ಅನುವಾದ ಸಂಗಾತಿ

ವೇದಗಳಿಗೂ ಮುನ್ನ ನೀನಿದ್ದೆ

Image result for human sculptures

ಮೂಲ:ಬಾಬುರಾವ್ ಬಾಗುಲ್(ಮರಾಠಿ)

Image may contain: 1 person

ಕನ್ನಡಕ್ಕೆ: ಕಮಲಾಕರ ಕಡವೆ

“ವೇದಗಳಿಗೂ ಮುನ್ನ ನೀನಿದ್ದೆ”

ವೇದಗಳಿಗೂ ಮುನ್ನ ನೀನಿದ್ದೆ
ದೈವಗಳ ಹುಟ್ಟಿಗೂ ಮುನ್ನ;
ಕಂಡು ಪಂಚಭೂತಗಳ, ಅವುಗಳ ವಿರಾಟ, ವಿಕಾರ ಸ್ವರೂಪ
ವ್ಯಥಿತನಾಗಿ, ವ್ಯಾಕುಲಗೊಂಡು
ಕೈಯೆತ್ತಿ ಪ್ರಾರ್ಥಿಸುತ್ತಿದ್ದೆ ನೀನು
ಆ ಪ್ರಾರ್ಥನೆಗಳೇ ಧರ್ಮಗ್ರಂಥಗಳಾದವು
ಎಲ್ಲ ದೈವಗಳ ಜನ್ಮವ ಆಚರಿಸಿದವ ನೀನು
ಎಲ್ಲ ದೇವದೂತರ ಹೆಸರಿಟ್ಟು ಆನಂದಿಸಿದವ ನೀನೇ
ಓ ಮಾನವನೇ, ಸೂರ್ಯನಿಗೆ ಸೂರ್ಯನೆಂದವ ನೀನು
ಆಗಲೇ ಸೂರ್ಯ ಸೂರ್ಯನಾದದ್ದು
ಚಂದ್ರನಿಗೆ ನೀನು ಚಂದ್ರನೆಂದಾಗಲೇ
ಚಂದ್ರ ಚಂದ್ರನಾದದ್ದು
ನೀನೇ ಇಡೀ ವಿಶ್ವದ ನಾಮಕರಣ ಮಾಡಿರುವೆ
ಎಲ್ಲ ಬಲ್ಲರು, ಓ ಪ್ರತಿಭಾಶಾಲಿ ಮಾನವನೇ,
ನೀನೇ ಕಾರಣೀಭೂತ
ನಿನ್ನಿಂದಲೇ ಈ ಜಗವು ಸುಂದರ, ನಿನ್ನಿಂದಲೇ ಜೀವಂತ
*********

Leave a Reply

Back To Top