ಜೀವನ್ಮುಖಿ

ಜೀವನ್ಮುಖಿ

ಹೊಸ ವರ್ಷ ಹೊಸ ಹರ್ಷ ಜಯಲಕ್ಷ್ಮಿ ಕೆ. ಹೊಸ ವರ್ಷ -ತರಲಿ ಹರ್ಷ . “ಆದದ್ದು ಆಗಿ ಹೋಯ್ತು, ಮಣ್ಣಾಗಿ ಹೋದ ನನ್ನವರು ತಿರುಗಿ ಬರಲಾರರು. ಇರುವವನು ಇರುವಷ್ಟು ದಿನ ಬದುಕಬೇಕಲ್ಲ? ನನ್ನ ಗಾಡಿ, ನನ್ನ ಎತ್ತುಗಳೂ ಭೂಕಂಪದ ಅಂತರoಗ ಸೇರಿದ್ದರೆ ನನಗೆ ಕಷ್ಟವಾಗುತ್ತಿತ್ತು. ಪುಣ್ಯಕ್ಕೆ ಸ್ವಲ್ಪ ಹೊಲವೂ ಉಳಿದಿದೆ. ಬದುಕಬೇಕಾದ ನನ್ನ ಬದುಕಿಗೆ ಇಷ್ಟು ಸಾಕಲ್ಲ ….ಉಳಲು, ಬಿತ್ತಲು, ಮನೆಕಟ್ಟಲು …..” 1993 ರಲ್ಲಿ ಮಹಾರಾಷ್ಟ್ರದಲ್ಲಿ ಸಂಭವಿಸಿದ್ದ ಭಾರೀ ಭೂಕಂಪದಲ್ಲಿ ತನ್ನವರನ್ನೆಲ್ಲ ಕಳೆದುಕೊoಡಿದ್ದ ವೃದ್ದನೊಬ್ಬ ಪತ್ರಕರ್ತನ […]

ಸ್ವಾತ್ಮಗತ

ಪಾಟೀಲ್ ಪುಟ್ಟಪ್ಪನವರಿಗೆ ನೂರರ ಸಂಭ್ರಮ ಕೆ.ಶಿವುಲಕ್ಕಣ್ಣವರ ಟಿಯೆಸ್ಸಾರ್ ಪ್ರಶಸ್ತಿ ಪುರಸ್ಕೃತ, ಪತ್ರಿಕೋದ್ಯಮ ಭೀಷ್ಮ ನಾಡೋಜ ಡಾ.ಪಾಟೀಲ ಪುಟ್ಟಪ್ಪರಿಗೆ ನೂರಾರ ಸಂಭ್ರಮ..! ಪಾಟೀಲ ಪುಟ್ಟಪ್ಪರು 1921ರಿಂದ ಪತ್ರಿಕೋದ್ಯಮವನ್ನು ಕನ್ನಡ ಪರ ಹೋರಾಟಕ್ಕೆ ದುಡಿಸಿಕೊಳ್ಳುತ್ತಿರುವ ಧೀಮಂತ. ಪಾಟೀಲ ಪುಟ್ಟಪ್ಪನವರು ಹುಟ್ಟಿದ್ದು 1921ರಲ್ಲಿ. ಈಗಿನ ಹಾವೇರಿ ಜಿಲ್ಲೆಯ ಕುರುಬಗೊಂಡದಲ್ಲಿ. ತಂದೆ ಸಿದ್ಧಲಿಂಗಪ್ಪ, ತಾಯಿ ಮಲ್ಲಮ್ಮ… ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಿಂದ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದ ಅಪರೂಪದ ಪ್ರತಿಭಾವಂತ ಪಾಪು. ಸ್ವಾತಂತ್ರ್ಯ ಬರುವುದಕ್ಕೆ ಒಂದು ವರ್ಷ ಮೊದಲೇ ಪತ್ರಿಕೋದ್ಯಮಕ್ಕೆ ಕಾಲಿಟ್ಟ ಪಾಪು, ಬರಹಗಳು ಅಂದೂ […]

ಕಾವ್ಯಯಾನ

ಧನಿಕನ ರಿಮೋಟ್ ಕಂಟ್ರೋಲ್ .. ಕೆ.ಜಿ.ಸರೋಜಾ ನಾಗರಾಜ್ ಹಸಿವಿನಿಂದ ಸತ್ತೋರಿಗೆ ಹಬ್ಬ ಸಡಗರಗಳೆಂತು ಹೊಟ್ಟೆ ಬಟ್ಟೆ ಕಟ್ಟಿದೋರು ಬಡವರು ಅನ್ನವೆಂದು ನರಳುತ್ತಾ ಬದುಕುವರು..! ಕೋಟಿ ಕೋಟಿ ಕನಸುಗಳೊಂದಿಗೆ ಉರಿಯುವ ಮನಸ್ಸುಗಳ ಭೂಕಂಪ ಹೆಣವಾಗಿಸುವ ಸೂಚನೆಗೆ ಹೊರಗೆ ಬಿದ್ದವರು ಬಡವರೇ..! ಹಸಿವಿನ ಕಣ್ಣುಗಳ ಮೇಲೆ ಹೊಂದಿದವರು ದೌಲತ್ತು ಗೋಳಿನ ಕಡಲನು ಬತ್ತಿಸಲು ಬಡವನ ಗುಡಿಸಿಲಿಗೆ ಬರಲೇ ಇಲ್ಲ..! ಕಳಂಕ ರಹಿತ ಧರಣಿಗೆ ಬಡವನ ಹಸಿವೇ ಚರಿತ್ರೆಯಾಗಿರುವಂತೆ ಶತಮಾನದ ಬಡತನಕ್ಕೆ ನೂರಾರು ಸಾಕ್ಷಿಗಳು ಗುಡಿಸಿಲಿನಲ್ಲಿ..! ಬಡವನ ತಲೆಗೆ ಧನಿಕರ ರಿಮೋಟ್ […]

ಕಾವ್ಯಯಾನ

ಗಝಲ್ ಜಗತ್ತೇ ತನ್ನ ಸುತ್ತ ಸುತ್ತುತಿದೆ ಎಂದಾಗ ಹೊರಟು ಬಿಡಬೇಕು ಎಲ್ಲೆಲ್ಲೂ ಪ್ರೀತಿ ನೋಟವಿದೆ ಎಂದಾಗ ಹೊರಟು ಬಿಡಬೇಕು ಇಂದ್ರಚಾಪ ಮೂಡಿಸುವ ಹಗಲಿರುಳುಗಳೇನು ನಿರಂತರವೇ ಇಂದಿಗಿಂದಿನ ಬದುಕು ರಂಗೇರಿದೆ ಎಂದಾಗ ಹೊರಟು ಬಿಡಬೇಕು ಸುಖ ಸಂತಸಗಳು ಪ್ರತಿ ವರುಷ ಬರುವ ವಸಂತನ ತರವೇನು ಹರುಷ ನಲಿ ನಲಿದು ಉಕ್ಕುತಿದೆ ಎಂದಾಗ ಹೊರಟು ಬಿಡಬೇಕು ಎದೆಗೂಡ ಭಿತ್ತಿಯಲಿ ಒಲುಮೆ ಉಲಿವಾಗ ಸ್ವರ್ಗವೂ ನಾಚದೇನು ಸಮುಲ್ಲಾಸದಿ ಜೀವ ಗಂಧ ತೀಡುತಿದೆ ಎಂದಾಗ ಹೊರಟು ಬಿಡಬೇಕು ಇನಿಯನ ಉಸುರುಸಿರ ಬಿಸುಪು ಬೀಗಿ ಮೈ ಮನ ಮರೆಸದಿರದೇ ಕನಸು ಕಚಗುಳಿಯಿಟ್ಟು ಮಾಗುತಿದೆ ಎಂದಾಗ ಹೊರಟು ಬಿಡಬೇಕು […]

ಕಾವ್ಯಯಾನ

ಅಪ್ಪ ಅಪ್ಪ ಎಂದರೆ ನನ್ನಾಸರೆಯ ಹೆಗಲು ಕಡುಗಪ್ಪಿನಂತಹ ಮುಗಿಲು ಬಯ್ಬಿರಿದ ಭೂಮಿಗೆ ಸುರಿವ ಮಳೆಯ ಹನಿಯ ಮುತ್ತಿನ ಸಾಲು ಅಪ್ಪ ಎಂದರೆ ಪ್ರೀತಿಯ ಹೊನಲು ಸವಿಜೇನಿಗೆ ಬೆರೆತ ಹಾಲು ಮಗಳ ಕಾಯುವ ಒಡಲು ಜೊತೆಗಿದ್ದರೆ ಜಗದಲಿ ನನ್ನ ಕೈಯೇ ಮೇಲು ಅಪ್ಪ ಎಂದರೆ ನಗುವ ದ್ವನಿಯ ಕೊರಳು ಸದಾ ಜೊತೆಗಿರುವ ನೆರಳು ಹಿಡಿದು ಹೊರಟರೆ ಅಪ್ಪನ ಕಿರುಬೆರಳು ಖುಷಿಯ ಬುಗ್ಗೆಯಲಿ ಮೆರವಣಿಗೆ ಹಗಲಿರುಳು ಅಪ್ಪನಿಲ್ಲದಾ ಈ ಕ್ಷಣವು ಹೃದಯದಲವಿತಿದೆ ನಿರಾಸೆಯು ಯಾರಲ್ಲಿ ಹುಡುಕಲಿ ಅಪ್ಪನೊಲವು ಅಪ್ಪನ ಕಳೆದುಕೊಂಡ […]

ಕಾವ್ಯಸಂಕ್ರಾಂತಿ

ಸಂಕ್ರಮಣ ಅದ್ಭುತವ ತಂದರೆ ತರಲಿ ಈ ಸಂಕ್ರಮಣ ಬೇಡವೆನ್ನಲು ಯಾರು ನಾನು ಬದುಕು ತಂದ ಅಷ್ಟಿಷ್ಟು ನೆಮ್ಮದಿ ಜೊತೆಗೆ ಸಿಕ್ಕರೆ ಸಿಗಲಿ ಜೇನು ಸುಳಿಯಲ್ಲೋ ಮಕರದ ಬಾಯಲ್ಲೋ ಸಿಗದೆ ಸಾಗುತಿರಲಿ ಪಯಣ ಮಮಕಾರ ಕರ ಪಿಡಿದು ಸಂತಸದ ಸೆಲೆ ಹರಿದು ಆಗುತಿರಲಿ ಗಮನ …ಉದ್ದಕ್ಕೂ ಇರಲಿ ಅವನ ಕರುಣ ********** ಡಾ.ಗೋವಿಂದ ಹೆಗಡೆ

ಕಾವ್ಯಸಂಕ್ರಾಂತಿ

ಸಾಕೊಂದಿಷ್ಟು ಕವಿತಾ ಸಾರಂಗಮಠ ಉತ್ತರಾಯಣನ ಪುಣ್ಯ ಕಾಲಕೆ ಗದ್ದಲದ ಅಂಧರ ಮಂಡಿಪೇಟೆಯಲ್ಲಿ ಸಂಕ್ರಮಣ ಕಾಲಕೆ ಕಣ್ಣಾವೆಗಳಾದರೂ ಸಂಧಿಸಿವೆ ಸಾಕೊಂದಿಷ್ಟು ಈ ಕಾಲಕೆ..! ಹ್ಯಾಪಿ ಪೊಂಗಲ್ ಡೇ ಎಂಬ ಜಾಹೀರಾತಿಗೆ ಸಂತೋಷ ಉಕ್ಕಿ ಮೋಬೈಲ್ ಮಾತಲಿ ತೊಡಗಿದವರ ನಡುವೆಯೂ ಕುಂಟರಿಬ್ಬರ ತೆವಳುವಿಕೆಗೆ ಗಾಳಿಯಾದರೂ ಬೀಸಿದೆಯಲ್ಲ ಸಾಕೊಂದಿಷ್ಟು ಈ ಕಾಲಕೆ..! ಭವಿಷ್ಯ ಕೇಳಿ ಮದುವೆಯಾಗಬಾರದು ಎಂಬ ನುಡಿಗೆ,ಕಣ್ಣುಗಳ ಒದ್ದೆಮಾಡಿಕೊಂಡಿದ್ದೇನಿಲ್ಲಿ ಬಿಕ್ಕಿಸಿ ಅತ್ತಾಗ ಬೀದಿ ನಾಯಿಯಾದರೂ ನಲುಗಿತಲ್ಲ ಸಾಕೊಂದಿಷ್ಟು ಈ ಕಾಲಕೆ..! ಹಬ್ಬವೆಂದರೆ ಕಿಬ್ಬದಿಯ ಕೀಲು ಮುರಿಸಿಕೊಂಡು,ಗೇಣು ಭೂಮಿಗೆ ಕಾದಾಡಿ ನ್ಯಾಯ […]

ಅನುವಾದ ಸಂಗಾತಿ

ಸುನೀತ ಸಹಮನಸ್ಕರ ಮದುವೆಗೆ ತಡೆಯ ತರಲಾರೆನಾನು. ಪ್ರೀತಿಯದು ಪ್ರೀತಿಯಲ್ಲ ಕಂಡಂತೆಬದಲಾದ ಪರಿಸರವ ತಾನೂ ಬದಲುತ್ತಲಿರೆ,ಅಥವಾ ಪ್ರೇಮಿ ನಿಲುವಲ್ಲಿ ಪಲ್ಟಿಯಾದಂತೆ:ಇಲ್ಲವೇ ಇಲ್ಲ! ಅದೊಂದು ಸದಾಸ್ಥಿರ ಚಿನ್ಹೆಬಿರುಗಾಳಿಯೆದುರಿಗೂ ಕಂಪಿಸದೆ ನಿಲುವದು.ಅಲೆವ ಹಡಗುಗಳಿಗೆಲ್ಲ ಅದುವೆ ಸ್ಥಾಯಿ ಚುಕ್ಕೆದೂರ ತಿಳಿದರೂ ಅದರ ಬೆಲೆ ಅರಿವ ಮೀರಿದ್ದುಪ್ರೀತಿಯಲ್ಲ ಕಾಲನ ಗುಲಾಮ, ಸುಂದರಾಂಗಗಳುಇವೆ ಅವನ ಡೊಂಕು ಕುಡುಗೋಲಿನ ಅಂಕೆಯಲಿಪ್ರೀತಿಯ ಬದಲಿಸದು ಅವನ ಕ್ಷಣಿಕ ತಾಸು ವಾರಗಳುನಾಶದಂಚಿನವರೆಗೂ ತಾಳುವುದು ಕೆಚ್ಚಿನಲಿ.ರುಜುಮಾಡಿ ತೋರಿದರೆ ನನ್ನೀ ಮಾತು ತರವಲ್ಲನಾನು ಕವಿಯೇ ಅಲ್ಲ, ಪ್ರೇಮಿಯೂ ಎಲ್ಲಿಲ್ಲ. ***** Let me not […]

ಬದುಕು

ಬದುಕು ತಂತಿಯ ಆಟ ಡಾ.ಗೋವಿಂದ ಹೆಗಡೆ ಮೊನ್ನೆ ೧೧ರಂದು ಅಪರಾತ್ರಿಯಲ್ಲಿ ಬೇಲೂರು ತಲುಪಿದ್ದು. ನಿನ್ನೆ ಬೆಳಿಗ್ಗೆ (೧೨/೧/೨೦) ಚೆನ್ನಕೇಶವನ ದರ್ಶನ ಮುಗಿಸಿ ಚಪ್ಪಲಿ ಸ್ಟ್ಯಾಂಡ್ ಗೆ ತೆರಳಿದೆ. ನಾಲ್ಕು ಹೆಜ್ಜೆ ಗಳ ದೂರದಲ್ಲಿ ಆ ವೃದ್ಧರು ಕೂತಿದ್ದರು. ಕೈಯಲ್ಲಿ ಮೇಲೆ ತೋರಿಸಿದ ಚಿತ್ರದ ತಂತಿಗಳ ಗೊಂಚಲು ‌‌. “ಯಜಮಾನರೇ ಏನಿದು” ಅಂದೆ. ಇವು ಪಜಲ್ಸ್ ಅಂದರು. ತಮ್ಮ ಕೈಯಲ್ಲಿ ಬಿಡಿಯಾಗಿ ಇರಿಸಿಕೊಂಡಿದ್ದ ತಂತಿಯ ಆಟಿಕೆಯನ್ನು ತೋರಿಸಿ “ನೋಡಿ ಈ ರಿಂಗ್ ಇದೆಯಲ್ಲ, ಇದನ್ನು ಹೊರತೆಗೆಯಬೇಕು” ಅಂತ ತೋರಿಸಿದರು. […]

ಕಾವ್ಯಯಾನ

ರಥ ಸಪ್ತಮಿ ಹೊಸ ಪಥದಿ ಮೂಡಿ ಬಂದ ಮಂಜಿನ ತೆರೆ ಸರಿಸಿ ನಕ್ಕಳಿವಳು ಎಳ್ಳು ಬೆಲ್ಲವ ನೀಡಿ ‘ಒಳ್ಳೆಯ ಮಾತಾಡು’ಅಂದಳು ಸೂರ್ಯ ನಕ್ಕಿದ್ದುಂಟೇ! ಸಿಡಿ ಮಿಡಿ ಅನ್ನುತ್ತಲೇ ಬಿಸಿ ತೋಳುಗಳ ಬಳಸಿ ಅಪ್ಪಿಕೊಂಡ. ******** ಪ್ರೇಮಲೀಲಾ ಕಲ್ಕೆರೆ

Back To Top