ಕಾವ್ಯಯಾನ

ಕಾವ್ಯಯಾನ

ಬಾಲ್ಯ ವಿವಾಹ. ಜ್ಯೋತಿ ಡಿ.ಬೊಮ್ಮಾ ಬಾಲ್ಯ ವಿವಾಹ . ಮರುಗಲಾಗದೆ ಮತ್ತೆನು ಮಾಡಲಾಗದು ಮಗು ನಿನ್ನ ವಿಧಿ ಬರಹಕ್ಕೆ ಹೆತ್ತವರ ಆಶಾಢಭೂತಿತನದಿಂದ ಬಾಲ್ಯದ ಬಾಳಿಗೆ ಮದುವೆ ಬಂಧನ ವಿಧಿಸಿದ್ದಕ್ಕೆ… ಮದುವೆ ಮಾಡಿ ಜವಾಬ್ದಾರಿಯಿಂದ ಕಳಚಿಕೊಳ್ಳುವದೊಂದೆ ಅವರ ಪರಮೋದ್ದೇಶ. ಮಗಳ ಚಿಕ್ಕ ವಯಸ್ಸು ಲೆಕ್ಕಿಸದೆ ಧಾರೆ ಎರೆದು ಕೈ ತೊಳೆದುಕೊಳ್ಳುವ ಧಾವಂತ.. ಆಡುತ್ತ ಓದುತ್ತ ನಲಿಯಬೇಕಾದ ಮಗು ಹೊತ್ತುಕೊಂಡಿತು ಸಂಸಾರದ ನೋಗ ಸರೀಕರೆಲ್ಲ ನಕ್ಕು ನಲಿವಾಗ ಆಕೆ ಧರಿಸಿದಳಾಗಲೆ ಗ್ರಹಿಣಿಯ ಗಂಭಿರ ಮೊಗ.. ವಯಸ್ಸಿಗೆ ಮೀರಿದ ಜವಾಬ್ದಾರಿಯಿಂದ ನಲುಗಿತು […]

ಕಾವ್ಯಯಾನ

ಸಗ್ಗದ ಬಾಗಿಲು ನಿರ್ಮಲ ಆರ್. ವಸಂತಕೆ ಹೊಸ ಚಿಗುರು,ಹೊಸ ಯೌವ್ವನ ನಿಸರ್ಗ ಸೌಂದರ್ಯಕೆ ಮನ ತಾಳಿತು ಮೌನ ನಭದಲಿ ನಗುತಿಹನು ರವಿ ಹಸಿರಿನಿಂದ ಕಂಗೊಳಿಸುತಿಹುದು ಭುವಿ ಅಲ್ಲಲ್ಲಿ ಹಕ್ಕಿಗಳ ಇಂಚರ ಸೃಷ್ಟಿಯೊಂದು ಬನದೇವಿಯ ಭವ್ಯ ಮಂದಿರ ಇರುಳಲಿ ಉಲ್ಲಸಿತನಾದ ಚಂದಿರ ತಾಯ ಕಂಕುಳಲಿರುವ ಕಂದನಿಗವನೇ ಸುಂದರ ಕಪ್ಪು ಮೋಡವ ಹೊತ್ತುತರುವ ಮಳೆರಾಯ ದುಯ್ ಎನ್ನುತ ತೊಳೆವ ಇಳೆಯ ಮೇಲಿನ ಕೊಳೆಯ ಮಳೆಯ ಜಿನುಗಿಗೆ ನವಿಲ ನರ್ತನ ಕಂಡೆಯ ಮನ ಅಚ್ಚರಿಗೊಂಡಿತು ಕಂಡು ಬನಸಿರಿಯ ಪ್ರಕೃತಿ ಸೌಂದರ್ಯ ನೋಡುತಿರೆ […]

ಕಾವ್ಯಯಾನ

ಆ ಗುಡಿಗಳಲ್ಲಿ ಜ್ಯೋತಿ ಡಿ.ಬೊಮ್ಮಾ. ಆ ಗುಡಿಗಳಲ್ಲಿ.. ಪರದೆ ಹಾಕಿದ ಗರ್ಭಗುಡಿಯೊಳಗೆ ಅರ್ಚಕರು ದೇವಿಯ ಮೈ ಮುಟ್ಟಿ ಬಟ್ಟೆ ಬದಲಾಯಿಸಿ ,ಬೊಟ್ಟಿಟ್ಟು,ಸಿಂಗರಿಸಿ ಹೊರಗೆ ದರ್ಶನಕ್ಕೆ ನಿಂತ ಸ್ತ್ರೀಯರನ್ನೂ ಮುಟ್ಟಿಸಿಕೊಳ್ಳದೆ ಮೆಲಿಂದಲೆ ಎಸೆದ ಪ್ರಸಾದವನ್ನೂ ಭಕ್ತಿಯಿಂದ ಸ್ವೀಕರಿಸಿ,ಕಣ್ಣಿಗೊತ್ತಿಕೊಂಡು ಪರವಶರಾಗಿ ದೇವಿಯೆಡೆ ನೋಡಿದಾಗ.. ಮೂಕಳಾಗಿ ನಿಂತ ದೇವಿಯೂ ನಿಟ್ಟುಸಿರು ಹಾಕುತಿದ್ದಳು ಒಳಗೊಳಗೆ ಬೇಯುತ್ತ ಕೇಳುವಂತಿತ್ತು ನೋಟ ನಿಮ್ಮೊಳಗಿರದ ಅದಾವ ಶಕ್ತಿ ದೇವಾಲಯದಲ್ಲಿದೆ. ಮುಟ್ಟಾದವರೂ ದೇವರನ್ನೂ ಮುಟ್ಟಬಾರದು ಎಂಬ ಸಂಪ್ರದಾಯದಿಂದ ದೇವಿಯೂ ನಡುಗುವಳು ತನ್ನೊಳಗೂ ಸ್ರವಿಸುವ ಸ್ರಾವ ಕಾಣದಂತೆ ತಡೆಗಟ್ಟುವದು ಹೇಗೆಂದು […]

ಕಾವ್ಯಯಾನ

ಕೆಂಚಬೆಕ್ಕಿಗೆ ಏನಾಯ್ತು ವಿಜಯಶ್ರೀ ಹಾಲಾಡಿ ಕೆಂಚಬೆಕ್ಕಿಗೆ ಏನಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಗಡಗಡ ಚಳಿಗೆ ಬಿಸಿ ಬಿಸಿ ಬೋಂಡಾ ಪಾಕಂಪಪ್ಪನು ತಿಂದಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಇರುವೆ ಸಾಲನು ಹಾ….ರಿ ನೆಗೆದು ಪುಟ್ಟಿಯ ಮನೆಗೆ ಬಂದಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಮೀನಿನ ಮುಳ್ಳು ದೊಂಡೆಗೆ ಸಿಕ್ಕಿ ಕೆಮ್ಮಿ ಕೆಮ್ಮಿ ಸುಸ್ತಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಗಡವ ಬೆಕ್ಕು ಹೊಯ್ ಕಯ್ ಮಾಡಿ ಕಾಲಿನ ಮೂಳೆ ಮುರಿದಾಯ್ತು […]

ಕವಿತೆ ಕಾರ್ನರ್

ನಕ್ಷತ್ರದಂತವಳನ್ನು ಪ್ರೀತಿಸಿದ ಕವಿಯ ಕಥೆ ಕು.ಸ.ಮದುಸೂದನ ನಕ್ಷತ್ರದಂತವಳನ್ನು ಪ್ರೀತಿಸಿದ ಕವಿಯ ಕಥೆ! ನಕ್ಷತ್ರದಂತವಳನ್ನು ಪ್ರೀತಿಸಿದ ಕವಿಯ ಕಥೆ! ಬರೆಸಿಕೊಳ್ಳಲು ಕವಿತೆ ಒಪ್ಪದಿದ್ದಾಗ ಗದ್ಯದತ್ತ ಮುಖ ಮಾಡಲು ಮನಸು ಒಲ್ಲೆಂದಾಗಲೆಲ್ಲ ಅವನು ಮಾಡುತ್ತಿದ್ದುದು ಒಂದೇ ಕೆಲಸ ಅವಳಿಗೆ ಪ್ರೆಮಪತ್ರಗಳನ್ನು ಬರೆಯುತ್ತಿದ್ದು. ಅವನೇನು ಆ ಪತ್ರಗಳನ್ನು ಪ್ರಿಯೆ ಎಂದೊ ಇಲ್ಲಾ ಅವಳ ಹೆಸರಿನಿದಲೋ ಶುರು ಮಾಡುತ್ತಿರಲಿಲ್ಲ ಪ್ರತಿ ಪತ್ರವೂ ಹಿಂದಿನ ಪತ್ರದ ಮುಂದುವರಿಕೆಯಂತಿರುತ್ತಿತ್ತು ಅಲ್ಲಿಯೂ ಅವನೇನು ಅವಳನ್ನು ಚಿನ್ನ ರನ್ನ ಎಂದು ಮುದ್ದಿಸುತ್ತಿರಲಿಲ್ಲ. ಕಳೆದ ರಾತ್ರಿಯ ತನ್ನ ಒಂಟಿತನದ ಬಗ್ಗೆ, […]

ಕಥಾಯಾನ

ಗೂಡು ಕು.ಸ.ಮ. ಗೂಡು ಅದೊಂದು ಸಾದಾರಣವಾದ ಕೆಂಪು ಹೆಂಚಿನ ಮನೆ. ಇತ್ತ ದೊಡ್ಡದೂ ಅಲ್ಲ,ಅತ್ತ ಚಿಕ್ಕದೂ ಅಲ್ಲ,ಅಂತಹುದು. ಮನೆಯ ಮುಂದೆ ಒಂದಷ್ಟು ದಾಸವಾಳ,ಕಣಗಿಲೆ.ನೀಲಿ ಗೊರಟೆ ಹೂವಿನ ಗಿಡಗಳು. ಪುಟ್ಟ ಕಾಂಪೋಂಡ್,ಹಿತ್ತಲಲಿ ಬಟ್ಟೆ ತೊಳೆಯುವ ಕಲ್ಲು,ಒಂದು ನುಗ್ಗೆ ಮರ,ಬಚ್ಚಲು ನೀರು ಹೋಗುವ ಚರಂಡಿಗೆ ಹೊಂದಿಕೊಂಡಂತೆ ಹರಡಿಕೊಂಡ ಬಸಳೆ ಬಳ್ಳಿ. ಆ ಮನೆಯಲ್ಲಿ ಇದ್ದವರು ಇಬ್ಬರೆ,ಅವನು-ಅವಳು. ಅವರ ಮದುವೆಯಾಗಿ ಎರಡು ವರ್ಷವಾಗಿತ್ತು.ಪ್ರಶಾಂತವಾಗಿ ಹರಿಯುವ ನದಿಯಂತೆ ಬದುಕು ಸಾಗುತ್ತಿತ್ತು.ಅವನು ಬೆಳಿಗ್ಗೆ ಬೇಗಗ ಏಳುತ್ತಿದ್ದ.ತಣ್ಣೀರ ಸ್ನಾನ ಮಾಡಿ ಅಂಗಳದ ಗಿಡಗಳಿಂದ ಹೂ ಬಿಡಿಸಿ […]

ಕಾವ್ಯಯಾನ

ನೆನಪಾಗಿಸು.. ಲೋಕೇಶ್ ಮನ್ವಿತ್ ನೆನಪಾಗಿಸು…. ಮುಲಾಮು ಹಚ್ಚಲಾಗದ ಜಾಗದಲ್ಲಿ ಗಾಯ. ಕಾರಣ ಹೊಸದೇನಲ್ಲ ಅರಚುತ್ತೇನೆ ಚೀರುತ್ತೇನೆ ನರಳುತ್ತೇನೆ ಕಾಣಿಸುವುದಿಲ್ಲ ಜಗದ ಕಣ್ಣುಗಳಿಗೆ ಕೇಳಿಸುವುದಿಲ್ಲ ಜಗದ ಕಿವಿಗಳಿಗೆ ನಗುವಿನ ಮುಖವಾಡ ಬದುಕು ಸಾಗಿದೆ ಕೊನೆಯ ಬಿನ್ನಹವಿಷ್ಟೇ ಗಾಯಕ್ಕಿಷ್ಟು ಮುಲಾಮು ಬೇಡ ನಂಜನ್ನಿಟ್ಟು ನೆನಪಾಗಿಸು ನನ್ನವರ ಹೃದಯದಲ್ಲಿ. **********

ಶ್ರದ್ದಾಂಜಲಿ

‘ವಿಡಂಬಾರಿ’ ಕಣ್ಮರೆ..! ಕೆ.ಶಿವು ಲಕ್ಕಣ್ಣವರ ಖ್ಯಾತ ಚುಟುಕು ಕವಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ‘ವಿಡಂಬಾರಿ’ ಕಣ್ಮರೆ..! ಖ್ಯಾತ ಚುಟುಕು ಕವಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಡಂಬಾರಿ ಅವರು ಕಡತೋಕೆಯಲ್ಲಿ ತಮ್ಮ ಮಗಳ ಮನೆಯಲ್ಲಿ ನಿನ್ನೆ ನಿಧನರಾಗಿದ್ದಾರೆ… ‘ವಿಡಂಬಾರಿ’ ಕಾವ್ಯನಾಮದಿಂದ ಬರೆಯುತ್ತಿದ್ದ ವಿಷ್ಣುಗ. ಭಂಡಾರಿ ಜನಿಸಿದ್ದು 1935 ಫೆಬ್ರುವರಿ 29 ರಂದು. ‘ವಿಶಾಲ ಕರ್ನಾಟಕ’ದಲ್ಲಿ ಮೊದಲ ಚುಟುಕು ಪ್ರಕಟವಾಯಿತು. ವಿ.ಗ.ಭಂಡಾರಿ ಬದಲು ಸಂಪಾದಕರು ‘ವಿಡಂಬಾರಿ’ ಎಂದು ಬದಲಿಸಿ ಪ್ರಕಟಿಸಿದರು (ಅಂಚೆ ನೌಕರರಾಗಿದ್ದ ವಿಷ್ಣು ಅವರ ಹೆಸರಿನಲ್ಲಿಯೇ ಪ್ರಕಟವಾದರೆ ಅನವಶ್ಯಕ […]

ಚಲಿಸುವ ಮುಳ್ಳು

ಚಲಿಸುವ ಮುಳ್ಳು ಚಂದ್ರಪ್ರಭ ಬಿ. ಚಲಿಸುವ ಮುಳ್ಳು ಆಗಲೇ ನಿನಗೆ ಐವತ್ತಾತs ! ಅವ ತಮಾಷೆಗಿಳಿದ.. ಹ್ಞೂಂ.. ನಿನಗ ಅರವತ್ತಾಗುವಾಗ ನನಗಿನ್ನೆಷ್ಟಾಗಬೇಕು? ಹೆಚ್ಚುತ್ತಿದ್ದ ಈರುಳ್ಳಿ ಕಣ್ಣ ತೋಯಿಸಿತು ‘ಹೆರಳಿಗೆ ಹೂ ಮುಡದರೆ ನೀ ಅದೆಷ್ಟ ಚಂದ ಕಾಣತೀ ಈಗಲೂ’ ಅವ ಹೇಳಿದ ಹೆರಳೆಲ್ಲಿದೆ.. ಈಗಿರವುದು ಒಂದು ಮೋಟು ಜಡೆ ಅಷ್ಟೇ.. ಒಗ್ಗರಣೆ ಹೊತ್ತಕೊಂಡೀತೆಂದು ಉರಿ ಸಣ್ಣ ಮಾಡುತ್ತ ಹೇಳಿದೆ ‘ಆ ಲೇಖಕರು ಮುನ್ನುಡಿ ಬರೆದು ಕೊಟ್ಟರೇನು ನಿನಗೆ.. ಮತ್ತ ನಿನ್ನ ಪುಸ್ತಕ ಬಿಡುಗಡೆ ಯಾವಾಗ?’ ಮುತುವರ್ಜಿಯಿಂದ ಅವ […]

ಕಣ್ಣ ಕನ್ನಡಿ

ಕಣ್ಣ ಕನ್ನಡಿ ಶಾಂತಾ ಜೆ ಅಳದಂಗಡಿ ಕಣ್ಣಕನ್ನಡಿ ಹಸಿರ ಉಸಿರು ಅದುಮಿ ಹಿಡಿದು ತಂಪು ತಂಗಾಳಿ ಏಕಿಲ್ಲ ವೆಂದರೆ ಏನಹೇಳಲಿ ಉತ್ತರ? ಗೈದತಪ್ಪಿಗೆ ಬದುಕಾಗಿದೆ ತತ್ತರ ಕೊಳಕ ಕೊಳಗವ ಚೆಲ್ಲಬಿಟ್ಟು ಶುದ್ಧಪರಿಮಳ ಇಲ್ಲವೆಂದರೆ ಯಾರು ಕೊಡುವರು ಉತ್ತರ? ಪಡೆಯಬೇಕಿದೆ ಕೆಟ್ಟ ವಾಸನೆ ನಿರಂತರ ಬದಿಗೆಕರೆದು ಕಳ್ಳತನದಲಿ ಲಂಚನೀಡಿ ಕೆಲಸ ಮಾಡಿಸಿ ದುಡ್ಡಿನಾಸೆಯ ತೋರಿ ಕೆಡಿಸಿ ರಾಜಕಾರ್ಯವ ನಿಂದಿಸಿದರೆ ಯಾರು ಕೊಡುವರು ಉತ್ತರ ಸರದಿಸಾಲಿನ ಮಧ್ಯೆತೂರಿ ಬಾಯಬಡಿದು ಬಣ್ಣಗೆಟ್ಟರೆ ಮಾನ್ಯ ನೆಂಬ ಪದವಿ ಸಿಗುವುದೆ? ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೆ […]

Back To Top