪ್ರಕಾಶಕರು: ಅಜಬ್ ಪ್ರಕಾಶನ, ನಿಪ್ಪಾಣಿ ತಗಿ ನಿನ್ನ ತಂಬೂರಿ , ಶರೀಫರ ತತ್ವ ಭಾಷ್ಯ” ಅಜಬ್ ಪ್ರಕಾಶನ, ನಿಪ್ಪಾಣಿ ರವರ ಹೊಸ ಪ್ರಕಟಣೆ. ಬನಹಟ್ಟಿಯ ಚಂದ್ರಪ್ರಭಾ ಲೇಖನಿಯಿಂದ ಇದು ಚೊಚ್ಚಲ ಪುಸ್ತಕ. ಕನ್ನಡ ನಾಡಿನ ಬಹು ಜನಪ್ರಿಯ ಜಾನಪದ ಕವಿ, ತತ್ವ ಪದಕಾರ ಶರೀಫ ಸಾಹೇಬರ ಆಯ್ದ ೨೫ ತತ್ವ ಪದಗಳನ್ನು ಇಲ್ಲಿ ಲೇಖಕರು […]

ಅನುವಾದ ಸಂಗಾತಿ

ಅಂಥ ಹೆಣ್ಣಲ್ಲ ನಾನು… ಮೂಲ: ಕಿಶ್ವರ್ ನಾಹಿದ್ ಕನ್ನಡಕ್ಕೆಚಂದದ್ರಪ್ರಭ .ಬಿ. ಅಂಥ ಹೆಣ್ಣಲ್ಲ ನಾನು… ಸಂತೆಯಲ್ಲಿ ನಿಂತು ನೀವು ಬಯಸುವುದನ್ನೇ ನಿಮಗೆ ಮಾರಾಟ ಮಾಡುವ ಅಂಥವಳು ನಾನಲ್ಲ ನೆನಪಿಟ್ಟುಕೊಳ್ಳಿ, ನೀವು ನಿಮ್ಮ ಕೈಯಾರೆ ನಿರ್ಮಿಸಿದ ಕಲ್ಲಿನ ಕೋಟೆಯ ನಡುವೆ ಸುಭದ್ರವಾಗಿ ಬಂಧಿಸಿಟ್ಟ ಅವಳು, ನಾನು ಕಲ್ಲ ಗೋಡೆಗಳು ನನ್ನ ಧ್ವನಿಯನ್ನು ಬಂಧಿಸಲಾರವು ಎಂಬ ಸತ್ಯವನು ನೀವು ಅರಿಯದೆ ಹೋದಿರಿ ರೂಢಿ ಸಂಪ್ರದಾಯದ ಹೆಸರಲ್ಲಿ ಏನೆಲ್ಲವನು ನೀವು ನುಚ್ಚು ನೂರು ಮಾಡಿದಿರೊ ಆ ಅವಳೇ ನಾನು ನೀವು ಅರಿಯಲು […]

ಕಾವ್ಯಯಾನ

ಗಝಲ್ ಡಾ.ಗೋವಿಂದ ಹೆಗಡೆ ಅವಳ ತನ್ಮಯತೆಗೆ ಸ್ವಲ್ಪವೂ ಭಂಗ ಬಾರದಿರಲಿ ಕಡಲು ಅಷ್ಟೊಂದು ಜೋರಾಗಿ ಮೊರೆಯದಿರಲಿ ಚರಿತ್ರೆಯಲಿ ಕಾಲು ಹೂತು ಕೂತಿದ್ದಾಳೆ ಅವಳು ವಿವಶತೆಯಲ್ಲೂ ಮುಂಗುರುಳು ನಲುಗದೆ ಇರಲಿ ಮಧುಶಾಲೆಯೇಕೆ ಹೀಗೆ ಪಾಳು ಬಿದ್ದಿದೆ ಗೆಳೆಯ ಒಡಲ ತಣಿಸುವ ಮಧುಭಾಂಡ ಬರಿದಾಗದಿರಲಿ ಅದೆಂಥ ಕ್ಷುಬ್ಧತೆಯಲ್ಲಿ ದಾರಿ ಸವೆಸುವೆ ನೀನು ಸೈರಿಸಿ ಪಾಲಿಸುವ ಮಡಿಲು ಮುಕ್ಕಾಗದಿರಲಿ ಎದೆಗುದಿಗೇಕೆ ಬಿಡದೆ ತುಪ್ಪ ಸುರಿಯುವೆ ‘ಜಂಗಮ’ ತಡೆ,ಕಾಪಿಡುವ ರೆಪ್ಪೆ ನಡುವೆ ಬದುಕು ವಿಶ್ರಮಿಸಲಿ ********

ಅನುವಾದ ಸಂಗಾತಿ

ವೇದಗಳಿಗೂ ಮುನ್ನ ನೀನಿದ್ದೆ ಮೂಲ:ಬಾಬುರಾವ್ ಬಾಗುಲ್(ಮರಾಠಿ) ಕನ್ನಡಕ್ಕೆ: ಕಮಲಾಕರ ಕಡವೆ “ವೇದಗಳಿಗೂ ಮುನ್ನ ನೀನಿದ್ದೆ” ವೇದಗಳಿಗೂ ಮುನ್ನ ನೀನಿದ್ದೆದೈವಗಳ ಹುಟ್ಟಿಗೂ ಮುನ್ನ;ಕಂಡು ಪಂಚಭೂತಗಳ, ಅವುಗಳ ವಿರಾಟ, ವಿಕಾರ ಸ್ವರೂಪವ್ಯಥಿತನಾಗಿ, ವ್ಯಾಕುಲಗೊಂಡುಕೈಯೆತ್ತಿ ಪ್ರಾರ್ಥಿಸುತ್ತಿದ್ದೆ ನೀನುಆ ಪ್ರಾರ್ಥನೆಗಳೇ ಧರ್ಮಗ್ರಂಥಗಳಾದವುಎಲ್ಲ ದೈವಗಳ ಜನ್ಮವ ಆಚರಿಸಿದವ ನೀನುಎಲ್ಲ ದೇವದೂತರ ಹೆಸರಿಟ್ಟು ಆನಂದಿಸಿದವ ನೀನೇಓ ಮಾನವನೇ, ಸೂರ್ಯನಿಗೆ ಸೂರ್ಯನೆಂದವ ನೀನುಆಗಲೇ ಸೂರ್ಯ ಸೂರ್ಯನಾದದ್ದುಚಂದ್ರನಿಗೆ ನೀನು ಚಂದ್ರನೆಂದಾಗಲೇಚಂದ್ರ ಚಂದ್ರನಾದದ್ದುನೀನೇ ಇಡೀ ವಿಶ್ವದ ನಾಮಕರಣ ಮಾಡಿರುವೆಎಲ್ಲ ಬಲ್ಲರು, ಓ ಪ್ರತಿಭಾಶಾಲಿ ಮಾನವನೇ,ನೀನೇ ಕಾರಣೀಭೂತನಿನ್ನಿಂದಲೇ ಈ ಜಗವು ಸುಂದರ, […]

ಪುಸ್ತಕ

‘ಗಂಗವ್ವ ಗಂಗಾಮಾಯಿ‘ ಶಂಕರ ಮೊಕಾಶಿ ಪುಣೇಕರ ಕೆ.ಶಿವು ಲಕ್ಕಣ್ಣವರ ಗಂಗವ್ವ ಗಂಗಾಮಾಯಿಯಾಗುವ ಅಪೂರ್ವ ಕಥನವೇ ಶಂಕರ ಮೊಕಾಶಿ ಪುಣೇಕರರ ‘ಗಂಗವ್ವ ಗಂಗಾಮಾಯಿ’..! ಕನ್ನಡದ ಮುಖ್ಯ ಸ್ತ್ರೀಪಾತ್ರಗಳ ಜೊತೆ ನಡೆಸುವ ಈ ಸಂವಾದಕ್ಕೆ ಹಲವು ಆಸೆಗಳು, ಉದ್ದೇಶಗಳು ಇವೆ. ಕನ್ನಡ ಮನಸ್ಸನ್ನು ಆವರಿಸಿರುವ, ಕಾಡಿರುವ ಈ ಸ್ತ್ರೀಪಾತ್ರಗಳನ್ನೆಲ್ಲ ಒಂದು ವೇದಿಕೆಗೆ ತಂದಾಗ ಸೃಷ್ಟಿಯಾಗುವ ಹೆಣ್ಣಿನ ಚಿತ್ರ ಹೇಗಿರಬಹುದು ಎನ್ನುವ ಕುತೂಹಲ, ಹೆಣ್ಣನ್ನು ನೋಡುವ, ಪರಿಭಾವಿಸುವ ನಿರ್ದಿಷ್ಟ ವಿನ್ಯಾಸಗಳು ಇವೆಯೇ ಎನ್ನುವ ಹುಡುಕಾಟವೇ ಲೇಖಕನದ ಮತ್ತು ಲೇಖಕನ ದೃಷ್ಟಿಕೋನ… ಆಯ್ಕೆ, […]

ಕಾವ್ಯಯಾನ

ಬದುಕುವ ರೀತಿಗೆ! ಲೋಕೇಶ್ ಮನ್ವಿತ್ ಬದುಕುವ ರೀತಿಗೆ ಬುದ್ದನನ್ನಿರಿಸಿಕೊಂಡರೆ ಬುದ್ದಿಯಲ್ಲಿ ಅಂಗುಲಿಮಾಲ ಹೆಜ್ಜೆ ಇರಿಸುವವನೇನು? ನಿನ್ನ ಹಾದಿಯಲ್ಲಿ. ದಯೆಯಿರಲು ದೀನನಲ್ಲಿ ದಿನವೆಲ್ಲಾ ಸಂತಸವಷ್ಟೇ ಮನಸ್ಸಿಗೆ ಬೇಕಾದರೊಮ್ಮೆ ಅಂಗೈಯನ್ನೊಮ್ಮೆ ತಿರುಗಿಸಿವುದು ರೂಡಿಯಾಗಿಸಿಕೋ ಜಾತಿ ಮತಗಳ ಚೂರಾಗಿಸಿ ಎದೆಯ ಗುಡಿಯಲ್ಲೊಮ್ಮೆ ದೀಪವಿರಿಸು ಬೆಳಕು ಚಿಕ್ಕದಿರಬಹುದು ಜೀವವಿರುವವರೆಗೂ ನೀನು ಕಾಣುವೆ ಪ್ರತಿ ಜೀವಕ್ಕೂ ಬೆಳಕಾಗಿ ಬದುಕುವುದು ಸುಲಭ ಬೇಲಿಗಿಡಗಳು ತಾಕಿದವೆಂದು, ರಕ್ತ ಹರಿಯಿತೆಂದು, ನಿಲ್ಲದೆ ಅಲ್ಲಿ, ನೋವನ್ನೇ ನೆಪವಾಗಿಸಿಕೊಂಡು ಸಾಗಿಬಿಡು ತಡೆದು. ಮುಂದೆ ಹೂಗಳು ಅರಳಿ ನಿಂತಿವೆ ಸ್ವಾಗತವ ಕೋರಿ . […]

Back To Top